ನಿಮ್ಮ ಜೊತೆ ನಿಮ್ಮ ಮನೆಗೂ ಮಾಡಿ ಗೃಹ ವಿಮೆ

By | 01/08/2021

ಈ ಲೇಖನದಲ್ಲಿ ಮನೆಗೆ ಯಾಕೆ ವಿಮೆ ಅಗತ್ಯ ಎಂಬ ಮಾಹಿತಿ ತಿಳಿದುಕೊಳ್ಳೋಣ.

ಗೃಹಸಾಲಕ್ಕೆ ಮಾತ್ರವಲ್ಲದೆ ನಿಮ್ಮ ಮನೆಗೂ ವಿಮೆಯ ಶ್ರೀರಕ್ಷೆ ಇದ್ದರೆ ಉತ್ತಮ. ಮನೆ ಖರೀದಿ ಸಮಯದಲ್ಲಿ ಹೊಸ ಮನೆಗೆ ವಿಮೆ ಖರೀದಿಸಬಹುದು ಅಥವಾ ಖರೀದಿಸದೆಯೂ ಇರಬಹುದು. ವಿಮೆ ಮಾಡುವುದು ವ್ಯರ್ಥ ಎಂದು ಬಹುತೇಕರು ತಿಳಿಯುತ್ತಾರೆ. ಆದರೆ, ನೈಸರ್ಗಿಕ ವಿಕೋಪ ಇತ್ಯಾದಿಗಳು ಹೆಚ್ಚಿರುವುದರಿಂದ ಮನೆಗೆ ವಿಮೆ ಮಾಡುವುದು ಒಳ್ಳೆಯ ನಿರ್ಧಾರ ಎಂದು ತಜ್ಞರು ಹೇಳುತ್ತಾರೆ.
ಗೃಹ ವಿಮೆಗಳಲ್ಲಿ ಹಲವು ವಿಭಾಗಗಳಿವೆ. ಕೆಲವೊಂದು ವಿಮೆಗಳಲ್ಲಿ ಕೆಲವು ಅಂಶಗಳನ್ನು ಹೊರತು ಪಡಿಸಿದರೆ, ಇನ್ನು ಕೆಲವುಗಳಲ್ಲಿ ಅವುಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಅದರ ಸೂಕ್ತ ಪರಿಶೀಲನೆ ಮಾಡಬೇಕಾಗುತ್ತದೆ. ಯಾವುದೇ ಬೇರೆ ಸಾಮಗ್ರಿಗಳನ್ನು ಖರೀದಿಸುವ ಮುನ್ನ ಯೋಚಿಸುವಂತೆಯೇ ಗೃಹ ವಿಮೆ ಆಯ್ಕೆ ಮಾಡುವಾಗಲೂ ಇದು ಅಗತ್ಯವಾಗಿರುತ್ತದೆ. ನಾನಾ ವಿಮೆ ಕಂಪನಿಗಳ ಆಫರ್‍ಗಳನ್ನು ಪರಿಶೀಲಿಸುವ ಮೂಲಕ ಯಾವುದು ಸೂಕ್ತವಾಗಿ ನಮಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ನೋಡಿಕೊಳ್ಳಬೇಕು. ಇದಲ್ಲದೆ, ಆನ್‍ಲೈನ್ ಮೂಲಕ ನಾನಾ ವಿಮೆ ಯೋಜನೆಗಳನ್ನು ಪರಿಶೀಲಿಸಲು ಸಾಧ್ಯ ಯವಿದೆ. ಇದರಿಂದ ಸಮಯ ಉಳಿತಾಯವೂ ಆಗುತ್ತದೆ.
ವಿಮೆಯು ಕೇವಲ ನಿಮ್ಮ ಮನೆಗೆ ಮಾತ್ರ ರಕ್ಷಣೆ ನೀಡುವುದಲ್ಲ. ನಿಮ್ಮ ಮನೆಯ ಗ್ಯಾರೇಜ್, ಶೆಡ್ ಮಾತ್ರವಲ್ಲದೆ ಬೇಲಿಗೂ ವಿಮೆ ಕವರ್ ಆಗುತ್ತದೆ. ವಿಮೆಯ ಜೊತೆ ಹೆಚ್ಚುವರಿ ಆಡ್‍ಆನ್‍ಗಳನ್ನು ಖರೀದಿಸುವ ಮೂಲಕ ಮನೆಯಲ್ಲಿರುವ ಫರ್ನಿಚರ್‍ಗಳು, ಎಲೆಕ್ಟ್ರಾನಿಕ್ಸ್ ಸಾಮಾಗ್ರಿಗಳು ಮತ್ತು ಗೃಹ ಬಳಕೆಯ ವಸ್ತುಗಳಿಗೂ ರಕ್ಷಣೆ ಪಡೆಯಬಹುದು.
ನಷ್ಟಕ್ಕೆ ರಿಪ್ಲೆಸ್‍ಮೆಂಟ್ ದೊರಕುತ್ತದೆ: ಮನೆಗೆ ವಿಮೆ ಮಾಡಿಕೊಂಡರೆ ಹಣಕಾಸು ಭದ್ರತೆ ದೊರಕುತ್ತದೆ. ಎಲ್ಲಾದರೂ ಮನೆಗೆ ಹಾನಿ ಉಂಟಾದ ಸಂದರ್ಭದಲ್ಲಿ ನೀವು ಅನುಭವಿಸುವ ನಷ್ಟವನ್ನು ಇದು ತಡೆಯುತ್ತದೆ.
ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣೆ: ಮನೆ ಮಾಲಿಕರಿಗೆ ನೈಸರ್ಗಿಕ ವಿಕೋಪಗಳು ನಂಬಲು ಸಾಧ್ಯ್ಯವಾಗದಂತಹ ನಷ್ಟವನ್ನು ಉಂಟುಮಾಡಬಹುದು. ಭೂಕಂಪ, ಪ್ರವಾಹ, ಬಿರುಗಾಳಿ, ಕುಸಿತ ಇತ್ಯಾದಿಗಳಿಂದ ಆಗುವ ನಷ್ಟ ವಿಪರೀತ. ಇಂತಹ ಸಮಯದಲ್ಲಿ ಸೂಕ್ತ ವಿಮೆ ಇದ್ದರೆ ಪರಿಹಾರ ಪಡೆಯಬಹುದು.
ದುಬಾರಿಯಲ್ಲ: ಮನೆಗಳಿಗೆ ಇರುವ ವಿಮೆಯು ಹೆಚ್ಚು ದುಬಾರಿಯಲ್ಲ. ವರ್ಷಕ್ಕೆ ಕೆಲವು ಸಾವಿರ ರೂಪಾಯಿ ಪಾವತಿಸಿದರೆ ಸಾಕಾಗುತ್ತದೆ.
ಕಾನೂನು ವಿಷಯದಲ್ಲಿಯೂ ರಕ್ಷಣೆ: ನೀವು ಆಯ್ಕೆ ಮಾಡಿಕೊಂಡ ವಿಮೆಗೆ ಅನುಗುಣವಾಗಿ ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ಕಾನೂನಿನ ರಕ್ಷಣೆಯೂ ದೊರಕುತ್ತದೆ. ಆಕಸ್ಮಿಕವಾಗಿ ಬೇರೆ ಪ್ರಾಪರ್ಟಿಗೆ ಹಾನಿಯಾದರೆ (ಬೆಂಕಿ ಆಕಸ್ಮಿಕ ಇತ್ಯಾದಿಗಳಿಂದ) , ಬೇರೆ ವ್ಯಕ್ತಿಗಳಿಗೆ ಹಾನಿಯಾದರೆ ವೆಚ್ಚವನ್ನು ಇಂತಹ ವಿಮೆಗಳು ನಿರ್ಧರಿಸುತ್ತವೆ.
ವಿಮೆ ಇದ್ದರೆ ನಿಶ್ಚಿಂತೆ: ಮನೆಗೊಂದು ವಿಮೆ ಇದ್ದರೆ ನಿಶ್ಚಿಂತೆಯಿಂದ ಇರಬಹುದು. ವಿಮೆ ಇದ್ದರೆ ನಿಮ್ಮ ಪ್ರಾಪರ್ಟಿ ರಕ್ಷಣೆ ನಿಮ್ಮದಲ್ಲ, ಆ ವಿಮೆಯದ್ದು. ಹೀಗಾಗಿ ನಿಶ್ಚಿಂತರಾಗಿ ಇರಬಹುದು.

