Category Archives: Education

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ಲೈನ್ ಪರೀಕ್ಷೆ !

By | 11/06/2021

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಈ ಬಾರಿ ಪರೀಕ್ಷೆ ಇಲ್ಲ ಎಂದು ಹೇಳಿದ ರಾಜ್ಯ ಸರಕಾರ, ಇದೀಗ ಆನ್ಲೈನ್ ನಲ್ಲಿ ಪರೀಕ್ಷೆ ನಡೆಸಲು ಮುಂದಾಗಿದೆ. ಪ್ರಥಮ ಪಿಯುಸಿ ಪರೀಕ್ಷೆ ಇಲ್ಲ ಎಂದ ಸರಕಾರ ಘೋಷಣೆ ಮಾಡಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುವುದನ್ನು ನಿಲ್ಲಿಸಿದ್ದರು‌. ಆದರೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಪಿಯುಸಿಗೆ ಎರಡು ಮಾದರಿಯ ಪ್ರಶ್ನೆ ಪತ್ರಿಕೆ ರೂಪಿಸಿ ವೆಬ್‌ಸೈಟ್‌ ನಲ್ಲಿ ಬಿಡುಗಡೆ ಮಾಡಿದೆ. ಇದನ್ನು ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಂಡು ಉತ್ತರ ಬರೆದು ವಾಟ್ಸ್ ಅಪ್, ಇಮೇಲ್ ಅಂಚೆ ಮೂಲಕ ಉಪನ್ಯಾಸಕರಿಗೆ… Read More »

SSLC Exam, ಜುಲೈ 3 ನೇ ವಾರ

By | 10/06/2021

2020-21 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯು 2021 ರ ಜುಲೈ ಮೂರನೇ ವಾರದಲ್ಲಿ ನಡೆಯುವುದರ ಬಗ್ಗೆ ಪೂರ್ವ ಸಿದ್ಧತೆ ಕ್ರಮಗಳ ಬಗ್ಗೆ ಚರ್ಚಿಸಲು ವಿಡಿಯೋ ಕಾನ್ಫರೆನ್ಸ್ ನಡೆದಿದೆ. ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ, ಸುರಕ್ಷಿತವಾಗಿ ಹಾಗೂ ಪೂರ್ವಸಿದ್ಧತೆ ಕುರಿತು ನಡೆಸುವ ಕುರಿತು ಚರ್ಚಿಸಲು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌ ಸುರೇಶ್‌ಕುಮಾರ್ ರವರ ಸಮ್ಮುಖದಲ್ಲಿ ಮಾನ್ಯ ಆಯುಕ್ತರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇಲ್ಲಿ ಕೆಸ್‌ಡಬ್ಲುಎಎನ್‌ ಮೂಲಕ ವಿಡಿಯೋ ಸಂವಾದವನ್ನು ನಡೆದಿದೆ. ಸದರಿ ವಿಡಿಯೋ ಸಂವಾದದಲ್ಲಿ ರಾಜ್ಯದ ಎಲ್ಲಾ… Read More »

KCET 2021: ವೃತ್ತಿಪರ ಕೋರ್ಸ್ ಗಳಿಗೆ ಸಿಇಟಿ ಅಂಕವೇ ಮಾನದಂಡ

By | 08/06/2021

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ,ಎಲ್ಲರಲ್ಲೂ ಹಲವಾರು ಗೊಂದಲಗಳು ಉಂಟಾಗಿದ್ದವು. ಆದರೆ ವಿದ್ಯಾರ್ಥಿಗಳಿಗೆ ಸರಕಾರವು ಬಿಗ್ ರಿಲೀಫ್ ಸುದ್ದಿಯೊಂದನ್ನು ನೀಡಿದೆ. ವೃತ್ತಿ ಪರ ಕೋರ್ಸ್ ಗಳಿಗೆ ಸಿಇಟಿ ಪರೀಕ್ಷೆಯ ಅಂಕಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಡಿಸಿಎಂ ಮತ್ತು ಉನ್ನತ ಶಿಕ್ಷಣ ಸಚಿವರಾದ ಸಿಡಿಎಂ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ವೃತ್ತಿಪರ (ಸಿಇಟಿ) ಕೋರ್ಸ್ ಗಳಿಗೆ ದ್ವಿತೀಯ ಪಿಯುಸಿಯ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ. ಸಿಇಟಿ ಪರೀಕ್ಷೆಯ ಅಂಕಗಳ ಆಧಾರದ ಮೇಲೆಯೇ ಸೀಟುಗಳನ್ನು ಹಂಚಲಾಗುವುದು. ಜೂನ್ 15 ರಂದು ಆನ್ಲೈನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳ ಬಹುದು… Read More »

ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಯಾರಿ ಹೇಗಿರಬೇಕು? ಪೂರ್ವ ಸಿದ್ಧತೆ ಇಲ್ಲದೆ ಪರೀಕ್ಷೆ ಬರೆಯಬೇಡಿ

