Category Archives: Recipe

ಬೆಸ್ಟ್ ರೆಸಿಪಿ: ಗರಿಗರಿಯಾಗಿ ಮಾಡಿ ಅವಲಕ್ಕಿ ಚೂಡಾ

By | 22/08/2018

ಮಳೆ ಧೋ ಎಂದು ಸುರಿಯುತ್ತಿರುತ್ತದೆ, ಇಲ್ಲವೇ, ತಣ್ಣಗಿನ ಗಾಳಿ ಬೀಸುತ್ತಿರುತ್ತದೆ. ಈ ಸಮಯದಲ್ಲಿಯೇ ಬಾಯಾಡಿಸುವ ಚಪಲ ಉಂಟಾಗುತ್ತದೆ. ಅಂಗಡಿಯಿಂದ ಚಿಪ್ಸ್, ಮುರುಕು ಏನಾದರೂ ತಂದು ತಿನ್ನೋಣವೆಂದರೆ ಆರೋಗ್ಯ ಕೆಡುವ ಭಯ. ಹೇಗೆ ಮಾಡಿರುತ್ತಾರೋ, ಯಾವ ಎಣ್ಣೆಯಲ್ಲಿ ಮಾಡಿರುತ್ತಾರೋ ಎಂಬ  ಆತಂಕ. ಹಾಗಾಗಿ ಮನೆಯಲ್ಲಿಯೇ ಕಡಿಮೆ ಸಮಯದಲ್ಲಿ ತಯಾರಿಸಿ ಸಾಕಷ್ಟು ದಿನ ಇಟ್ಟುಕೊಳ್ಳುವಂತಹ ತಿಂಡಿಯಲ್ಲಿ ಅವಲಕ್ಕಿ ಚೂಡಾವೋ ಒಂದು. ಎಷ್ಟೇ ಬಗೆಯ ತಿಂಡಿಗಳಿದ್ದರೂ, ಅವಲಕ್ಕಿ ಚೂಡಾವೆಂದರೆ ಎಲ್ಲರ ಬಾಯಲ್ಲೂ ನೀರಾಡುತ್ತದೆ. ಚಹಾದ ಜೊತೆಗೆ ಅವಲಕ್ಕಿಯ ಚೂಡವಿದ್ದರೆ ಅದರ ಸ್ವಾದ ಸವಿದವನಿಗೆ ಗೊತ್ತು. ಇದನ್ನು… Read More »

ಸಿಹಿ ಪ್ರಿಯರಿಗೆ ಸವಿಯಾದ ಸೌದಿ ಅರೇಬಿಯಾ ಡೆಸಾರ್ಟ್ ರೆಸಿಪಿ

By | 22/08/2018

ಸಿಹಿ ತಿನಿಸು ಎಂದರೆ, ಯಾರಿಗೆ ಪ್ರಿಯವಲ್ಲ ಹೇಳಿ. ಕೆಲವರಿಗೆ  ಊಟವಾದ ನಂತರ ಏನಾದರೂ ಸಿಹಿ ತಿನ್ನಬೇಕು ಎಂಬ ಬಯಕೆ ಇರುತ್ತದೆ. ಇನ್ನು ಕೆಲವರಿಗೆ ಖಾರದ ಜತೆ ಏನಾದರೂ ಸಿಹಿ ಬೇಕೆ ಬೇಕು. ಅದರಲ್ಲೂ ಹಬ್ಬ ಹರಿದಿನಗಳ ದಿನದಲ್ಲಿ  ಅಥವಾ ಮಕ್ಕಳ ಹುಟ್ಟುಹಬ್ಬದ ದಿನದಲ್ಲಿ ತಾಯಂದಿರೂ ಏನಾದರು ಒಂದು ಸಿಹಿ ಖಾದ್ಯ ಮಾಡಬೇಕು ಅದರಲ್ಲೂ ಈಗಿನ ಮಕ್ಕಳ ಬಾಯಿ ರುಚಿಗಾಗಿ ವಿಭಿನ್ನವಾದದ್ದನ್ನು ಮಾಡಬೇಕು ಎಂಬ ಹಂಬಲ ತಾಯಂದಿರದ್ದಾಗಿರುತ್ತದೆ. ಹಾಗಾಗಿ ಸಮಯ ಸಿಕ್ಕಾಗ ನೀವು ಈ ರುಚಿಕರವಾದ ಸೌದಿ ಅರೇಬಿಯಾ ಡೆಸಾರ್ಟ್ ಅನ್ನು ಮಾಡಬಹುದು.… Read More »

