ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಬಯಸುವವರಿಗೆ ಕಂಪ್ಲಿಟ್ ಗೈಡ್

ಭಾರತೀಯ ರೈಲ್ವೆಯಲ್ಲಿ ಯಾವೆಲ್ಲ ಹುದ್ದೆಗಳಿವೆ? ಅರ್ಹತೆಗಳೇನಿರಬೇಕು? ಅಪ್ರೆಂಟಿಸ್ಶಿಪ್ ಪಡೆಯುವುದು ಹೇಗೆ? ಆರ್ಆರ್ಬಿ ನೇಮಕಾತಿ ಹೇಗಿರುತ್ತದೆ? ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.  ಕೇಂದ್ರ ಸರಕಾರದ ಉದ್ಯೋಗ ಪಡೆಯಲು ಬಯಸುವವರಿಗೆ ಭಾರತೀಯ ರೈಲ್ವೆ ಸೂಕ್ತ ಆಯ್ಕೆ. ಇದು ದೇಶದ ಪ್ರಮುಖ ಮತ್ತು ಬೇಡಿಕೆಯ ಉದ್ಯೋಗ ಕ್ಷೇತ್ರ. ಇಲ್ಲಿ ಪ್ರತಿವರ್ಷ ಲಕ್ಷ ಲಕ್ಷ ಜನರು ವಿವಿಧ ರೈಲ್ವೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಸಾವಿರಾರು ಹೊಸ ಅಭ್ಯರ್ಥಿಗಳಿಗೆ ರೈಲ್ವೆಯು ಪ್ರತಿವರ್ಷ ಅವಕಾಶವನ್ನೂ ನೀಡುತ್ತಿದೆ.

ಅರ್ಹತೆ ಏನಿರಬೇಕು?
ರೈಲ್ವೆ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಮೊದಲು ಪರೀಕ್ಷೆ ಬರೆಯುವ ಅರ್ಹತೆಗಳು ನಿಮಗಿದೆಯೇ ಎಂದು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ರೈಲ್ವೆಯು ಎರಡು ವಿ`Àದ ಅರ್ಹತೆಗಳನ್ನು ಬಯಸುತ್ತದೆ. ಮೊದಲನೆಯದು ಶೈಕ್ಷಣಿಕ ಅರ್ಹತೆ. ಹೆಚ್ಚಿನ ರೈಲ್ವೆ ನೇಮಕಾತಿ ಪರೀಕ್ಷೆಗೆ ಪದವಿ ಪ್ರಮುಖ ವಿದ್ಯಾರ್ಹತೆಯಾಗಿದೆ. ಇನ್ನೊಂದು ಅರ್ಹತೆ ವಯೋಮಿತಿ. ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರೋ ಆ ಹುದ್ದೆಗೆ ನಿಗದಿಪಡಿಸಿದ ವಯೋಮಿತಿಯನ್ನು ಪರಿಶೀಲಿಸಿ ಮುಂದುವರೆಯಿರಿ.
ಪರೀಕ್ಷೆಗೆ ಸಿದ್ಧತೆ: ಯಾವುದೇ ಪರೀಕ್ಷೆಗೂ ಸರಿಯಾದ ಸಿದ್ಧತೆ ನಡೆಸುವುದು ಅಗತ್ಯ. ಸಾಧ್ಯವಾದರೆ ರೈಲ್ವೆ ಪರೀಕ್ಷೆಗಳಿಗೆ ಕೋಚಿಂಗ್ ನೀಡುವ ಸಂಸ್ಥೆಗಳಿಗೆ ಸೇರಿ ತರಬೇತಿ ಪಡೆಯಿರಿ. ನೀವು ಇಂಟರ್‍ನೆಟ್ ಅಥವಾ ಪಠ್ಯಗಳ ನೆರವಿನಿಂದ ಸ್ವಯಂ ಅ`À್ಯಯನವನ್ನೂ ನಡೆಸಬಹುದಾಗಿದೆ. ತರಬೇತಿ ಜೊತೆಗೆ ಸಂಪನ್ಮೂಲದ ಲ`À್ಯತೆಯೂ ನಿಮಗೆ ಸಮರ್ಪಕವಾಗಿರಬೇಕು. ಅಂದರೆ, ಶೈಕ್ಷಣಿಕ ಸಂಪನ್ಮೂಲಗಳು ಮತ್ತು ಸ್ಟಡಿ ಮೆಟಿರಿಯಲ್‍ಗಳನ್ನು ಪಡೆದು ಸಿದ್ಧತೆ ನಡೆಸಿರಿ.
ಉದ್ಯೋಗಾವಕಾಶದತ್ತ ಕಣ್ಣಿಡಿ: ರೈಲ್ವೆಯು ಆಗಾಗ ನೇಮಕಾತಿ ಅಸೂಚನೆಗಳನ್ನು ಹೊರಡಿಸುತ್ತದೆ. ಇಂತಹ ಮಾಹಿತಿಗಳನ್ನು ಆದಷ್ಟು ಭಾರತೀಯ ರೈಲ್ವೆಯ ಅಧಿಕೃತ ವೆಬ್‍ಸೈಟ್‍ನಿಂದಲೇ ಪಡೆಯಿರಿ. ಫೇಕ್ ಆಫರ್‍ಗಳ ಮೂಲಕ ನಿಮಗೆ ಮೋಸ ಮಾಡುವವರ ಕುರಿತು ಎಚ್ಚರವಾಗಿರಿ.