By | 08/03/2021

ಪ್ರತಿವರ್ಷ ರೈಲ್ವೆ, ಬ್ಯಾಂಕ್‌, ಕೆಪಿಎಸ್‌ಸಿ, ಯುಪಿಎಸ್‌ಸಿ, ಪಿಡಿಒ, ಪೊಲೀಸ್‌ ನೇಮಕ ಪರೀಕ್ಷೆ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಭ್ಯರ್ಥಿಗಳು ಎದುರಿಸಬೇಕಿರುತ್ತದೆ. ಬಹುತೇಕರು ಸರಕಾರಿ ಉದ್ಯೋಗ ಸಿಕ್ಕರೆ ಸಿಗಲಿ ಎಂಬ ಆಸೆಯಿಂದ ಅರ್ಜಿ ಸಲ್ಲಿಸುತ್ತಾರೆ. ಯಾವುದೇ ಸಮರ್ಪಕ ಸಿದ್ಧತೆ ಇಲ್ಲದೆ ಪರೀಕ್ಷೆ ಬರೆದು ಫಲಿತಾಂಶದಲ್ಲಿ ಹೆಸರು ಇಲ್ಲದೆ ಇರುವುದನ್ನು ‘ಸರಕಾರಿ ಜಾಬ್ಸ್‌ ಸಿಗುವುದು ಸುಲಭವಲ್ಲ’ ಎಂದುಕೊಳ್ಳುತ್ತಾರೆ.ಉದ್ಯೋಗ ಮಾರುಕಟ್ಟೆಯಲ್ಲೀಗ ಸ್ಪರ್ಧೆ ಹೆಚ್ಚಿದೆ. ಯಾವುದೇ ಜಾಬ್‌ ನೋಟಿಫಿಕೇಷನ್‌ ಪ್ರಕಟವಾಗಲಿ. ಇರುವುದು ಕೆಲವೇ ಹುದ್ದೆಗಳಾಗಿದ್ದರೂ ಸಾವಿರ, ಲಕ್ಷ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಸರಕಾರಿ ನೌಕರಿಗಿರುವ ಸೆಳೆತ… Read More »

Social Skills for Success: ಕರಿಯರ್‌ ಪ್ರಗತಿಗೆ ನೆರವಾಗುವ ಸೋಷಿಯಲ್‌ ಸ್ಕಿಲ್ಸ್‌

By | 03/03/2021

ಕರಿಯರ್‌ನಲ್ಲಿ ಪ್ರಗತಿ ಕಾಣಲು ಕೇವಲ ಬಾಹ್ಯ ಅಂದ ಸಾಕಾಗದು. ಯಶಸ್ಸಿಗೆ ಸೋಷಿಯಲ್‌ ಸ್ಕಿಲ್ಸ್‌ ಅವಶ್ಯವಾಗಿದೆ. ಬಾಹ್ಯ ಅಂದವೆಂದರೆ ಶೋಕೇಸ್‌ನಲ್ಲಿರುವ ಗೊಂಬೆ, ಸೋಷಿಯಲ್‌ ಕೌಶಲವೆನ್ನುವುದು ಮನೆಯಲ್ಲಿ ಲವಲವಿಕೆಯಿಂದ ಓಡಾಡುವ ಪುಟ್ಟ ಮಗು. ನಿಮ್ಮ ಬಗ್ಗೆ ನಿಮಗಿರುವ ಸ್ವಯಂ ಭರವಸೆ, ಸಕಾರಾತ್ಮಕ ವರ್ತನೆ, ಉತ್ತಮ ಬಾಡಿ ಲ್ಯಾಂಗ್ವ ಏಜ್‌, ಐ ಕಾಂಟ್ಯಾಕ್ಟ್, ಅತ್ಯುತ್ತಮ ಸಂವಹನ ಕೌಶಲ ಇತ್ಯಾದಿಗಳು ಕರಿಯರ್‌ ಪ್ರಗತಿಗೆ ಸಾಥ್‌ ನೀಡುತ್ತವೆ.

2021ರ ಬಹುಬೇಡಿಕೆಯ ಡಿಜಿಸ್ಕಿಲ್: ಯಶಸ್ಸು ನೀಡುವ ಕೋರ್ಸ್ ಕಲಿಯಿರಿ

By | 27/12/2020

ಈ ವರ್ಷ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಸವಾಲಿನ ವರ್ಷ. ಸ್ಟಡಿ ಫ್ರಮ್‍ ಹೋಮ್‍, ಶಾಲೆ, ಕಾಲೇಜಿಗೆ ಹೋಗುವ ಕಷ್ಟವಿಲ್ಲ… ಇತ್ಯಾದಿಗಳು ಒಂದು ರೀತಿಯ ಖುಷಿ ನೀಡಿದ್ದರೂ, ಇದರ ಪರಿಣಾಮ ನಿರೀಕ್ಷೆಗಿಂತ ಭೀಕರವಾಗಿಯೇ ಇದೆ. ಮೊದಲನೆಯದಾಗಿ ಕೋರ್ಸ್‍ಗಳನ್ನು ಮುಗಿಸಿಕೊಂಡು ಹೊರಬಂದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕುವುದೇ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಈಗಾಗಲೇ ಪರಿಣಿತಿ ಪಡೆದ ಉದ್ಯೋಗಿಗಳ ಜಾಬ್‍ ಕಟ್‍ ಮಾಡಿ ತಣ್ಣಗೆ ಕುಳಿತ ಕಂಪನಿಗಳು ಹೊಸ ಹುಡುಗರನ್ನು ನೇಮಕ ಮಾಡಿಕೊಳ್ಳುವುದೇ ಎಂಬ ಪ್ರಶ್ನೆಗೆ ಉತ್ತರ ದೊರಕಬೇಕಿದೆ. ಉದ್ಯೋಗ ತಜ್ಞರ ಪ್ರಕಾರ, ಈಗ ಜಗತ್ತು… Read More »