Startup Guide: ಹೊಸ ಉದ್ಯಮ ಆರಂಭಿಸಲು ಬಯಸುವವರಿಗೆ ಮಾರ್ಗದರ್ಶಿ

By | 05/10/2020

ಕರ್ನಾಟಕ ಬೆಸ್ಟ್‌ ಮೂಲಕ ಹತ್ತು ಹಲವು ಸ್ಟಾರ್ಟ್‌ಅಪ್‌ಗಳು ತಮ್ಮ ವೆಬ್‌ಸೈಟ್‌ಗಳನ್ನು ವಿನ್ಯಾಸ ಮಾಡಿಕೊಂಡಿವೆ. ಹೀಗಾಗಿ, ಅವರ ಏಳುಬೀಳುಗಳನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ದೊರಕಿದೆ. ಇದೇ ರೀತಿ ಒಂದಿಷ್ಟು ಸ್ಟಾರ್ಟ್‌ಅಪ್‌ಗಳ ಯಶಸ್ಸು ಕಂಡು ಬೆರಗಾಗಿದ್ದೇನೆ. ಇನ್ನು ಕೆಲವು ಸ್ಟಾರ್ಟಪ್‌ಗಳು ಆರಂಭದಲ್ಲಿ ಧಾಮ್‌ಧೂಮ್‌ ಎಂದರೂ ಕೊನೆಗೂ ಠುಸ್‌ ಎಂದದ್ದನ್ನು ನೋಡಿದ್ದೇನೆ. ಇಂತಹ ಅನುಭವಗಳ ನೆಲೆಯಲ್ಲಿ ಇಲ್ಲೊಂದಿಷ್ಟು ಸ್ಟಾರ್ಟಪ್‌ ಟಿಪ್ಸ್‌ ನೀಡಿದ್ದೇನೆ.

ಇದುಸ್ಟಾರ್ಟಪ್ ಕಾಲ. ಈಗಾಗಲೇ ಅಸ್ತಿತ್ವಕ್ಕೆ ಬಂದ ಬಹುತೇಕ ಸ್ಟಾರ್ಟ್‍ಅಪ್‍ಗಳನ್ನು ಗಮನಿಸಿ. ಅವುಗಳಲ್ಲಿ ಎಲ್ಲವೂ ಸಕ್ಸಸ್ ಆಗಿಲ್ಲ. ಒಂದಿಷ್ಟು ಜನರು ಆರಂಭಶೂರತನ ಪ್ರದರ್ಶಿಸಿ, ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದವು. ಆದರೆ, ಅವುಗಳಲ್ಲಿ ಬಹುತೇಕ ಸ್ಟಾರ್ಟ್‍ಅಪ್‍ಗಳು ಕೆಲವೇ ತಿಂಗಳಲ್ಲಿ ಅಥವಾ ವರ್ಷದಲ್ಲಿ  ಸರಿಯಾಗಿ ನಿಭಾಯಿಸಲಾಗದೆ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಿ ಬಾಗಿಲು ಹಾಕಿಕೊಂಡವು. ಇನ್ನು ಕೆಲವು ಸ್ಟಾರ್ಟ್‍ಅಪ್‍ಗಳು ಜಗತ್ತೇ ಬೆರಗಾಗುವಂತೆ ಬೃಹತ್ ಉದ್ಯಮವಾಗಿ ಹೊರಹೊಮ್ಮಿವೆ. ಕೆಲವೊಂದು ಸ್ಟಾರ್ಟ್‍ಅಪ್‍ಗಳು ಮಿಲಿಯನ್ ಡಾಲರ್‍ಗಳಿಗೆ ಬಿಕರಿಯಾಗಿವೆ. ಸಾಕಷ್ಟು ಸ್ಟಾಟ್‍ಅಪ್‍ಗಳು ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ.

