Category Archives: Articles

ಇಸ್ರೊದಲ್ಲಿ ಉದ್ಯೋಗ ಪಡೆಯಬೇಕೆ? ಐಸ್ಯಾಟ್ (ಐಎಸ್‍ಎಟಿ) ಕುರಿತು ಇಲ್ಲಿದೆ ವಿವರ

By | 20/08/2021

ಶ್ರೀಮಂತರು ಮಾತ್ರವಲ್ಲದೆ ಬಡವರೂ ಇಸ್ರೊ ಸೇರುವ ಕನಸು ರೂಪಿಸಿಕೊಳ್ಳಬಹುದು. ಇಸ್ರೊ ಸೇರುವ ಕನಸಿರುವವರು ಎಸ್‍ಎಸ್‍ಎಲ್‍ಸಿಯಲ್ಲಿ ಅತ್ಯುತ್ತಮ ಅಂಕ ಪಡೆಯಿರಿ. ನಂತರ ನಮ್ಮ ಶಕ್ತಿ ಅನುಸಾರ ಸರಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಪಿಯುಸಿಗೆ ಸೇರಿರಿ. ನೆನಪಿಡಿ: ಪಿಯುಸಿಯಲ್ಲಿ ವಿಜ್ಞಾನವನ್ನು (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ಆಯ್ಕೆ ಮಾಡಿಕೊಳ್ಳಬೇಕು. ಸಿಬಿಎಸ್‍ಇ ಪಠ್ಯಕ್ರಮ ಓದಿದರೆ ಇನ್ನೂ ಉತ್ತಮ. ಪಿಯುಸಿ ಸಮಯದಲ್ಲಿ ಜೆಇಇ ಮೇನ್ಸ್ ಮತ್ತು ಅಡ್ವಾನ್ಸಡ್ ಪರೀಕ್ಷೆ ಬರೆಯಬೇಕು. ಅಡ್ವಾನ್ಸಡ್‍ನಲ್ಲಿ ಸಾಧ್ಯವಿರುವಷ್ಟು ಅತ್ಯುತ್ತಮ ರ್ಯಾಂಕ್ ಪಡೆಯಬೇಕು. ಪಿಯುಸಿಯಲ್ಲಿ ಶೇಕಡ 75ಕ್ಕಿಂತ ಹೆಚ್ಚು ಅಂಕ ಪಡೆಯಬೇಕು. ಭಾರತದ… Read More »

ಹೋಟೆಲ್ ಮ್ಯಾನೇಜ್ಮೆಂಟ್ ಕಲಿಯಬೇಕೆನ್ನುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾರ್ಗದರ್ಶಿ

By | 15/08/2021

ಎಸ್‌ಎಸ್‌ಎಲ್‌ಸಿ ಬಳಿಕ ಮುಂದೆ ಏನು ಓದಬೇಕು? ಪಿಯುಸಿ ಆಯಿತು ಮುಂದೆ ಯಾವ ಕೋರ್ಸ್‌ ಕಲಿಯಬೇಕು ಎಂದು ಆಲೋಚಿಸುತ್ತಿರುವ ವಿದ್ಯಾರ್ಥಿ ಸಮುದಾಯಕ್ಕೆ ಸುದ್ದಿಜಾಲ.ಕಾಂ ಮೂಲಕ ಕರಿಯರ್‌ ಮಾರ್ಗದರ್ಶಿ ಲೇಖನಗಳನ್ನು ನೀಡಲಾಗುತ್ತದೆ. ಇಂದಿನ ಸಂಚಿಕೆಯಲ್ಲಿ ಹೋಟೇಲ್‌ ಮ್ಯಾನೇಜ್ಮೆಂಟ್‌ ಕೋರ್ಸ್‌ ಕುರಿತು ಸಂಪೂರ್ಣ ವಿವರ ಪಡೆಯೋಣ ಬನ್ನಿ. ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಲೆಲ್ಲ ಇಂದು ಹೋಟೆಲ್ ಉದ್ಯಮವು ಅತ್ಯಂತ ಜನಪ್ರಿಯ ಕರಿಯರ್ ಕ್ಷೇತ್ರ. ಮೊದಲೆಲ್ಲ ಹೋಟೆಲ್ ಉದ್ಯೋಗವೆಂದರೆ ತಾತ್ಸರದಿಂದ ಜನರು ನೋಡುತ್ತಿದ್ದರು. ಆದರೆ, ಈಗ ಹೋಟೆಲ್ ಕ್ಷೇತ್ರದ ಅಗಾಧ ಅವಕಾಶ ನೋಡಿ ಅದಕ್ಕೆ ಸಂಬಂಧಪಟ್ಟ ಕೋರ್ಸ್‍ಗಳನ್ನು ಕಲಿಯಲು… Read More »

