Category Archives: Website Guide

ವೆಬ್ ಸೈಟ್ ಗೈಡ್: ಯಾಕೆ ವರ್ಡ್ ಪ್ರೆಸ್ ಬೆಸ್ಟ್?

By | 08/01/2019

ಕರ್ನಾಟಕ ಬೆಸ್ಟ್ ವೆಬ್ ಸೈಟ್ ಮಾರ್ಗದರ್ಶಿಯ ಎರಡನೇ ಅಧ್ಯಾಯವಾಗಿ “ಯಾಕೆ ವರ್ಡ್ ಪ್ರೆಸ್ ಬೆಸ್ಟ್?’ ಎಂಬ ವಿಷಯದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಈಗಾಗಲೇ ಪೀಠಿಕೆಯಲ್ಲಿ ಈ ಕುರಿತು ಒಂದಿಷ್ಟು ಅಂಶಗಳು ನಿಮಗೆ ತಿಳಿದುಬಂದಿರಬಹುದು. ಜಗತ್ತಿನಲ್ಲಿರುವ ಒಟ್ಟಾರೆ ವೆಬ್ ಸೈಟ್ ಗಳಲ್ಲಿ ಸುಮಾರು ಶೇಕಡ 30ರಷ್ಟು ಈಗ ವರ್ಡ್ ಪ್ರೆಸ್ಟ್ ಮೂಲಕ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಾಣಲಿದೆ. ಮುಂದೊಂದು ದಿನ ಸರ್ವಂ ವರ್ಡ್ ಪ್ರೆಸ್ ಮಯ ಆದರೂ ಆಗಬಹುದು. ನಿಮ್ಮ ಆಸಕ್ತಿಯನ್ನು ಕೊನೆಯವರೆಗೆ ಉಳಿಸಿಕೊಳ್ಳುವ ಉದ್ದೇಶದಿಂದ… Read More »

ವೆಬ್ ಸೈಟ್ ಗೈಡ್: ಕರ್ನಾಟಕ ಬೆಸ್ಟ್ ಸಂಪೂರ್ಣ ಮಾರ್ಗದರ್ಶಿ

By | 07/01/2019

ಎಲ್ಲರಿಗೂ ನಮಸ್ಕಾರ. ಕರ್ನಾಟಕ ಬೆಸ್ಟ್.ಕಾಂ ಮೂಲಕ ಒಂದು ಸಂಪೂರ್ಣ ಟೆಕ್ ಪಾಠ ಹೇಳಿಕೊಡುವ ಪ್ರಯತ್ನದ ಆರಂಭವಿದು. ನಿಮಗೂ ಇದು ಇಷ್ಟವಾದೀತು ಎಂಬ ನಂಬಿಕೆ ನನ್ನದು. ಕರ್ನಾಟಕ ಬೆಸ್ಟ್‌ ವೆಬ್‌ಸೈಟ್‌ ಗೈಡ್ನಲ್ಲಿ ಪೂರ್ಣಗೊಂಡ ಲೇಖನಗಳು ಪೀಠಿಕೆ (ಇದೇ ಪುಟದಲ್ಲಿದೆ) ಯಾಕೆ ವರ್ಡ್‌ಪ್ರೆಸ್‌ ಬೆಸ್ಟ್?‌ ಬ್ಲಾಗ್‌ ರಚಿಸುವುದು ಹೇಗೆ? ಬ್ಲಾಗರ್‌ಗೆ ವೆಬ್‌ಸೈಟ್‌ ರೂಪ ನೀಡುವುದು ಹೇಗೆ? ಡೊಮೈನ್‌ ಖರೀದಿಸುವುದು ಹೇಗೆ? ವಹಿಸಬೇಕಾದ ಎಚ್ಚರಿಕೆಗಳೇನು? ಡೊಮೈನ್‌ ಮ್ಯಾಪಿಂಗ್‌ ಮಾಡುವುದು ಹೇಗೆ? ವರ್ಡ್‌ಪ್ರೆಸ್.ಕಾಂನಲ್ಲಿರುವ ವಿವಿಧ ಹೋಸ್ಟಿಂಗ್‌ ಪ್ಲ್ಯಾನಿಂಗ್ ಗಳನ್ನು ಖರೀದಿಸಬಹುದೇ? ವರ್ಡ್‌ಪ್ರೆಸ್. ಆರ್ಗ್‌ (.ಕಾಂ ಅಲ್ಲ) ಯಾಕೆ… Read More »

Blogging Guide: ಬ್ಲಾಗ್ ಲೇಖನ ರಚನೆ ಹೇಗೆ?

By | 26/11/2018

ಸೋಷಿಯಲ್ ಮೀಡಿಯಾ ಉತ್ತುಂಗದಲ್ಲಿರುವ ಈ ಕಾಲದಲ್ಲಿ ಬ್ಲಾಗಿಂಗ್ ಎಂದರೆ ಕೆಲವರು ಮೂಗು ಮುರಿಯುತ್ತಾರೆ.  ಆದರೆ, ನೀವು ಗಮನಿಸಿರಬಹುದು. ಈಗ ಬ್ಲಾಗಿಂಗ್ ಎನ್ನುವುದು ವೆಬ್ ಸೈಟ್ ಗಳ ರೂಪದಲ್ಲಿ ಹೊಸ ರೂಪ ಪಡೆದಿದೆ. ಡೊಮೈನ್ ಹೆಸರು ಖರೀದಿ, ಹೋಸ್ಟಿಂಗ್ ಖರೀದಿ ಮಾಡಿ ಸ್ವಂತ ಸರಳ ವೆಬ್ ಸೈಟ್ ರಚಿಸಲು ಹೆಚ್ಚಿನವರು ಆದ್ಯತೆ ನೀಡುತ್ತಿದ್ದಾರೆ. ನೀವು ಸಹ ಬ್ಲಾಗ್ ಪೋಸ್ಟ್ ಬರೆಯಲು ಇಚ್ಚಿಸಿದ್ದರೆ ಒಂದಿಷ್ಟು ಮಾಹಿತಿ ಇಲ್ಲಿದೆ. ವೆಬ್ ಸೈಟ್ ರೂಪದಲ್ಲಿ ಬ್ಲಾಗ್ ಬರೆಯುವ ಮೊದಲು ನಿಮ್ಮಲ್ಲಿ ಒಂದು ಬ್ಲಾಗ್ ಇರಬೇಕು. ನೀವು ಇನ್ನೂ… Read More »