ಕರ್ನಾಟಕ ಬೆಸ್ಟ್‌ ಮೂಲಕ ವೆಬ್‌ಸೈಟ್‌ ನಿರ್ಮಿಸಿಕೊಂಡವರಲ್ಲಿಯೂ ಅನೇಕ ಆರಂಭಶೂರರನ್ನು ಕಂಡಿದ್ದೇನೆ. ಕರ್ನಾಟಕ ಬೆಸ್ಟ್‌ ಮೂಲಕ ವೆಬ್‌ಸೈಟ್‌ ವಿನ್ಯಾಸ ಬಯಸುವ ಗ್ರಾಹಕರಿಗೆ ಆರಂಭದಲ್ಲಿ ಒಂದು ಪುಟ್ಟ ಕೌನ್ಸಿಲಿಂಗ್‌ ನಡೆಸಿ ಒಂದಿಷ್ಟು ಮಾರ್ಗದರ್ಶನವನ್ನೂ ನೀಡಲಾಗಿದೆ. ಇನ್ನು ಕೆಲವು ಜನರು ಉತ್ತಮ ಪ್ಲ್ಯಾನಿಂಗ್‌ ಮತ್ತು ಕಲಿಯುತ್ತ ಬೆಳೆಯುವ ಪ್ರಕ್ರಿಯೆಯ ಮೂಲಕ ಹೊಸ ಎತ್ತರ ತಲುಪಿದ್ದಾರೆ.  

ಈಗಷ್ಟೇ ಕಾಲೇಜು ಮುಗಿಸಿದವರಿಗೆ ಅಥವಾ ಯಾವುದೋ ಕಂಪನಿಯಲ್ಲಿ ಪ್ರತಿಭೆಯನ್ನು ಮಾರಾಟಕ್ಕಿಟ್ಟವರಿಗೆ ಹೊಸ ಕಂಪನಿ ಆರಂಭಿಸುವ ಉತ್ಸಾಹ ಇರಬಹುದು.ಸ್ಟಾರ್ಟಪ್ ಜಗತ್ತಿನಲ್ಲಿ ಏನಾದರೂ ಸಾಸುವ ಮನಸ್ಸಾಗಿರಬಹುದು. ಯಾವುದೇಸ್ಟಾರ್ಟಪ್ ಆರಂಭಿಸುವ ಮೊದಲು ಈ ಮುಂದಿನ ಅಂಶಗಳು ನಿಮ್ಮ ಗಮನದಲ್ಲಿ ಇರಲಿ.

ಸ್ಟಾರ್ಟಪ್‌ ನೋಂದಣಿ ಮಾಡುವುದು ಹೇಗೆ?

ಮೊದಲಿಗೆ ಯಾವ ಬಗೆಯ ವ್ಯವಹಾರ ಮಾಡಲು ಬಯಸುವಿರಿ ಎಂದು ನಿರ್ಧರಿಸಿಕೊಳ್ಳಿ. ಇದರ ಕುರಿತು ಸಾಕಷ್ಟು ರಿಸರ್ಚ್ ಮಾಡಿರಿ. ಬಳಿಕ ನೋಂದಣಿ ಪ್ರಕ್ರಿಯೆ ಆರಂಭಿಸಿ. ಯಾವ ಬಗೆಯ ಬಿಸ್ನೆಸ್ ಎನ್ನುವ ಕುರಿತು ಸ್ಪಷ್ಟತೆ ಬಂದ ನಂತರ startupindia.gov.in ವೆಬ್‍ಸೈಟ್‍ಗೆ ಹೋಗಿ ನೋಂದಣಿ ಮಾಡಿಕೊಳ್ಳಿ. ನೋಂದಣಿ ಪ್ರಕ್ರಿಯೆಯಲ್ಲಿ ನಿಮ್ಮಲ್ಲಿ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಸ್ಟಾರ್ಟ್‍ಅಪ್ ನೋಂದಾಯಿಸುವ ಮೊದಲು ನಿಮ್ಮ ಕಂಪನಿಗೊಂದು ಚಂದದ ಹೆಸರು ಇಡಲು ಮರೆಯಬೇಡಿ.  ಕಂಪನಿಯ ಹೆಸರಲ್ಲಿ ಡೊಮೈನ್‌ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ. ನೋಂದಣಿ ಸಮಯದಲ್ಲಿ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಇತ್ಯಾದಿ ಕೆಲವೊಂದು ದಾಖಲೆಗಳನ್ನು ನಿಮ್ಮಿಂದ ಕೇಳಲಾಗುತ್ತದೆ. ಸಂಬಂಧಪಟ್ಟ ದಾಖಲೆಗಳು ಮತ್ತು ಕೇಳಿರುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ ಬಳಿಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಸ್ಟಾರ್ಟ್‍ಅಪ್‍ಗೆ ಫಂಡ್

