ಪ್ರವಾಸಿ ಗೈಡ್: ಜಲಪಾತಗಳ ಸ್ವರ್ಗ ಅಂಬೋಲಿ

ಯಾವುದಾದರೂ ಹೊಸ ಸ್ಥಳಕ್ಕೆ ಟೂರ್ ಹೋಗಬೇಕೆಂದು ನಿರ್ಧರಿಸಿದ್ದೀರಾ? ಹಾಗಾದರೆ ಅಂಬೋಲಿಗೆ ಒಮ್ಮೆ ಭೇಟಿ ಕೊಡಿ.

• ಶ್ರೀ ಲಕ್ಷ್ಮಿ ಹೆಗಡೆ

ದಿನ ನಿತ್ಯದ ಜಂಜಾಟ ಕಳೆದು, ವಾರಾತ್ಯಂದ ಮಜಾ ಸವಿಯಲು ಮಹಾರಾಷ್ಟ್ರ ಅಂಬೋಲಿ ಹೇಳಿಮಾಡಿಸಿದ ಸ್ಥಳ. ಪ್ರೇಮಿಗಳ ಪಾಲಿಗೆ ವರ. ಎತ್ತರವಾದ ಬೆಟ್ಟ, ಜಲಪಾತ, ದಟ್ಟ ಅರಣ್ಯ, ಅನೇಕ ಪ್ರಭೇದದ ಸಸ್ಯಗಳು, ಹೂವುಗಳು ಹಾಗೂ ಚಾರಣ ಪ್ರಿಯರಿಗೆ ಅಂಬೋಲಿ ಖುಷಿಯ ಮೂಟೆಯೇ ಸರಿ. ಈ ಸುಂದರವಾದ ಬೆಟ್ಟವನ್ನು 1880ರಲ್ಲಿ ಗುರುತಿಸಲಾಗಿದ್ದು, ಬ್ರಿಟಿಷರು ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ರಕ್ಷಣಾ ಸೈನ್ಯದ ತರಬೇತಿ ಕೇಂದ್ರವನ್ನಾಗಿ ಬಳಸುತ್ತಿದ್ದರು. ಅಂಬೋಲಿ ಜಲಪಾತಗಳ ಸ್ವರ್ಗ. ಇಲ್ಲಿನ ಶರ್ಗಾಂಕರ್ ಜಲಪಾತ, ಮಹದೇವ ಜಲಪಾತ, ನಘಟ್ಟ ಜಲಪಾತವು ಇಲ್ಲಿನ ಪ್ರಕೃತಿ ಸೌಂದರ್ಯ ಇಮ್ಮಡಿಗೊಳಸಿದ್ದಷ್ಟೇ ಅಲ್ಲದೆ, ಪಿಕ್ನಿಕ್ ಹೋಗುವವರಿಗೆ ಅತ್ಯಂತ ಇಷ್ಟವಾಗುವ ಸ್ಥಳವಾಗಿದೆ. ಹಿರಣ್ಯಕೇಶಿ ಜಲಪಾತದ ಗುಹೆಯ ಮುಂಭಾಗದಲ್ಲಿರುವ ಶಿವನ ದೇವಾಲಯವೂ ಜಲಪಾತದ ಸೊಬಗನ್ನು ಇನ್ನಷ್ಟು ಹೆಚ್ಚಿಸಿದೆ.

ಇತರ ಆಕರ್ಷಣೆಗಳು ಯಾವುದಿವೆ?

ನಂಗರ್ತಾಸ್ ಜಲಪಾತ
ಇದು ಅಂಬೋಲಿಯಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ಸಿಂಗದುರ್ಗ ಜಿಲ್ಲೆಯಲ್ಲಿದೆ. ಇದು ಮಳೆಗಾಲದಲ್ಲಿ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಎತ್ತರವಾದ ಬೆಟ್ಟದಿಂದ ಧುಮ್ಮಿಕ್ಕುವ ಈ ಜಲಪಾತ, ಸುಮಾರು 10 ಅಡಿ ಆಳದ ಕಂದಕದೊಳಗೆ ರಭಸವಾಗಿ ಬೋರ್ಗರೆಯುತ್ತಾ ಹರಿಯುತ್ತದೆ. ಅಲ್ಲದೆ ಈ ಎತ್ತರವಾದ ಬೆಟ್ಟದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದ್ದು ಅಲ್ಲಿಂದ ಜಲಪಾತವನ್ನು ನೋಡಲು ಎರಡು ಕಣ್ಣುಗಳು ಸಾಲದು. ಯಾವುದೋ ಬೇರೆಯದೇ ಲೋಕದಲ್ಲಿ ಇದ್ದಂತ ಅನು`Àವವನ್ನು ನೀಡುತ್ತದೆ.

