Inspiration: ಸ್ಫೂರ್ತಿದಾಯಕ ಬದುಕಿಗೆ ಹತ್ತು ನೀತಿಕತೆಗಳು

By | 04/01/2019
Credit: Unsplash
Featured post on IndiBlogger, the biggest community of Indian Bloggers

ನಮ್ಮ ಬದುಕು ಯಾವುದೋ ದಿಕ್ಕಿನಲ್ಲಿ ಸಾಗುತ್ತಿರುತ್ತದೆ. ಅದನ್ನು ಸರಿಯಾದ ದಿಕ್ಕಿನತ್ತ ತಿರುಗಿಸಲು ನಾವು ಆಲೋಚನೆ ಮಾಡಬೇಕು. ಕೆಲವೊಮ್ಮೆ ಯಾರಾದರೂ ನಮಗೆ ದಿಕ್ಕು ತೋರಿಸಬಹುದು. ಯಾರೋ ಹೇಳಿದ ಮಾತುಗಳು ನಮಗೆ ಸ್ಫೂರ್ತಿ ತರಬಹುದು. ಇನ್ನು ಕೆಲವೊಮ್ಮೆ ಯಾರಾದರೂ ಹೇಳಿದ ಕತೆ ನಮಗೆ ಹೊಸ ದಿಕ್ಕು ತೋರಿಸಬಹುದು.

ಸ್ಫೂರ್ತಿದಾಯಕ ಕತೆಗಳು ತುಂಬಾ ಪವರ್ ಫುಲ್. ಒಂದು ಪುಟ್ಟ ಕತೆಯ ಹಿಂದೆ ದೊಡ್ಡ ಪಾಠ ಇರುತ್ತದೆ. ಇಂಟರ್ನೆಟ್ ನಲ್ಲಿ ಇಂತಹ ಸಾಕಷ್ಟು ಸ್ಫೂರ್ತಿದಾಯಕ ಕತೆಗಳಿವೆ. ಅವುಗಳಲ್ಲಿ ನನಗೆ ಆಲ್ ಟೈಂ ಫೇವರಿಟ್ ಆದ ಹತ್ತು ಕತೆಗಳನ್ನು ಇಲ್ಲಿ ನೀಡಿದ್ದೇನೆ.

ಮೊದಲ ಕತೆ: ಡೇವಿಡ್ ಮತ್ತು ಗೋಲಿಯಾಥ್

ಮೊದಲ ಬಾರಿಗೆ ನಾನು ಈ ಕತೆ ಓದಿದ್ದು ಶಿವ್ ಖೇರಾ ಅವರ ನೀವು ಗೆಲ್ಲಬಲ್ಲಿರಿ ಪುಸ್ತಕದಲ್ಲಿ. ನಂತರ ಇಂಟರ್ನೆಟ್ ನಲ್ಲಿ ಈ ಕತೆ ದೊರಕಿತು. ಇದು ತುಂಬಾ ವೈರಲ್ ಆಗಿರುವ ಕತೆಯಾಗಿದೆ. ನೀವು ಗೆಲ್ಲಲ್ಲು ಬೇಕಾದದ್ದು ಬುದ್ಧಿವಂತಿಕೆ. ನಿಮ್ಮ ಆಕಾರ, ದೈಹಿಕ ಸಾಮರ್ಥ್ಯವಲ್ಲ ಎಂಬ ಒಳ್ಳೆಯ ಸಂದೇಶ ಈ ಕತೆಯಲ್ಲಿದೆ. ಗೋಲಿಯಾಥ್ ಎಂಬ ದೈತ್ಯ ವ್ಯಕ್ತಿಯನ್ನು ಡೇವಿಡ್ ಎಂಬ ಬಲಿಷ್ಠವಲ್ಲದ ವ್ಯಕ್ತಿ ಸೋಲಿಸಿದ ಕತೆಯನ್ನು ಇಲ್ಲಿ ಓದಿರಿ.

ಎರಡನೇ ನೀತಿಕತೆ: ವಜ್ರ ಮತ್ತು ರೈತ

ಪ್ರತಿಯೊಬ್ಬರೂ ಒಳ್ಳೆಯ ಅವಕಾಶವನ್ನು ಎಲ್ಲೆಲ್ಲೋ ಹುಡುಕುತ್ತ ಇರುತ್ತಾರೆ. ಆದರೆ, ಅಂತಹ ಅವಕಾಶಗಳು ನಮ್ಮಲ್ಲಿಯೇ ಇರುತ್ತವೆ. ಅವುಗಳನ್ನು ಬಳಸಲು ತಿಳಿಯಬೇಕು. ಇಂತಹ ಮಹತ್ವದ ನೀತಿಯನ್ನು ಹೊಂದಿರುವ ವಜ್ರ ಮತ್ತು ರೈತ ಎಂಬ ನೀತಿಕತೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿರಿ.

