ಕರ್ನಾಟಕ ಬೆಸ್ಟ್ ರೆಸಿಪಿ: ಶಾವಿಗೆ ಪಾಯಸ ಮಾಡುವ ವಿಧಾನ

Bisibele bath recipe kannada

ಒಮ್ಮೊಮ್ಮೆ ಪಾಯಸ ತಿನ್ನಬೇಕೆನಿಸುತ್ತದೆ. ಪಟಾಪಟ್ ಮಾಡಬಹುದಾದ ಪಾಯಸಗಳು ಯಾವುದಿದೆ ಎಂದು ಹುಡುಕಿದರೆ ತಕ್ಷಣ ನೆನಪಿಗೆ ಬರುವುದು ಶಾವಿಗೆ ಪಾಯಸ. ಇದಕ್ಕಿಂತ ಸುಲಭವಾಗಿ ಮಾಡಬಹುದಾದ ಪಾಯಸ ಇನ್ನೊಂದಿಲ್ಲ.

ಪಟಾಪಟ್ ಹೇಳಬೇಕೆಂದರೆ: ಹಾಲು ಮತ್ತು ನೀರು ಬಿಸಿ ಮಾಡುವುದು. ಶಾವಿಗೆ ಹುರಿಯುವುದು. ತುಪ್ಪದಲ್ಲಿ ಗೋಡಂಬಿ ಮತ್ತು ದ್ರಾಕ್ಷಿ ಹುರಿಯೋದು. ಬಿಸಿ ಹಾಲಿಗೆ ಶಾವಿಗೆ ಹಾಕುವುದು. ಸಕ್ಕರೆ ಹಾಕುವುದು. ಹುರಿದ ಗೋಡಂಬಿ ಹಾಕುವುದು. ಸ್ವಲ್ಪ ಹೊತ್ತು ಸ್ಟವ್ ಮೇಲೆ ಬಿಸಿ ಮಾಡುವುದು. ಪಾಯಸ ರೆಡಿ!

ವಿವರವಾಗಿ ಹೇಳಬೇಕೆ?

ಬೇಕಾಗುವ ಸಾಮಾಗ್ರಿಗಳು

 1. 1 ಕಪ್ ಶಾವಿಗೆ
 2. 4-5 ಕಪ್ ಹಾಲು
 3. 2 ಕಪ್ ನೀರು (ಪಾಯಸ ಗಟ್ಟಿಯಾಗಬೇಕಾದರೆ ಇನ್ನೆರಡು ಕಪ್ ಹಾಲು ಹಾಕಬಹುದು)
 4. 1 ಕಪ್ ಸಕ್ಕರೆ
 5. ಎರಡು ಟೀ ಸ್ಪೋನ್ ತುಪ್ಪ
 6. 10-12 ಗೋಡಂಬಿ
 7. 10-20 ಒಣದ್ರಾಕ್ಷಿ
 8. ಒಂದೆರಡು ಚಿಟಕಿ ಏಲಕ್ಕಿ ಪುಡಿ

ಮಾಡುವುದು ಹೇಗೆ?

 1. ಮೊದಲಿಗೆ ನೀರು ಮತ್ತು ಹಾಲನ್ನು ಒಂದು ಪಾತ್ರೆಯಲ್ಲಿ ಕುದಿಯಲು ಇಡಿ
 2. ಒಂದು ಬಾಣಲೆಯಲ್ಲಿ ತುಪ್ಪ ಹಾಕಿ, ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದು ತೆಗೆದಿಡಿ.
 3. ನಂತರ ಆ ಬಾಣಲೆಗೆ ಶಾವಿಗೆ ಹಾಕಿ ಕೆಂಬಣ್ಣಕ್ಕೆ ಬರುವಂತೆ ಹುರಿಯಿರಿ.
 4. ಹಾಲು ಬಿಸಿಯಾಗಿದ್ದರೆ ಉರಿ ಕೊಂಚ ತಗ್ಗಿಸಿ. ಅದಕ್ಕೆ ಶಾವಿಗೆ ಹಾಕಿರಿ.
 5. ಶಾವಿಗೆ ಬೇಯ್ದನಂತರ ಸಕ್ಕರೆ ಹಾಕಿ.
 6. ಏಲಕ್ಕಿ ಹಾಕಿ
 7. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ, ಒಣದ್ರಾಕ್ಷಿ ಸೇರಿಸಿ. ಕೆಲವು ಸೆಕೆಂಡ್ ಬೇಯ್ದ ನಂತರ ಸ್ಟವ್ ಆಫ್ ಮಾಡಿ.

ಪಾಯಸದ ಪರಿಮಳ ಮನೆ ತುಂಬಾ ತುಂಬಿಕೊಂಡಿದೆಯಲ್ವಾ? ಬಿಸಿಬಿಸಿಯಾಗಿ ಸೇವಿಸಿ. ತಣ್ಣಗಾದ ನಂತರವೂ ಸೇವಿಸಬಹುದು!