ಶಿವಾರ್ಂವ್ಕರ್ ಪಾಯಿಂಟ್
ಇದು ಪಿಕ್ನಿಕ್ಗೆಂದೆ ಮಾಡಿಸಿದ ಸ್ಥಳದಂತಿದೆ. ಇದು ಅಂಬೋಲಿ ನಗರದಿಂದ 2.5 ಕಿ.ಮೀ.ದೂರದಲ್ಲಿದೆಯಷ್ಟೇ. ಮಳೆಗಾಲದಲ್ಲಂತೂ ಇಲ್ಲಿನ ಸೌಂದರ್ಯ ಹೇಳತೀರದು. ಎತ್ತ ನೋಡಿದರೂ ಹಚ್ಚಹಸಿರಿನ ಸಸ್ಯರಾಶಿ. ಇದರ ಜೊತೆಗೆ ಸದಾ ತಂಪಾದ, ಮನಸ್ಸಿಗೆ ಮುದ ನೀಡುವ ವಾತಾವರಣ. ಪ್ರಕೃತಿಯ ಸೊಬಗು ಸವಿಯಲು ಇದಕ್ಕಿಂತ ಬೇರೆ ಸ್ಥಳ ಬೇಕಿಲ್ಲ.

ಅಂಬೋಲಿ ಫಾಲ್ಸ್
ಅಂಬೋಲಿ ಅತ್ಯಂತ ಆಕರ್ಷಣೀಯ ಸ್ಥಳಗಳಲ್ಲಿ ಇದು ಒಂದು. ಮಳೆಗಾದಲ್ಲಂತೂ ಇದರ ಸೌಂದರ್ಯ ವರ್ಣನೆಗೆ ನಿಲುಕದ್ದು. ಹಾಲಿನ ಹೊಳೆಯಂತೆ `Àುಮುಕುವ ನೀರು, ಎತ್ತಲೂ ಹಸಿರು, ಸುತ್ತಮುತ್ತಲಿನ ಪ್ರದೇಶದಲ್ಲಿ ಮೋಡ ಕವಿದಿರುತ್ತದೆ. ವರ್ಷಪೂರ್ತಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಇದರ ಸೌಂದರ್ಯವನ್ನು ಸವಿಯಲು ಜೂನ್ನಿಂದ ಅಕ್ಟೋಬರ್ ತಿಂಗಳು ಸೂಕ್ತ ಕಾಲ.

ಇವಿಷ್ಟೇ ಅಲ್ಲದೆ ಹಲವಾರು ವೀಕ್ಷಣಾ ಸ್ಥಳಗಳು ಇಲ್ಲಿವೆ. ಸಿ ವಿವ್ ಪಾಯಿಂಟ್, ಪರೀಕ್ಷಿತ್ ಪಾಯಿಂಟ್, ಕಾವೇಲ್ಸದ್ ಪಾಯಿಂಟ್ ಮತ್ತು ಮಹಾದೇವ ಗಡ್ ಪಾಯಿಂಟ್ ಅದರಲ್ಲಿ ಮುಖ್ಯವಾದುವು. ಇಲ್ಲಿ ನಿಂತು ನೋಡಿದರೆ ಅರೇಬಿಯನ್ ಸಮುದ್ರ ಮತ್ತು ಕೊಂಕಣ ಕರಾವಳಿಯ ವಿಹಂಗಮ ನೋಟವನ್ನು ಸವಿಯಬಹುದು.