ಅಪ್ರೆಂಟಿಸ್ಶಿಪ್ ಮೂಲಕ ತರಬೇತಿ
ಹೈಯರ್ ಸೆಕೆಂಡರಿ ಸ್ಕೂಲ್ ಅಥವಾ 10+2 ಶಿಕ್ಷಣ ಮುಗಿಸಿದ ತಕ್ಷಣ ಸ್ಪೆಷಲ್ ಕ್ಲಾಸ್ ರೈಲ್ವೆ ಅಪ್ರೆಂಟಿಸ್(ಎಸ್‍ಸಿಆರ್‍ಎ)ಗೆ ಸೇರಬಹುದು. ಈ ಪರೀಕ್ಷೆಯನ್ನು ಭಾರತೀಯ ಲೋಕ ಸೇವಾ ಆಯೋಗ(ಯುಪಿಎಸ್‍ಸಿ) ನಡೆಸುತ್ತದೆ. ಇಲ್ಲಿ ಕೆಲವೇ ಸೀಟುಗಳಿರುವುದರಿಂದ ಈ ಪರೀಕ್ಷೆಯು ತುಂಬಾ ಸ್ಪರ್ಧಾತ್ಮಕವಾಗಿರುತ್ತದೆ. ಈ  ಪರೀಕ್ಷೆಯಲ್ಲಿ ಯಶಸ್ಸು ಪಡೆದವರು ಟೆಕ್ನಿಕಲ್ ಅಪ್ರೆಂಟಿಸ್‍ಷಿಪ್ (ಸ್ಪೆಷಲ್ ಕ್ಲಾಸ್)ಗೆ ಸೇರಬಹುದು. ಇವರನ್ನು ಜಮ್ಲಪುರದಲ್ಲಿರುವ ಇಂಡಿಯನ್ ರೈಲ್ವೆ ಇನ್‍ಸ್ಟಿಟ್ಯೂಟ್ ಆಫ್ ಮೆಕ್ಯಾನಿಕಲ್ ಎಂಜಿನಿಯರ್‍ಗೆ ಸೇರಿಸಲಾಗುತ್ತದೆ. ಇಲ್ಲಿ ಟೆಕ್ನಿಕಲ್ ಕೋರ್ಸ್ ಕಲಿಯಬೇಕಾಗುತ್ತದೆ. ಈ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರೈಸಿದವರನ್ನು ಇಂಡಿಯನ್ ರೈಲ್ವೇಸ್ ಸರ್ವೀಸ್ ಆಫ್ ಮೆಕ್ಯಾನಿಕ್ ಎಂಜಿನಿಯರಿಂಗ್ (ಐಆರ್‍ಎಸ್‍ಎಂಇ)ನ ಆಫೀಸರ್ ಕೇಡರ್‍ಗೆ ಸೇರಿಸಲಾಗುತ್ತದೆ. ಈ ಹಾದಿಯ ಮೂಲಕ ಆಫೀಸರ್ ಆಗಿ ನೇಮಕಗೊಂಡವರಿಗೆ ಇತರ ಹಾದಿಗಳ ಮೂಲಕ ಪ್ರವೇಶಪಡೆದವರಿಗಿಂತ ಹೆಚ್ಚು ಲಾಭಗಳಿವೆ. ಈ ಕೋರ್ಸ್ ಮಾಡಿ ಬಂದವರು ಭಾರತೀಯ ರೈಲ್ವೆ ಬೋರ್ಡ್‍ನ ಜನರಲ್ ಮ್ಯಾನೇಜರ್ ಅಥವಾ ಮೆಂಬರ್‍ನಂತಹ ಉನ್ನತ್ತ ಸ್ಥಾನಕ್ಕೂ ಏರಬಹುದಾಗಿದೆ.

