Tag Archives: ಕರ್ನಾಟಕ ಬೆಸ್ಟ್

ಉದ್ಯೋಗದಲ್ಲಿ ಯಶಸ್ಸು ಪಡೆಯಬೇಕೆ? ಸ್ವಾಮಿ ವಿವೇಕಾನಂದರು ಹೇಳಿದ ಈ ಹಿತವಚನಗಳನ್ನು ಪಾಲಿಸಿ

By | 25/12/2021

ಸ್ವಾಮಿ ವಿವೇಕಾನಂದರು ವಿವಿಧ ಸಂದರ್ಭಗಳಲ್ಲಿ ಹೇಳಿರುವ ನುಡಿಮುತ್ತುಗಳು, ಅವರು ಅನುಸರಿಸಿದ ಹಾದಿಗಳು ಕರಿಯರ್ ಯಶಸ್ಸು ಪಡೆಯಲು ಬಯಸುವವರಿಗೆ ಸೂರ್ತಿದಾಯಕ ಪಾಠವಾಗಬಹುದು. ಸ್ವಾಮಿ ವಿವೇಕಾನಂದರು ಜನಿಸಿದ್ದು 1863ರಲ್ಲಿ. ಆ ಕಾಲದಲ್ಲಿ ಜಗತ್ತು ಈಗಿನಂತೆ ಇರಲಿಲ್ಲ. ಮೊಬೈಲ್ ಇರಲಿಲ್ಲ. ಇಂಟರ್‍ನೆಟ್ ಇರಲಿಲ್ಲ. ಸೀಮಿತ ತಂತ್ರಜ್ಞಾನಗಳು ಇದ್ದವು. ಆದರೆ, ಅವರ ಬೋಧನೆಗಳು, ಅವರ ವ್ಯಕ್ತಿತ್ವ ಆ ಕಾಲದಲ್ಲಿಯೇ ಜಗತ್‍ಖ್ಯಾತಿ ಪಡೆಯಿತು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರು, ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರು, ಸ್ವಂತ ಉದ್ದಿಮೆ ಕಟ್ಟಲು ಪ್ರಯತ್ನಿಸುತ್ತಿರುವ ತರುಣ, ತರುಣಿಯರು, ಕರಿಯರ್‍ನಲ್ಲಿ ಪ್ರಗತಿ ಕಾಣಲು ಬಯಸುವವರಿಗೆ ವಿವೇಕವಾಣಿಯು… Read More »

ನಿಮ್ಮ ವೆಬ್ಸೈಟ್ಗೆ ಗೂಗಲ್ ಆಡ್ಸೆನ್ಸ್ ಅನುಮತಿ ದೊರಕಿಲ್ಲವೇ? ಈ ಟಿಪ್ಸ್ ಗಮನಿಸಿ

By | 24/08/2020

ಕಳೆದ ಕೆಲವು ತಿಂಗಳಿನಿಂದ ಕನ್ನಡ ವೆಬ್‌ಸೈಟ್‌ಗಳಿಗೂ ಗೂಗಲ್‌ ಆಡ್‌ಸೆನ್ಸ್‌ ಬೆಂಬಲ ನೀಡುತ್ತಿದೆ. ನೂರಾರು ಬ್ಲಾಗ್‌ ಅಥವಾ ವೆಬ್‌ಸೈಟ್‌ ಮಾಲಿಕರಿಗೆ ಇದು ಖುಷಿ ತಂದಿರುವ ವಿಷಯ. ಆದರೆ, ಕೆಲವು ವೆಬ್‌ಸೈಟ್‌ಗಳಿಗೆ, ಬ್ಲಾಗ್‌ಗಳಿಗೆ ಇನ್ನೂ ಗೂಗಲ್‌ ಆಡ್‌ಸೆನ್ಸ್‌ ಬೆಂಬಲ ದೊರಕಿಲ್ಲ. ತಮ್ಮ ಆದಾಯದ ಮೂಲವೇ ಬತ್ತಿಹೋಗುವ ಆತಂಕದಲ್ಲಿ ವೆಬ್‌ಸೈಟ್‌, ಬ್ಲಾಗ್‌ ಮಾಲಿಕರಿದ್ದಾರೆ. ಕರ್ನಾಟಕ ಬೆಸ್ಟ್‌ ವೆಬ್‌ ಡಿಸೈನ್‌ ಮೂಲಕ ನಿರ್ಮಿಸಿದ ೩೦ಕ್ಕೂ ಹೆಚ್ಚು ನ್ಯೂಸ್‌ ವೆಬ್‌ಸೈಟ್‌ಗಳಿಗೆ ಆಡ್‌ಸೆನ್ಸ್‌ ಬೆಂಬಲ ದೊರಕಿದೆ. ಆದರೆ, ಅರ್ಜಿ ಸಲ್ಲಿಸಿರುವುದರಲ್ಲಿ ಎರಡು ವೆಬ್‌ಸೈಟ್‌ಗಳಿಗೆ ಇನ್ನೂ ಆಡ್‌ಸೆನ್ಸ್‌ ಬೆಂಬಲ ದೊರಕಿಲ್ಲ. ಅದಕ್ಕೆ… Read More »

ಷೇರುಪೇಟೆಯಲ್ಲಿ ಉದ್ಯೋಗ ಪಡೆಯುವುದು ಹೇಗೆ?

