Category Archives: Articles

ಸಂತೋಷದ ಬದುಕಿಗೆ ಲಿವಿಂಗ್ ಕೊಠಡಿಯ ವಾಸ್ತು ಹೇಗಿರಬೇಕು?

By | 27/07/2021

ನಿಮ್ಮ ಮನೆಯಲ್ಲಿಸುಖ ಶಾಂತಿ ನೆಲೆಸಬೇಕಿದ್ದರೆ ಮನೆಯ ಸಂಪೂರ್ಣ ವಾಸ್ತು ಅತ್ಯುತ್ತಮವಾಗಿರಬೇಕು. ಅದರಲ್ಲಿಯೂ ಮನೆಯ ಲೀವಿಂಗ್‌ ರೂಂ ವಾಸ್ತು ಸರಿಯಾಗಿರಬೇಕು. ಲೀವಿಂಗ್‌ ರೂಂ ಹೇಗಿರಬೇಕು? ಯಾವ ದಿಕ್ಕಿನಲ್ಲಿರಬೇಕು? ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ವಾಸ್ತುಶಾಸ್ತ್ರದಲ್ಲಿಒಂದಿಷ್ಟು ನೀತಿನಿಯಮಗಳು ಇವೆ. ಈ ರೀತಿಯಿದ್ದರೆ ಮನೆಯಲ್ಲಿಸುಖ, ಶಾಂತಿ, ನೆಮ್ಮದಿ, ಸಂಪತ್ತು, ಆರೋಗ್ಯ ಇತ್ಯಾದಿಗಳು ಉತ್ತಮವಾಗಿರುತ್ತವೆಯೆಂದು ವಾಸ್ತು ತಜ್ಞರುಗಳು ಹೇಳುತ್ತಾರೆ.

ಹಲೋ, ಕಾಲ್ ಸೆಂಟರ್ ಜಾಬ್ ಬೇಕೆ? ಇದನ್ನೊಮ್ಮೆ ಓದಿ

By | 26/07/2021

ಡಿಗ್ರಿ ಮುಗಿಸಿದ ಬಳಿಕ ಬಹುತೇಕ ತರುಣ-ತರುಣಿಯರಿಗೆ ಕಾಲ್‌ ಸೆಂಟರ್‌ ಅಚ್ಚುಮೆಚ್ಚಿನ ಉದ್ಯೋಗ ಕ್ಷೇತ್ರ. ಕಾಲ್‌ ಸೆಂಟರ್‌ ಎಂದಾಕ್ಷಣ ಕಿವಿಗೆ ಹೆಡ್‌ಫೋನ್‌ ಧರಿಸಿ, ಕಂಪ್ಯೂಟರ್‌ ಮುಂದೆ ಕುಳಿತ ಚಂದದ ಹುಡುಗಿ ಅಥವಾ ಹುಡುಗ ನೆನಪಿಗೆ ಬರಬಹುದು. ಆದರೆ, ಕಾಲ್‌ ಸೆಂಟರ್‌ ಉದ್ಯೋಗ ಎಂದರೆ ಇಷ್ಟೇ ಅಲ್ಲ. ಬಿಪಿಒ ಕ್ಷೇತ್ರವು ಜಗತ್ತಿನ ಪ್ರಮುಖ ಉದ್ಯೋಗ ಕ್ಷೇತ್ರವಾಗಿದ್ದು, ಇಲ್ಲಿವೈವಿಧ್ಯಮಯ ಉದ್ಯೋಗಗಳಿವೆ. ಕಾಲ್‌ ಸೆಂಟರ್‌ಗಳೆಂದರೇನು? ಇದು ಗ್ರಾಹಕ ಸೇವೆ, ಮಾರಾಟ ಮತ್ತು ಸಂಶೋಧನೆ ವಿಭಾಗದ ಅಗತ್ಯ ವಿಭಾಗವಾಗಿದೆ. ಮುಖ್ಯವಾಗಿ ದೂರವಾಣಿ ಮೂಲಕ ಗ್ರಾಹಕರೊಂದಿಗೆ, ಕ್ಲಯೆಂಟ್‌ಗಳೊಂದಿಗೆ ಸಂವಹನ ನಡೆಸುವ… Read More »

