Category Archives: ಜೀವನಶೈಲಿ

ಯಾವಾಗಲೂ ಮೂಗಿನ ಮೇಲೆ ಕೋಪಾ ಇರುತ್ತಾ? ಕಂಟ್ರೋಲ್ ಮಾಡಲು ಹೀಗೆ ಮಾಡಿ

By | 18/09/2021

ಕೋಪ ಅನ್ನೋದು ವಿಷದ ತರಹ. ಇದು ನಮ್ಮ ಜೀವನವನ್ನೇ ಹಾಳು ಮಾಡಿ ಬಿಡುತ್ತೆ. ಆದರೆ ಪ್ರೀತಿ ತರಹ ಈ ಕೋಪವೂ ಯಾರ ಮೇಲೋ ಬಂದು ಬಿಡುತ್ತೆ. ಕೆಲವೊಮ್ಮೆ ಕೋಪ ನೆತ್ತಿಗೇರಿದಾಗ ನಾವು ಏನು ಮಾಡ್ತಿದ್ದೇವೆ ಅನ್ನೋದು ನಮಗೆ ತಿಳಿದಿರೋದಿಲ್ಲ. ಆದರೆ ಕೋಪವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಯಾವಾಗಲೂ ಹೇಳಲಾಗುತ್ತೆ. ಇದು ಹಾನಿಕಾರಕವಾಗಿದೆ. ಹಾಗಿದ್ರೆ ನಮ್ಮ ಕೋಪವನ್ನು ನಿಯಂತ್ರಿಸಲು ನಾವೇನು ಮಾಡಬೇಕು? ಅತಿಯಾದ ಕೋಪವು ಜನರ ಪರ್ಸನಲ್ ಮತ್ತು ಪ್ರೊಫೆಷನಲ್ ಜೀವನವನ್ನು ಹಾಳು ಮಾಡುತ್ತೆ, ಅವರ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಬುಡ ಮೇಲಾಗಿಸುತ್ತೆ… Read More »

Hugging: ಅಪ್ಪಿಕೊಳ್ಳುವುದರಿಂದ ನರಮಂಡಲಕ್ಕೆ 5 ಲಾಭಗಳಿವೆ ಗೊತ್ತಾ?

By | 17/09/2021

ಅಪ್ಪುಗೆಗಳು ಮಾನವರ ಸಹಜ ಕ್ರಿಯೆಯಾಗಿದ್ದು, ಇದು ನಿಮ್ಮೊಂದಿಗೆ ಮತ್ತು ಇತರರೊಂದಿಗೆ ಸಂಪರ್ಕ ಹೊಂದುತ್ತದೆ. ಅಪ್ಪುಗೆಗಳು 75% ಪ್ಯಾರಾಸಿಂಪಥೆಟಿಕ್ ಫೈಬರ್ ಗಳಿಂದ ಮಾಡಲ್ಪಟ್ಟ ವಾಗಸ್ ನರವನ್ನು ನಿಯಂತ್ರಿಸುವ ಮೆದುಳಿನ ಭಾಗಗಳನ್ನು ಸಕ್ರಿಯಗೊಳಿಸುತ್ತವೆ. ಅಪ್ಪುಗೆಗಳುರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ   ಮೃದುವಾದ ಸ್ಪರ್ಶದ ನಮ್ಮ ದೇಹದ ಚಲವಲನಗಳನ್ನು ಹೆಚ್ಚು ಮುಕ್ತವಾಗಿಸುತ್ತದೆ. ಜೊತೆಗೆ ದೇಹ ಚಟುವಟಿಕೆಗಳನ್ನು ಗ್ರಹಿಕೆ ಮಾಡುತ್ತದೆ. ಈ ಗ್ರಹಿಕೆಗಳು ಅನಾರೋಗ್ಯ ಮತ್ತು ಸೋಂಕಿನ ಮಟ್ಟ ಮತ್ತು ಅದರ ತೀವ್ರತೆ  ಕಡಿಮೆ ಮಾಡುತ್ತದೆ ಎಂದು ಒಂದು ಅಧ್ಯಯನವು ಕಂಡುಹಿಡಿದಿದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.… Read More »

Skin care tips: ಮುಖದಲ್ಲಿನ ಮೊಡವೆ ಹೋಗಲಾಡಿಸಿ ತ್ವಚೆಯ ಕಾಂತಿ ಹೆಚ್ಚಿಸಲು ‘ಸಾಸಿವೆ ಎಣ್ಣೆ’ ಪ್ರಯೋಜನಕಾರಿ

