Monthly Archives: January 2019

ವೆಬ್ ಸೈಟ್ ಗೈಡ್: ವರ್ಡ್ ಪ್ರೆಸ್ ಕಲಿಯಲು ಆಫ್ ಲೈನ್ ಟೂಲ್

By | 13/01/2019

ವರ್ಡ್ ಪ್ರೆಸ್ ಮೂಲಕ ವೆಬ್ ಸೈಟ್ ರಚನೆ ಮಾಡುವುದನ್ನು ಕಲಿಯಲು ಹಲವು ಸುಲಭ ಉಪಾಯಗಳಿವೆ. ಇವುಗಳಲ್ಲಿ ಕೆಲವು ನನಗೆ ತಿಳಿದಿವೆ. ಅವುಗಳಲ್ಲಿ ಒಂದು ಉಪಾಯವನ್ನು ಇಲ್ಲಿ ನೀಡುತ್ತಿದ್ದೇನೆ. ವರ್ಡ್ ಪ್ರೆಸ್ ವೆಬ್ ಸೈಟ್ ರಚಿಸಲು ಡೊಮೈನ್ ಹೆಸರು ಮತ್ತು ಹೋಸ್ಟಿಂಗ್ ಖರೀದಿಸಬೇಕು ಎಂದಿದ್ದೆ. ಆದರೆ, ನೀವು ಕಲಿಯುವ ಉದ್ದೇಶ ಹೊಂದಿದ್ದು, ಈಗಲೇ ಖರೀದಿಗೆ ಹಣ ನೀಡಲು ಬಯಸದೆ ಇದ್ದರೆ ಇಲ್ಲೊಂದು ಟೂಲ್ ಇದೆ. ಇದು ನಿಮಗೆ ನಿಜವಾದ ವರ್ಡ್ ಪ್ರೆಸ್ ವೆಬ್ ಸೈಟ್ ರಚನೆ ಅನುಭವವನ್ನೇ ನೀಡುತ್ತದೆ. ಜೊತೆಗೆ, ಇಲ್ಲಿ ನೀವು… Read More »

ಸೂರ್ತಿದಾಯಕ: ವಾಲ್ಟ್ ಡಿಸ್ನಿ ಬದುಕಿನ ಕತೆ

By | 12/01/2019

ಅನಿಮೇಟರ್, ಕಾರ್ಟೂನಿಸ್ಟ್, ನಿರ್ದೇಶಕ, ಉದ್ಯಮಿಯಾಗಿ ವಾಲ್ಟ್ ಡಿಸ್ನಿ ಫೇಮಸ್. ಆತ 20ನೇ ಶತಮಾನದ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಸುಮಾರು 22 ಅಕಾಡೆಮಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಈಗ ವಾಲ್ಟ್ ಡಿಸ್ನಿ ಕಂಪನಿಯು ಹಲವು ಬಿಲಿಯನ್ ಡಾಲರ್ ವಹಿವಾಟಿನ ಬೃಹತ್ ಕಂಪನಿಯಾಗಿದೆ. ಆದರೆ, ವಾಲ್ಟ್ ಡಿಸ್ನಿಗೆ ಯಶಸ್ಸು ಸಡನ್ ಆಗಿ ಬಂದಿರುವುದಲ್ಲ. ಆತನಿಗೆ ಹೆಜ್ಜೆಹೆಜ್ಜೆಗೂ ಸೋಲು, ಅಪಮಾನಗಳು ಎದುರಾಗುತ್ತಿದ್ದವು. ಸೇನೆಗೆ ಸೇರಬೇಕೆಂಬ ಉದ್ದೇಶದಿಂದ 1917ರಲ್ಲಿ ವಾಲ್ಟ್ ಡಿಸ್ನಿಯು ಶಾಲೆಯನ್ನು ಅರ್ಧಕ್ಕೆ ಬಿಟ್ಟರು. ಆದರೆ, ಸೇನೆಗೆ ಸೇರಲು ವಯಸ್ಸು ಆಗಿಲ್ಲವೆಂಬ ಕಾರಣ ನೀಡಿ ಆತನನ್ನು ಸೇರಿಸಲಿಲ್ಲ.… Read More »

ವೆಬ್ ಸೈಟ್ ಗೈಡ್: ವರ್ಡ್ ಪ್ರೆಸ್ ಆರ್ಗ್ ಯಾಕೆ ಬೆಸ್ಟ್?

