ಒಂದು ಇ-ಕಾಮರ್ಸ್ ವೆಬ್‌ಸೈಟ್‌ ನಿರ್ಮಿಸಲು ಎಷ್ಟು ಖರ್ಚಾಗುತ್ತದೆ?

By | 05/07/2020

ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಓದುತ್ತಿದ್ದಾರೆ. ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಆನ್‌ಲೈನ್‌ ಮೂಲಕ ಕೆಲಸ ಮಾಡುತ್ತಿದ್ದಾರೆ. ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳು ಅಂಗಡಿ ಬಾಗಿಲು ತೆಗೆದಿಟ್ಟರೂ ಗ್ರಾಹಕರು ಕಂಗಲಾಗಿದ್ದಾರೆ.

ಕೆಲವು ವ್ಯಾಪಾರಗಳು ತಮ್ಮ ವ್ಯಾಪಾರವನ್ನು ಆನ್‌ಲೈನ್‌ ಮೂಲಕ ಮಾಡುತ್ತಿದ್ದಾರೆ.ಅದಕ್ಕಾಗಿ ಇ-ಕಾಮರ್ಸ್‌ ತಾಣವನ್ನು ಆರಂಭಿಸುತ್ತಿದ್ದಾರೆ. ಆದರೆ,ಕೆಲವರಿಗೆ ಇ-ಕಾಮರ್ಸ್‌ ವ್ಯವಹಾರದ ಕುರಿತು ಒಂದಿಷ್ಟು ಆತಂಕ ಇದೆ. ಅದಕ್ಕಾಗಿ ಅರ್ಧಲಕ್ಷ, ಒಂದು ಲಕ್ಷ ಖರ್ಚು ಮಾಡಬೇಕೋ ಎಂಬ ಆತಂಕದಲ್ಲಿದ್ದಾರೆ. ಆದರೆ, ಗಮನಿಸಿ, ನೀವು ಸುಮಾರು 15 ಸಾವಿರ ರೂಪಾಯಿಗೆ ಒಂದು ಇ-ಕಾಮರ್ಸ್‌ ತಾಣ ನಿರ್ಮಿಸಿಕೊಳ್ಳಬಹುದು. ಗ್ರಾಹಕರು ನಿಮ್ಮ ಬ್ಯಾಂಕ್‌ ಖಾತೆಗೆ ಭೀಮ್‌, ಗೂಗಲ್‌ ಪೇ, ಫೋನ್‌ ಪೇ ಇತ್ಯಾದಿಗಳ ಮೂಲಕ ಉತ್ಪನ್ನದ ಮೊತ್ತವನ್ನು ಪಾವತಿಸಬಹುದು.

ಹೇಗೆ ಆರಂಭಿಸುವುದು?

ಇ-ಕಾಮರ್ಸ್‌ ತಾಣ ಆರಂಭಿಸುವುದಿದ್ದರೆ ನಿಮ್ಮಲ್ಲಿ ಒಂದು ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ ಇದ್ದರೆ ಒಳ್ಳೆಯದು. ಸ್ವಲ್ಪ ಪರಿಣತಿ ಇದ್ದರೆ ಮೊಬೈಲ್‌ ಮೂಲಕವೂ ಪ್ರಾಡಕ್ಟ್‌ಗಳನ್ನು ಹಾಕುತ್ತಿರಬಹುದು.

ಮೊದಲಿಗೆ ಒಂದು ಹೆಸರು ಹುಡುಕಿ

ಡೊಮೈನ್‌ ಮತ್ತು ಹೋಸ್ಟಿಂಗ್‌ ಖರೀದಿಗೆ ನೀವು ನಂಬಬಹುದಾದ ವಿಶ್ವಾಸರ್ಹ ತಾಣ Tintuhost.comಗೆ ಭೇಟಿ ನೀಡಿ. ಅಲ್ಲಿ ಡೊಮೈನ್‌ ವಿಭಾಗದಲ್ಲಿ ಹೋಗಿ ನಿಮ್ಮ ಇ-ಕಾಮರ್ಸ್‌ ತಾಣಕ್ಕೆ ಒಂದು ಹೆಸರು ಹುಡುಕಿ. ಅಂದರೆ, ಅಮೇಜಾನ್‌.ಕಾಂ, ಫ್ಲಿಪ್‌ಕಾರ್ಟ್‌.ಕಾಂ, ಇತ್ಯಾದಿಗಳಂತೆ ನಿಮ್ಮ ಕಂಪನಿ ಹೆಸರಿನಲ್ಲೊಂದು ಡೊಮೈನ್‌ ಹೆಸರು ಖರೀದಿಸಿ. ಸರ್ವರ್‌ ಹಗ್‌.ಕಾಂನಲ್ಲಿ ಡೊಮೈನ್‌ ಆಯ್ಕೆ ಮಾಡಿಕೊಂಡು, ನಿಮ್ಮ ಖಾತೆ ರಚಿಸಿದ ಬಳಿಕ ಆಫ್‌ಲೈನ್‌ ಮೂಲಕ ಪಾವತಿಸಿ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ. ಸರ್ವರ್‌ಹಗ್‌ ತಂಡವು ಡೊಮೈನ್‌ ಮೊತ್ತ ಸಂಗ್ರಹಿಸಲು ನಿಮ್ಮನ್ನು ಇಮೇಲ್‌ ಅಥವಾ ಫೋನ್‌ ಮೂಲಕ ಸಂಪರ್ಕಿಸುತ್ತದೆ. ನೀವು ಹಣ ಪಾವತಿಸಿದ ತಕ್ಷಣ ಡೊಮೈನ್‌ ಹೆಸರು ಆಕ್ಟಿವೇಟ್‌ ಆಗುತ್ತದೆ.