ಬಲ್ಲಿರೇನಯ್ಯ..ಮಟ್ಟುಗುಳ್ಳದ ರುಚಿಯಾ

By | 14/08/2021

| ‌ಲತಾ  ಸಂತೋಷ ಶೆಟ್ಟಿ  ಮುದ್ದುಮನೆ ‌ಜಿಯೊಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ನೊಂದಾಯಿತ.  ಅಧಿಕೃತ ವಾಗಿ 2011 ರಲ್ಲಿ ಭೌಗೋಳಿಕ ಮಾನ್ಯತೆ ( ಜಿ ಐ) ಪಡೆದ ವಿಶಿಷ್ಟ ಬದನೆ “ಮಟ್ಟುಗುಳ್ಳ ” ಪ್ರಮುಖವಾಗಿ ಉಡುಪಿ ಜಿಲ್ಲೆಯ ಮಟ್ಟು ಎಂಬ ಊರಿನ ಮರಳು‌ಮಿಶ್ರಿತ ಕಂದು‌ಮಣ್ಣಿನಲ್ಲಿ ಬೆಳೆಯುವ  ಈ‌ ಗುಳ್ಳಕ್ಕೆ ಮಟ್ಟು ಗ್ರಾಮದ ‌ಬೆಳೆಗಾರರ‌ ಸಂಘದಲ್ಲಿ ‌ಲಾಂಛನ (ಸ್ಟಿಕರ್) ಅಂಟಿಸಿ‌ ಮಾರುಕಟ್ಟೆಗೆ  ಸರಭರಾಜು ಮಾಡಲಾಗುತ್ತದೆ. ಇದರ  ಮಾರಾಟಕ್ಕೆ ಬ್ರಾಂಡ್ ನೇಮ್ ನೊಂದಣಿ ಯಾಗಿದ್ದು  1 ,2 ,5, 10 ಕೆ.ಜಿ ಬ್ಯಾಗ್  ಜಿ ಐ… Read More »

ವಾಸ್ತು ಸಲಹೆ: ನಿಮ್ಮ ಮನೆಯ ಮೆಟ್ಟಿಲನ್ನು ವಾಸ್ತು ಪ್ರಕಾರ ಕಟ್ಟಲಾಗಿದೆಯೇ?

By | 09/08/2021

ಸುದ್ದಿಜಾಲ.ಕಾಂನ ವಾಸ್ತುಸಲಹೆ ವಿಭಾಗದಲ್ಲಿ ಈಗಾಗಲೇ ಕೆಲವು ವಾಸ್ತು ಸಲಹೆ ನೀಡಲಾಗಿದ್ದು, ಇಂದು ಮನೆಯ ಮೆಟ್ಟಿಲಿನ ವಾಸ್ತು ಕುರಿತು ತಿಳಿದುಕೊಳ್ಳೋಣ. ಯಾವುದೇ ವಾಸ್ತು ಸಲಹೆ ಅನುಸರಿಸುವ ಮೊದಲು ವಾಸ್ತುತಜ್ಞರ ಅಭಿಪ್ರಾಯ ಕೇಳಲು ಮರೆಯಬೇಡಿ. ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರ ಸುಖಶಾಂತಿ, ನೆಮ್ಮದಿಯ ಬದುಕಿಗೆ ವಾಸ್ತುವಿನ ಕೊಡುಗೆ ಅಪರೂಪ. ಮನೆಯೊಂದರ ಪ್ರವೇಶದ್ವಾರ, ಕೊಠಡಿಗಳ ವಾಸ್ತುವಿನ ಬಗ್ಗೆ ಸಾಮಾನ್ಯವಾಗಿ ಗಮನ ನೀಡುತ್ತಾರೆ. ಆದರೆ, ಕೆಲವೊಮ್ಮೆ ಮನೆಯ ಮೆಟ್ಟಿಲನ್ನು ವಾಸ್ತು ಪ್ರಕಾರ ಕಟ್ಟಲು ಮರೆಯುತ್ತಾರೆ. ಮನೆಯ ಎಲ್ಲಾವಾಸ್ತು ಸಮಸ್ಯೆಗಳ ಮೂಲವೇ ಮೆಟ್ಟಿಲಿನಲ್ಲಿದೆ ಎನ್ನುವುದು ವಾಸ್ತು ತಜ್ಞರ ಅಭಿಪ್ರಾಯ. ಹೀಗಾಗಿ,… Read More »

