Category Archives: Articles

ವಾಸ್ತು ಪ್ರಕಾರ ಯಾವ ದಿಕ್ಕಿಗೆ ಮಲಗಬೇಕು? ನಿದ್ದೆಗೂ ಇದೆಯೇ ವಾಸ್ತು ನಿಯಮ?

By | 12/10/2021

ಹೊಸ ಮನೆಗೆ ಪ್ರವೇಶ ಮಾಡಿದ ಬಳಿಕ ಬೆಡ್‍ರೂಂನಲ್ಲಿ ಯಾವ ದಿಕ್ಕಿಗೆ ಬೆಡ್ ಜೋಡಿಸಬೇಕು? ಯಾವ ದಿಕ್ಕಿಗೆ ತಲೆಯಿಟ್ಟು ನಿದ್ದೆ ಮಾಡಬೇಕು? ಇತ್ಯಾದಿ ಗೊಂದಲಗಳು ಬಹುತೇಕರಲ್ಲಿ ಇರುತ್ತದೆ. ಸ್ಥಳಾವಕಾಶ ನೋಡಿಕೊಂಡು ಬೇಕಾಬಿಟ್ಟಿ ಬೆಡ್ ಜೋಡಿಸಿ ಮಲಗುವುದಕ್ಕಿಂತ ವಾಸ್ತುಪ್ರಕಾರ ಬೆಡ್ ಇಟ್ಟು, ಸರಿಯಾದ ದಿಕ್ಕಿಗೆ ತಲೆಯಿಟ್ಟು ಮಲಗುವುದು ಶ್ರೇಯಸ್ಕರ ಎಂದು ವಾಸ್ತುಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಳಗ್ಗೆ ಎದ್ದು ಉಲ್ಲಾಸದಿಂದ ದಿನವನ್ನು ಆರಂಭಿಸಬೇಕಾದರೆ ರಾತ್ರಿಯ ನಿದ್ದೆ ಚೆನ್ನಾಗಿರಬೇಕು. ರಾತ್ರಿ ನಿದ್ರಾ ಹೀನತೆಯಿಂದ ಬಳಲುವವರು ತಮ್ಮ ಆರೋಗ್ಯದ ಸಮಸ್ಯೆ, ತಮ್ಮ ಕೆಲಸ ಕಾರ್ಯಗಳ ರೀತಿಯ ಜೊತೆಗೆ ಮಲಗುವ ದಿಕ್ಕಿನ… Read More »

ನಾಡಿನೆಲ್ಲೆಡೆ ನಾಡಹಬ್ಬದ ಸಂಭ್ರಮ, ಮೈಸೂರು ದಸರಾದ ಇತಿಹಾಸ ಗೊತ್ತೆ? ಎಲ್ಲರೂ ತಿಳಿದಿರಬೇಕಾದ ಅಮೂಲ್ಯ ಮಾಹಿತಿ ಇಲ್ಲಿದೆ..

By | 07/10/2021

ವಿಜಯನಗರ ದೊರೆಗಳು 15ನೇ ಶತಮಾನದಲ್ಲಿ ದಸರಾ ಉತ್ಸವ ಆರಂಭಿಸಿದರು.  ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಶ್ರೀರಂಗಪಟ್ಟಣದಲ್ಲಿಮೈಸೂರು ಮೂಲದ ದೊರೆ ರಾಜ ಒಡೆಯರ್‌ ಮಹಾನವಮಿ ಉತ್ಸವವನ್ನು ಪುರುಜ್ಜೀವನಗೊಳಿಸಿದರು. ಶ್ರೀರಂಗಪಟ್ಟಣದಲ್ಲಿವಿಜಯನಗರದ ಪ್ರತಿನಿಧಿಯಾಗಿದ್ದ ಶ್ರೀರಂಗರಾಯನನ್ನು ನಿಗ್ರಹಿಸಿ, ಮೈಸೂರು ಸೀಮೆಯ ದೊರೆಯಾದ ರಾಜ ಒಡೆಯರ್‌ ತನ್ನ ಶಕ್ತಿ ಸಾಮರ್ಥ್ಯ‌ದಿಂದ ಭದ್ರಬುನಾದಿ ಹಾಕಿದನಲ್ಲದೆ 1610ರಿಂದ ಮಹಾನವಮಿ ಹಬ್ಬದ ಪರಂಪರೆಯನ್ನು  ಮುಂದುವರಿಸಿದರು. ವಿಜಯನಗರ ಕಾಲದಲ್ಲಿ ಕ್ರಿ.ಶ. 1336ರಿಂದ 1565ರವರೆಗೆ ವಿಜಯನಗರ ಹಿಂದೂ ಸಾಮ್ರಾಜ್ಯ ಭಾರತದ ಇತಿಹಾಸದಲ್ಲೊಂದು ಪ್ರಮುಖ ಘಟ್ಟ. ವಿಜಯನಗರದ ಅರಸರಿಗೆ ರಾಜ್ಯ ವಿಸ್ತರಣೆಯ ಜೊತೆಗೆ ಬಿಜಾಪುರದ ಆದಿಲ್‌ಷಾಹಿ ಮೊದಲಾದ… Read More »