ಭೇಟಿಗೆ ಸೂಕ್ತ ಕಾಲ
ವರ್ಷದುದ್ದಕ್ಕೂ ಇಲ್ಲಿ ಭೇಟಿ ನೀಡಬಹುದು. ಮಳೆಗಾಲದಲ್ಲಿ ಇಲ್ಲಿನ ಉಷ್ಣತೆ 20 ಡಿಗ್ರಿ ಸೆಲ್ಷಿಯಸ್ ಇರುವುದರಿಂದ ಹವಾಮಾನ ತಂಪಾಗಿರುತ್ತದೆ. ಎತ್ತರದ ಪ್ರದೇಶವಾದ್ದರಿಂದ ಬೇಸಿಗೆಯಲ್ಲೂ ಇಲ್ಲಿ ಸೆಕೆ ಕಡಿಮೆ, ವಾತಾವರಣ ಹಿತವಾಗಿರುತ್ತದೆ. ಇಲ್ಲಿ ಚಳಿಗಾಲವೆಂದರೆ ಅದು ಪ್ರೇಮಿಗಳ ಕಾಲವೇ ಸರಿ.

ಹೋಗುವುದು ಹೇಗೆ?
ಗೋವಾ ಮತ್ತು ಸಾವಂತವಾಡಿ ಮೂಲಕ ಬಸ್, ವಿಮಾನ ಮತ್ತು ರೈಲಿನಲ್ಲಿ ಅಂಬೋಲಿಯನ್ನು ತಲುಪಬಹುದು.

ವಿಮಾನದ ಮೂಲಕ-> ಗೋವಾ ಹತ್ತಿರದ ವಿಮಾನ ನಿಲ್ದಾಣವಾಗಿದ್ದು ಅಲ್ಲಿಂದ ಅಂಬೋಲಿ ಸುಮಾರು 70 ಕಿ.ಮೀ.ದೂರದಲ್ಲಿದೆ.

ರೈಲಿನ ಮೂಲಕ-> ಸಾವಂತವಾಡಿ ರೈಲು ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಅಲ್ಲಿಂದ ಟ್ಯಾಕ್ಸಿ, ಕ್ಯಾಬ್ ಮೂಲಕ ಅಂಬೋಲಿ ತಲುಪಬಹುದು.

ಬಸ್ ಮೂಲಕ-> ಮುಂಬೈನಿಂದ 550 ಹಾಗೂ ಪುಣೆಯಿಂದ 400 ಕಿ.ಮೀ. ದೂರದಲ್ಲಿರುವ ಅಂಬೋಲಿಗೆ ಎಲ್ಲ ಪ್ರಮುಖ ಪಟ್ಟಣಗಳಿಂದಲೂ ಬಸ್ ಸೌಕರ್ಯವಿದೆ.

ವಸತಿ

ಮಹಾರಾಷ್ಟ್ರ ಪ್ರಮುಖ ಪ್ರವಾಸಿ ಸ್ಥಳವಾಗಿರುವ ಅಂಬೋಲಿಯಲ್ಲಿ ಸಾಕಷ್ಟು ಖಾಸಗಿ ವಸತಿ ಗೃಹಗಳಿವೆ.

ಅಂದಾಜು ವೆಚ್ಚ

ಬೆಂಗಳೂರಿನಿಂದ ಅಂಬೋಲಿಗಿರುವ ದೂರ- 572 ಕಿ.ಮೀಗಳು/ 9 ಗಂಟೆ ನಿಮಿಷದ ಜರ್ನಿ. ಬೆಂಗಳೂರಿನಿಂದ ಗೋವಾಕ್ಕೆ ವಿಮಾನ ಪ್ರಯಾಣ ದರ 3,600ರೂಪಾಯಿ. ಅಲ್ಲಿಂದ 70 ಕಿ.ಮೀ.ದೂರದಲ್ಲಿರುವ ಅಂಬೋಲಿಗೆ ಬಸ್ ದರ 100 ರೂಪಾಯಿಗಳು. ಒಟ್ಟು ಅಂದಾಜು ವೆಚ್ಚ – 12 ಸಾವಿರ ರೂಪಾಯಿ.

ಅಂಬೋಲಿ ವಾಟರ್ ಫಾಲ್ಸ್ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಮುಖ್ಯ ಉಪಸಂಪಾದಕ (ಪ್ರಿನ್ಸಿಪಾಲ್‌ ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯುಸರ್‌). ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ ಓದುವುದು, ಬರೆಯುವುದು ಇಷ್ಟದ ಕೆಲಸ. ನನ್ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ಕಿಸಿ ಧನ್ಯವಾದ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.