ಮೂರನೇ ನೀತಿಕತೆ: ಪರೀಕ್ಷೆ ತಪ್ಪಿಸಿದ ಯುವಕರು

ಸುಳ್ಳು ಹೇಳುವ ಅಭ್ಯಾಸ ಬಹುತೇಕರಿಗೆ ಇರುತ್ತದೆ. ವಿದ್ಯಾರ್ಥಿಗಳಲ್ಲಿಯೂ ಇರುತ್ತದೆ. ಕ್ಲಾಸ್ ಗೆ ತಡವಾಗಿ ಬಂದರೆ ಅದಕ್ಕೊಂದು ನೆಪ. ಪರೀಕ್ಷೆಗೆ ಗೈರಾದರೆ ಅದಕ್ಕೊಂದು ಸುಳ್ಳು. ಪರೀಕ್ಷೆ ತಪ್ಪಿಸಿದ ಯುವಕರು ಎಂಬ ನೀತಿಕತೆಯೂ ಇಂತಹದ್ದೇ ಯುವಕರ ಕತೆ. ಇವರು ಕೊನೆಗೆ ಪಾಠ ಕಲಿತರೇ. ಇಲ್ಲಿದೆ ಕತೆ. ಓದಿ ನೋಡಿ.

ನಾಲ್ಕನೇ ನೀತಿಕತೆ: ದಾರಿಯ ನಡುವೆ ಇರುವ ದೊಡ್ಡಕಲ್ಲು

Story for motivation

ಅಲ್ಲೊಂದು ರಸ್ತೆಯಲ್ಲಿ ದೊಡ್ಡಕಲ್ಲು ಇತ್ತು. ಅದನ್ನು ಇಟ್ಟದ್ದು ಅಲ್ಲಿನ ರಾಜ. ಯಾರಾದರೂ ಈ ಕಲ್ಲನ್ನು ಬದಿಗೆ ಸರಿಸುತ್ತಾರ ಎಂದು ಕಾಯುತ್ತ ಅರಸ ಮರೆಯಲ್ಲಿ ಕುಳಿತ. ಮುಂದೇನಾಯ್ತು ಎಂದು ತಿಳಿಯಲು ದಾರಿಯ ನಡುವೆ ಇರುವ ದೊಡ್ಡ ಕಲ್ಲು ಎಂಬ ನೀತಿಕತೆಯನ್ನು ಓದಿರಿ.

ಐದನೇ ನೀತಿಕತೆ: ಕುಂಟ ನಾಯಿಮರಿಗೆ ಬೆಲೆ ಎಷ್ಟು?

http://akc.org/wp-content/uploads/2015/10/Beagle-Puppies.jpg
Copyright: akc.org

ಇದೊಂದು ಭಾವನಾತ್ಮಕ ನೀತಿಕತೆ. ಪುಟ್ಟ ಬಾಲಕನೊಬ್ಬ ಕುಂಟ ನಾಯಿಮರಿಯನ್ನು ಖರೀದಿ ಮಾಡುವ ಕತೆಯಿದು. ಇದರಲ್ಲಿ ಅತ್ಯುತ್ತಮ ಜೀವನಸಂದೇಶವೂ ಇದೆ. ಇಲ್ಲಿದೆ ಕುಂಟ ನಾಯಿಮರಿಗೆ ಬೆಲೆ ಎಷ್ಟು ಎಂಬ ನೀತಿಕತೆ. ಓದಿನೋಡಿ.

ಆರನೇ ನೀತಿಕತೆ: ಚಿಟ್ಟೆಮರಿ ಮತ್ತು ಪರೋಪಕಾರಿ ಹುಡುಗ

ನಾವು ಜೀವನದಲ್ಲಿ ಪಡುವ ಕಷ್ಟಗಳೇ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಯಾವುದೇ ಕಷ್ಟವಿಲ್ಲದೆ, ನಾವು ಬೆಳೆಯಲು ಮತ್ತು ಇನ್ನಷ್ಟು ಸದೃಢರಾಗಲು ಸಾಧ್ಯವಿಲ್ಲ. ಹೀಗಾಗಿ, ಸದಾ ಸವಾಲುಗಳನ್ನು ಸ್ವೀಕರಿಸಬೇಕು. ಕಷ್ಟಪಟ್ಟು ಮೇಲೆ ಬರಬೇಕು ಎಂಬ ಅಮೂಲ್ಯ ಸಂದೇಶವನ್ನು ಹೊಂದಿರುವ ಈ ನೀತಿಕತೆ ಓದಲು ಇಲ್ಲಿ ಕ್ಲಿಕ್ ಮಾಡಿರಿ.

