ಉದ್ಯೋಗದ ಆಫರ್‌ ಅಸಲಿಯೋ? ನಕಲಿಯೋ? ತಿಳಿಯುವುದು ಹೇಗೆ?

By | 12/09/2021

ಸುದ್ದಿಜಾಲ ಉದ್ಯೋಗ ಮಾರ್ಗದರ್ಶಿ ಉದ್ಯೋಗಾನ್ವೇಷಣೆಯಲ್ಲಿರುವವರಿಗೆ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಉದ್ಯೋಗ ಪಡೆಯಲು ಇಂಟರ್‍ನೆಟ್ ನೆರವಾಗಿದೆ. ವಿವಿಧ ಉದ್ಯೋಗ ತಾಣಗಳ ಮೂಲಕ ಪ್ರೊಫೈಲ್‌ ರಚಿಸಿ ಕೆಲವೇ ನಿಮಿಷದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ಅದ್ಭುತ ಇಂಟರ್‍ನೆಟ್ ಜಗತ್ತಿನಲ್ಲಿ ವಂಚಕರು ಸಹ ಬಕಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಇದೇ ಕಾರಣಕ್ಕೆ ಇಂದು ಆನ್‍ಲೈನ್ ಮೂಲಕ ಯಾವುದಾದರೂ ಉದ್ಯೋಗದ ಆಫರ್ ಬಂದಾಗ ಅದು ನಿಜವೋ, ಸುಳ್ಳೋ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಫೇಕ್ ಉದ್ಯೋಗದ ಆಫರ್ ಅನ್ನು ಪತ್ತೆಹಚ್ಚಲು ಇಲ್ಲೊಂದಿಷ್ಟು ದಾರಿಗಳಿವೆ. ಸಾಮಾನ್ಯವಾಗಿ ವಂಚಕ ಜಾಬ್ ಇಮೇಲ್‍ಗಳು… Read More »

ಶಿಕ್ಷಕ ಹುದ್ದೆಯ ಆಕಾಂಕ್ಷಿದಾರರಿಗೆ ಇಲ್ಲಿದೆ ಸಿಹಿ ಸುದ್ದಿ : 444 ಶಿಕ್ಷಕರ ನೇಮಕ

By | 11/09/2021

ಬೆಂಗಳೂರು : ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರಕಾರ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು ವಾಲ್ಮೀಕಿ ಆಶ್ರಮಶಾಲೆಗಳಲ್ಲಿ ಖಾಲಿಯಿರುವ ಒಟ್ಟು 444 ಶಿಕ್ಷಕರನ್ನು ನೇರ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರಕಾರ ಅನುಮೋದನೆ‌ ನೀಡಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಾಲ್ಮೀಕಿ ಆಶ್ರಮ ಶಾಲೆ ಶಿಕ್ಷಕರ ( 1 ರಿಂದ 5 ) ಹುದ್ದೆಗಳನ್ನು ನೇರ ನೇಮಕಾತಿ ( ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ) ಮೂಲಕ ಭರ್ತಿ ಮಾಡಿಕೊಳ್ಳುವ ಕುರಿತು ಅಧಿಸೂಚನೆ ಹೊರಡಿಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ.

ಪಿಜಿಸಿಇಟಿ 2021: ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

By | 10/09/2021

2021-22 ನೇ ಶೈಕ್ಷಣಿಕ ಸಾಲಿನ ಮೊದಲ ವರ್ಷದ /1 ನೇ ಸೆಮಿಸ್ಟರ್ ಗಳ ( ಪೂರ್ಣಾವಧಿ/ಅರೆಕಾಲಿಕ) ಎಂಬಿಎ/ಎಂಸಿಎ/ಎಂಇ/ಎಂಟೆಕ್/ಎಂ.ಆರ್ಕಿಟೆಕ್ಚರ್ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸಲಾಗುವ ಪಿಜಿಸಿಇಟಿ-2021 ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುವ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ 2021 ಗೆ ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 17, 2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಕರ್ನಾಟಕೇತರ ಅಭ್ಯರ್ಥಿಗಳನ್ನು ಎಂಬಿಎ ಮತ್ತು ಎಂಸಿಎ ಪ್ರವೇಶಕ್ಕೆ ಆಡಳಿತ ಮಂಡಳಿಯವರು ಸರಕಾರಕ್ಕೆ ಬಿಟ್ಟುಕೊಡುವ ಸೀಟುಗಳಿಗೆ ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು. ಗೇಟ್ ಅಭ್ಯರ್ಥಿಗಳಿಗೆ ಸೂಚನೆ ಗೇಟ್… Read More »

ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

By | 10/09/2021

ಶ್ರೀ ಬಲಭೀಮ ಜನತಾ ವಿದ್ಯಾವರ್ಧಕ ಸಂಘ, ಸಾಸನೂರ , ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಈ ಕೆಳಕಾಣಿಸಿಸ ಪ್ರೌಢಶಾಲೆಯಲ್ಲಿ ನಿವೃತ್ತಿಯಿಂದ ಖಾಲಿಯಿರುವ ಒಂದು ಅನುದಾನಿತ ಹುದ್ದೆಯನ್ನು ತುಂಬಿಕೊಳ್ಳಲು ಈ ಕೆಳಗೆ ಕಾಣಿಸಿದ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದ್ದು, ವಿವರ ಈ ಕೆಳಗೆ ನೀಡಲಾಗಿದೆ. ಹುದ್ದೆ : ಸಹ ಶಿಕ್ಷಕರು ( ಆಂಗ್ಲ) ಆಸಕ್ತ ಅಭ್ಯರ್ಥಿಗಳು ಜಾಹೀರಾತು ಪ್ರಕಟಗೊಂಡ 21 ದಿನಗಳ ಒಳಗಾಗಿ ತಮ್ಮ ಶೈಕ್ಷಣಿಕ ಪ್ರಮಾಣ ದೃಢೀಕೃತ ಝರಾಕ್ಸ್ ಪ್ರತಿಗಳೊಂದಿಗೆ ರೂಪಾಯಿ 800/- ರಾಷ್ಟ್ರೀಕೃತ ಬ್ಯಾಂಕ್ ಹುಂಡಿಯೊಂದಿಗೆ… Read More »

ಶಿಷ್ಯವೇತನ ಯೋಜನೆ : ಸಚಿವ ಸಂಪುಟದ ನಿರ್ಧಾರ

By | 10/09/2021

ಸಚಿವ ಸಂಪುಟದ ನಿರ್ಣಯ ಹಿನ್ನೆಲೆಯಲ್ಲಿ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ (scholarship) ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಚರ್ಚಿಸಲಾಯಿತು. ಹಾಗಾಗಿ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣಕ್ಕೆ ಒತ್ತುಕೊಡಲು ಮತ್ತು ಪ್ರೋತ್ಸಾಹಿಸಲು ರೂಪಾಯಿ ಒಂದು ಸಾವಿರ ಕೋಟಿಗಳ ಹೆಚ್ಚುವರಿ ವೆಚ್ಚದಲ್ಲಿ ಒಂದು ಹೊಸ ಶಿಷ್ಯ ವೇತನ ಯೋಜನೆಯನ್ನು ಜಾರಿಗೆ ತರಲು ಸಚಿವ ಸಂಪುಟ ನಿರ್ಧರಿಸುತ್ತದೆ. ಅದರಂತೆ ಎಸ್ ಎಸ್ ಎಲ್ ಸಿ ಅಥವಾ 10 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ… Read More »

ಪೂಜೆ ಮಾಡುವಾಗ ಯಾವ ಬೇಡಿಕೆಗೆ ಯಾವ ನೈವೇದ್ಯ ಕೊಡಬೇಕು…ಇಲ್ಲಿದೆ ಉತ್ತರ

By | 09/09/2021

ನಮ್ಮ ದೇಶದ ಸಂಸ್ಕೃತಿಯಲ್ಲಿ ನೀತಿ ನ್ಯಾಯ ಹಾಗೂ ಮಾನವೀಯತೆಗಳು ಜನಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಂದು ದಿವ್ಯ ಶಕ್ತಿ ನಮ್ಮನ್ನು ಮುಂದಕ್ಕೆ ನಡೆದುಕೊಂಡು ಹೋಗುತ್ತಿದೆ ಎಂಬ ನಂಬಿಕೆ ಇದೆ. ದೇವರೆಂಬ ಹೆಸರಿನಲ್ಲಿ ಆ ದಿವ್ಯ ಶಕ್ತಿ ನಮ್ಮನ್ನು ಕಾಪಾಡುತ್ತದೆ ಹಾಗೂ ಪ್ರತಿದಿನ‌ ಪೂಜೆ ಮಾಡುತ್ತೇವೆ. ಹಾಗೆಯೇ ಪೂಜೆ ಮಾಡುವಾಗ ಯಾವ ಕೋರಿಕೆಗೆ ಯಾವ ನೈವೇದ್ಯವನ್ನು ಸಮರ್ಪಿಸಿದರೆ ಒಳ್ಳೆಯದು ಎಂಬುದು ಗೊತ್ತೇ? ಬಾಳೆಹಣ್ಣನ್ನು ದೇವರಿಗೆ ನೈವೇದ್ಯವಾಗಿ ಇಟ್ಟರೆ ಇಷ್ಟಾರ್ಥ ಸಿದ್ಧಿ ಪಡೆಯಬಹುದು. ಅಂದರೆ ನಾವು ಕೋರುವ ಕೋರಿಕೆಗಳು ದೇವರು ಪೂರೈಸುತ್ತಾರೆ. 2 ಚಿಕ್ಕ… Read More »