ನಿಮ್ಮ ನವೋದ್ಯಮಕ್ಕೆ ಹಣಕಾಸು ನೆರವು ನೀಡಲು ಸಾಕಷ್ಟು ಫಂಡಿಂಗ್ ಆಯ್ಕೆಗಳು ಬಾರತದಲ್ಲಿವೆ. ನೀವು ಕ್ರೌಡ್‍ಫಂಡಿಂಗ್ ಅಥವಾ ಸಾಲವನ್ನು ಆಯ್ಕೆ ಮಾಡಬಹುದು. ಜೊತೆಗೆ, ಹೂಡಿಕೆದಾರರನ್ನೂ ಹುಡುಕಬಹುದು. ನಿಮ್ಮ ಬಿಸ್ನೆಸ್ ಯೋಜನೆ ಅನನ್ಯವಾಗಿದ್ದರೆ ಫಂಡಿಂಗ್ ದೊರಕುವುದು ಕಷ್ಟವಲ್ಲ.

ನಿಮ್ಮಲ್ಲಿಯೇ ಹೂಡಿಕೆಗೆ ಸಣ್ಣಮೊತ್ತವಿದ್ದರೆ, ಕಠಿಣ ಪರಿಶ್ರಮಪಟ್ಟು ನಿಮ್ಮ ನವೋದ್ಯಮ ಗೆಲ್ಲುವ ಕುದುರೆ ಎಂದು ತೋರಿಸಿಕೊಟ್ಟರೆ ನೀವು ಹೂಡಿಕೆದಾರರನ್ನು ಹುಡುಕಬೇಕಿಲ್ಲ. ಹೂಡಿಕೆದಾರರೇ ನಿಮ್ಮನ್ನು ಹುಡುಕಿಕೊಂಡು ಬರಬಹುದು.

ಮೊದಲನೆಯದಾಗಿ ನಿಮ್ಮ ನವೋದ್ಯಮದ ಕುರಿತು ನಿಮಗೆ ನಂಬಿಕೆ ಇರಬೇಕು. ನಿಮ್ಮ ಐಡಿಯಾದ ಕುರಿತು ನಿಮಗೇ ಭರವಸೆ ಇಲ್ಲದೆ ಇದ್ದರೆ ಇತರರು ನಂಬಲಾರರು. ಹೀಗಾಗಿ, ನಿಮ್ಮಲ್ಲಿ ಅದ್ಭುತವಾದ ಯೋಚನೆ, ದೃಷ್ಟಿಕೋನವಿರಲಿ. ಹೂಡಿಕೆದಾರರ ಮನವೋಲಿಸುವ ಶಕ್ತಿ ಇರಲಿ.

ಯಶಸ್ಸು ಪಡೆಯುವುದು ಹೇಗೆ?

ನಿಮ್ಮ ಪರಿಸರದಲ್ಲಿ ಯಾವ ಬಗೆಯ ಸ್ಟಾರ್ಟಪ್ ಯಶಸ್ಸು ಪಡೆಯಬಹುದು ಎಂದು ಯೋಚಿಸಿ. ತುಂಬಾ ಪ್ರತಿಸ್ಪರ್ಧಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡುವುದು ಸೂಕ್ತವಲ್ಲ. ನಿಮ್ಮ ಐಡಿಯಾ ವಿನೂತನವಾಗಿದ್ದರೆ ಉತ್ತಮ. ದೇಶದಲ್ಲಿಂದು ಸಾಕಷ್ಟು ಸ್ಟಾರ್ಟಪ್‌ಗಳು ಇವೆ. ಆದರೆ, ಎಲ್ಲವೂ ಪರಿಪೂರ್ಣವಲ್ಲ. ಸಾಕಷ್ಟು ಕೊರತೆಗಳನ್ನು ಹೊಂದಿವೆ. ಇಂತಹ ಕೊರತೆಗಳನ್ನು ಕಂಡುಕೊಂಡು ಆ ಸ್ಥಾನವನ್ನು ತುಂಬಲು ಪ್ರಯತ್ನಿಸಬಹುದು.

