ನಿಮ್ಮ ವೆಬ್ಸೈಟ್ಗೆ ಗೂಗಲ್ ಆಡ್ಸೆನ್ಸ್ ಅನುಮತಿ ದೊರಕಿಲ್ಲವೇ? ಈ ಟಿಪ್ಸ್ ಗಮನಿಸಿ

By | 24/08/2020

ಕಳೆದ ಕೆಲವು ತಿಂಗಳಿನಿಂದ ಕನ್ನಡ ವೆಬ್‌ಸೈಟ್‌ಗಳಿಗೂ ಗೂಗಲ್‌ ಆಡ್‌ಸೆನ್ಸ್‌ ಬೆಂಬಲ ನೀಡುತ್ತಿದೆ. ನೂರಾರು ಬ್ಲಾಗ್‌ ಅಥವಾ ವೆಬ್‌ಸೈಟ್‌ ಮಾಲಿಕರಿಗೆ ಇದು ಖುಷಿ ತಂದಿರುವ ವಿಷಯ. ಆದರೆ, ಕೆಲವು ವೆಬ್‌ಸೈಟ್‌ಗಳಿಗೆ, ಬ್ಲಾಗ್‌ಗಳಿಗೆ ಇನ್ನೂ ಗೂಗಲ್‌ ಆಡ್‌ಸೆನ್ಸ್‌ ಬೆಂಬಲ ದೊರಕಿಲ್ಲ. ತಮ್ಮ ಆದಾಯದ ಮೂಲವೇ ಬತ್ತಿಹೋಗುವ ಆತಂಕದಲ್ಲಿ ವೆಬ್‌ಸೈಟ್‌, ಬ್ಲಾಗ್‌ ಮಾಲಿಕರಿದ್ದಾರೆ.

ಕರ್ನಾಟಕ ಬೆಸ್ಟ್‌ ವೆಬ್‌ ಡಿಸೈನ್‌ ಮೂಲಕ ನಿರ್ಮಿಸಿದ ೩೦ಕ್ಕೂ ಹೆಚ್ಚು ನ್ಯೂಸ್‌ ವೆಬ್‌ಸೈಟ್‌ಗಳಿಗೆ ಆಡ್‌ಸೆನ್ಸ್‌ ಬೆಂಬಲ ದೊರಕಿದೆ. ಆದರೆ, ಅರ್ಜಿ ಸಲ್ಲಿಸಿರುವುದರಲ್ಲಿ ಎರಡು ವೆಬ್‌ಸೈಟ್‌ಗಳಿಗೆ ಇನ್ನೂ ಆಡ್‌ಸೆನ್ಸ್‌ ಬೆಂಬಲ ದೊರಕಿಲ್ಲ. ಅದಕ್ಕೆ ಕಾರಣವಾಗಿರುವುದು ಗೂಗಲ್‌ ಆಡ್‌ಸೆನ್ಸ್‌ನ ಕೆಲವು ನಿಯಮಗಳನ್ನು ಪಾಲಿಸದೆ ಇರುವುದು ಮತ್ತು ಗೂಗಲ್‌ ಆಡ್‌ಸೆನ್ಸ್‌ ತನ್ನದೇ ಆದ ಬಹಿರಂಗಪಡಿಸದೆ ಇರುವ ಕೆಲವು ನಿಯಮಗಳನ್ನು ಹೊಂದಿರುವುದು.

ಇದನ್ನೂ ಓದಿ: ಗೂಗಲ್‌ ಆಡ್‌ಸೆನ್ಸ್‌ ಇದೀಗ ಕನ್ನಡ ಭಾಷೆಯಲ್ಲಿಯೂ ಲಭ್ಯ- ಕನ್ನಡ ಬ್ಲಾಗ್‌, ಸುದ್ದಿತಾಣಗಳಿಗೆ ಶುಭಸುದ್ದಿ