ಇದನ್ನೂ ಓದಿ  ಏರ್ ಟ್ರಾಫಿಕ್ ಕಂಟ್ರೋಲರ್: ಉದ್ಯೋಗ ಪಡೆಯುವುದು ಹೇಗೆ?

ಐಇಎಸ್ಗೆ ಪರೀಕ್ಷೆ
ಎಂಜಿನಿಯರಿಂಗ್ ಪದವಿ ಪಡೆದ ನಂತರ ಭಾರತೀಯ ರೈಲ್ವೆಗೆ ನೇಮಕಗೊಳ್ಳಲು ಬಯಸುವವರು ಇಂಡಿಯನ್ ಎಂಜಿನಿಯರಿಂಗ್ ಸರ್ವೀಸಸ್(ಐಇಎಸ್) ಪರೀಕ್ಷೆ ಬರೆಯಬೇಕಾಗುತ್ತದೆ. ಈ ಪರೀಕ್ಷೆಯನ್ನು `Áರತೀಯ ಲೋಕ ಸೇವಾ ಆಯೋಗ (ಯುಪಿಎಸ್‍ಸಿ) ನಡೆಸುತ್ತದೆ. ಈ ಪರೀಕ್ಷೆಯು ಕಠಿಣವಾಗಿರುತ್ತದೆ. ನೀವು ಎಂಜಿನಿಯರಿಂಗ್‍ನಲ್ಲಿ ಓದಿದ ವಿಷಯಗಳ ಕುರಿತು ಪ್ರಶ್ನೆಗಳಿರುತ್ತವೆ. ಈ ಹುದ್ದೆಗಳಿಗೆ ಹಲವು ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಸ್ಪರ್ಧೆ ಹೆಚ್ಚಿರುತ್ತದೆ. ಉತ್ತಮ ರ್ಯಾಂಕ್ ಪಡೆದವರಷ್ಟೇ ಕೆಲಸ ಪಡೆಯಲು ಸಫಲರಾಗುತ್ತಾರೆ.
ಎಂಜಿನಿಯರಿಂಗ್‍ನ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಬ್ರಾಂಚ್‍ನಲ್ಲಿ ಓದಿದವರಿಗೆ ಆಯಾ ಕೇಡರ್‍ನಲ್ಲಿ ಉದ್ಯೋಗ ದೊರಕುತ್ತದೆ. ಉದ್ಯೋಗ ಪಡೆಯುವ ಮುನ್ನ ರೈಲ್ವೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ ತರಬೇತಿ ಪಡೆಯಬೇಕಾಗುತ್ತದೆ. ಉದಾಹರಣೆಗೆ ನಾಸಿಕ್‍ನಲ್ಲಿರುವ ಇಂಡಿಯನ್ ರೈಲ್ವೇಸ್ ಇನ್‍ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ವಡೋದರಾದಲ್ಲಿರುವ ರೈಲ್ವೆ ಸ್ಟಾಫ್ ಕಾಲೇಜ್ ಮುಂತಾದೆಡೆ ತರಬೇತಿ ಪಡೆಯಬೇಕಾಗುತ್ತದೆ.

ಆರ್ಆರ್ಬಿ ಮೂಲಕ ಅವಕಾಶ
ಭಾರತೀಯ ರೈಲ್ವೆಯು ಟೆಕ್ನಿಕಲ್ ಹಂತದ ಹುದ್ದೆಗಳು ಮತ್ತು ಕೆಳ ಹಂತದ ಹುದ್ದೆಗಳಿಗೂ ಆಗಾಗ ನೇಮಕಾತಿ ಕೈಗೊಳ್ಳುತ್ತದೆ. ಈ ಹುದ್ದೆಗಳಿಗೆ ಪ್ರಾದೇಶಿಕ ರೈಲ್ವೆ ನೇಮಕಾತಿ ಮಂಡಳಿಗಳ ಮೂಲಕ ನೇಮಕ ನಡೆಯುತ್ತದೆ. ಇಲ್ಲಿ ಡ್ರೈವರ್ಸ್, ಅಸಿಸ್ಟೆಂಟ್ ಡ್ರೈವರ್ಸ್, ಸ್ಟೇಷನ್ ಮಾಸ್ಟರ್ಸ್, ಸೆಕ್ಷನ್ ಎಂಜಿನಿಯರ್ಸ್ ಇತ್ಯಾದಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಸದ್ಯದಲ್ಲಿ ಆರ್‍ಆರ್‍ಬಿ ಈ ಹಂತದ ಹುದ್ದೆಗಳಿಗೆ ಬೃಹತ್ ಪ್ರಮಾಣದಲ್ಲಿ ನೇಮಕಾತಿ ನಡೆಸುವ ನಿರೀಕ್ಷೆಯಿದೆ.