ಪಟಾಫಟ್ ಮಾಡಿ, ಬಾಯಲ್ಲಿ ನೀರೂರಿಸುವ ಹುಣಸೆ ತೊಕ್ಕು

By | 20/08/2018

ಹುಣಸೆ ಹಣ್ಣಿನಿಂದ ಏನೇ ಅಡುಗೆ ಮಾಡಿದರೂ ಹುಳಿಹುಳಿಯಾಗಿಸವಿಸವಿಯಾಗಿ ಇರುತ್ತದೆ. ಕರ್ನಾಟಕದಲ್ಲಿ ಬಹುತೇಕರು ಹುಣಸೆ ಹಣ್ಣಿನ ತೊಕ್ಕು ಮಾಡುತ್ತಾರೆ. ಇದು ಅತ್ಯಂತ ಸರಳವಾಗಿ ಮಾಡಬಹುದಾದ ಅಡುಗೆ. ಹುಣಸೆ ತೊಕ್ಕು ಮಾಡಲು ಏನೇನು ಬೇಕು? ಮೊದಲಿಗೆ ಯಾವೆಲ್ಲ ಪದಾರ್ಥಗಳು ಬೇಕು ಎಂದು ನೋಡೋಣ. ಇದಕ್ಕೆ ಬೇಕಾಗುವ ಸಾಮಾಗ್ರಿಗಳು ಅತ್ಯಲ್ಪ. ಮೊದಲಿಗೆ ಕೊಂಚ ಹುಣಸೆಕಾಯಿ ತೆಗೆದುಕೊಳ್ಳಿ. ಹಸಿಮೆನಸಿನ ಕಾಯಿ ನಾಲ್ಕೈದು ಇರಲಿ. ಕೊಂಚ ಅರಸಿಣಪುಡಿ, ಚಿಟಿಕೆ ಇಂಗು ಸಿದ್ಧವಾಗಿಟ್ಟುಕೊಳ್ಳಿ. ಉಪ್ಪು ರುಚಿಗೆ ತಕ್ಕಷ್ಟು. ಮೊದಲು ಸ್ವಲ್ಪ ಉಪ್ಪು ಹಾಕಿ. ರುಚಿ ನೋಡಿಕೊಂಡು ಮತ್ತೆ ಉಪ್ಪು ಹಾಕಬಹುದು.… Read More »

ಕರ್ನಾಟಕ ಬೆಸ್ಟ್ ರೆಸಿಪಿ: ಶಾವಿಗೆ ಪಾಯಸ ಮಾಡುವ ವಿಧಾನ

By | 08/06/2018

ಒಮ್ಮೊಮ್ಮೆ ಪಾಯಸ ತಿನ್ನಬೇಕೆನಿಸುತ್ತದೆ. ಪಟಾಪಟ್ ಮಾಡಬಹುದಾದ ಪಾಯಸಗಳು ಯಾವುದಿದೆ ಎಂದು ಹುಡುಕಿದರೆ ತಕ್ಷಣ ನೆನಪಿಗೆ ಬರುವುದು ಶಾವಿಗೆ ಪಾಯಸ. ಇದಕ್ಕಿಂತ ಸುಲಭವಾಗಿ ಮಾಡಬಹುದಾದ ಪಾಯಸ ಇನ್ನೊಂದಿಲ್ಲ. ಪಟಾಪಟ್ ಹೇಳಬೇಕೆಂದರೆ: ಹಾಲು ಮತ್ತು ನೀರು ಬಿಸಿ ಮಾಡುವುದು. ಶಾವಿಗೆ ಹುರಿಯುವುದು. ತುಪ್ಪದಲ್ಲಿ ಗೋಡಂಬಿ ಮತ್ತು ದ್ರಾಕ್ಷಿ ಹುರಿಯೋದು. ಬಿಸಿ ಹಾಲಿಗೆ ಶಾವಿಗೆ ಹಾಕುವುದು. ಸಕ್ಕರೆ ಹಾಕುವುದು. ಹುರಿದ ಗೋಡಂಬಿ ಹಾಕುವುದು. ಸ್ವಲ್ಪ ಹೊತ್ತು ಸ್ಟವ್ ಮೇಲೆ ಬಿಸಿ ಮಾಡುವುದು. ಪಾಯಸ ರೆಡಿ! ವಿವರವಾಗಿ ಹೇಳಬೇಕೆ? ಬೇಕಾಗುವ ಸಾಮಾಗ್ರಿಗಳು 1 ಕಪ್ ಶಾವಿಗೆ 4-5… Read More »

ರೆಸಿಪಿ: ಮಂಗಳೂರು ಬನ್ಸ್ ತಯಾರಿಸುವುದು ಹೇಗೆ?

By | 25/05/2018

ರಶ್ಮಿ ಪ್ರವೀಣ್ ಕರಾವಳಿಗರಿಗೆ ಬನ್ಸ್ ಅಂದ್ರೆ ಇಷ್ಟ. ಕರಾವಳಿ ಬಿಟ್ಟು ಪರ ಊರಿಗೆ ಹೋದವರಿಗೆ ಬೆಂಗಳೂರಿನಂತಹ ನಗರಗಳಲ್ಲಿ ಬನ್ಸ್ ಕಂಡರಂತೂ ಬಾಯಲ್ಲಿ ನೀರೂರುವುದು ಸಹಜ. ಆದರೆ, ಬೆಂಗಳೂರಿನಂತಹ ನಗರಗಳಲ್ಲಿ ಮಾಡುವ ಬನ್ಸ್ ಗೂ ಮಂಗಳೂರಿನಲ್ಲಿ ಮಾಡುವ ಬನ್ಸ್ ಗೂ ರುಚಿಯಲ್ಲಿ ಅಜಗಜಾಂತರ ವ್ಯತ್ಯಾಸ ಇರುತ್ತದೆ.  ಮಂಗಳೂರು ಬನ್ಸ್ ಮಾಡುವುದು ಬಲು ಸುಲಭ. ನೀವೂ ಟ್ರೈ ಮಾಡಬಹುದು. ಬನ್ಸ್ ಮಾಡುವ ವಿಧಾನಬೇಕಾಗುವ ಸಾಮಾಗ್ರಿಗಳುಮೈದಾ ಹಿಟ್ಟು 4 ಕಪ್  ಬಾಳೆಹಣ್ಣು 2 ಅಥವಾ 3 (ಚೆನ್ನಾಗಿ ಹಣ್ಣಾಗಿರಲಿ)  ಸಕ್ಕರೆ ಅರ್ಧ ಕಪ್ (ಸಿಹಿ ಹೆಚ್ಚು ಬೇಕಿದ್ದರೆ… Read More »