Category Archives: Website Guide

ಒಂದು ಇ-ಕಾಮರ್ಸ್ ವೆಬ್‌ಸೈಟ್‌ ನಿರ್ಮಿಸಲು ಎಷ್ಟು ಖರ್ಚಾಗುತ್ತದೆ?

By | 05/07/2020

ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಓದುತ್ತಿದ್ದಾರೆ. ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಆನ್‌ಲೈನ್‌ ಮೂಲಕ ಕೆಲಸ ಮಾಡುತ್ತಿದ್ದಾರೆ. ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳು ಅಂಗಡಿ ಬಾಗಿಲು ತೆಗೆದಿಟ್ಟರೂ ಗ್ರಾಹಕರು ಕಂಗಲಾಗಿದ್ದಾರೆ. ಕೆಲವು ವ್ಯಾಪಾರಗಳು ತಮ್ಮ ವ್ಯಾಪಾರವನ್ನು ಆನ್‌ಲೈನ್‌ ಮೂಲಕ ಮಾಡುತ್ತಿದ್ದಾರೆ.ಅದಕ್ಕಾಗಿ ಇ-ಕಾಮರ್ಸ್‌ ತಾಣವನ್ನು ಆರಂಭಿಸುತ್ತಿದ್ದಾರೆ. ಆದರೆ,ಕೆಲವರಿಗೆ ಇ-ಕಾಮರ್ಸ್‌ ವ್ಯವಹಾರದ ಕುರಿತು ಒಂದಿಷ್ಟು ಆತಂಕ ಇದೆ. ಅದಕ್ಕಾಗಿ ಅರ್ಧಲಕ್ಷ, ಒಂದು ಲಕ್ಷ ಖರ್ಚು ಮಾಡಬೇಕೋ ಎಂಬ ಆತಂಕದಲ್ಲಿದ್ದಾರೆ. ಆದರೆ, ಗಮನಿಸಿ, ನೀವು ಸುಮಾರು 15 ಸಾವಿರ ರೂಪಾಯಿಗೆ ಒಂದು ಇ-ಕಾಮರ್ಸ್‌ ತಾಣ ನಿರ್ಮಿಸಿಕೊಳ್ಳಬಹುದು.… Read More »

ವರ್ಡ್‌ಪ್ರೆಸ್‌ ವೆಬ್‌ಸೈಟ್‌ ಸಂಪೂರ್ಣ ಕ್ಲೀನ್‌ ಮಾಡಿ ರಿಸೆಟ್‌ ಮಾಡುವುದು ಹೇಗೆ?

By | 29/06/2020

ವರ್ಡ್‌ಪ್ರೆಸ್‌ ವೆಬ್‌ಸೈಟ್ ನಲ್ಲಿ ಏನೋ ಪ್ರಯೋಗ ಮಾಡಲು ಹೋಗುವಿರಿ. ಯಾವೆಲ್ಲ ಥೀಮ್‌, ಪ್ಲಗಿನ್‌ ಇನ್‌ಸ್ಟಾಲ್‌ ಮಾಡಿರುವಿರಿ. ಹಲವು ಪುಟಗಳು, ಸ್ಯಾಂಪಲ್‌ ಪೋಸ್ಟ್‌ಗಳನ್ನು ರಚಿಸುವಿರಿ. ಯಾಕೋ ಇದು ಸರಿಬರುತ್ತಿಲ್ಲ, ಮತ್ತೆ ಹೊಸದಾಗಿ ವರ್ಡ್‌ಪ್ರೆಸ್‌ ಇನ್‌ಸ್ಟಾಲ್‌ ಮಾಡಿದಂತೆ ನಿಮ್ಮ ವರ್ಡ್‌ಪ್ರೆಸ್‌ ವೆಬ್‌ಸೈಟ್‌ ಇರಬೇಕೆಂದು ಬಯಸುವಿರಿ. ಇದಕ್ಕಾಗಿ ಏನು ಮಾಡಬೇಕು ಎಂಬ ಸರಳ ಟಿಪ್ಸ್‌ ಅನ್ನು ಇವತ್ತು ವರ್ಡ್‌ಪ್ರೆಸ್‌ ಗೈಡ್‌ ಮೂಲಕ ಇಲ್ಲಿ ನೀಡುತ್ತಿದ್ದೇನೆ. ಇದರಿಂದ ಯಾರಿಗೆ ಅನುಕೂಲ? ವಿವಿಧ ಗ್ರಾಹಕರಿಗೆ ವರ್ಡ್‌ಪ್ರೆಸ್‌ ಸೈಟ್‌ಗಳನ್ನು ರಚಿಸಿಕೊಡುವವರು ಡೆಮೊ ವೆಬ್‌ಸೈಟ್‌ ನಿರ್ಮಿಸಿರಬಹುದು. ಮತ್ತೆ ಹೊಸ ಗ್ರಾಹಕರಿಗೆ ತಾಣ… Read More »