ಲಾಫಿಂಗ್ ಬುದ್ಧನ ಮೂಲಕ ಮನೆ, ಆಫೀಸ್, ಬಿಸ್ನೆಸ್ ಸ್ಥಳಗಳಲ್ಲಿ ಸಮೃದ್ಧಿ, ಸಂತೋಷ ಹೆಚ್ಚಿಸಲು ಈ ಸಲಹೆಗಳನ್ನು ಪಾಲಿಸಿ

By | 13/09/2021

ಸುದ್ದಿಜಾಲ ಫೆಂಗ್‍ಶುಯಿ ವಾಸ್ತು ಸಲಹೆ ಬಹಳಷ್ಟು ಜನರು ತಮ್ಮ ಬದುಕಿನ ನೆಮ್ಮದಿ, ಸಂಪತ್ತು, ಸಮೃದ್ಧಿ ಹೆಚ್ಚಿಸಿಕೊಳ್ಳುವ ಸಲುವಾಗಿ ವಿವಿಧ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಇವುಗಳು ತಮ್ಮ ಅದೃಷ್ಟವನ್ನು ಹೆಚ್ಚಿಸಬಹುದು ಎನ್ನುವ ನಂಬಿಕೆ. ವಾಸ್ತುಶಾಸ್ತ್ರ ಅಥವಾ ಫೆಂಗ್‍ಶುಯಿ ಪ್ರಕಾರವೂ ಕೆಲವೊಂದು ವಸ್ತುಗಳಿಗೆ ವಿಶೇಷ ಮಹತ್ವವಿದೆ. ಅವುಗಳಲ್ಲಿ ಲಾಫಿಂಗ್ ಬುದ್ಧನಿಗೆ ವಿಶೇಷ ಸ್ಥಾನ. ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ನಗುವ ಬುದ್ಧನನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗುತ್ತದೆ. ಆಫೀಸ್, ಮನೆ, ಹೋಟೆಲ್, ರೆಸ್ಟೋರೆಂಟ್ ಮುಂತಾದ ಕಡೆ ಲಾಫಿಂಗ್ ಬುದ್ಧನ ಪುಟ್ಟ ಪ್ರತಿಮೆಯನ್ನು ಇಟ್ಟಿರುವುದನ್ನು… Read More »

ಈ 10 ಸಾಫ್ಟ್‌ ಸ್ಕಿಲ್ಸ್‌ ನಿಮ್ಮಲ್ಲಿದ್ದರೆ ನಿಮಗೆ ಉದ್ಯೋಗದ ಕುರಿತು ಭಯವೇ ಬೇಡ!