ಹೊಸ ಉದ್ಯೋಗ ಆಯ್ಕೆ ಮಾಡುವ ಮುನ್ನ ಈ ಅಂಶಗಳನ್ನು ಗಮನದಲ್ಲಿಡಿ

By | 26/07/2021

ಹೊಸ ಉದ್ಯೋಗ ಹುಡುಕುವುದು ಕಠಿಣ. ಆದರೆ, ದೊರಕಿರುವ ಉದ್ಯೋಗ ಉತ್ತಮವೇ ಅಥವಾ ಉತ್ತಮವಾಗಿಲ್ಲವೇ ಎಂದು ನಿರ್ಧರಿಸುವುದು ಇನ್ನಷ್ಟು ಕಷ್ಟದ ವಿಷಯ. ಹೊಸ ಉದ್ಯೋಗದ ಆಫರ್‌ ಬಂದಾಗ ಈ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿರಿ. * ಜವಾಬ್ದಾರಿ: ಹೊಸ ಕಂಪನಿಯು ನಿಮಗೆ ನೀಡಿರುವ ಹುದ್ದೆ ಮತ್ತು ಜವಾಬ್ದಾರಿಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಜೊತೆಗೆ, ಆ ಜವಾಬ್ದಾರಿ ಹೊರಲು ನೀವು ಸೂಕ್ತವಾಗಿದ್ದೀರಾ ಎಂದು ನಿರ್ಧರಿಸಿಕೊಳ್ಳಿರಿ. * ಕಂಪನಿಯ ಹಣಕಾಸು ಆರೋಗ್ಯ: ಹಣಕಾಸು ಪರಿಸ್ಥಿತಿ ಉತ್ತಮವಾಗಿಲ್ಲದ ಕಂಪನಿಗೆ ಉದ್ಯೋಗಕ್ಕೆ ಸೇರಿದರೆ ನಿಮ್ಮ ಕರಿಯರ್‌ಗೆ ಕೆಟ್ಟದಾಗಬಹುದು. ಹೀಗಾಗಿ, ಉದ್ಯೋಗಕ್ಕೆ… Read More »

ಆಫೀಸ್ ಹಂಗಿಲ್ಲದ ಬೊಂಬಾಟ್ ಜಾಬ್ಸ್, ಈ ಉದ್ಯೋಗಕ್ಕೆ ನೀವು ಪ್ರಯತ್ನಿಸಿರಿ

By | 26/07/2021

ಬಹುತೇಕರಿಗೆ ಏಸಿ ಕೊಠಡಿಯ ಆಫೀಸ್‌ ಡ್ಯೂಟಿ ಇಷ್ಟ. ಇನ್ನು ಕೆಲವರಿಗೆ ಒಂದೇ ಕಡೆ ನಾಲ್ಕು ಗೋಡೆಯ ನಡುವೆ ಕುಳಿತು ಕೆಲಸ ಮಾಡಲು ಇಷ್ಟವಿರುವುದಿಲ್ಲ. ಆಫೀಸ್‌ನಲ್ಲಿಕುಳಿತು ಕ್ಯಾಲೊರಿ ಕರಗದೆ ಬೊಜ್ಜು ಬೆಳೆಸಲು ಬಯಸದವರು ಆಫೀಸ್‌ ಹಂಗಿಲ್ಲದ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವಿಮಾನ ಪೈಲೆಟ್‌ ಇವರಿಗೆ ಬಹುತೇಕ ಸಮಯ ವಿಮಾನದ ಕಾಕ್‌ಪಿಟ್ಟೇ ಆಫೀಸ್‌. ಆಕಾಶವೇ ಆಫೀಸ್‌ ಕಾರಿಡಾರ್‌. ಏರ್‌ಲೈನ್‌ ಮತ್ತು ಕಮರ್ಷಿಯಲ್‌ ವಿಮಾನಗಳು, ಹೆಲಿಕಾಪ್ಟರ್‌ಗಳು, ಕಾರ್ಗೊ ವಿಮಾನ ಇತ್ಯಾದಿಗಳನ್ನು ಚಲಾಯಿಸುವ ಪೈಲೆಟ್‌ಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ವೇತನವೂ ಬೊಂಬಾಟಾಗಿದೆ. 2020ರ ವೇಳೆಗೆ ಭಾರತವು ಜಗತ್ತಿನ 3ನೇ… Read More »

ನೀವು ಕಾರು ಪ್ರಿಯರೇ? ನಿಮಗೆ ಸೂಕ್ತವಾದ ಹತ್ತು ಉದ್ಯೋಗಗಳು ಇಲ್ಲಿವೆ!