ಆನ್ಲೈನ್ ಪೋರ್ಟಲ್ ಆರಂಭಿಸುವಿರಾ? ಸವಾಲು ಮತ್ತು ಅವಕಾಶ ತಿಳಿದುಕೊಳ್ಳಿರಿ

By | 28/06/2020

ಮುದ್ರಣ ಮಾಧ್ಯಮಕ್ಕೆ ಭವಿಷ್ಯವಿಲ್ಲವೆಂಬ ಸುದ್ದಿ ಸುದ್ದಿಮನೆಯಿಂದ ಸುದ್ದಿಮನೆಯೊಳಗೆ ಬಂದು ಸಾಕಷ್ಟು ವರ್ಷಗಳು ಕಳೆದಿವೆ. ಆದರೂ, ಇನ್ನೂ ಹತ್ತಿಪ್ಪತ್ತು ವರ್ಷಗಳು ಏನಾಗಾದೂ ಎಂಬ ಸ್ವಯಂ ನಂಬಿಕೆಯಿಂದ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ಕೊರೊನಾ ಎಂಬುಂದು ಕಾಲಘಟ್ಟವನ್ನು ಸಾಕಷ್ಟು ಸರಿಸಿಬಿಟ್ಟಿದೆ. ಮುದ್ರಣ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುವ ದೊಡ್ಡಪಡೆಯೇ ಕೆಲಸ ಕಳೆದುಕೊಂಡಾಗಿದೆ. ಇದೇ ಸಮಯದಲ್ಲಿ ಡಿಜಿಟಲ್‌ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಕಳೆದ ಒಂದು ವರ್ಷದಿಂದ ಸಾಕಷ್ಟು ಆನ್‌ಲೈನ್‌ ಪೋರ್ಟಲ್‌ಗಳು ಹುಟ್ಟಿಕೊಂಡಿವೆ. ಆನ್‌ಲೈನ್‌ನಲ್ಲಿ ಹೊಸತು ಆರಂಭಿಸಲು ಹೆಚ್ಚು ಹಣ ಬೇಕಿಲ್ಲ. ಒಂದು… Read More »

Website Guide: ವರ್ಡ್‌ಪ್ರೆಸ್‌ನಲ್ಲಿ ಪೋಸ್ಟ್‌ ಮಾಡುವುದು ಹೇಗೆ?

By | 22/06/2020

ಕರ್ನಾಟಕ ಬೆಸ್ಟ್‌ ಮೂಲಕ ವೆಬ್‌ ಆಸಕ್ತರಿಗೆ ವೆಬ್‌ ಸೈಟ್‌ ನಿರ್ಮಾಣ ಮಾರ್ಗದರ್ಶನ ಮಾಲಿಕೆಯಲ್ಲಿ ಇಂತಹ ಒಂದು ಪೋಸ್ಟ್‌ ಬರೆಯುವ ಅವಶ್ಯಕತೆ ನನಗೆ ಕಂಡುಬಂದಿದೆ. ಬಹುತೇಕರು ತಾಂತ್ರಿಕವಾಗಿ ಪರಿಣಿತರು ಇರುತ್ತಾರೆ. ಇನ್ನು ಬಹುತೇಕರು ತಾಂತ್ರಿಕವಾಗಿ ಪರಿಣತಿ ಹೊಂದಿರುವುದಿಲ್ಲ. ಕೆಲವರು ಸ್ವಯಂ ಕಲಿಕೆಯ ಮೂಲಕ ಕಲಿತುಕೊಳ್ಳುತ್ತಾರೆ. ನೆನಪಿಡಿ, ಬ್ಲಾಗ್‌ ಅಥವಾ ಸುದ್ದಿ ಅಥವಾ ವಿಡಿಯೋ ಲಿಂಕ್‌ ಅಥವಾ ಆಡಿಯೋ ಲಿಂಕ್‌, ಚಿತ್ರ ಗ್ಯಾಲರಿ ಇತ್ಯಾದಿಗಳನ್ನು ವರ್ಡ್‌ಪ್ರೆಸ್‌ನಲ್ಲಿ ಸರಳವಾಗಿ ಪೋಸ್ಟ್‌ ಮಾಡಬಹುದು. ನಿಜ ಹೇಳಬೇಕೆಂದರೆ ಇದಕ್ಕೆ ಯಾವುದೇ ತಾಂತ್ರಿಕ ಜ್ಞಾನದ ಅಗತ್ಯವೇ ಇಲ್ಲ. ನಿಮ್ಮಲ್ಲಿ ಈಗಾಗಲೇ… Read More »

ಗೂಗಲ್‌ ಆಡ್‌ಸೆನ್ಸ್‌ ಇದೀಗ ಕನ್ನಡ ಭಾಷೆಯಲ್ಲಿಯೂ ಲಭ್ಯ- ಕನ್ನಡ ಬ್ಲಾಗ್‌, ಸುದ್ದಿತಾಣಗಳಿಗೆ ಶುಭಸುದ್ದಿ