ಈಗ ಸಾಕಷ್ಟು ಯುವ ಉದ್ಯಮಿಗಳು ಸ್ಟಾರ್ಟ್‍ಅಪ್ ಮೂಲಕ ಯಶಸ್ಸು ಪಡೆಯುತ್ತಿದ್ದಾರೆ. ಹೀಗಾಗಿ, ನವೋದ್ಯಮದಲ್ಲಿ ಯಶಸ್ಸು ಪಡೆಯಲು ವಯಸ್ಸು ಅಡ್ಡಿಯಲ್ಲ. ನಿಮಗೆ ಗೊತ್ತೆ, ಉದ್ಯಮ ಸಾಹಸ ಮಾಡಲು ಸಣ್ಣ ವಯಸ್ಸು ಸೂಕ್ತವಾದದ್ದು. 30ರ ಬಳಿಕ ಸಂಸಾರ ಬಂಧನ, ಆರ್ಥಿಕ ಅಭದ್ರತೆ ನಿಮ್ಮನ್ನು ಹೊಸ ಸಾಹಸಗಳಿಗೆ ಮುಂದಾಗದಂತೆ ತಡೆಯಬಹುದು. ನಿಮ್ಮಲ್ಲಿಯೂ ಹೊಸ ಆಲೋಚನೆ ಇದ್ದರೆ ಅದನ್ನು ಉದ್ಯಮವಾಗಿ ಪರಿವರ್ತಿಸುವ ಕುರಿತು ಯೋಚಿಸಬಹುದು.

* ಇತರರ ತಪ್ಪುಗಳಿಂದ ಕಲಿಯಿರಿ

ಸ್ಟಾರ್ಟ್‍ಅಪ್ ಕತೆಗಳನ್ನು ವೆಬ್‍ಸೈಟ್‍ಗಳಲ್ಲಿ ಓದಿರಿ. ಅಲ್ಲಿ ಹಲವಾರು ಜನರು ತಮ್ಮ ಅನುಭವಗಳನ್ನು ದಾಖಲಿಸಿರುತ್ತಾರೆ. ಪ್ರತಿಯೊಬ್ಬ ಯಶಸ್ವಿ ಉದ್ಯಮಿಯೂ ಲೆಕ್ಕವಿಲ್ಲದಷ್ಟು ತಪ್ಪುಗಳನ್ನು ಮಾಡಿರುತ್ತಾರೆ. ಅಂತಹ ತಪ್ಪುಗಳಿಂದ ಕಲಿಯಿರಿ. ಅದನ್ನೇ ಸ್ಪೂರ್ತಿಯಾಗಿ ಇಟ್ಟುಕೊಳ್ಳಿ.  

