ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ, ವಿಜಯಪುರ ( ರಿ) ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

By | 07/08/2021

ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ, ವಿಜಯಪುರ, ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಗಳಲ್ಲಿ ಖಾಲಿಯಾದ ಬೋಧಕ ಹುದ್ದೆಗಳನ್ನು ಇಲಾಖೆಯ ಆದೇಶದ ಪ್ರಕಾರ ತುಂಬಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಈ ಕೆಳಗೆ‌ ಕಾಣಿಸಿದಂತೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆ : ಕನ್ನಡ ಸಹ ಶಿಕ್ಷಕರು – 2 ಹುದ್ದೆ- ಅಭ್ಯರ್ಥಿಗಳು ಈ ಹುದ್ದೆಗೆ ಬಿಎ, ಬಿಇಡಿ ಮಾಡಿರಬೇಕು.

ಸಮಾಜ ವಿಜ್ಞಾನ ‌ಸಹ ಶಿಕ್ಷಕರು – 03 ಹುದ್ದೆ -ಅಭ್ಯರ್ಥಿಗಳು ಈ ಹುದ್ದೆಗೆ ಬಿಎ, ಬಿಇಡಿ ಮಾಡಿರಬೇಕು.

ದೈಹಿಕ ಶಿಕ್ಷಣ ‌ಶಿಕ್ಷಕರು – 01 ಹುದ್ದೆ – ಅಭ್ಯರ್ಥಿಗಳು ಈ ಹುದ್ದೆಗೆ ಬಿಎ, ಬಿಪಿಇಡಿ ಮಾಡಿರಬೇಕು.

ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳನ್ನು ಹಾಗೂ ಜಾತು ಪ್ರಮಾಣ ಪತ್ರಗಳನ್ನು ದೃಢೀಕರಿಸಿ ಕಳಿಸಬೇಕು. ಸಾಮಾನ್ಯ ಅಭ್ಯರ್ಥಿಗಳು ರೂ.800/- ಹಾಗೂ ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳು ರೂ.500/- ಡಿಡಿಯನ್ನು ಅಧ್ಯಕ್ಷರು, ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ, ವಿಜಯಪುರ ‌ಇವರ ಹೆಸರಿನಲ್ಲಿ ಪಡೆದು ಪ್ರಕಟಗೊಂಡ 21 ದಿನದೊಳಗಾಗಿ ಸಂಸ್ಥೆಯ ವಿಳಾಸಕ್ಕೆ ಸಲ್ಲಿಸತಕ್ಕದ್ದು. ಅರ್ಜಿಯ ಒಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜಯಪುರ ಇವರುಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಸಂದರ್ಶನದ ದಿನಾಂಕವನ್ನು ನಂತರ ತಿಳಿಸಲಾಗುವುದು.

Leave a Reply

Your email address will not be published. Required fields are marked *