ಶ್ರೀರಾಮನಿಂದ ಕಲಿಯಬಹುದಾದ ಜೀವನಪಾಠಗಳು

By | 10/08/2020

ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಭೂಮಿಪೂಜೆ ನಡೆದಿದೆ. ಶರಾಮಾಯಣದ ಪ್ರಕಾರ ರಾಮನ ಆಳ್ವಿಕೆಯ ಕಾಲ ಅತ್ಯಂತ ಸುಭಿಕ್ಷವಾಗಿದ್ದು, ನ್ಯಾಯನೀತಿಗಳಿಂದ ಕೂಡಿದ್ದವೆಂದು ಹೇಳಲಾಗಿದೆ. ಮಹಾವಿಷ್ಣುವಿನ 7ನೇ ಅವತಾರವಾದ ಶ್ರೀರಾಮಚಂದ್ರನಿಂದ ಕಲಿಯಬಹುದಾದ ಪಾಠಗಳು ಇಲ್ಲಿವೆ.

ಬಿಟ್ಟುಕೊಡಬೇಡಿ

ಗುರಿ ಸಾಧನೆಗೆ ಕೆಲವು ದಿನಗಳು, ತಿಂಗಳುಗಳು ಅಥವಾ ಹಲವು ವರ್ಷಗಳು ಬೇಕಾಗಬಹುದು. ಅದನ್ನು ಸಾಸಲು ನಿರಂತರ ಪ್ರಯತ್ನವಿರಲಿ. ಗುರಿಯತ್ತ ಲಕ್ಷ್ಯವಿರಲಿ. ಸೀತೆಯನ್ನು ರಾವಣನಿಂದ ಕಾಪಾಡಲು ರಾಮ ಹಲವು ವರ್ಷ ನಿರಂತರ ಪ್ರಯತ್ನ ಮಾಡಿರುವ ಕತೆಯಿಂದ ಇದನ್ನು ತಿಳಿದುಕೊಳ್ಳಬಹುದು.

ನಮ್ರತೆ ಇರಲಿ

ನಾಯಕತ್ವ ಹೊಂದಲು ಬಯಸುವವರು ಮರೆಯದೆ ಮಾನವಿಯತೆ ಮತ್ತು ವಿನಮ್ರತೆಯನ್ನು ಸದಾ ಹೊಂದಬೇಕು. ಶ್ರೀರಾಮ ಒಳ್ಳೆಯ ಬಿಲ್ಲುಗಾರ. ಅಸ್ತ್ರ  ಪರಿಣಿತ ಮತ್ತು ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಜ್ಞಾನದಲ್ಲಿ ಮೇದಾವಿ. ಆದರೆ, ಇಷ್ಟೆಲ್ಲ ಇದ್ದರೂ ಅಹಂ ಇವರ  ಬಳಿ ಇಲ್ಲ. ಮಾನವಿಯತೆ, ವಿನಮ್ರತೆ ಸದಾ ಇತ್ತು.

ತಾಳ್ಮೆಯಿರಲಿ

ವೃತ್ತಿ ಅಥವಾ ವೈಯಕ್ತಿಕವಾಗಿ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಸಾಕಷ್ಟು ಸಂದರ್ಭಗಳಲ್ಲಿ ತಾಳ್ಮೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೆ, ಎಂತಹ ಸ್ಥಿತಿಯಲ್ಲಿಯೂ ತಾಳ್ಮೆ, ಸಮಚಿತ್ತತೆ ಕಳೆದುಕೊಳ್ಳಬಾರದು ಎನ್ನುವುದನ್ನು ರಾಮನಿಂದ ಕಲಿಯಬಹುದು.