By | 15/09/2021

ಇತ್ತೀಚಿನ ದಿನಗಳಲ್ಲಿ ಯುವತಿಯರು, ಮಹಿಳೆಯರು ತಮ್ಮ ಮುಖದ ಕಾಂತಿಗೆ ಹೆಚ್ಚಿನ ಗಮನ ನೀಡುತ್ತಾರೆ. ಮುಖದ ಮೇಲಾಗುವ ಮೊಡವೆ ಹೋಗಲಾಡಿಸಲು ಹಾಗೂ ಕಾಂತಿಗಾಗಿ ದುಬಾರಿ ತ್ವಚೆ ಉತ್ಪನ್ನಗಳನ್ನು ಬಳಸುತ್ತಾರೆ.ಆದರೆ ಅವುಗಳಲ್ಲಿ ಹೆಚ್ಚಿನವು ರಾಸಾಯನಿಕಗಳನ್ನು ಹೊಂದಿದ್ದು, ಪ್ರಯೋಜನಕ್ಕೆ ಬದಲಾಗಿ ಚರ್ಮಕ್ಕೆ ಹಾನಿ ಮಾಡುತ್ತವೆ.ಮುಖದ ಮೇಲೆ ನೈಸರ್ಗಿಕ ಹೊಳಪನ್ನು ತರಲು ಮತ್ತು ಮೊಡವೆಗಳನ್ನು ಹೋಗಲಾಡಿಸಲು ಸಾಸಿವೆ ಎಣ್ಣೆಯನ್ನು ರಾತ್ರಿಯಲ್ಲಿ ಹಚ್ಚುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.ಸಾಸಿವೆ ಎಣ್ಣೆಯನ್ನು ರಾತ್ರಿ ಮುಖಕ್ಕೆ ಹಚ್ಚುವುದರಿಂದಾಗುವ ಪ್ರಯೋಜನಗಳು ಒಣ ಚರ್ಮವನ್ನು ತೊಡೆದು ಹಾಕಲು ಸಹಾಯಕ ಪ್ರಾಚೀನ ಕಾಲದಿಂದಲೂ ಸಾಸಿವೆ ಎಣ್ಣೆಯನ್ನು ಚರ್ಮವನ್ನು ತೇವಗೊಳಿಸಲು… Read More »

ನೀರಿಗೆ ನಿಂಬೆ ರಸ ಹಾಕಿ ಸ್ನಾನ ಮಾಡುವುದರಿಂದ ಏನೆಲ್ಲ ಪ್ರಯೋಜನಗಳಿವೆ ಗೊತ್ತಾ?

By | 14/09/2021

ಪ್ರತಿದಿನ ಬೆಳಗ್ಗೆ ಸ್ನಾನ ಮಾಡುವುದು ಸ್ವಚ್ಛತೆಯ ದೃಷ್ಟಿಯಿಂದ ಮಾತ್ರವಲ್ಲ ಆರೋಗ್ಯಕ್ಕೂ ಅತೀ ಅಗತ್ಯ. ಆದರೆ ಸ್ನಾನದ ನೀರಿನಲ್ಲಿ ನಿಂಬೆರಸ ಬೆರೆಸಿ ಸೇರಿಸಿದರೆ ಸಾಕಷ್ಟು ಪ್ರಯೋಜನಗಳಿವೆ. ಪ್ರತಿದಿನ ಬೆಳಗ್ಗೆ ಸ್ನಾನ ಮಾಡುವುದು ಸ್ವಚ್ಛತೆಯ ದೃಷ್ಟಿಯಿಂದ ಮಾತ್ರವಲ್ಲ ಆರೋಗ್ಯಕ್ಕೂ ಅತೀ ಅಗತ್ಯ. ಸ್ನಾನದ ನೀರಿನಲ್ಲಿ ನಿಂಬೆರಸ ಬೆರೆಸಿ ಸೇರಿಸಿದರೆ ಸಾಕಷ್ಟು ಪ್ರಯೋಜನಗಳಿವೆ. ಹೌದು, ನಿಂಬೆಯೊಳಗೆ ಆ್ಯಂಟಿಮೈಕ್ರೊಬಿಯಲ್, ಬ್ಯಾಕ್ಟೀರಿಯಾ ವಿರೋಧಿ ಗುಣಗಳು, ವಿಟಮಿನ್ ಸಿ ಇತ್ಯಾದಿ ಗುಣಗಳಿವೆ. ಇದು ನಿಮ್ಮ ಚರ್ಮದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಂಬೆ ನೀರಿನಿಂದ ಸ್ನಾನ ಮಾಡಿದರೆ,… Read More »

ನೆಲದ ಮೇಲೆ ಸುಖಾಸನದಲ್ಲಿ ಕುಳಿತು ಊಟ ಮಾಡುವುದರ ಉಪಯೋಗಗಳು ಏನೆಂದು ತಿಳಿದಿದೆಯಾ?