ನಿಮ್ಮ ಜೊತೆ ನಿಮ್ಮ ಮನೆಗೂ ಮಾಡಿ ಗೃಹ ವಿಮೆ

By | 01/08/2021

ಸುದ್ದಿಜಾಲ ಹಿಂದಿನ ಲೇಖನದಲ್ಲಿ ಗೃಹಸಾಲದ ಮೇಲೆ ವಿಮೆ ಯಾಕೆ ಅಗತ್ಯವೆಂದು ತಿಳಿದುಕೊಂಡೆವು. ಈ ಲೇಖನದಲ್ಲಿ ಮನೆಗೆ ಯಾಕೆ ವಿಮೆ ಅಗತ್ಯ ಎಂಬ ಮಾಹಿತಿ ತಿಳಿದುಕೊಳ್ಳೋಣ.

ಹೋಮ್‌ ಲೋನ್‌ ಮೇಲೆ ವಿಮೆ ಯಾಕೆ ಅಗತ್ಯ?

By | 01/08/2021

ಕೋವಿಡ್-19 ಸಮಯದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಸವಾಲು, ಸಂಕಷ್ಟ. ಉದ್ಯೋಗವಿಲ್ಲದೆ, ವ್ಯವಹಾರವಿಲ್ಲದೆ ಇಎಂಐ ಕಟ್ಟಲಾಗದ ಪರಿಸ್ಥಿತಿ ಒಂದೆಡೆಯಾದರೆ, ಸಾಲ ಮಾಡಿದ ವ್ಯಕ್ತಿ ಗತಿಸಿಹೋದರೆ ಆಗುವ ಪರಿಣಾಮ ಇನ್ನೊಂದು ರೀತಿಯದು. ಗೃಹಸಾಲ ಪಡೆದವರು ಗತಿಸಿದರೆ ಸಂಗಾತಿಗೆ ಪ್ರೀತಿಪಾತ್ರರ ಅಗಲಿಕೆಯ ನೋವಿನ ಜೊತೆಗೆ ಅಗಲಿದವರ ಋಣಭಾರಕ್ಕೂ ಹೆಗಲು ನೀಡಬೇಕಾಗುತ್ತದೆ. ಗ ಬೆಂಗಳೂರಿನ ಎಕ್ಸ್ (ಉದ್ದೇಶಪೂರ್ವಕವಾಗಿ ಹೆಸರು ಉಲ್ಲೇಖಿಸಿಲ್ಲ) ಎಂಬ ವ್ಯಕ್ತಿಯು ಗೃಹಸಾಲ ತೆಗೆದುಕೊಂಡಿದ್ದರು. ಗೃಹಸಾಲ ಮಾಡಿ ಸುಮಾರು ಆರು ವರ್ಷಗಳಾಗಿದ್ದವು. ದೊಡ್ಡ ಮೊತ್ತದ ಡೌನ್‍ಪೇಮೆಂಟ್ ಮಾಡಿದ್ದರು. ಸಾಲ ಬೇಗ ಮುಗಿಸುವ ಉದ್ದೇಶದಿಂದ ದೊಡ್ಡ ಮೊತ್ತದ… Read More »