By | 12/09/2021

ಸುದ್ದಿಜಾಲ.ಕಾಂನ ವಿದ್ಯಾರ್ಥಿ ಓದುಗ ಬಳಗಕ್ಕೆ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪ್ರಗತಿ ಕಾಣಲು ಬಯಸುವ ಓದುಗ ಬಳಗಕ್ಕೆ ಕರಿಯರ್ ಮಾರ್ಗದರ್ಶಿ ಲೇಖನಗಳಲ್ಲಿ ಇಂದು ಬಹುಬೇಡಿಕೆಯ ಹತ್ತು ಸಾಫ್ಟ್ ಸ್ಕಿಲ್‌ಗಳ ಮಾಹಿತಿ ನೀಡಲಾಗಿದೆ. 2021 ಮತ್ತು 2022ರಲ್ಲಿ ಕರಿಯರ್‌ನಲ್ಲಿ ಪ್ರಗತಿ ಕಾಣಲು ನಿಮಗೆ ಈ ಕೌಶಲ್ಯಗಳು ಅಗತ್ಯವಾಗಿ ಬೇಕಿರುತ್ತದೆ. ಡಿಜಿಟಲ್‌ ಕಲಿಕಾ ತಾಣ ಉದೆಮಿ ಪಟ್ಟಿ ಮಾಡಿದ ಸಾಫ್ಟ್‌ಸ್ಲಿಲ್‌ ಇದಾಗಿದ್ದು, ಸುದ್ದಿಜಾಲ.ಕಾಂ ಈ ಕೌಶಲ್ಯಗಳ ಮಾಹಿತಿಯನ್ನು ವಿವರವಾಗಿ ಇಲ್ಲಿ ನೀಡಿದೆ. ಏನಿದು ಸಾಫ್ಟ್ ಸ್ಕಿಲ್? ಕೆಲಸ ಮಾಡುವ ಸ್ಥಳದಲ್ಲಿ ಮತ್ತು ವ್ಯವಹಾರ ಸಂಬಂತ ಸಂವಹನದ… Read More »

ಉದ್ಯೋಗದ ಆಫರ್‌ ಅಸಲಿಯೋ? ನಕಲಿಯೋ? ತಿಳಿಯುವುದು ಹೇಗೆ?

By | 12/09/2021

ಸುದ್ದಿಜಾಲ ಉದ್ಯೋಗ ಮಾರ್ಗದರ್ಶಿ ಉದ್ಯೋಗಾನ್ವೇಷಣೆಯಲ್ಲಿರುವವರಿಗೆ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಉದ್ಯೋಗ ಪಡೆಯಲು ಇಂಟರ್‍ನೆಟ್ ನೆರವಾಗಿದೆ. ವಿವಿಧ ಉದ್ಯೋಗ ತಾಣಗಳ ಮೂಲಕ ಪ್ರೊಫೈಲ್‌ ರಚಿಸಿ ಕೆಲವೇ ನಿಮಿಷದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ಅದ್ಭುತ ಇಂಟರ್‍ನೆಟ್ ಜಗತ್ತಿನಲ್ಲಿ ವಂಚಕರು ಸಹ ಬಕಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಇದೇ ಕಾರಣಕ್ಕೆ ಇಂದು ಆನ್‍ಲೈನ್ ಮೂಲಕ ಯಾವುದಾದರೂ ಉದ್ಯೋಗದ ಆಫರ್ ಬಂದಾಗ ಅದು ನಿಜವೋ, ಸುಳ್ಳೋ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಫೇಕ್ ಉದ್ಯೋಗದ ಆಫರ್ ಅನ್ನು ಪತ್ತೆಹಚ್ಚಲು ಇಲ್ಲೊಂದಿಷ್ಟು ದಾರಿಗಳಿವೆ. ಸಾಮಾನ್ಯವಾಗಿ ವಂಚಕ ಜಾಬ್ ಇಮೇಲ್‍ಗಳು… Read More »

ಅತ್ಯುತ್ತಮ ಮ್ಯಾನೇಜರ್ ಆಗಲು ಬಯಸುವಿರಾ? ಈ ಅಮೂಲ್ಯ 10 ಸಲಹೆಗಳನ್ನು ಪಾಲಿಸಿ

By | 03/09/2021

ನೀವು ಮ್ಯಾನೇಜರ್ ಆದ ತಕ್ಷಣ ನೀವು ಸೂಪರ್ಹ್ಯೂಮನ್ ಅಲ್ಲ. ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ, ಅಗತ್ಯಬಿದ್ದರೆ ತಂಡದ ಸಹಾಯ ಪಡೆಯಿರಿ. ಎಲ್ಲರೊಂದಿಗೆ ಒಂದಾಗಿ ಇರಿ. ನೀವು ಪ್ರತ್ಯೇಕವಾಗಿ ಇರುವುದು ಬೇಡ.