By | 11/01/2019

ಈ ಹಿಂದಿನ ಲೇಖನದಲ್ಲಿ ವರ್ಡ್ ಪ್ರೆಸ್.ಕಾಂನ ಒಳಿತುಗಳು ಮತ್ತು ಕೆಡುಕುಗಳು ಹಾಗೂ ವರ್ಡ್ ಪ್ರೆಸ್.ಕಾಂನಲ್ಲಿ ಲಭ್ಯವಿರುವ ವಿವಿಧ ದರಪಟ್ಟಿಯ ಕುರಿತು ಮಾಹಿತಿ ನೀಡಲಾಗಿತ್ತು. ಇದಕ್ಕಿಂತ ವರ್ಡ್ ಪ್ರೆಸ್. ಆರ್ಗ್ ಇನ್ನೂ ಉತ್ತಮ ಎಂಬ ಅಭಿಪ್ರಾಯವನ್ನು ನಾನು ವ್ಯಕ್ತಪಡಿಸಿದ್ದೆ. ಅಲ್ಲಿ ನೀವು ಹತ್ತು ಸಾವಿರ ರೂಪಾಯಿಗೆ ಪಡೆಯುವುದನ್ನು .ಆರ್ಗ್ ನಲ್ಲಿ 5 ಸಾವಿರ ರೂ.ಗೆ ಪಡೆಯಬಹುದು ಎನ್ನುವುದು ನನ್ನ ಅಭಿಪ್ರಾಯ. ಏನಿದು ವರ್ಡ್ ಪ್ರೆಸ್ ಆರ್ಗ್? ಇಂಟರ್ನೆಟ್ ನಲ್ಲಿ ಲಭ್ಯವಿರುವ ವ್ಯಾಖ್ಯಾನವನ್ನು ನಾನು ಇಲ್ಲಿ ನೀಡುವುದಿಲ್ಲ. ವರ್ಡ್ ಪ್ರೆಸ್.ಕಾಂ ಎನ್ನುವುದು ವರ್ಡ್ ಪ್ರೆಸ್… Read More »

ವೆಬ್ ಸೈಟ್ ಗೈಡ್: ವರ್ಡ್ ಪ್ರೆಸ್ ಕಾಂನಲ್ಲೇ ಪ್ಲ್ಯಾನ್ ಗಳನ್ನು ಖರೀದಿಸಬಹುದೇ?

By | 09/01/2019

ನೀವು ವರ್ಡ್ ಪ್ರೆಸ್ ನಲ್ಲಿ ಬ್ಲಾಗ್ ರಚಿಸುವಾಗಲೇ ಡೊಮೈನ್ ಖರೀದಿ ಮಾಡುವಂತೆ ಸೂಚನೆ ಬರುತ್ತದೆ. ಬ್ಲಾಗ್ ರಚಿಸಿದ ಬಳಿಕ ಅಪ್ ಗ್ರೇಡ್ ಮಾಡುವಂತೆ ಸೂಚನೆ ಬರುತ್ತದೆ. ಈ ಲೇಖನ ಓದಿದ ತಕ್ಷಣ ಯಾವುದೇ ಕಾರಣಕ್ಕೂ ವರ್ಡ್ ಪ್ರೆಸ್ ನಲ್ಲಿ ಯಾವುದಾದರೂ ಪ್ಲ್ಯಾನ್ ಖರೀದಿಸಲು ಹೋಗಬೇಡಿ. ಯಾಕೆಂದರೆ, ವರ್ಡ್ ಪ್ರೆಸ್ ಹೊರಗಡೆ ಇದಕ್ಕಿಂತಲೂ ಕಡಿಮೆ ದರಕ್ಕೆ ಉತ್ತಮ ಪ್ಲ್ಯಾನ್ ದೊರಕುತ್ತದೆ. ಈ ಕುರಿತು ನಾನು ಮುಂದೆ ಮಾಹಿತಿ ನೀಡುತ್ತೇನೆ. ಇಲ್ಲಿ ನೀಡಿದ ದರಗಳು 2019ರ ಜನವರಿ ತಿಂಗಳಲ್ಲಿ ನಮೂದಿಸಿರುವುದು. ಈ ದರ ಈಗ… Read More »

ವರ್ಡ್ ಪ್ರೆಸ್ ಬ್ಲಾಗ್: ಡೊಮೈನ್ ಮ್ಯಾಪಿಂಗ್ ಮಾಡುವುದು ಹೇಗೆ?