ನೀವು ಸಹ ಗೂಗಲ್‌ ಆಡ್‌ಸೆನ್ಸ್‌ಗೆ ಅರ್ಜಿ ಸಲ್ಲಿಸಿರಬಹುದು. ನಿಮಗೂ Please review the issues we’ve found, resolve them, and submit the form after you’ve finished. You need to resolve these issues to be able to use AdSense ಎಂಬ ಸಂದೇಶ ಬಂದಿರಬಹುದು. ಇಂತಹ ಸಂದರ್ಭದಲ್ಲಿ ಸಮಸ್ಯೆ ಏನು ಎಂದು ಹುಡುಕಿ ಫಿಕ್ಸ್‌ ಮಾಡದೆ ಮತ್ತೆ ಮತ್ತೆ ಅರ್ಜಿ ಸಲ್ಲಿಸುವುದರಿಂದ ಏನೂ ಪ್ರಯೋಜನವಿಲ್ಲ. ನಿಮಗೂ ಗೂಗಲ್‌ ಆಡ್‌ಸೆನ್ಸ್‌ ಬೆಂಬಲ ದೊರಕಬೇಕಿದ್ದರೆ ಈ ಮುಂದಿನ ಸಲಹೆಗಳನ್ನು ಅನುಸರಿಸಿ.

ನೆನಪಿಡಿ ಕನ್ನಡ ಬ್ಲಾಗ್‌ ಅಥವಾ ವೆಬ್‌ಸೈಟ್‌ಗಳಿಗೆ ಆಡ್‌ಸೆನ್ಸ್‌ ಅನುಮತಿ ದೊರಕುವುದು ಕಷ್ಟವಲ್ಲ. ನಿಮ್ಮ ವೆಬ್‌ಸೈಟ್‌ಗೆ ಬರುವ ಪೇಜ್‌ವ್ಯೂಸ್‌, ನಿಮ್ಮ ವೆಬ್‌ಸೈಟ್‌ನ ವಿನ್ಯಾಸ ಇತ್ಯಾದಿಗಳನ್ನು ಗೂಗಲ್‌ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಮೊದಲಿಗೆ ಈ ಮುಂದಿನ ನಿಯಮಗಳನ್ನು ಪಾಲಿಸಿ.