By | 14/09/2021

ಎಲ್ಲರಿಗೂ ಆರೋಗ್ಯವಾಗಿರಬೇಕೆಂಬ ಹಂಬಲವೇನೊ ಇರುತ್ತದೆ. ಆದರೆ ಕ್ಷಣಿಕ ಸುಖ-ಭೋಗಕ್ಕೆ ಹಾತೊರೆದು ನಮ್ಮ ಆರೋಗ್ಯಕ್ಕೆ ನಾವೇ ಮುಳ್ಳಾಗುತ್ತೇವೆ. ಉದಾಹರಣೆಗೆ, ಸುಖಾಸನ ಕುಳಿತು ಊಟ ಮಾಡುವ ಪದ್ಧತಿ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ನಾವುಗಳು ಅದನ್ನು ಬಿಟ್ಟು ಡೈನಿಂಗ್ ಟೇಬಲ್ ಮೇಲೆ ಆರಾಮಾಗಿ ಕುಳಿತು ಊಟ ಮಾಡುವ ದುರಭ್ಯಾಸಕ್ಕೆ ಮಾರು ಹೋಗಿದ್ದೇವೆ. “ಊಟ ಬಲ್ಲವನಿಗೆ ರೋಗವಿಲ್ಲ” ಎಂಬ ಮಾತು ಎಷ್ಟು ಸತ್ಯವೋ “ಸುಖಾಸನದಲ್ಲಿ ಕುಳಿತು ಊಟ ಮಾಡುವವನಿಗೂ ರೋಗವಿಲ್ಲ” ಎಂಬ ವ್ಯಾಖ್ಯಾನ ಉತ್ಪ್ರೇಕ್ಷೆಯೇನಲ್ಲ. ನೆಲದ ಮೇಲೆ ಸುಖಾಸನದಲ್ಲಿ ಕುಳಿತು ಊಟ ಮಾಡುವುದರ ಲಾಭಗಳೇನೆಂದು ಮುಂದೆ ನೋಡೋಣ:… Read More »

ಈ 10 ಸಾಫ್ಟ್‌ ಸ್ಕಿಲ್ಸ್‌ ನಿಮ್ಮಲ್ಲಿದ್ದರೆ ನಿಮಗೆ ಉದ್ಯೋಗದ ಕುರಿತು ಭಯವೇ ಬೇಡ!

By | 12/09/2021

ಸುದ್ದಿಜಾಲ.ಕಾಂನ ವಿದ್ಯಾರ್ಥಿ ಓದುಗ ಬಳಗಕ್ಕೆ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪ್ರಗತಿ ಕಾಣಲು ಬಯಸುವ ಓದುಗ ಬಳಗಕ್ಕೆ ಕರಿಯರ್ ಮಾರ್ಗದರ್ಶಿ ಲೇಖನಗಳಲ್ಲಿ ಇಂದು ಬಹುಬೇಡಿಕೆಯ ಹತ್ತು ಸಾಫ್ಟ್ ಸ್ಕಿಲ್‌ಗಳ ಮಾಹಿತಿ ನೀಡಲಾಗಿದೆ. 2021 ಮತ್ತು 2022ರಲ್ಲಿ ಕರಿಯರ್‌ನಲ್ಲಿ ಪ್ರಗತಿ ಕಾಣಲು ನಿಮಗೆ ಈ ಕೌಶಲ್ಯಗಳು ಅಗತ್ಯವಾಗಿ ಬೇಕಿರುತ್ತದೆ. ಡಿಜಿಟಲ್‌ ಕಲಿಕಾ ತಾಣ ಉದೆಮಿ ಪಟ್ಟಿ ಮಾಡಿದ ಸಾಫ್ಟ್‌ಸ್ಲಿಲ್‌ ಇದಾಗಿದ್ದು, ಸುದ್ದಿಜಾಲ.ಕಾಂ ಈ ಕೌಶಲ್ಯಗಳ ಮಾಹಿತಿಯನ್ನು ವಿವರವಾಗಿ ಇಲ್ಲಿ ನೀಡಿದೆ. ಏನಿದು ಸಾಫ್ಟ್ ಸ್ಕಿಲ್? ಕೆಲಸ ಮಾಡುವ ಸ್ಥಳದಲ್ಲಿ ಮತ್ತು ವ್ಯವಹಾರ ಸಂಬಂತ ಸಂವಹನದ… Read More »