Monthly Archives: January 2019

ಬ್ಲಾಗರ್ ಗೆ ವೆಬ್ ಸೈಟ್ ರೂಪ ನೀಡುವುದು ಹೇಗೆ?

By | 08/01/2019

ಆಕರ್ಷಕ ವಿನ್ಯಾಸವಿದ್ದರೆ ನಿಮ್ಮ ಬ್ಲಾಗ್ ಹೆಚ್ಚು ಜನರನ್ನು ಸೆಳೆಯುತ್ತದೆ. ಜೊತೆಗೆ ಬರೆದ ಲೇಖನಗಳು, ಚಿತ್ರಗಳನ್ನು ನೀಟಾಗಿ ಜೋಡಿಸಿದ್ದರೆ ಹೆಚ್ಚು ಕ್ಲಿಕ್ ಪಡೆಯಬಹುದು. ನಿಮ್ಮ ಬ್ಲಾಗ್ ನ್ಯೂಸ್ ವೆಬ್ ಸೈಟಿನಂತೆ ಇದ್ದರೆ ಒಂದೇ ಪುಟದಲ್ಲಿ ಸಾಕಷ್ಟು ಲೇಖನಗಳನ್ನು, ಚಿತ್ರಗಳನ್ನು ಜೋಡಿಸಿಡಲು ಸಾಧ್ಯ. ಹಿಂದಿನ ಸಂಚಿಕೆಯಲ್ಲಿ ಬ್ಲಾಗ್ ಸ್ಪಾಟ್ ನಲ್ಲಿ ಬ್ಲಾಗ್ ರಚಿಸುವುದು ಹೇಗೆ ಎಂಬ ವಿಷಯದ ಕುರಿತು ಸರಳವಾಗಿ ಮಾಹಿತಿ ನೀಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಬ್ಲಾಗರ್ ಬ್ಲಾಗ್ ಗೆ ಕಸ್ಟಮ್ ಟೆಂಪ್ಲೆಟ್ ಗಳನ್ನು ಅಳವಡಿಸುವ ಕುರಿತು ಚರ್ಚಿಸೋಣ. ಹಿಂದಿನ ಸಂಚಿಕೆಯಲ್ಲಿ ನೀವು… Read More »

ಬ್ಲಾಗರ್ ಗೈಡ್: ಉಚಿತ ಬ್ಲಾಗ್ ರಚಿಸುವುದು ಹೇಗೆ?

By | 08/01/2019

ಕರ್ನಾಟಕ ಬೆಸ್ಟ್ ವೆಬ್ ಸೈಟ್ ಗೈಡ್ ಮೂಲಕ ಈಗಾಗಲೇ ವರ್ಡ್ ಪ್ರೆಸ್ ಯಾಕೆ ಬೆಸ್ಟ್? ಸೇರಿದಂತೆ ಕೆಲವು ಲೇಖನ ಓದಿದ್ದೀರಿ. ಈಗ ಬ್ಲಾಗರ್ ಮೂಲಕ ಬ್ಲಾಗ್ ರಚಿಸುವ ಕಲೆಯನ್ನು ಕಲಿಯೋಣ. ಇದನ್ನು ಕಲಿತರೆ ಮುಂದೆ ವೆಬ್ ಸೈಟ್ ರಚಿಸುವುದು ನಿಮಗೆ ಸುಲಭವಾಗಲಿದೆ. ಫೇಸ್ಬುಕ್ ಇತ್ಯಾದಿಗಳ ನಂತರ ಬ್ಲಾಗರ್ ಬಳಸುವವರು ಕಡಿಮೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಬ್ಲಾಗರ್ ಅನ್ನೇ ಸ್ವಂತ ವೆಬ್ ಸೈಟ್ ಆಗಿ ರೂಪಿಸಿ ಬಹುತೇಕರು ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. ವೆಬ್ ಸೈಟ್ ನಿರ್ಮಾಣಕ್ಕೆ ಹಲವು ಹತ್ತು ಸಾವಿರಗಳನ್ನು ನೀಡಲು ಸಾಧ್ಯವಿಲ್ಲದೆ… Read More »

ವೆಬ್ ಸೈಟ್ ಗೈಡ್: ಯಾಕೆ ವರ್ಡ್ ಪ್ರೆಸ್ ಬೆಸ್ಟ್?

By | 08/01/2019

ಕರ್ನಾಟಕ ಬೆಸ್ಟ್ ವೆಬ್ ಸೈಟ್ ಮಾರ್ಗದರ್ಶಿಯ ಎರಡನೇ ಅಧ್ಯಾಯವಾಗಿ “ಯಾಕೆ ವರ್ಡ್ ಪ್ರೆಸ್ ಬೆಸ್ಟ್?’ ಎಂಬ ವಿಷಯದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಈಗಾಗಲೇ ಪೀಠಿಕೆಯಲ್ಲಿ ಈ ಕುರಿತು ಒಂದಿಷ್ಟು ಅಂಶಗಳು ನಿಮಗೆ ತಿಳಿದುಬಂದಿರಬಹುದು. ಜಗತ್ತಿನಲ್ಲಿರುವ ಒಟ್ಟಾರೆ ವೆಬ್ ಸೈಟ್ ಗಳಲ್ಲಿ ಸುಮಾರು ಶೇಕಡ 30ರಷ್ಟು ಈಗ ವರ್ಡ್ ಪ್ರೆಸ್ಟ್ ಮೂಲಕ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಾಣಲಿದೆ. ಮುಂದೊಂದು ದಿನ ಸರ್ವಂ ವರ್ಡ್ ಪ್ರೆಸ್ ಮಯ ಆದರೂ ಆಗಬಹುದು. ನಿಮ್ಮ ಆಸಕ್ತಿಯನ್ನು ಕೊನೆಯವರೆಗೆ ಉಳಿಸಿಕೊಳ್ಳುವ ಉದ್ದೇಶದಿಂದ… Read More »