By | 02/04/2020

ಷೇರುಪೇಟೆಯೆಂದರೆ ಒಂದಿಷ್ಟು ಜನರಿಗೆ ಏನೋ ಆಕರ್ಷಣೆ. ಇಲ್ಲಿ ಹಣ ಹೂಡಿಕೆ ಮಾಡಿದರೆ ಮುಂದೊಂದು ದಿನ ಬಂಪರ್ ಹೊಡೆಯಬಹುದು. ಪ್ರತಿದಿನದ ವಹಿವಾಟಿನ ಏರಿಳಿತದಲ್ಲಿ ಸಾಕಷ್ಟು ಹಣ ಸಂಪಾದಿಸಬಹುದು. ದುಡಿದ ಒಂದಿಷ್ಟು ಹಣವನ್ನು ಷೇರುಪೇಟೆಯಲ್ಲಿ ತೊಡಗಿಸುತ್ತಾರೆ. ಷೇರುಪೇಟೆ ಸಂಬಧಿಂತ ಉದ್ಯೋಗ ಹೆಚ್ಚಿನವರಿಗೆ ಅಚ್ಚುಮೆಚ್ಚು. ಸೆನ್ಸೆಕ್ಸ್ ಗೂಳಿ ಕರಡಿ ಕುಣಿತಕ್ಕೆ ತಕ್ಕಂತೆ ಗ್ರಾಹಕರನ್ನು ನಿರ್ವಹಿಸುವ ಪಾತ್ರವದು. ಷೇರು ವಹಿವಾಟಿಗೆ ಸಾಥ್ ನೀಡುವ ಬ್ರೋಕಿಂಗ್ ಹೌಸ್‍ಗಳು, ಸೆಕ್ಯುರಿಟೀಸ್ ಕಂಪನಿಗಳು ಷೇರುಪೇಟೆಯ ಜ್ಞಾನವಿರುವ ಚತುರರನ್ನು ನೇಮಿಸಿಕೊಳ್ಳುತ್ತವೆ. ಅಲ್ಲಿ ಈಕ್ವಿಟಿ ಡೀಲರ್, ಟ್ರೇಡ್ ಎಕ್ಸಿಕ್ಯೂಟಿವ್ಸ್, ವೆಬ್ ಅಸಿಸ್ಟ್ ಡೀಲರ್ಸ್, ಷೇರ್… Read More »

ಉದ್ಯೋಗ ಸಂದರ್ಶನ: ಈ ಹುದ್ದೆಯ ಬಗ್ಗೆ ನಿಮಗೆ ಹೇಗೆ ಮಾಹಿತಿ ದೊರೆಯಿತು?

By | 26/01/2019

ಉದ್ಯೋಗ ಸಂದರ್ಶನದಲ್ಲಿ ಟೆಲ್ ಮಿ ಅಬೌಟ್ ಯುವರ್ ಸೆಲ್ಫ್ ಅಥವಾ ನಿಮ್ಮ ಬಗ್ಗೆ ಹೇಳಿ? ಎಂಬ ಸಾಮಾನ್ಯ ಪ್ರಶ್ನೆಗೆ ಹೇಗೆ ಉತ್ತರಿಸುವುದೆಂದು ಈ ಹಿಂದಿನ ಲೇಖನದಲ್ಲಿ ತಿಳಿದುಕೊಂಡೆವು. ಸಂದರ್ಶನದಲ್ಲಿ ಸಾಮಾನ್ಯವಾಗಿ ಕೇಳುವ ಇನ್ನೆರಡು ಪ್ರಮುಖ ಪ್ರಶ್ನೆಗಳ  ಕುರಿತು ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಪ್ರಶ್ನೆ: ಈ ಹುದ್ದೆಯ ಕುರಿತು ನಿಮಗೆ ಹೇಗೆ ಮಾಹಿತಿ ದೊರೆಯಿತು? ಉದ್ಯೋಗ ಸಂದರ್ಶನದಲ್ಲಿ ಸಾಮಾನ್ಯವಾಗಿ `ಹೌ ಡಿಡ್ ಯು ಹಿಯರ್ ಅಬೌಟ್ ದಿ ಪೊಷಿಸನ್?’ ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಇಂತಹ ಪ್ರಶ್ನೆಯನ್ನು ಸಾಮಾನ್ಯ ಪ್ರಶ್ನೆಯೆಂದು ಬಹುತೇಕರು ಕಡೆಗಣಿಸುವುದುಂಟು. ಕಂಪನಿಯ… Read More »