RRB ಗ್ರೂಪ್-ಡಿ ಹುದ್ದೆಗಳಿಗೆ ಸಿದ್ಧತೆ ನಡೆಸುವುದು ಹೇಗೆ?

ಯಾವುದೇ ಪರೀಕ್ಷೆಗೆ ಹಾಜರಾಗುವ ಮೊದಲು ನೀವು ತೆಗೆದುಕೊಳ್ಳುತ್ತಿರುವ ಪರೀಕ್ಷೆ ಯಾವ ರೀತಿ ನಡೆಯುತ್ತದೆ ಎಂದುಕೊಳ್ಳಿ.

 • ಪರೀಕ್ಷಾ ವಿಧಾನ ತಿಳಿದುಕೊಳ್ಳಿರಿ
  ಯಾವುದೇ ಪರೀಕ್ಷೆಗೆ ಹಾಜರಾಗುವ ಮೊದಲು ನೀವು ತೆಗೆದುಕೊಳ್ಳುತ್ತಿರುವ ಪರೀಕ್ಷೆ ಯಾವ ರೀತಿ ನಡೆಯುತ್ತದೆ ಎಂದುಕೊಳ್ಳಿ. ಉದಾಹರಣೆಗೆ, ರೈಲ್ವೆ ಗ್ರೂಪ್ ಡಿ ಪರೀಕ್ಷೆಯಲ್ಲಿ 100 ಅಂಕಗಳ ಪ್ರಶ್ನೆ ಪತ್ರಿಕೆ ಇರುತ್ತದೆ. ಇದನ್ನು 90 ನಿಮಿಷದಲ್ಲಿ ಬರೆಯಬೇಕು. ಇದರಲ್ಲಿ ಗಣಿತ, ಜನರಲ್ ಇಂಟಲಿಜೆನ್ಸ್ ಮತ್ತು ರೀಸನಿಂಗ್, ಸಾಮಾನ್ಯ ವಿಜ್ಞಾನ, ಪ್ರಚಲಿತ ವಿದ್ಯಮಾನದ ಕುರಿತು ಸಾಮಾನ್ಯ ಜ್ಞಾನ ವಿಷಯಗಳ ಪ್ರಶ್ನೆಗಳು ಇರುತ್ತವೆ. ಇದನ್ನು ಹೊರತುಪಡಿಸಿ ಬೇರೆ ವಿಷಯಗಳನ್ನು ಓದಲು ಹೋಗಬೇಡಿ
 • ಪರೀಕ್ಷೆಯ ಕುರಿತು ಕೊಂಚ ಮಾಹಿತಿ ತಿಳಿದುಕೊಳ್ಳಿ
  ಕೇವಲ ಪರೀಕ್ಷಾ ವಿಧಾನ ತಿಳಿದುಕೊಂಡರೆ ಸಾಲದು. ಪರೀಕ್ಷೆಯ ವಿವಿ`À ಹಂತಗಳು ಸೇರಿದಂತೆ ಇನ್ನೂ ಕೊಂಚ ಮಾಹಿತಿಯನ್ನು ತಿಳಿದುಕೊಳ್ಳಬೇಕು. ರೈಲ್ವೆ ಗ್ರೂಪ್ ಡಿ ಹುದ್ದೆಗೆ ಮೂರು ಹಂತದ ಆಯ್ಕೆ ಪ್ರಕ್ರಿಯೆ ಮೂಲಕ ನೇಮಕ ಮಾಡಲಾಗುತ್ತದೆ. 1. ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ). 2. ದೈಹಿಕ ದಕ್ಷತೆ ಪರೀಕ್ಷೆ(ಪಿಇಟಿ) 3. ದಾಖಲೆ ದೃಢೀಕರಣ. ರೈಲ್ವೆ ಪರೀಕ್ಷೆಯಲ್ಲಿ ತಪ್ಪು ಉತ್ತರಕ್ಕೆ ಅಂಕ ಕಳೆಯುವ ನೆಗೆಟೀವ್ ಮಾರ್ಕ್ ಇರುತ್ತದೆ. ಹೀಗಾಗಿ, ನಾಲ್ಕು ಆಯ್ಕೆಗಳಲ್ಲಿ ಯಾವುದಕ್ಕಾದರೂ ಒಂದಕ್ಕೆ ಅಂದಾಜು ಮಾಡಿ(ದೇವರ ಮೇಲೆ `Áರ ಹಾಕಿ) ಟಿಕ್ ಮಾಡುವ ಮೊದಲು ಯೋಚಿಸಿರಿ. ಪ್ರಶ್ನೆಗಳು ಬಹುಆಯ್ಕೆ ಮಾದರಿಯಲ್ಲಿ ಇರುತ್ತವೆ. ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ದೈಹಿಕ ಸಾಮಥ್ರ್ಯ ಪರೀಕ್ಷೆ ಇರುತ್ತದೆ.