  • ನಿಮ್ಮ ಹೊಸ ಬ್ಲಾಗ್‌ ಅಥವಾ ವೆಬ್‌ಸೈಟ್ ಆರಂಭವಾಗಿ ಆಡ್‌ಸೆನ್ಸ್‌ಗೆ ಅರ್ಜಿ ಸಲ್ಲಿಸಲು ಕನಿಷ್ಠ ೧ ತಿಂಗಳು ಕಾಯಿರಿ. ಮೊದಲು ಆರು ತಿಂಗಳು ಹಳೆಯ ವೆಬ್‌ಸೈಟ್‌ಗಳಿಗೆ ಮಾತ್ರ ಅನುಮತಿ ದೊರಕುತ್ತಿತ್ತು. ಈಗ ಒಂದು ತಿಂಗಳ ವೆಬ್‌ಸೈಟ್‌ಗಳಿಗೂ ಅನುಮತಿ ದೊರಕುತ್ತಿದೆ.
  • ಕನಿಷ್ಠ ೧೦ ಒಳ್ಳೆಯ ಲೇಖನಗಳನ್ನು ಬರೆಯಿರಿ. ಅಂದರೆ, ನಿಮ್ಮ ಲೇಖನಗಳು ೫೦೦ ಪದಗಳಿಗಿಂತ ಹೆಚ್ಚಿರಲಿ. ಒಳ್ಳೆಯ ಮಾಹಿತಿಗಳನ್ನು ಹೊಂದಿರಲಿ. ಜನರಿಗೆ ಉಪಯುಕ್ತವಾಗುವಂತೆ ಇರಲಿ. ಕಂಟೆಂಟ್‌ ಈಸ್‌ ಕಿಂಗ್‌ ಎನ್ನುವುದನ್ನು ಮರೆಯಬೇಡಿ.
  • ನಿಮ್ಮ ಲೇಖನಗಳಿಗೆ ಸೂಕ್ತವಾಗುವ ಫಸ್ಟ್‌ ಹ್ಯಾಂಡ್‌ ಫೋಟೊಗಳನ್ನು ಹಾಕಿ. ಗೂಗಲ್‌ನಿಂದ ಫೋಟೊ ತೆಗೆದು ಹಾಕುವುದಲ್ಲ.
  • ಬೇರೆ ನ್ಯೂಸ್‌ ವೆಬ್‌ಸೈಟ್‌ಗಳಿಂದ ಸುದ್ದಿಗಳನ್ನು ತೆಗೆದು ಹಾಕಲೇಬೇಡಿ. ಕಂಟೆಂಟ್‌ ಪಲ್ಗರಿಸಂ ಅಥವಾ ಲೇಖನ ನಕಲನ್ನು ಗೂಗಲ್‌ನ ಆಲ್ಗರಿದಂಗಳು ಸುಲಭವಾಗಿ ಕಂಡುಹಿಡಿಯುತ್ತವೆ.
  • ನೂರಾರು ವೆಬ್‌ಸೈಟ್‌ಗಳಲ್ಲಿ ಬರುವಂತಹ ವಿಷಯಗಳನ್ನೇ ನೀವು ಬರೆಯಬೇಡಿ. ಉದಾಹರಣೆಗೆ ನೀವು ನ್ಯಾಷನಲ್‌ ಮತ್ತು ಇಂಟರ್‌ನ್ಯಾಷನಲ್‌ ನ್ಯೂಸ್‌ಗಳನ್ನು ಆಡ್‌ಸೆನ್ಸ್‌ ಬರುವ ಮೊದಲು ಅನುವಾದಿಸಿ ಹಾಕಬೇಡಿ. ಹತ್ತರೊಟ್ಟಿಗೆ ಹನ್ನೊಂದು ಆಗಬೇಡಿ. ಯಾಕೆಂದರೆ ನೀವು ನರೇಂದ್ರ ಮೋದಿ ಮನೆಯಲ್ಲಿ ನವಿಲಿನೊಂದಿಗೆ ಬೆರೆಯುವ ವಿಷಯವನ್ನು ಹಾಕಿದ್ದೀರಿ ಎಂದಿಟ್ಟುಕೊಳ್ಳಿ. ಆ ವಿಷಯದ ಕುರಿತು ಹಲವು ಲಕ್ಷ ವೆಬ್‌ಸೈಟ್‌ಗಳಲ್ಲಿ ಸುದ್ದಿ ಬಂದಿರುತ್ತದೆ. ಅಂತಹದ್ದೇ ನೂರಾರು ನ್ಯೂಸ್‌ಗಳು ನಿಮ್ಮ ವೆಬ್‌ಸೈಟ್‌ನಲ್ಲಿದ್ದರೆ ಗೂಗಲ್‌ಗೆ ನಿಮ್ಮ ವೆಬ್ಸೈಟ್‌ ವಿಶೇಷ ಎನಿಸದು.
  • ಗೂಗಲ್‌ ಆಡ್‌ಸೆನ್ಸ್ ಅನುಮತಿ ದೊರಕುವ ತನಕ ಫಸ್ಟ್‌ ಹ್ಯಾಂಡ್‌ ಕಂಟೆಂಟ್‌ಗಳಿಗೆ ಆದ್ಯತೆ ನೀಡಿ. ಅಂದರೆ, ನೀವು ಬರೆದ ಕತೆ, ಲೇಖನಗಳಿಗೆ ಆದ್ಯತೆ ನೀಡಿ.
  • ಹೆಚ್ಚು ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗದ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ.
  • ನೀವೇ ರಿಪೋರ್ಟಿಂಗ್‌ ಮಾಡಿ ಸುದ್ದಿ ಪ್ರಕಟಿಸಿದರೆ ಇನ್ನೂ ಒಳ್ಳೆಯದು. ಇದೇ ನಿಜವಾದ ಪತ್ರಿಕೋದ್ಯಮ.

ಇವೆಲ್ಲ ಕಂಟೆಂಟ್‌ಗೆ ಸಂಬಂಧಪಟ್ಟ ವಿಷಯಗಳು.

ವೆಬ್‌ ಅಥವಾ ಬ್ಲಾಗ್‌ ನಿಯಮ

ನಿಮ್ಮ ಬ್ಲಾಗ್‌ ಅಥವಾ ವೆಬ್‌ಸೈಟ್‌ಗೆ ಸಂಬಂಧಪಟ್ಟಂತೆ ಕೆಲವೊಂದು ವಿಷಯಗಳನ್ನು ಮರೆಯಬೇಡಿ.