ಬೇರೆ ಯಾವ ಆಯ್ಕೆಗಳಿವೆ?
ನೀವು ಸಿವಿಲ್ ಸರ್ವೀಸ್ ಎಗ್ಸಾಮಿನೇಷನ್ ಮೂಲಕವೂ ರೈಲ್ವೆಯಲ್ಲಿ ಕೆಲಸ ಪಡೆಯಬಹುದು. ಇಲ್ಲಿ ನೀವು ಇಂಡಿಯನ್ ರೈಲ್ವೆ ಟ್ರಾಫಿಕ್ ಸರ್ವೀಸ್ (ಐಆರ್‍ಟಿಎಸ್) ಅಥವಾ ಇಂಡಿಯನ್ ರೈಲ್ವೇಸ್ ಅಕೌಂಟ್ಸ್ ಸರ್ವೀಸ್ (ಐಆರ್‍ಎಎಸ್)ನಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸಬಹುದು. ಕ್ರೀಡೆಯಲ್ಲಿ ಸಾಕಷ್ಟು ಸಾಧನೆ ಮಾಡಿರುವವರು ಕ್ರೀಡಾ ಮೀಸಲಾತಿಯಡಿ ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆದುಕೊಳ್ಳುವ ಅವಕಾಶವಿದೆ. ಡಾಕ್ಟರ್ ಮತ್ತು ಸರ್ಜನ್‍ಗಳು ಭಾರತೀಯ ರೈಲ್ವೆಗೆ ಸೇರಬಹುದು. ಇವರು ಇಂಡಿಯನ್ ರೈಲ್ವೇಸ್ ಮೆಡಿಕಲ್ ಸರ್ವೀಸ್ (ಐಆರ್‍ಎಂಎಸ್) ಕೇಡರ್ ಮೂಲಕ ರೈಲ್ವೆಯಲ್ಲಿ ಉದ್ಯೋಗ ಪಡೆದುಕೊಳ್ಳಬಹುದಾಗಿದೆ. ನಮ್ಮ ರೈಲ್ವೆಯಲ್ಲಿ ವಲಯವಾರು ಮತ್ತು ವಿಭಾಗೀಯ ಹಂತ ಪ್ರ`Áನ ಕಚೇರಿಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿವೆ. ಇಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟ ಹಲವು ಉದ್ಯೋಗಗಳು ಇರುತ್ತವೆ.  ಮಾನವೀಯತೆ ಆಧಾರದಲ್ಲಿ ಹಲವು ಉದ್ಯೋಗಾವಕಾಶಗಳು ಭಾರತೀಯ ರೈಲ್ವೆಯಲ್ಲಿದೆ. ಎಲ್ಲಾದರೂ ರೈಲ್ವೆ ಉದ್ಯೋಗಿಯು ಕೆಲಸದಲ್ಲಿದ್ದ ಸಂದರ್ಭದಲ್ಲಿ ಅವರ ಹತ್ತಿರದ ಸಂಬಂಧಿಗೆ ಉದ್ಯೋಗ ಪಡೆಯುವ ಅವಕಾಶ ಇರುತ್ತದೆ. ಇನ್ನುಳಿದಂತೆ ಹೆಲ್ಪರ್, ಅಟೆಂಡೆಂಟ್, ಬಂಗ್ಲೆಗಳಿಗೆ ಕಾವಲುಗಾರರು ಇತ್ಯಾದಿ ಹುದ್ದೆಗಳು ಭಾರತೀಯ ರೈಲ್ವೆಯಲ್ಲಿ ಇರುತ್ತದೆ.