 • * ಸಿಲೇಬಸ್ ಬಗ್ಗೆ ತಿಳಿದುಕೊಳ್ಳಿರಿ
  ಆರ್‍ಆರ್‍ಬಿ ವೆಬ್‍ಸೈಟ್‍ಗೆ ಹೋಗಿ ಅಸೂಚನೆಯನ್ನು ಸಂಪೂರ್ಣವಾಗಿ ಓದಿ. ಅದರಲ್ಲಿ ಸಿಲೇಬಸ್ ವಿ`Áಗವನ್ನು ಪರಿಶೀಲಿಸಿ. ಸಿಲೇಬಸ್‍ನಲ್ಲಿ ಯಾವೆಲ್ಲ ವಿಷಯಗಳನ್ನು ನೀಡಲಾಗಿದೆಯೋ ಅದೇ ವಿಷಯದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸಿಲೇಬಸ್ ತಿಳಿದುಕೊಳ್ಳದೆ ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಎಂದೆಲ್ಲ ಓದಲು ಹೋಗಬೇಡಿ. ಗಣಿತ, ರೀಸನಿಂಗ್, ಸಾಮಾನ್ಯ ವಿಜ್ಞಾನ, ಸಾಮಾನ್ಯ ಜ್ಞಾನದ ವಿಷಯದ ಕುರಿತು ಮಾತ್ರ ಗಮನ ನೀಡಿರಿ.
 • ಸ್ವಂತ ಟಿಪ್ಪಣಿ ಮಾಡಿಕೊಳ್ಳಿ
  ಪರೀಕ್ಷೆ ಒಂದೆರಡು ತಿಂಗಳಲ್ಲಿ ನಡೆಯಬಹುದು(ಇನ್ನೂ ದಿನಾಂಕ ಪ್ರಕಟವಾಗಿಲ್ಲ). ಹೀಗಾಗಿ, ಓದಲು ಕಡಿಮೆ ಸಮಯ ಇದೆ. ಓದಿದೆಲ್ಲ ನೆನಪಿನಲ್ಲಿ ಉಳಿಯದು. ನೀವು ಓದಿದಂತೆ ನೋಟ್ಸ್ ಮಾಡಿಟ್ಟುಕೊಂಡರೆ ಪರೀಕ್ಷೆಗೆ ಒಂದೆರಡು ವಾರ ಇರುವಾಗ ಕಣ್ಣಾಡಿಸಬಹುದು. ನೋಟ್ಸ್ ಮಾಡುವುದರಿಂದ ವಿಷಯಗಳು ಹೆಚ್ಚು ನೆನಪಿನಲ್ಲಿ ಉಳಿಯುತ್ತವೆ.
 • ಸಮಯದ ನಿರ್ವಹಣೆ ಬಗ್ಗೆ ಅರಿವಿರಲಿ
  ಬಹುಶಃ ಇದು ನೀವು ಬರೆಯುತ್ತಿರುವ ಮೊದಲ ಸ್ಪ`ರ್Áತ್ಮಕ ಪರೀಕ್ಷೆ ಆಗಿರಬಹುದು. ಕೆಲವು ಪರೀಕ್ಷೆ ಬರೆದ ಅ`À್ಯರ್ಥಿಗಳಿಗೆ ಸಮಯದ ನಿರ್ವಹಣೆಯ ಅಗತ್ಯದ ಕುರಿತು ಅರಿವಿರಬಹುದು. ನಿಗದಿಪಡಿಸಿದ ಅವಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಅನುಕೂಲವಾಗುವಂತೆ ನೀವು ಸಮಯವನ್ನು ನಿರ್ವಹಿಸಬೇಕು. ಒಂದೇ ಪ್ರಶ್ನೆಯ ಕುರಿತು ನಿಮಿಷಗಟ್ಟಲೆ ಯೋಚಿಸುತ್ತ ಕುಳಿತುಕೊಳ್ಳಬೇಡಿ.