  • ಅಬೌಟ್‌ ಅಸ್‌: ನಿಮ್ಮ ಬಗ್ಗೆ ಅಥವಾ ನಿಮ್ಮ ವೆಬ್‌ಸೈಟ್‌ ಬಗ್ಗೆ ಒಂದುಪುಟದಲ್ಲಿ ಕನಿಷ್ಠ ೬೦೦ ಪದಗಳಿಗೆ ಕಡಿಮೆ ಇಲ್ಲದಂತೆ ಬರೆಯಿರಿ.
  • ಡಿಸ್ಕೈಮರ್‌ ಪುಟವನ್ನೂ ಬರೆಯಿರಿ.
  • ಪ್ರೈವೇಸಿ ಪಾಲಿಸಿ ಪುಟವನ್ನು ಬರ್ತಿ ಮಾಡಿ
  • ಸಂಪರ್ಕಿಸಿ ಪುಟ ಇರಲಿ.
  • ನಿಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ಕಚೇರಿ ಅಥವಾ ವೆಬ್‌ಸೈಟ್ ವಿಳಾಸ, ದೂರವಾಣಿ ಸಂಖ್ಯೆಗಳು ಇರಲಿ.

ಈ ಎಲ್ಲಾ ಪುಟಗಳನ್ನು ನಿಮ್ಮ ಬ್ಲಾಗ್‌ ಅಥವಾ ವೆಬ್‌ಸೈಟ್‌ನ ಬಾಟಮ್‌ ಅಥವಾ ಮೇಲ್ಬಾಗದಲ್ಲಿ ಪ್ರತ್ಯೇಕ ಮೆನುವಿನಲ್ಲಿ ಜೋಡಿಸಿರಿ. ಈ ಪುಟದಲ್ಲಿರುವ ಕಂಟೆಂಟ್‌ ಬಗ್ಗೆ ಗಮನಹರಿಸಿ. ಇವೆಲ್ಲ ಇದ್ದರೆ ಇದು ಸೀರಿಯಸ್‌ ಆಗಿ ಮಾಡುತ್ತಿರುವ ವೆಬ್‌ ಅಥವಾ ಬ್ಲಾಗ್‌ ಎಂದು ಗೂಗಲ್‌ ಪರಿಗಣಿಸುತ್ತದೆ.

ವೆಬ್‌ಸೈಟ್ ವಿನ್ಯಾಸ

ಗೂಗಲ್‌ ಆಡ್‌ಸೆನ್ಸ್‌ಗೆ ಅನುಮತಿ ಪಡೆಯಲು ಕೆಲವೊಮ್ಮೆ ವೆಬ್‌ ವಿನ್ಯಾಸವೂ ಪಾತ್ರ ವಹಿಸುತ್ತದೆ. ಸುಲಭವಾಗಿ ನ್ಯಾವಿಗೇಟ್‌ ಮಾಡುವಂತೆ, ಬಳಕೆದಾರ ಸ್ನೇಹಿ ವೆಬ್‌ಸೈಟ್‌ ನಿಮ್ಮದಾಗಿರಲಿ.

ಬೇರೆ ಜಾಹೀರಾತುಗಳು

ಹಣ ಬರಲಿ ಎಂದು ಆಸೆಯಿಂದ ಗೂಗಲ್‌ ಆಡ್‌ಸೆನ್ಸ್‌ಗೆ ಪರ್ಯಾಯವಾದ ಆದರೆ ಹೆಚ್ಚು ಹಣ ನೀಡದ ಜಾಹೀರಾತುಗಳನ್ನು ನಿಮ್ಮ ವೆಬ್‌ಸೈಟ್‌ನಲ್ಲಿ ತುಂಬಿಸಿರಬೇಡಿ. ನೀವು ವೈಯಕ್ತಿಕವಾಗಿ ಜನರಿಂದ ಪಡೆದ ಇಮೇಜ್‌ ಆಡ್‌ಗಳು ಇದ್ದರೆ ಏನೂ ತೊಂದರೆಯಿಲ್ಲ. ನೀವು ವೈಯಕ್ತಿಕವಾಗಿ ಜನರಿಂದ ಜಾಹೀರಾತು ಸಂಗ್ರಹಿಸುವುದು ಅತ್ಯುತ್ತಮ ಆದಾಯದ ವಿಧಾನವಾಗಿದೆ.

ಇವಿಷ್ಟು ಇದ್ದರೂ ನಿಮ್ಮ ವೆಬ್‌ಸೈಟ್‌ಗೆ ಗೂಗಲ್‌ ಆಡ್‌ಸೆನ್ಸ್‌ ಅನುಮತಿ ದೊರಕಿಲ್ಲವೇ?