By | 07/07/2021

ಬಹುತೇಕರಿಗೆ ವಾಹನವೆಂದರೆ ಅಚ್ಚುಮೆಚ್ಚು. ಜಗತ್ತಿನಲ್ಲಿಂದು ವಾಹನ ಬಳಸುವವರು ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಾಣುತ್ತಿರುವುದರಿಂದ ಈ ಕ್ಷೇತ್ರದಲ್ಲಿಉದ್ಯೋಗಾವಕಾಶವೂ ಹೆಚ್ಚಾಗುತ್ತಿದೆ. ವಾಹನ ಇಷ್ಟಪಡುವವರಿಗೆ ವಿವಿಧ ಬಗೆಯ ಉದ್ಯೋಗಗಳೂ ಇಂದು ಲಭ್ಯ ಇವೆ. ಅಂದರೆ, ಸೈಕಲ್‌ ಪಂಕ್ಚರ್‌ ಹಾಕುವವರಿಂದ ಲಂಬೋರ್ಗಿನಿ, ಫೆರಾರಿ ಕಾರು ಮೆಕ್ಯಾನಿಕ್‌ವರೆಗೆ ವಿವಿಧ ಬಗೆಯ ಉದ್ಯೋಗಗಳು ಕಾಣಸಿಗುತ್ತವೆ.  ಆಟೋಮೋಟಿವ್‌ ವಿಭಾಗದ ಕೆಲವು ಉದ್ಯೋಗಗಳ ಮಾಹಿತಿ ಇಲ್ಲಿದೆ. ಆಟೋಮೊಬೈಲ್‌ ವಿನ್ಯಾಸಕರು: ನಿಮ್ಮ ಕನಸಿನ ಕಾರನ್ನು ವಿವಿಧ ರಚನೆಗಳ ಮೂಲಕ ವಿನ್ಯಾಸ ಮಾಡುವ ಕೆಲಸ ಮಾಡಬಹುದು. ಈ ಉದ್ಯೋಗದಲ್ಲಿನಿಜವಾದ ಕಾರಿನ ಜೊತೆಗೆ ಕೆಲಸಕ್ಕಿಂತ ಕಾಗದ, ಡ್ರಾಯಿಂಗ್‌… Read More »

ಕರಿಯರ್ ಪ್ಲ್ಯಾನಿಂಗ್ ಹೇಗೆ? ಯಶಸ್ಸು ಪಡೆಯಲು ಬಯಸುವವರಿಗೆ ಅಮೂಲ್ಯ ಟಿಪ್ಸ್

By | 06/07/2021

ಕರಿಯರ್‌ ಯೋಜನೆ ಮಾಡುವುದು ಕೊಂಚ ಕಷ್ಟದ ಕೆಲಸ. ಹೀಗಾಗಿ, ಬಹುತೇಕರು ಇದನ್ನು ಮಾಡಲು ಹೋಗುವುದಿಲ್ಲ. ಇದರಿಂದಾಗಿ ಹೆಚ್ಚಿನವರ ಕರಿಯರ್‌ ಬದುಕು ಗಾಳಿಬಂದ ಕಡೆ ಸಾಗುವ ಗಾಳಿಪಟದಂತಾಗುತ್ತದೆ. ಕರಿಯರ್‌ ಪ್ಲ್ಯಾನಿಂಗ್‌ ಎಂದರೇನು? ವ್ಯಕ್ತಿಯೊಬ್ಬರ ವೃತ್ತಿಪರ ಗುರಿಗಳನ್ನು ನಿಗದಿಪಡಿಸುವ ಮತ್ತು ಅವುಗಳನ್ನು ಸಾಧಿಸಲು ದಾರಿ ಹುಡುಕುವ ನಿರಂತರ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಸ್ವಯಂ ಮೌಲ್ಯಮಾಪನ, ಮಾರುಕಟ್ಟೆ ಅಧ್ಯಯನ ಮತ್ತು ನಿರಂತರ ಕಲಿಕೆ ಅತ್ಯಂತ ಅವಶ್ಯ. ನಿಮ್ಮ ಕರಿಯರ್‌ ಅನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲು ಇದು ಅಗತ್ಯವಾಗಿದೆ. ಪ್ರಯೋಜನಗಳು ಈ ಮುಂದಿನ ವಿಧಾನಗಳನ್ನು ಅನುಸರಿಸಿ. *ನಿಮ್ಮ ಗುರಿಗಳನ್ನು… Read More »