ವಿಧೇಯತೆ ಮತ್ತು ಹಿರಿಯರಿಗೆ ಗೌರವ

ಈಗಿನ ತಲೆಮಾರು ಹಿರಿಯರನ್ನು ಅಷ್ಟಾಗಿ ಗೌರವಿಸುವುದಿಲ್ಲ ಎಂಬ ಮಾತಿದೆ. ಉದ್ಯೋಗ ಕ್ಷೇತ್ರದಲ್ಲಿ ಕಿರಿಯ ವಯಸ್ಸಿನಲ್ಲಿಯೇ ನಾಯಕತ್ವ ಪಡೆದವರು ಹಿರಿಯ ಉದ್ಯೋಗಿಗಳೊಂದಿಗೆ ವಿನಮ್ರತೆ ಮರೆತು ಮಾತನಾಡುತ್ತಾರೆ.  ನೀವು ಯಾವುದೇ ಮೇಲ್ಮಟ್ಟದಲ್ಲಿರಲಿ, ವಿಧೇಯತೆ ಮತ್ತು ಹಿರಿಯರಿಗೆ ಗೌರವ ನೀಡುವ ಗುಣ ನಿಮ್ಮಲ್ಲಿ ಇರಲಿ.  ಮಕ್ಕಳ ಒಳ್ಳೆಯವರಾಗಬೇಕು ಎಂದು ಹೆತ್ತವರು, ಗುರುಗಳು ಪ್ರಯತ್ನಿಸುತ್ತಾರೆ. ಅವರ ಮಾತುಗಳಿಗೆ ಗೌರವ ನೀಡಿ.

ಪೂರ್ವಾಗ್ರಹ ಎಂದಿಗೂ ಪರಿಹಾರವಲ್ಲ

ರಾವಣನ ಸಹೋದರ ವಿಭೀಷಿಣ ರಾಮನಲ್ಲಿಗೆ ಬಂದಾಗ ರಾಮ ಆತನನ್ನು ಯಾವುದೇ ಪೂರ್ವಾಗ್ರಹದಿಂದ ನೋಡಲಿಲ್ಲ. ವಿಭೀಷಿಣನ ಜ್ಞಾನ ಮತ್ತು ಪರಿಣತಿಯನ್ನು ಗೌರವಿಸಿದರು. ಬಹುತೇಕರು ಇಂದು ಪೂರ್ವಾಗ್ರಹಪೀಡಿತವಾಗಿ ಯೋಚಿಸುತ್ತಾರೆ. ಇದು ಯಶಸ್ಸು ಪಡೆಯಲು ಪ್ರಮುಖ ಅಡ್ಡಗಾಲು ಆಗಿರುತ್ತದೆ. ಜನರನ್ನು ಅಥವಾ ಅವಕಾಶಗಳನ್ನು ಪೂರ್ವಾಗ್ರಹಪೀಡಿತವಾಗಿ ನೋಡಬೇಡಿ.

ಸ್ನೇಹಿತರ ಅವಶ್ಯಕತೆ

ರಾಮನಿಗೆ ಲಕ್ಷಣ ಮತ್ತು ಹನುಮಂತ ಕೇವಲ ಸಹೋದರ ಅಥವಾ ಭಕ್ತನಲ್ಲ. ರಾಮನಿಗೆ ಇವರಿಬ್ಬರು ಹತ್ತಿರದ ಸ್ನೇಹಿತರಂತೆ ಇದ್ದರು. ಸಹೋದರನಾಗಿ ತಮ್ಮ ಭರತನಿಗೆ ರಾಜ್ಯದ ಉಸ್ತುವಾರಿ ನೀಡಿದ. ಕುಟುಂಬದ ಹೊಣೆಯನ್ನು ಶತ್ರುಘ್ನನಿಗೆ ನೀಡಿದ್ದ. ಯಾರಿಗೆ ಯಾವ ಹೊಣೆ ನೀಡಬೇಕು ಎಂಬ ಅರಿವೂ ರಾಮನಿಗಿತ್ತು.