ಹಾಗಾದರೆ ಈ ಮುಂದಿನ ವಿಷಯಗಳ ಕಡೆಗೂ ಗಮನನೀಡಿ.

  • ಪ್ರಶ್ನಾರ್ಹ ಕಂಟೆಂಟ್‌ಗಳು ವೆಬ್‌ಸೈಟ್‌ನಲ್ಲಿ ಇರುವುದು ಬೇಡ. ಅಶ್ಲೀಲ ಬರಹಗಳು ಅಥವಾ ಚಿತ್ರಗಳನ್ನು ಬಳಸಲೇಬೇಡಿ. ಪೋರ್ನ್‌, ಆಲ್ಕೋಹಾಲ್‌, ತಂಬಾಕು ಇತ್ಯಾದಿಗಳಿಗೆ ಸಂಬಂಧಪಟ್ಟ (ಮಾರಾಟ ಮತ್ತು ಖರೀದಿ ಸೇರಿದಂತೆ) ಬರಹಗಳು ಬೇಡ.  ನೀವು ಏನಾದರೂ ಲೇಖನ ಬರೆದರೆ ಇದನ್ನು ನನ್ನ ತಂದೆ, ತಾಯಿ, ಅಜ್ಜ, ಅಜ್ಜಿ ಯಾರಾದರೂ ಓದಿದರೆ ಒಪ್ಪುವರೇ ಎಂದು ಪ್ರಶ್ನಿಸಿಕೊಳ್ಳಿ. ಅವರು ಒಪ್ಪದೆ ಇದ್ದರೆ ಗೂಗಲ್‌ ಸಹ ಒಪ್ಪದು!
  • ಪಲ್ಗರಿಸಂ ಬಗ್ಗೆ ಗೊತ್ತೆ?: ಈಗ ನೂರಾರು ವೆಬ್‌ಸೈಟ್‌ಗಳು ಒಬ್ಬರ ಸೈಟ್‌ನಿಂದ ಕದಿಯುವ ಚಾಳಿಯನ್ನು ಹೊಂದಿವೆ. ಇದು ಅತ್ಯಂತ ಕೆಟ್ಟ ಅಭ್ಯಾಸ. ಜನರಿಗೂ ಇದರಿಂದ ವಿಶೇಷವಾಗಿ ಓದಲು ಏನೂ ಸಿಗದು.

ಪಲ್ಗರಿಸಂ ಅಥವಾ ನಕಲು ಬರಹಗಳ ಕುರಿತು ಗೂಗಲ್‌ ಅತ್ಯಂತ ಕಠಿಣ ನೀತಿ ಅನುಸರಿಸುತ್ತಿದೆ. ಎಲ್ಲಾದರೂ ನೀವು ಅಪರೂಪಕ್ಕೆ ಬೇರೆ ತಾಣದಿಂದ ಲೇಖನದ ಒಂದು ಭಾಗ ಅಥವಾ ಚಿತ್ರಗಳನ್ನು ಬಳಸುವುದಿದ್ದರೆ ಎಲ್ಲರಿಗೂ ಕಾಣುವಂತೆ ಮತ್ತು ಗೂಗಲ್‌ಗೆ ಅರ್ಥವಾಗುವಂತೆ ಕಾಪಿರೈಟ್‌ ಮಾಹಿತಿಯನ್ನು ಹಾಕಿಬಿಡಿ. ನೀವು ಬೇರೊಂದು ವೆಬ್‌ಸೈಟ್‌ನಿಂದ ಪೂರ್ಣ ಲೇಖನವನ್ನು ಬಳಸಿಕೊಳ್ಳುವುದಾದರೆ ಅದು ಸಂಪೂರ್ಣವಾಗಿ ಪಲ್ಗರಿಸಂ ಆಗಿದ್ದು, ಗೂಗಲ್‌ ಸಹಿಸದು. ಗೂಗಲ್‌ನಿಂದ ಚಿತ್ರ ತೆಗೆದು ಬಳಸುವ ಅಭ್ಯಾಸವೂ ಬೇಡ.