* ಅನುಭವ ಪಡೆಯಿರಿ

ಇತ್ತೀಚೆಗೆ ಒಬ್ಬ ಗ್ರಾಹಕರು ಕರ್ನಾಟಕ ಬೆಸ್ಟ್‌ ಅನ್ನು ಇ-ಕಾಮರ್ಸ್‌ ಕಂಪನಿ ವಿನ್ಯಾಸಕ್ಕಾಗಿ ಸಂಪರ್ಕಿಸಿದ್ದರು. ನಿಜ ಹೇಳಬೇಕೆಂದರೆ ಅವರಲ್ಲಿ ಮಾರಾಟ ಮಾಡಲು ಉತ್ಪನ್ನಗಳು ಇರಲಿಲ್ಲ. ಏನೂ ಮಾರಾಟ ಮಾಡಬೇಕು ಎಂದು ಸ್ಪಷ್ಟತೆ ಇರಲಿಲ್ಲ. ಇ-ಕಾಮರ್ಸ್‌ ವೆಬ್‌ಸೈಟ್ ಮಾಡಿದ ತಕ್ಷಣ ಗ್ರಾಹಕರು ಬರುತ್ತಾರೆ, ಖರೀದಿಸುತ್ತಾರೆ ಎಂಬ ಭ್ರಾಂತಿಯಲ್ಲಿದ್ದರು. ಅವರಲ್ಲಿ ಪ್ರಾಡಕ್ಟ್‌ ಮತ್ತು ವ್ಯಾಪಾರದ ಕುರಿತು ಇನ್ನಷ್ಟು ಸ್ಪಷ್ಟತೆಯೊಂದಿಗೆ ಬನ್ನಿ ಎಂದು ಹೇಳಿದ್ದೆ. ಈ ಹಿಂದೆ ಬೇರೆಯವರು ಮಾಡಿದ ತಪ್ಪುಗಳನ್ನು  ಅವರಿಗೆ ತಿಳಿಸಿದೆ. ಆಗ ಅವರಿಗೆ ಇ-ಕಾಮರ್ಸ್‌ ಜಗತ್ತಿನ ಕುರಿತು ಒಂದಿಷ್ಟು ಸ್ಪಷ್ಟತೆ ಮೂಡಿತು. ಅಂದಹಾಗೆ ಇ-ಕಾಮರ್ಸ್‌ ತಾಣ ನಿರ್ಮಾಣ ದುಬಾರಿಯಲ್ಲ. ಒಂದು ಹದಿನೈದು, ಇಪ್ಪತ್ತು ಸಾವಿರ ರೂ.ಗೆ ಇ-ಕಾಮರ್ಸ್ ತಾಣ ಆರಂಭಿಸಬಹುದು.

ನೀವು ಯಾವ ವಲಯದಲ್ಲಿ ಬಿಸ್ನೆಸ್ ಆರಂಭಿಸಲು ಬಯಸುವಿರೋ ಆ ಕ್ಷೇತ್ರದಲ್ಲಿ ಕೊಂಚ ಅನುಭವ ಪಡೆದುಕೊಳ್ಳಿ. ಕ್ಲೈಮೇಟ್ ಕಾರ್ಸ್ ಎಂಬ ಪರಿಸರ ಸ್ನೇಹಿ ಕಾರು ಬಾಡಿಗೆ ನೀಡುವಸ್ಟಾರ್ಟಪ್ ಆರಂಭಿಸುವ ಮೊದಲು ನಿಕೊ ವಿಲಿಯಮ್ಸನ್ ಎನ್ನುವವರು ಕಾಲ್ ಸೆಂಟರ್‍ನಲ್ಲಿ ಸಾಕಷ್ಟು ದಿನ ಕೆಲಸ ಮಾಡಿದ್ದರು. ಅಲ್ಲಿ ಕಲಿತ ಅಂಶಗಳನ್ನು ತನ್ನ ಬಿಸ್ನೆಸ್‍ನಲ್ಲಿ ಅಳವಡಿಸಿಕೊಂಡರು. ನಮ್ಮ ಕರ್ನಾಟಕ ಬೆಸ್ಟ್ ಮೂಲಕ ನ್ಯೂಸ್‌ ವೆಬ್‌ಸೈಟ್‌ ಆರಂಭಿಸಿದ ಬಹುತೇಕರು ಯಾವುದಾದರೂ ಸುದ್ದಿ ಪತ್ರಿಕೆಗಳಲ್ಲಿ, ಟೀವಿಗಳಲ್ಲಿ ಕೆಲಸ ಮಾಡಿದ ಅನುಭವ ಇರುವವರು. ಹೀಗಾಗಿ, ಅವರು ಯಶಸ್ಸಿನ ಹಾದಿಯಲ್ಲಿದ್ದಾರೆ. ಬರೆಯಲು ತಿಳಿಯದೆ, ಪತ್ರಿಕೋದ್ಯಮದ ಗಂಧಗಾಳಿ ಇಲ್ಲದೆ ನ್ಯೂಸ್‌ ವೆಬ್‌ಸೈಟ್‌ ಆರಂಭಿಸಿದವರು ಆರಂಭದ ಹೂಡಿಕೆಯನ್ನು ಕಳೆದುಕೊಂಡಿದ್ದಾರೆ.