By | 09/01/2019

ವರ್ಡ್ ಪ್ರೆಸ್ ವೆಬ್ ಸೈಟ್ ವಿನ್ಯಾಸ ಸಂಪೂರ್ಣ ಮಾರ್ಗದರ್ಶಿಯನ್ನು ಕನ್ನಡದಲ್ಲಿ ಒದಗಿಸುವ ಈ ಹಿಂದಿನ ಲೇಖನಗಳನ್ನು ಸಾಕಷ್ಟು ಜನರು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಚಿಕೆಯಲ್ಲಿ ವರ್ಡ್ ಪ್ರೆಸ್ ಮೂಲಕ ಬ್ಲಾಗ್ ರಚನೆ ಮತ್ತು ಆ ಬ್ಲಾಗ್ ಗೆ ಡೊಮೈನ್ ಮ್ಯಾಪಿಂಗ್ ಮಾಡುವುದು ಹೇಗೆ ಎನ್ನುವುದನ್ನು ಕಲಿಯೋಣ. ವರ್ಡ್ ಪ್ರೆಸ್ ಮೂಲಕ ಬ್ಲಾಗ್ ರಚನೆ ಹೇಗೆ? ಮೊದಲಿಗೆ https://wordpress.com/ ಹೋಗಿ ಹೊಸ ಖಾತೆ ಆರಂಭಿಸಿ. ನಿಮ್ಮ ಬ್ಲಾಗ್ ಗೆ ಒಂದು ಹೆಸರು ನೀಡಿ. ಉದಾಹರಣೆಗೆ https://karnatakabest.wordpress.com/ ಎಂಬ ಹೆಸರಿನಲ್ಲಿ ನಿಮ್ಮ ಬ್ಲಾಗ್… Read More »

ವೆಬ್ ಸೈಟ್ ಗೈಡ್: ಡೊಮೈನ್ ಖರೀದಿ ಹೇಗೆ?

By | 08/01/2019

ಗೂಗಲ್.ಕಾಂ, ಫೇಸ್ಬುಕ್.ಕಾಂ, ಯಾಹೂ… ಹೀಗೆ ಎಷ್ಟೊಂದು ಸುಂದರ ಹೆಸರುಗಳ ವೆಬ್ ಸೈಟ್ ಗಳಿವೆ. ನೀವೂ ಒಂದು ವೆಬ್ ಸೈಟ್ ಡೊಮೈನ್ ಹೆಸರು ಖರೀದಿಸಲು ಬಯಸಿದರೆ ಈ ಗೈಡ್ ನಿಮಗೆ ಸಹಕಾರಿಯಾಗಬಹುದು.     ನೀವು ಗಮನಿಸಿರಬಹುದು. ಇವೆರಡು ಡೊಮೈನ್ ಹೆಸರುಗಳು ಸರಳವಾಗಿವೆ. ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವಂತೆ ಇವೆ. ಹೀಗಾಗಿ ಈ ಗೈಡ್ ನ ಮೊದಲ ಪಾಠ #1. ಸರಳವಾಗಿರುವ, ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವಂತಹ ಡೊಮೈನ್ ಹೆಸರು ಖರೀದಿಸಿ. ಈಗ ಡೊಮೈನ್ ಮಾರಾಟದಲ್ಲಿ ಸಾಕಷ್ಟು ಪೈಪೋಟಿ ನಡೆಯುತ್ತಿದೆ. 99 ರೂಪಾಯಿ, 130 ರೂಪಾಯಿಗೆ ಡೊಮೈನ್ ಖರೀದಿಸಿ… Read More »