ವೆಬ್ ಸೈಟ್ ಗೈಡ್: ಕರ್ನಾಟಕ ಬೆಸ್ಟ್ ಸಂಪೂರ್ಣ ಮಾರ್ಗದರ್ಶಿ

By | 07/01/2019

ಎಲ್ಲರಿಗೂ ನಮಸ್ಕಾರ. ಕರ್ನಾಟಕ ಬೆಸ್ಟ್.ಕಾಂ ಮೂಲಕ ಒಂದು ಸಂಪೂರ್ಣ ಟೆಕ್ ಪಾಠ ಹೇಳಿಕೊಡುವ ಪ್ರಯತ್ನದ ಆರಂಭವಿದು. ನಿಮಗೂ ಇದು ಇಷ್ಟವಾದೀತು ಎಂಬ ನಂಬಿಕೆ ನನ್ನದು. ಕರ್ನಾಟಕ ಬೆಸ್ಟ್‌ ವೆಬ್‌ಸೈಟ್‌ ಗೈಡ್ನಲ್ಲಿ ಪೂರ್ಣಗೊಂಡ ಲೇಖನಗಳು ಪೀಠಿಕೆ (ಇದೇ ಪುಟದಲ್ಲಿದೆ) ಯಾಕೆ ವರ್ಡ್‌ಪ್ರೆಸ್‌ ಬೆಸ್ಟ್?‌ ಬ್ಲಾಗ್‌ ರಚಿಸುವುದು ಹೇಗೆ? ಬ್ಲಾಗರ್‌ಗೆ ವೆಬ್‌ಸೈಟ್‌ ರೂಪ ನೀಡುವುದು ಹೇಗೆ? ಡೊಮೈನ್‌ ಖರೀದಿಸುವುದು ಹೇಗೆ? ವಹಿಸಬೇಕಾದ ಎಚ್ಚರಿಕೆಗಳೇನು? ಡೊಮೈನ್‌ ಮ್ಯಾಪಿಂಗ್‌ ಮಾಡುವುದು ಹೇಗೆ? ವರ್ಡ್‌ಪ್ರೆಸ್.ಕಾಂನಲ್ಲಿರುವ ವಿವಿಧ ಹೋಸ್ಟಿಂಗ್‌ ಪ್ಲ್ಯಾನಿಂಗ್ ಗಳನ್ನು ಖರೀದಿಸಬಹುದೇ? ವರ್ಡ್‌ಪ್ರೆಸ್. ಆರ್ಗ್‌ (.ಕಾಂ ಅಲ್ಲ) ಯಾಕೆ… Read More »

Inspiration: ಸ್ಫೂರ್ತಿದಾಯಕ ಬದುಕಿಗೆ ಹತ್ತು ನೀತಿಕತೆಗಳು

By | 04/01/2019

ನಮ್ಮ ಬದುಕು ಯಾವುದೋ ದಿಕ್ಕಿನಲ್ಲಿ ಸಾಗುತ್ತಿರುತ್ತದೆ. ಅದನ್ನು ಸರಿಯಾದ ದಿಕ್ಕಿನತ್ತ ತಿರುಗಿಸಲು ನಾವು ಆಲೋಚನೆ ಮಾಡಬೇಕು. ಕೆಲವೊಮ್ಮೆ ಯಾರಾದರೂ ನಮಗೆ ದಿಕ್ಕು ತೋರಿಸಬಹುದು. ಯಾರೋ ಹೇಳಿದ ಮಾತುಗಳು ನಮಗೆ ಸ್ಫೂರ್ತಿ ತರಬಹುದು. ಇನ್ನು ಕೆಲವೊಮ್ಮೆ ಯಾರಾದರೂ ಹೇಳಿದ ಕತೆ ನಮಗೆ ಹೊಸ ದಿಕ್ಕು ತೋರಿಸಬಹುದು. ಸ್ಫೂರ್ತಿದಾಯಕ ಕತೆಗಳು ತುಂಬಾ ಪವರ್ ಫುಲ್. ಒಂದು ಪುಟ್ಟ ಕತೆಯ ಹಿಂದೆ ದೊಡ್ಡ ಪಾಠ ಇರುತ್ತದೆ. ಇಂಟರ್ನೆಟ್ ನಲ್ಲಿ ಇಂತಹ ಸಾಕಷ್ಟು ಸ್ಫೂರ್ತಿದಾಯಕ ಕತೆಗಳಿವೆ. ಅವುಗಳಲ್ಲಿ ನನಗೆ ಆಲ್ ಟೈಂ ಫೇವರಿಟ್ ಆದ ಹತ್ತು ಕತೆಗಳನ್ನು… Read More »