ವರ್ಡ್ ಪ್ರೆಸ್ ವೆಬ್ ಸೈಟಿನಲ್ಲಿ ಇನ್ಮುಂದೆ ಗುಟೆನ್ ಬರ್ಗ್ ಎಡಿಟರ್ ಹವಾ

By | 10/08/2018

ಈಗಾಗಲೇ ಜಗತ್ತಿನ ಬಹುತೇಕ ವೆಬ್ ಸೈಟ್ ಗಳು ವರ್ಡ್ ಪ್ರೆಸ್ ಮೂಲಕ ರಚನೆಯಾಗುತ್ತಿವೆ. ಕೋಡಿಂಗ್ ಗೊತ್ತಿಲ್ಲದವರೂ ವೆಬ್ ಸೈಟ್ ಹೊಂದಲು ವರ್ಡ್ ಪ್ರೆಸ್ ನಿಂದ ಸಾಧ್ಯವಾಗುತ್ತದೆ. ಕಳೆದ ಹಲವು ವರ್ಷಗಳಿಂದ ವೆಬ್ ಸೈಟ್ ಬಳಸುತ್ತಿರುವ ನನಗೂ ವರ್ಡ್ ಪ್ರೆಸ್ ಅಚ್ಚುಮೆಚ್ಚು. ಮುಂದಿನ ದಿನಗಳಲ್ಲಿ ವರ್ಡ್ ಪ್ರೆಸ್ ನಲ್ಲಿ ಮಾಹಿತಿಗಳನ್ನು ವಿನೂತನವಾಗಿ ವಿನ್ಯಾಸ ಮಾಡಿ ಹಾಕಬಹುದು. ಯಾಕೆಂದರೆ, ಇನ್ನೊಂದಿಷ್ಟು ಸಮಯ ಕಳೆದ ಬಳಿಕ ವರ್ಡ್ ಪ್ರೆಸ್ ಗುಟೆನ್ ಬರ್ಗ್‍ ಎಡಿಟರ್ ಎಂಬ ಹೊಸ ಸೌಲಭ್ಯವನ್ನು ಅಳವಡಿಸಿಕೊಳ್ಳುತ್ತಿದೆ. ನಿಮಗೆ ಗೊತ್ತೆ, ಕರ್ನಾಟಕಬೆಸ್ಟ್.ಕಾಂ ಈಗಾಗಲೇ ಗುಟೆನ್… Read More »

ಕನ್ನಡ ವೆಬ್ ಸೈಟ್ ಗಳಿಗೆ ಜಾಹೀರಾತು ಮೂಲಗಳು ಯಾವುದಿವೆ?

By | 30/06/2018

ಭಾರತದ ಕೆಲವು ಭಾಷೆಗಳಿಗೆ ಗೂಗಲ್ ಆ್ಯಡ್ ಸೆನ್ಸ್ ಇನ್ನೂ ಬೆಂಬಲ ನೀಡುತ್ತಿಲ್ಲ. ಗೂಗಲ್  ಆ್ಯಡ್ ಸೆನ್ಸ್ ನಲ್ಲಿ ಬೆಂಬಲಿತ ಭಾಷೆಗಳಲ್ಲಿ ಕನ್ನಡ ಭಾಷೆಯಿನ್ನೂ ಸೇರ್ಪಡೆಯಾಗಿಲ್ಲ (ಗೂಗಲ್ ನ್ಯೂಸ್ ನಲ್ಲಿಯೂ ಕನ್ನಡವಿನ್ನು ಬಂದಿಲ್ಲ). ಈ ವರ್ಷದ ಆರಂಭದಲ್ಲಿ ತಮಿಳು ಭಾಷೆಗೆ ಗೂಗಲ್ ಆ್ಯಡ್ ಸೆನ್ಸ್ ಬೆಂಬಲ ದೊರಕಿದೆ. ತಮಿಳು ವೆಬ್ ಸೈಟ್ ಗಳು, ಬ್ಲಾಗ್ ಗಳು ಆ್ಯಡ್ ಸೆನ್ಸ್ ಅಳವಡಿಸಿಕೊಂಡು ಹಣ ಸಂಪಾದಿಸಬಹುದು. ವಿಶೇಷವೆಂದರೆ ಕರ್ನಾಟಕದ ಇನ್ನೊಂದು ನೆರೆ ರಾಜ್ಯವಾದ ತೆಲುಗು ಭಾಷೆಗೂ ಈಗ ಆ್ಯಡ್ ಸೆನ್ಸ್ ಬೆಂಬಲ ದೊರಕುತ್ತದೆ. ಹಿಂದಿ ಭಾಷೆಗಂತೂ… Read More »