ಗ್ರೂಪ್ ಡಿ ಹುದ್ದೆಗಳು
ಗ್ರೂಪ್ ಎ ಈ ಹುದ್ದೆಗಳನ್ನು ಭರ್ತಿಮಾಡಿಕೊಳ್ಳುವ ಸಲುವಾಗಿ ಭಾರತೀಯ ಲೋಕ ಸೇವಾ ಆಯೋಗ(ಯುಪಿಎಸ್‍ಸಿ) ಪರೀಕ್ಷೆ ನಡೆಸುತ್ತದೆ. ಗ್ರೂಪ್ ಬಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದಿಲ್ಲ. ಗ್ರೂಪ್ ಸಿ ಉದ್ಯೋಗಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಗ್ರೂಪ್ ಸಿ ಹುದ್ದೆಯಲ್ಲಿ ಟೆಕ್ನಿಕಲ್ ಮತ್ತು ನಾನ್ ಟೆಕ್ನಿಕಲ್ ಹುದ್ದೆಗಳಿವೆ. ಟ್ರಾಕ್ ಮೆನ್, ಹೆಲ್ಪರ್, ಗನ್ ಮೆನ್ ಇತ್ಯಾದಿ ಗ್ರೂಪ್ ಡಿ ಹುದ್ದೆಗಳಿಗೆ ಎಸ್‍ಎಸ್‍ಎಲ್‍ಸಿ ಇತ್ಯಾದಿ ವಿದ್ಯಾರ್ಹತೆ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ  ವರ್ಡ್ ಪ್ರೆಸ್: ಸ್ವಂತ ವೆಬ್ ಸೈಟ್ ನಿರ್ಮಾಣಕ್ಕೆ ಮಾರ್ಗದರ್ಶಿ

ಗ್ರೂಪ್ ಸಿ ಹುದ್ದೆಗಳು ಯಾವುವು?
ಆರ್‍ಆರ್‍ಬಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಪಡೆಯಬಹುದಾದ ಕೆಲವು ಹುದ್ದೆಗಳ ವಿವರ ಈ ಮುಂದಿನಂತೆ ಇದೆ. ಟಿಕೇಟ್ ಪರೀಕ್ಷಕರು, ಟ್ರೈನ್ಸ್ ಕ್ಲರ್ಕ್, ಜೂನಿಯರ್ ಕ್ಲರ್ಕ್ ಕಂ ಟೈಪಿಸ್ಟ್,  ಟಿಕೇಟ್ ಕಲೆಕ್ಟರ್,  ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್, ಕಮರ್ಷಿಯಲ್ ಕ್ಲರ್ಕ್, ಅಸಿಸ್ಟೆಂಟ್ ಲೊಕೊ ಪೈಲೆಟ್,  ಅಕೌಂಟ್ ಕ್ಲರ್ಕ್ ಕಂ ಟೈಪಿಸ್ಟ್ ಮತ್ತು ಜೂನಿಯರ್ ಸ್ಟೆನೊ ಹುದ್ದೆಗಳನ್ನು ಪಡೆಯಲು ಪ್ರಯತ್ನಿಸಬಹುದು.

ಪದವಿ ನಂತರ
ಪದವಿ ವಿದ್ಯಾರ್ಹತೆ ಹೊಂದಿರುವವರು  ರೈಲ್ವೆಯಲ್ಲಿ ಈ ಮುಂದಿನ ಹುದ್ದೆಗಳಿಗೆ ಪ್ರಯತ್ನಿಸಬಹುದು. ಕಮರ್ಷಿಯಲ್ ಅಪ್ರೆಂಟಿಸ್, ಟ್ರಾಫಿಕ್ ಅಪ್ರೆಂಟಿಸ್, ಇಸಿಆರ್‍ಸಿ, ಗೂಡ್ಸ್ ಗಾರ್ಡ್,  ಟ್ರಾಫಿಕ್ ಅಸಿಸ್ಟೆಂಟ್,  ಸೀನಿಯರ್ ಕ್ಲರ್ಕ್ ಕಂ ಟೈಪಿಸ್ಟ್,  ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್ ಮತ್ತು ಇತರೆ.

ಇದನ್ನೂ ಓದಿ

RRB ಗ್ರೂಪ್-ಡಿ ಹುದ್ದೆಗಳಿಗೆ ಸಿದ್ಧತೆ ನಡೆಸುವುದು ಹೇಗೆ?