ನೀವು ಎಂತಹ ಸ್ಥಿತಿಯಲ್ಲಿದ್ದರೂ ಸ್ನೇಹಿತರು ಸಹಾಯ ಮಾಡುತ್ತಾರೆ. ಪ್ರತಿದಿನ ಹೊಸ ಸ್ನೇಹಿತರನ್ನು ಮಾಡಿಕೊಳ್ಳಿ. ನಿಮ್ಮ ಕುಟುಂಬದ ಸದಸ್ಯರೂ ಸ್ನೇಹಿತರಂತೆ ಇರಲಿ.

ಮಾತಿಗೆ ಬದ್ಧರಾಗಿರಿ

ಇಂದು ಯಾವುದೋ ಭರವಸೆ ನೀಡುವುದು ಮತ್ತು ನಾಳೆ ಅದನ್ನು ಮರೆಯುವುದು ಉತ್ತಮ ನಾಯಕನ ಲಕ್ಷಣವಲ್ಲ. ನೀವು ಯಾವ ಮಾತು ಆಡುವಿರೋ ಅದಕ್ಕೆ ಬದ್ಧರಾಗಿರಿ. ಯೋಚಿಸಿ ಮಾತನಾಡಿ. ಮಾತಿನ ಮೇಲೆ ಹಿಡಿತವಿರಲಿ. ರಾಜ್ಯವನ್ನು ಕೈಕೆಯಿ ಕುತಂತ್ರದಿಂದ ಭರತನಿಗೆ ನೀಡಬೇಕಾದ ಸಂದರ್ಭದಲ್ಲಿಯೂ ತನ್ನ ತಂದೆಗೆ ಕೊಟ್ಟ ಮಾತನ್ನು ರಾಮ ತಪ್ಪಿಸಲಿಲ್ಲ. ಮುಂದಿನ 14 ವರ್ಷ ವನವಾಸ ಮಾಡಬೇಕಾದರೂ ತನ್ನ ಮಾತಿಗೆ ಬದ್ಧನಾಗಿ ಉಳಿದ.

ಎದೆಗುಂದದೆ ಮುನ್ನುಗಿ

ರಾಜನಾಗಿ ಆರಾಮವಾಗಿರಬೇಕಾದ ರಾಮ 14 ವರ್ಷ ಕಾಡಿನಲ್ಲಿ ಸಾಮಾನ್ಯ ವ್ಯಕ್ತಿಯಂತೆ ಕಷ್ಟಪಡಬೇಕಾಯಿತು. ಆದರೂ, ಯಾವುದೋ ಗುರಿ ಸಾಧನೆಯ ದಾರಿಯಲ್ಲಿ ರಾಮ ಕಷ್ಟಗಳಿಗೆ ಎದೆಗುಂದದೆ ಮುನ್ನುಗ್ಗಿದ. ಉದ್ಯೋಗ ಅಥವಾ ವೈಯಕ್ತಿಕ ಜೀವನದಲ್ಲಿಯೂ ಸಾಕಷ್ಟು ಕಷ್ಟಗಳು ನಮಗೆ ಎದುರಾಗಬಹುದು. ಜೀವನದಲ್ಲಿ ಕಷ್ಟಗಳು ಸಹಜ. ಇವುಗಳಿಗೆ ಎದೆಗುಂದದೆ ಮುಂದಡಿ ಇಡೋಣ.

ನಿಮ್ಮೊಳಗಿನ ರಾವಣನನ್ನು ಕೊಲ್ಲಿ: ನಮ್ಮ ಒಳಗೆ ಇರಬಹುದಾದ ಅಹಂ, ಮೋಸ, ವಂಚನೆ ಇತ್ಯಾದಿ ಕೆಟ್ಟಗುಣಗಳನ್ನು ನಾಶಪಡಿಸಿ. ಇದು ಕರಿಯರ್ ಯಶಸ್ಸಿಗೆ, ಉತ್ತಮ ನಾಯಕತ್ವ ಹೊಂದಲು ನೆರವಾಗುತ್ತದೆ.

Leave a Reply

Your email address will not be published. Required fields are marked *