* ನಿಮ್ಮ ಗ್ರಾಹಕರ ಬಗ್ಗೆ ತಿಳಿಯಿರಿ

ನೀವು ಯಾವುದೇ ಕ್ಷೇತ್ರಕ್ಕೆ ಪ್ರವೇಶಿಸುವ ಮೊದಲು ಮಾರುಕಟ್ಟೆಯ ಬಗ್ಗೆ ಸರಿಯಾಗಿ ಸಂಶೋಧನೆ ಮಾಡುವುದು ಅತ್ಯಂತ ಅಗತ್ಯ. ನಿಮ್ಮ ಗ್ರಾಹಕರು ಯಾರು ಎನ್ನುವುದನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳಬೇಕು.

* ನಿಮ್ಮ ಪ್ರತಿಸ್ಪರ್ಧಿಗಳ ಬಗ್ಗೆ  ತಿಳಿದುಕೊಳ್ಳಿ

ಕೇವಲ ನಿಮ್ಮ ಗ್ರಾಹಕರ ಬಗ್ಗೆ ತಿಳಿದುಕೊಂಡರೆ ಸಾಲದು. ಯಾಕೆಂದರೆ, ಆ ಗ್ರಾಹಕರಿಗೆ ಈಗಾಗಲೇ ಬೇರೆ ಕಂಪನಿಗಳು ಉತ್ಪನ್ನಗಳನ್ನು ನೀಡುತ್ತಿರಬಹುದು. ಹೀಗಾಗಿ ಮಾರುಕಟ್ಟೆಯಲ್ಲಿರುವ ನಿಮ್ಮ ಸ್ರ್ಪಗಳನ್ನು ತಿಳಿದುಕೊಳ್ಳಿ. ಇತರರಿಗಿಂತ ಅತ್ಯುತ್ತಮವಾಗಿ ಹೇಗೆ ಸೇವೆ ಸಲ್ಲಿಸಬಹುದು ಎನ್ನುವುದರ ಕುರಿತು ಸ್ಪಷ್ಟತೆ ಇರಲಿ. ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ದೂರಸಂಪರ್ಕ ಕಂಪನಿಗಳಿದ್ದರೂ ರಿಲಯೆನ್ಸ್ ಜಿಯೊ ಮಾರುಕಟ್ಟೆಯಲ್ಲಿ ಮಾಡಿದ ಕಮಾಲ್ ನಿಮಗೆ ತಿಳಿದಿರಬಹುದು. ಹಾಗಂತ, ನೀವು ಅಷ್ಟೊಂದು ಹೂಡಿಕೆ ಮಾಡಬೇಕೆಂದಿಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳಿಗಿಂತ ಕಡಿಮೆ ದರಕ್ಕೆ, ಅತ್ಯುತ್ತಮವಾಗಿರುವುದನ್ನು ನೀಡಿ.

* ಬಿಸ್ನೆಸ್ ಪ್ಲಾನ್ ಬರೆಯಿರಿ

ನಿಮ್ಮಲ್ಲಿ ಕೇವಲ ಬಿಸ್ನೆಸ್ ಐಡಿಯಾಗಳಿದ್ದರೆ ಸಾಲದು. ನಿಮ್ಮನ್ನು ನೀವು ಉತ್ತೇಜಿಸಿಕೊಳ್ಳಲು ಮತ್ತು ನಿಮ್ಮ ಐಡಿಯಾವನ್ನು ಸಾಕಾರಗೊಳಿಸಲು ಪೂರಕವಾಗುವಂತೆ ನಿಮ್ಮ ಬಿಸ್ನೆಸ್ ಐಡಿಯಾಗಳನ್ನು ಬರೆಯಿರಿ. ಗುರಿಗಳನ್ನು ನಿಗದಿಪಡಿಸಿ.