ಏಳನೇ ನೀತಿಕತೆ: ಕೆಎಫ್ಸಿ ಸ್ಥಾಪಕರ ಬದುಕಿನ ಸಾಧನೆಯ ಕತೆ

ಈ ನೀತಿಕತೆಯ ಪಟ್ಟಿಯಲ್ಲಿ ಕೆಂಟುಕಿ ಚಿಕನ್ ಸ್ಥಾಪಕರ ಬದುಕಿನ ಸಾಧನೆಯ ಒಂದು ಘಟನೆಯನ್ನೂ ನೀಡಲಾಗಿದೆ. ಇದು ತುಂಬಾ ಸ್ಫೂರ್ತಿದಾಯಕವಾದದ್ದು. ಈ ಕತೆಯನ್ನು ಇಲ್ಲಿ ಓದಿರಿ, ಸ್ಫೂರ್ತಿ ಹೊಂದಿರಿ.

ಎಂಟನೇ ನೀತಿಕತೆ: ನಿಮ್ಮ ಮೌಲ್ಯ ಕಡಿಮೆಯಾಗದು

ಹಣ ಮುದ್ದೆಯಾಗಿದ್ದರೂ ಅದಕ್ಕೆ ಮೌಲ್ಯ ಇರುತ್ತದೆ. ಅದೇ ರೀತಿ ನಮ್ಮ ಬದುಕು ಸಹ. ಎಂದೇಂದಿಗೂ ನಮ್ಮ ಮೌಲ್ಯ ಕಡಿಮೆಯಾಗುವುದಿಲ್ಲ ಎಂಬ ನೀತಿಯನ್ನು ಈ ಕತೆಯಲ್ಲಿ ನೀಡಲಾಗಿದೆ. ಇಲ್ಲಿದೆ ಓದಿ.

ಒಂಬತ್ತನೇ ನೀತಿಕತೆ: ಸಣ್ಣ ಹಗ್ಗದಲ್ಲಿ ಆನೆ ಕಟ್ಟಿರುವ ಕತೆ

ಅಪಾರ ಸಾಮರ್ಥ್ಯ, ಶಕ್ತಿ ಇರುವ ಬೃಹತ್ ಗಾತ್ರದ ಆನೆಯನ್ನು ಸಣ್ಣ ಹಗ್ಗದಲ್ಲಿ ಕಟ್ಟುವುದೇಕೆ ಎಂಬ ಪ್ರಶ್ನೆಗೆ ಉತ್ತರ ನೀಡುವ ಈ ನೀತಿಕತೆ ನನ್ನ ಆಲ್ ಟೈಂ ಫೇವರಿಟ್.

ಹತ್ತನೇ ನೀತಿಕತೆ: ಎಲ್ಲರ ಬದುಕಿನಲ್ಲಿಯೂ ಒಂದು ಕತೆ ಇರುತ್ತದೆ

Photo by Samuel Zeller on Unsplash

ಈ ಕತೆ ನಿಮಗೆ ಗೊತ್ತಿರಬಹುದು. ರೈಲಿನಲ್ಲಿ ಒಬ್ಬ ಯುವಕ ತನ್ನ ತಂದೆಯೊಂದಿಗೆ ಸಂಚರಿಸುತ್ತಿದ್ದ. ಆತ ರೈಲಿನಲ್ಲಿ ಪುಟ್ಟ ಮಗುವಿನಂತೆ ವರ್ತಿಸುತ್ತಿದ್ದ. ಅದನ್ನು ನೋಡಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬೇರೆ ವ್ಯಕ್ತಿಗಳು “ಈ ಯುವಕನನ್ನು ಒಳ್ಳೆಯ ವೈದ್ಯರಿಗೆ ಯಾಕೆ ತೋರಿಸಬಾರದು?’’ ಎನ್ನುತ್ತಾರೆ. ಅದಕ್ಕೆ ಆ ಯುವಕನ ತಂದೆ ನೀಡಿದ ಉತ್ತರವು ಪ್ರಶ್ನೆ ಕೇಳಿದವರ ಕಣ್ಣು ತೆರೆಸುತ್ತದೆ. ಈ ಕತೆಗೆ ಲಿಂಕ್ ಇಲ್ಲಿದೆ.

ಬೋನಸ್ ನೀತಿಕತೆ

ಬದುಕಿನಲ್ಲಿ ಅವಕಾಶಗಳನ್ನು ಹೇಗೆ ಸಮರ್ಥವಾಗಿ ಬಳಸಿಕೊಳ್ಳಬೇಕು ಎನ್ನುವುದಕ್ಕೆ “ಬಾವಿಗೆ ಬಿದ್ದ ಕತ್ತೆ, ಎದ್ದು ಬಂದ ಕತೆ’ ಸಾಕ್ಷಿ. ಈ ನೀತಿಕತೆ ಓದಲು ಇಲ್ಲಿ ಕ್ಲಿಕ್ ಮಾಡಿರಿ.

Leave a Reply

Your email address will not be published. Required fields are marked *