 •  ಆನ್‍ಲೈನ್ ಅಣಕು ಪರೀಕ್ಷೆ ತೆಗೆದುಕೊಳ್ಳಿ: ಈಗಿನ ಆನ್‍ಲೈನ್ ಜಗತ್ತಿನಲ್ಲಿ ರೈಲ್ವೆ ಪರೀಕ್ಷೆಗೆ ಆನ್‍ಲೈನ್‍ನಲ್ಲಿಯೇ ತಯಾರಿ ನಡೆಸಬಹುದು. ಸಾಕಷ್ಟು ಅಣಕು ಪರೀಕ್ಷೆಗಳು ಲಭ್ಯ ಇವೆ. ಇದಕ್ಕಾಗಿ ನೀವು railway mock test  ಎಂದು ಗೂಗಲ್‍ನಲ್ಲಿ ಹುಡುಕಿರಿ. ಆನ್‍ಲೈನ್ ಅಣಕು ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ನಿಗದಿತ ಅವಯೊಳಗೆ ಉತ್ತರಿಸಲು ಯತ್ನಿಸಿರಿ.
 • ವೇಗ ಮತ್ತು ನಿಖರತೆ ಇರಲಿ
  ಆನ್‍ಲೈನ್ ಅಣಕು ಪರೀಕ್ಷೆ ಬರೆದ ನಂತರ ಸಮಯದ ನಿರ್ವಹಣೆ ಕುರಿತು ನಿಮಗೆ ತಿಳಿದುಬಂದಿರಬಹುದು. ನಿಗದಿತ ಅವಯಲ್ಲಿ ವೇಗವಾಗಿ ಉತ್ತರಿಸುತ್ತ ಹೋಗುವಾಗ ತಪ್ಪುಗಳು ಆಗಬಹುದು. 1/3 ನೆಗೆಟಿವ್ ಅಂಕ ಇರುವುದರಿಂದ ತಪ್ಪು ಉತ್ತರ ಬರೆದರೆ ಅಂಕ ಕಡಿತವಾಗಲಿದೆ. ತುಂಬಾ ಯೋಚಿಸುತ್ತ ನಿಧಾನವಾಗಿ ಉತ್ತರ ಬರೆದರೆ ಎಲ್ಲಾ ಪ್ರಶ್ನೆಗಳನ್ನು ಕವರ್ ಮಾಡಲು ಕಷ್ಟವಾಗಬಹುದು. ಹೀಗಾಗಿ ವೇಗ ಮತ್ತು ನಿಖರತೆಯತ್ತ ಗಮನ ನೀಡಿ.
 • ಹಳೆಯ ಪ್ರಶ್ನೆಪತ್ರಿಕೆಗಳನ್ನು ಅಧ್ಯಯನ ಮಾಡಿ
  ರೈಲ್ವೆ ಗ್ರೂಪ್ ಡಿ ಪರೀಕ್ಷೆಯ ಹಳೆಯ ಪ್ರಶ್ನೆಪತ್ರಿಕೆಗಳು ಆನ್‍ಲೈನ್‍ನಲ್ಲಿ ಲಭ್ಯ. ಗೂಗಲ್‍ಗೆ ಹೋಗಿ previous year railway group d question paper  ಎಂದು ಹುಡುಕಿ. ಯಾವ ರೀತಿ ಪ್ರಶ್ನೆಗಳನ್ನು ಕೇಳುತ್ತಾರೆ? ಎಂತಹ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬೆಲ್ಲ ಮಾಹಿತಿ ಪಡೆಯಲು ಇದು ನಿಮಗೆ ನೆರವಾಗಬಹುದು.

 

ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಬಯಸುವವರಿಗೆ ಕಂಪ್ಲಿಟ್ ಗೈಡ್

One thought on “RRB ಗ್ರೂಪ್-ಡಿ ಹುದ್ದೆಗಳಿಗೆ ಸಿದ್ಧತೆ ನಡೆಸುವುದು ಹೇಗೆ?

 1. Pingback: how to get job in indian railways? After Puc, After Degree, ITI and Other Education

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.