* ಸಣ್ಣದಾಗಿ ಆರಂಭಿಸಿ

ಆರಂಭದಲ್ಲಿಯೇ ಹಲವು ಲಕ್ಷ ಹೂಡಿಕೆ ಮಾಡಿ ನಷ್ಟಕ್ಕೆ ಗುರಿಯಾಗಬೇಡಿ. ನಿಮ್ಮ ಮನೆಯಲ್ಲಿದ್ದುಕೊಂಡೇ ಸಣ್ಣದಾಗಿ ಕಂಪನಿ ಆರಂಭಿಸಿ. ನಿಮ್ಮ ಉತ್ಪನ್ನಗಳಿಗೆ ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ಬಿಸ್ನೆಸ್ ಅನ್ನು ಬೆಳೆಸಿರಿ. ಈ ರೀತಿ ಸಣ್ಣದಾಗಿ ಆರಂಭಿಸುವುದರಿಂದ ನಷ್ಟವೂ ಕಡಿಮೆಯಾಗುತ್ತದೆ. ನಿಮಗೆ ಕಲಿಯಲೂ ಸಾಕಷ್ಟು ಅವಕಾಶ ದೊರಕುತ್ತದೆ.

* ಬೆಂಬಲ ನೀಡುವ ಸಂಸ್ಥೆಗಳನ್ನು ಸಂಪರ್ಕಿಸಿ

ಕರ್ನಾಟಕ ಸರಕಾರ ಅಥವಾ ಕೇಂದ್ರ ಸರಕಾರವು ಸ್ಟಾರ್ಟ್‍ಅಪ್‍ಗಳಿಗೆ ಯಾವ ರೀತಿಯ ಬೆಂಬಲ ನೀಡುತ್ತದೆ ಎಂದು ತಿಳಿದುಕೊಳ್ಳಿ. ಸ್ಟಾರ್ಟ್‍ಅಪ್‍ಗಳಿಗೆ ಸಬ್ಸಿಡಿ ಅಥವಾ ಹಣಕಾಸು ಸಾಲ ನೀಡುವ ಸಂಸ್ಥೆಗಳೊಂದಿಗೆ ಚರ್ಚಿಸಿ. ಸ್ಟಾರ್ಟ್‍ಅಪ್‍ಗಳಿಗೆ ಸಲಹೆಗಳನ್ನು ನೀಡುವ ಸಂಸ್ಥೆಗಳು ಅಥವಾ ವ್ಯಕ್ತಿಗಳ ಜೊತೆ ಚರ್ಚಿಸಿ.

* ಯಾವುದಾದರೂ ಸರ್ಟಿಫಿಕೇಟ್ ಪಡೆಯಿರಿ

ನೀವು ಯಾವ ವಿಷಯದ ಕುರಿತುಸ್ಟಾರ್ಟಪ್ ಮಾಡುವಿರೋ ಅದಕ್ಕೆ ಸಂಬಂಧಪಟ್ಟ ತಾತ್ಕಾಲಿಕ ಅವಧಿಯ ಕೋರ್ಸ್‍ಗಳಿಗೆ ಸೇರಬಹುದು. ಇಂತಹ ಕೋರ್ಸ್‍ಗಳನ್ನುಸ್ಟಾರ್ಟಪ್ ಆರಂಭಿಸಿದ ಬಳಿಕವೂ ಮಾಡಬಹುದಾಗಿದೆ.  ಬೆಂಗಳೂರಿನ ಬಾಲ್ಕ್‌ ಕೌಶಲ ಅಭಿವೃದ್ಧಿ ಸಂಸ್ಥೆಯಲ್ಲಿ ನೀವು ಇಂತಹ ಸರ್ಟಿಫಿಕೇಷನ್‌ಗಳನ್ನು ಪಡೆಯಬಹುದಾಗಿದೆ.

* ಸಾಲಕ್ಕೆ ಅರ್ಜಿ ಸಲ್ಲಿಸಿ

ಯುವ ನವೋದ್ಯಮಿಗಳಿಗೆ ಸರಕಾರದ ಬೆಂಬಲ ಇರುವಸ್ಟಾರ್ಟಪ್ ಸಾಲಗಳ ಪ್ರಯೋಜನ ಪಡೆಯಿರಿ. ವಿವಿಧ ಬ್ಯಾಂಕ್‍ಗಳು ಸಹ ಸ್ಟಾರ್ಟ್‍ಅಪ್‍ಗಳಿಗೆ ಸಾಲ ನೀಡುತ್ತವೆ. ಅವುಗಳಿಗೆ ನಿಮ್ಮ ಬಿಸ್ನೆಸ್ ಕುರಿತು ಸ್ಪಷ್ಟತೆ ದೊರಕುವಂತೆ ವರ್ತಿಸಿ.