By | 03/06/2020

ಬಹುತೇಕ ಕನ್ನಡ ಆನ್‌ಲೈನ್‌ (ಬ್ಲಾಗ್‌, ಸ್ವಂತ ವೆಬ್ಸೈಟ್‌, ಸ್ವಂತ ಸುದ್ದಿ ಪೋರ್ಟಲ್)‌ ಬರಹಗಾರರಿಗೆ ಶುಭಸುದ್ದಿಯೊಂದಿದೆ. ಬಹುತೇಕರು ಕನ್ನಡಕ್ಕೆ ಆಡ್‌ಸೆನ್ಸ್‌ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದರು. ನಾನಂತೂ ಚಾತಕಪಕ್ಷಿಯಂತೆ ಕಾಯುತ್ತಿದ್ದೆ. ನನ್ನ ಇಂಗ್ಲಿಷ್‌ ವೆಬ್‌ ಸೈಟಿಗೆ ಪ್ರಾಯೋಗಿಕವಾಗಿ ಆಡ್‌ಸೆನ್ಸ್‌ ಅನುಮತಿ ಪಡೆದು ಅದನ್ನು ಆಫ್‌ ಮಾಡಿಟ್ಟಿದ್ದೆ. ಜೊತೆಗೆ ಆಡ್‌ಸೆನ್ಸ್‌ಗೆ ಸಂಬಂಧಪಟ್ಟ ಎಲ್ಲಾ ಸೆಟ್ಟಿಂಗ್‌ಗಳನ್ನು ಮಾಡಿ ಮುಗಿಸಿದ್ದೆ. ನೀವೀಗ ಕನ್ನಡ ಭಾಷೆಗೆ ಗೂಗಲ್‌ ಆಡ್‌ಸೆನ್ಸ್‌ ಬೆಂಬಲ ನೀಡುತ್ತದೆಯೇ ಎಂದು ಗೂಗಲ್‌ ತಾಣಕ್ಕೆ ಹೋದರೆ ಅಲ್ಲಿ ನೀಡಲಾದ ಪಟ್ಟಿಯಲ್ಲಿ (ಜೂನ್‌ ೩ರವರೆಗೆ- ಈ ಲೇಖನ ಬರೆಯುತ್ತಿರುವಾಗ)… Read More »

ನಿಮಗೊಂದು ಸ್ವಂತ ವೆಬ್‌ಸೈಟ್‌ ಬೇಕೆ? ಇಲ್ಲಿದೆ ಹೆಚ್ಚಿನ ಮಾಹಿತಿ

By | 03/06/2020

ಕರ್ನಾಟಕ ಬೆಸ್ಟ್‌ ಮೂಲಕ ನೀವು ನಿಮ್ಮ ಸ್ವಂತ ವೆಬ್‌ಸೈಟ್‌ ಕನಸು ನನಸಾಗಿಸಿಕೊಳ್ಳಬಹುದು. ನೀವು ವರ್ಡ್‌ಪ್ರೆಸ್‌ ವೆಬ್‌ಸೈಟ್‌ ನಿರ್ಮಾಣ ಕಲಿಯಲು ಆಸಕ್ತಿ ಹೊಂದಿದ್ದರೆ ನಾನು ಬರೆದ ವೆಬ್‌ಸೈಟ್‌ ಗೈಡ್‌ ಸರಣಿ ಲೇಖನಗಳನ್ನು ಓದಬಹುದು. ನಿಮಗೆ ವೆಬ್‌ಸೈಟ್‌ ನಿರ್ಮಿಸಿಕೊಡಬೇಕಿದ್ದರೆ 9844000643 ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸ್‌ಆಪ್‌ನಲ್ಲಿ ಹಾಯ್‌ ಹೇಳಿ. ನಿಮ್ಮ ಅಗತ್ಯಗಳನ್ನು ತಿಳಿದುಕೊಂಡು ನಿಮ್ಮ ನಿರೀಕ್ಷೆಗೆ ತಕ್ಕಂತೆ ವೆಬ್‌ಸೈಟ್‌ ನಿರ್ಮಿಸಿಕೊಡಲಾಗುವುದು. ಯಾವುದೇ ವೆಬ್‌ಸೈಟ್‌ ನಿರ್ಮಾಣಕ್ಕೂ ಮೊದಲು ಡೊಮೈನ್‌ ಹೆಸರು ಮತ್ತು ಹೋಸ್ಟಿಂಗ್‌ ಖರೀದಿಸಬೇಕು. ಹೋಸ್ಟಿಂಗ್‌ ಖರೀದಿಸಲು ಅತ್ಯುತ್ತಮ ಆಯ್ಕೆ . ಯಾಕೆಂದರೆ, ಈಗಾಗಲೇ… Read More »