  • ವೆಬ್‌ಸೈಟ್ ಹಳತಾಗಲಿ. ಮಾವಿನಮಿಡಿ ಉಪ್ಪಿನಕಾಯಿ ಹಳಯಾದಂತೆ ಟೇಸ್ಟ್ ಜಾಸ್ತಿ. ಅದೇ ರೀತಿ ನಿಮ್ಮ ವೆಬ್ಸೈಟ್‌ ಒಳ್ಳೆಯ ಕಂಟೆಂಟ್‌ ಇದ್ದರೆ ಒಂದೇ ತಿಂಗಳಲ್ಲಿ ಅನುಮತಿ ದೊರಕಬಹುದು. ಆದರೆ, ಕನಿಷ್ಠ ೩ ತಿಂಗಳು ಅಥವಾ ಆರು ತಿಂಗಳು ಆಗಿದ್ದರೆ ಒಳ್ಳೆಯದು. ಹೆಚ್ಚು ಹಳೆಯ, ಒಳ್ಳೆಯ ಕಂಟೆಂಟ್‌ ಇರುವ ವೆಬ್‌ಸೈಟ್‌ಗಳಿಗೆ ಹೆಚ್ಚು ಕಷ್ಟವಿಲ್ಲದೆ ಗೂಗಲ್‌ ಆಡ್‌ಸೆನ್ಸ್‌ ಅನುಮತಿ ದೊರಕುತ್ತದೆ.

ಗೂಗಲ್‌ ಆಡ್‌ಸೆನ್ಸ್ ಅನುಮತಿ ದೊರಕುವುದು ಒಂದು ಹಂತವಾದರೆ, ಅನುಮತಿ ದೊರಕಿ ಕೈಗೆ ಪೇಮೆಂಟ್‌ ಬರುವ ತನಕ ಹಲವು ಪ್ರಕ್ರಿಯೆಗಳನ್ನು ದಾಟಿ ಬರಬೇಕಾಗುತ್ತದೆ. ಆ ಮಾಹಿತಿಯನ್ನು ಬಿಡುವಿದ್ದಾಗ ಕರ್ನಾಟಕಬೆಸ್ಟ್‌.ಕಾಂನಲ್ಲಿ ಬರೆಯುವೆ. ಅಲ್ಲಿಯವರೆಗೆ ನಮಸ್ಕಾರ. ನಿಮ್ಮಲ್ಲಿ ಏನಾದರೂ ಪ್ರಶ್ನೆಗಳಿದ್ದರೆ ಇಲ್ಲಿ ಕಾಮೆಂಟ್‌ ಮಾಡಬಹುದು. ನಿಮಗೆ ವೆಬ್ಸೈಟ್‌ ಬೇಕಿದ್ದರೆ ನನಗೆ ವಾಟ್ಸಪ್‌ ಮಾಡಬಹುದು. ಯಾವುದೇ ಆಮೀಷ, ಆಫರ್‌ ಹೆಸರಿನಲ್ಲಿ ಮೋಸವಾಗದಂತೆ ಹೋಸ್ಟಿಂಗ್, ಡೊಮೈನ್, ಸರ್ವರ್‌ ಇತ್ಯಾದಿಗಳನ್ನು ಖರೀದಿಸಬೇಕಿದ್ದರೆ ನಮ್ಮ ಟಿಂಟುಹೋಸ್ಟ್‌.ಕಾಂಗೆ ಭೇಟಿ ನೀಡಿ. ಅಲ್ಲಿ ನಿಮಗೆ ಬೇಕಾದ ಹೆಸರು ಅಥವಾ ಹೋಸ್ಟಿಂಗ್‌ ಖರೀದಿಸಿ, ಪಾವತಿ ಸಮಯದಲ್ಲಿ ಆಫ್‌ಲೈನ್‌ ಪೇಮೆಂಟ್‌ ಕ್ಲಿಕ್‌ ಮಾಡಿ. ಮುಂದೆ ಕರ್ನಾಟಕ ಬೆಸ್ಟ್‌ ನಿಮ್ಮನ್ನು ಸಂಪರ್ಕಿಸಿ ಬಿಲ್‌ ಮೊತ್ತ ಪಡೆದುಕೊಳ್ಳುತ್ತದೆ. ಜೊತೆಗೆ ಉಚಿತವಾಗಿ ನಿಮಗೆ ವೆಬ್‌ಸೈಟ್‌ಗೆ ಸಂಬಂಧಪಟ್ಟ ಸಲಹೆ ಸೂಚನೆಗಳನ್ನು ನೀಡುತ್ತದೆ.

Leave a Reply

Your email address will not be published. Required fields are marked *