* ಹೆಸರು ನೋಂದಣಿ

ನಿಮ್ಮ ಕಂಪನಿಗೆ ಯೂನಿಕ್ ಆಗಿರುವ ಹೆಸರಿಡಿ. ಆ ಕಂಪನಿಗಾಗಿ ಚಂದದ ವೆಬ್‍ಸೈಟ್ ರೂಪಿಸಿ. ಬಿಸ್ನೆಸ್ ಲೋಗೊ ರಚಿಸಿ. ನಿಮ್ಮ ಈ ಹೆಸರು, ವೆಬ್‍ಸೈಟ್ ಇತ್ಯಾದಿಗಳು ನಿಮ್ಮ ಪ್ರತಿಸ್ಪರ್ದಿಗಳಿಗಿಂತ ಉತ್ತಮವಾಗಿರುವಂತೆ ನೋಡಿಕೊಳ್ಳಿ.

* ಪ್ರಮೋಟ್ ಮಾಡಿ

ಕಂಪನಿಯನ್ನು ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಈಗ ಸಾಕಷ್ಟು ಉತ್ತಮ ಅವಕಾಶಗಳಿವೆ. ನೀವು ಸೋಷಿಯಲ್ ಮೀಡಿಯಾವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಸಾಕಷ್ಟು ಜನರನ್ನು ತಲುಪಬಹುದಾಗಿದೆ. ಫೇಸ್‍ಬುಕ್ ಆ್ಯಡ್ ಸೇವೆಗಳ ಪ್ರಯೋಜನ ಪಡೆದುಕೊಳ್ಳಬಹುದು.

* ಅತ್ಯುತ್ತಮವಾದದ್ದನ್ನು ನೀಡಿ

ನಿಮ್ಮಸ್ಟಾರ್ಟಪ್ ಒದಗಿಸುವ ಸೇವೆಗಳು ಅತ್ಯುತ್ತಮ ಗುಣಮಟ್ಟದ್ದಾಗಿರಲಿ. ಕಳಪೆ ಎಂದೆನಿಸಿದರೆ ಜನರು ದೂರ ಸರಿಯುತ್ತಾರೆ. ಜನರಿಗೆ ಸರಿಯಾದ ಸಮಯಕ್ಕೆ ಉತ್ಪನ್ನ ತಲುಪುವಂತೆ ಇರಲಿ. ಗ್ರಾಹಕರ ತಾಳ್ಮೆಯನ್ನು ಪರೀಕ್ಷಿಸಬೇಡಿ.

ಶುಭವಾಗಲಿ.

ನಿಮ್ಮ ಹೊಸ ಆರಂಭಕ್ಕೆ ಸೂಕ್ತವಾದ ವೆಬ್‌ಸೈಟ್‌ ವಿನ್ಯಾಸ ಮಾಡಲು ಕರ್ನಾಟಕ ಬೆಸ್ಟ್‌ ಅನ್ನು ಸಂಪರ್ಕಿಸಿ.

ನಿಮ್ಮ ವೆಬ್‌ಸೈಟ್‌ಗೆ ಡೊಮೈನ್‌ ಮತ್ತು ಹೋಸ್ಟಿಂಗ್‌, ಬಿಸ್ನೆಸ್‌ ಇಮೇಲ್‌, ಸರ್ವರ್‌, ಪ್ಲಗಿನ್‌, ಥೀಮ್‌ ಇತ್ಯಾದಿಗಳನ್ನು ಖರೀದಿಸಲು ಟಿಂಟುಹೋಸ್ಟ್‌ಗೆ ಭೇಟಿ ನೀಡಿ.

Leave a Reply

Your email address will not be published. Required fields are marked *