ನಿಮ್ಮ ಇ-ಕಾಮರ್ಸ್‌ಗೆ ಸ್ಥಳ

ಮನೆಕಟ್ಟಲು ಹೇಗೆ ಸೈಟ್‌ ಮುಖ್ಯವೋ, ನಿಮ್ಮ ಇ-ಕಾಮರ್ಸ್‌ ತಾಣಕ್ಕೆ ಒಂದು ಹೋಸ್ಟಿಂಗ್‌ ಮುಖ್ಯ. ನಿಮ್ಮ ಕಂಪನಿ ಆರಂಭಿಕ ಹಂತದಲ್ಲಿರುವುದರಿಂದ ನಿಮಗೆ ಲಿನಕ್ಸ್‌ ಶೇರ್ಡ್‌ ಹೋಸ್ಟಿಂಗ್‌ ಉತ್ತಮ. Tintuhost‌.ಕಾಂನ ಹೋಸ್ಟಿಂಗ್‌ ವಿಭಾಗದಲ್ಲಿ ಲಿನಕ್ಸ್‌ ಶೇರ್ಡ್‌ ಹೋಸ್ಟಿಂಗ್‌ ಲಭ್ಯ. ಅಲ್ಲಿ ಯುಎಸ್‌ ವಿಭಾಗದಲ್ಲಿ ಅನ್‌ಲಿಮಿಟೆಡ್‌ ಹೋಸ್ಟಿಂಗ್‌ (ತಿಂಗಳಿಗೆ ಸುಮಾರು ೫೪೯ ರೂಪಾಯಿ/ ವರ್ಷಕ್ಕೆ ಸುಮಾರು ೬, ೮೦೦ ಸಾವಿರ ರೂಪಾಯಿ) ಲಭ್ಯವಿದೆ. ಆಗ ಡೊಮೈನ್‌ ಹೆಸರು ಖರೀದಿಸಿದ ಖಾತೆಯಲ್ಲಿಯೇ ಆರ್ಡರ್‌ ಮಾಡಿ. ಆಫ್‌ಲೈನ್‌ ಪಾವತಿ ಆಯ್ಕೆ ಮಾಡಿ. ಸರ್ವರ್‌ ಹಗ್‌ ತಂಡ ತಿಳಿಸಿದಂತೆ ನೀವು ಬಳಿಕ ಹಣ ಪಾವತಿಸಿದರೆ ಆಯ್ತು.

ಸರ್ವರ್‌ ಸೆಟಪ್‌

ನಿಮಗೆ ತಾಂತ್ರಿಕ ಜ್ಞಾನವಿದ್ದರೆ ನಿಮ್ಮ ಹೋಸ್ಟಿಂಗ್‌ ಮತ್ತು ಡೊಮೈನ್‌ ಜೋಡಿಸಿ ಡೇಟಾಬೇಸ್‌ ಇತ್ಯಾದಿಗಳನ್ನು ರಚಿಸಬೇಕು. ಬಳಿಕ ಸಿಪ್ಯಾನೆಲ್‌ಗೆ ವರ್ಡ್‌ಪ್ರೆಸ್‌ ಇನ್‌ಸ್ಟಾಲ್‌ ಮಾಡಬೇಕು. ಇದೊಂದಿಷ್ಟು ಸೂಕ್ಷ್ಮ ಕೆಲಸ. ಸಂತೋಷದ ಸಂಗತಿಯೆಂದರೆ ಗ್ರಾಹಕರಿಗೆ ಸರ್ವರ್‌ ಹಗ್‌ ಕಂಪನಿಯು ಉಚಿತವಾಗಿ ಸರ್ವರ್‌ ಸೆಟಪ್‌ ಮಾಡಿಕೊಡುತ್ತದೆ. ಹೀಗಾಗಿ, ನೀವು ಈ ವಿಷಯದಲ್ಲಿ ನಿಶ್ಚಿಂತೆಯಿಂದ ಇರಬಹುದು. ನಿಮ್ಮ ಹೋಸ್ಟಿಂಗ್‌ಗೆ ವರ್ಡ್‌ಪ್ರೆಸ್‌ ಇನ್‌ಸ್ಟಾಲ್‌ ಮಾಡಿದ ಬಳಿಕ ನಿಮ್ಮ ಕನಸಿನ ಇ-ಕಾಮರ್ಸ್‌ ತಾಣ ನಿರ್ಮಾಣ ಆರಂಭಿಸಬಹುದು.