  • ವಿಮೆ ಮಾಡುವಾಗ ಎಚ್ಚರವಿರಲಿ
  • ನೀವು ಯಾವೆಲ್ಲ ಐಟಮ್‍ಗಳಿಗೆ ವಿಮೆ ಮಾಡಿದ್ದೀರೋ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನಿರ್ವಹಣೆ ಮಾಡುವುದು ಅಗತ್ಯ. ಇಲ್ಲವಾದರೆ ವಿಮೆ ಕ್ಲೇಮ್ ಮಾಡುವುದು ಕಷ್ಟವಾಗಬಹುದು.
  • ಅನಕೃತ ನಿರ್ಮಾಣಕ್ಕೆ ಕ್ಲೇಮ್ ಮಾಡಲಾಗದು.
  • ಪಾಲಿಸಿ ರಿನಿವಲ್ ಸಮಯದಲ್ಲಿ, ರಿಕನ್‍ಸ್ಟ್ರಕ್ಷನ್‍ಗೆ ಸಂಬಂಧಪಟ್ಟಂತೆ ಕಾಂಟ್ರಾಕ್ಟರ್ ಬಳಿ ಕೋಟ್ ತೆಗೆದುಕೊಳ್ಳಿ. ಈ ಮೂಲಕ ವಿಮಾ ಕವರೇಜ್ ಹೆಚ್ಚಿಸಿಕೊಳ್ಳಬಹುದು.
  • ಹೋಂ ಇನ್ಸೂರೆನ್ಸ್ ಪಾಲಿಸಿಯು ಬಿಲ್ಡಿಂಗ್ ಅದರ ವಸ್ತುಗಳಿಗೆ ಮಾತ್ರ ಕವರ್ ಆಗುತ್ತದೆ. ನಿವೇಶನ ಅಥವಾ ನೆಲವು ಈ ವಿಮೆಯ ವ್ಯಾಪ್ತಿಗೆ ಬರುವುದಿಲ್ಲ.

Leave a Reply

Your email address will not be published. Required fields are marked *