ಕರ್ನಾಟಕ ಬೆಸ್ಟ್‌ ಮೂಲಕ ರಚಿಸಿ

ಇ-ಕಾಮರ್ಸ್‌ ನಿರ್ಮಾಣಕ್ಕೆ ಕರ್ನಾಟಕ ಬೆಸ್ಟ್‌ ವೆಬ್ ಡಿಸೈನ್‌ ಅನ್ನು ಸಂಪರ್ಕಿಸಬಹುದು. ಮೊಬೈಲ್‌ ಸಂಖ್ಯೆ ೯೮೪೪೦೦೦೬೪೩ಗೆ ವಾಟ್ಸಪ್‌ ಮಾಡಿದರೆ ಆಯ್ತು. ಒಂದು ಹೋಸ್ಟಿಂಗ್‌,ಡೊಮೈನ್‌ ಮತ್ತು ಸರಳ ಇ-ಕಾಮರ್ಸ್‌ ನಿರ್ಮಾಣ ವಿನ್ಯಾಸ ಸೇರಿದಂತೆ ಒಟ್ಟಾರೆ ಪ್ಯಾಕೇಜ್‌ ೧೫ ಸಾವಿರ ರೂ.ನಿಂದ ಆರಂಭ. ಅಂದರೆ ನೀವು ಹೋಸ್ಟಿಂಗ್‌ ಮತ್ತು ಡೊಮೈನ್‌ಗೆ ಅಲ್ಲಿ ೮ ಸಾವಿರ ರೂ. ಖರ್ಚು ಮಾಡಿರುವಿರಿ. ಮತ್ತೆ ಏಳು ಸಾವಿರ ರೂ. ಹೆಚ್ಚುವರಿ ಮೊತ್ತದಲ್ಲಿ ನಿಮಗಾಗಿ ಒಂದು ಸರಳ ಸುಂದರ ಮತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಇ-ಕಾಮರ್ಸ್‌ ತಾಣ ನಿರ್ಮಿಸಿಕೊಡಲಾಗುತ್ತದೆ.

ಈ ಆಫರ್‌ ಕೆಲವು ದಿನಗಳು ಮಾತ್ರ. ಯಾಕೆಂದರೆ, ಒಂದು ಇ-ಕಾಮರ್ಸ್‌ ನಿರ್ಮಾಣಕ್ಕೆ ಹಲವು ದಿನಗಳು ಕಷ್ಟಪಡಬೇಕಿರುವುದರಿಂದ ಮುಂದಿನ ದಿನಗಳಲ್ಲಿ ಇದೇ ದರದಲ್ಲಿ ಇ-ಕಾಮರ್ಸ್‌ ನಾನು ನಿರ್ಮಿಸಿಕೊಡಬಲ್ಲೆ ಎಂಬ ಖಚಿತತೆಯನ್ನು ಈಗ ನೀಡುವುದಿಲ್ಲ. ಹೀಗಾಗಿ, ಈ ಆಫರ್‌ ಅನ್ನು ನೀವು ಬಳಸಬಹುದು.

ಹೆಚ್ಚಿನ ಮಾಹಿತಿಗೆ ನನಗೆ ವಾಟ್ಸಾಪ್‌ ಮಾಡಿ. Whatsapp Number: 9844000643

ನಿಮಗೊಂದು ಸ್ವಂತ ವೆಬ್‌ಸೈಟ್‌ ಬೇಕೆ? ಇಲ್ಲಿದೆ ಹೆಚ್ಚಿನ ಮಾಹಿತಿ

One thought on “ಒಂದು ಇ-ಕಾಮರ್ಸ್ ವೆಬ್‌ಸೈಟ್‌ ನಿರ್ಮಿಸಲು ಎಷ್ಟು ಖರ್ಚಾಗುತ್ತದೆ?

  1. Pingback: Startup Guide: ಹೊಸ ಉದ್ಯಮ ಆರಂಭಿಸಲು ಬಯಸುವವರಿಗೆ ಮಾರ್ಗದರ್ಶಿ – Karnataka BEST

Leave a Reply

Your email address will not be published. Required fields are marked *