Sextortionist ದಂಧೆ: ಬೆತ್ತಲೆಯಾಗುವ ಮೊದಲು ಎಚ್ಚರವಿರಲಿ

By | 11/10/2020

ಕೋವಿಡ್-19 ಸಂಕಷ್ಟದ ಸಮಯದಲ್ಲಿ ಸಾಕಷ್ಟು ಜನರು ಒಂಟಿತನ, ಬೇಸರದಲ್ಲಿರುತ್ತಾರೆ. ಮುಖ್ಯವಾಗಿ ಯುವಜನತೆ ಒಂಟಿತನದ ಯಾತನೆ ಅನುಭಸುತ್ತಿರುತ್ತಾರೆ. ಇಂತವರು ಸೋಷಿಯಲ್ ಮೀಡಿಯಾದಲ್ಲಿ ಹೊಸ ಪರಿಚಯಕ್ಕಾಗಿ ಕಾಯುತ್ತಿದ್ದಾರೆ. ಮದುವೆಯಾಗದ ಹುಡುಗರಾದರೆ ಅವರಲ್ಲಿ ಹತ್ತು ಹಲವು ಕುತೂಹಲಗಳು ಇರುತ್ತವೆ. ಹುಡುಗಿಯರ ವಿಷಯದಲ್ಲಿಯಂತೂ ತುಸು ಹೆಚ್ಚೇ ಇರುತ್ತದೆ. ಇಂತಹ ಹುಡುಗರಿಗೆ ಯಾರಾದರೂ ಪೋಲಿ ಮಾತನಾಡಲು ಹುಡುಗಿ ಸಿಕ್ಕರೆ ಮುಗೀತು. ಮದುವೆಯಾದವರೂ ಹೀಗೆ ಮಾಡುವುದಿಲ್ಲವಂತಲ್ಲ. ಮದುವೆಯಾದ ಗಂಡು ಅಥವಾ ಹೆಣ್ಣು ಅನ್ಯ ಸಂಬಂಧಕ್ಕಾಗಿ ಕಾಯುವುದು ಈಗಿನ ಆನ್‌ಲೈನ್‌ ಚಾಟ್‌ ಜಗತ್ತಿನಲ್ಲಿ ಸರ್ವೇ ಸಾಮಾನ್ಯವೆಂಬಂತೆ ಇದೆ.

Sextortionist ಬಗ್ಗೆ ಗೊತ್ತೆ?

ಒಂಟಿತನ ಅಥವಾ ಸಡಿಲ ಮನಸ್ಸಿನವರನ್ನೇ ಗುರಿಯಾಗಿರಿಸಿಕೊಂಡು ಸೆಕ್ಸಾಟೊರ್ಸನಿಸ್ಟ್ ಎಂಬ ಹೊಸ ಗುಂಪು ಕಾರ್ಯನಿರ್ವಹಿಸುತ್ತಿದೆ. ಮುಖ್ಯವಾಗಿ ಇವರು ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂಗಳಲ್ಲಿ ಸಕ್ರಿಯರಾಗಿದ್ದಾರೆ.

ಸತ್ಯ ಘಟನೆ ಓದಿ

ಇತ್ತೀಚೆಗೆ ಎಕ್ಸ್‌ ಎಂಬ ಯುವಕನಿಗೆ ಫೇಸ್‍ಬುಕ್‍ನಲ್ಲಿ ಒಂದು ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ವಿನಂತಿ ಕಳುಹಿಸಿದ್ದು ರಿಯಾ ಗುಪ್ತಾ ಎಂಬ ಹುಡುಗಿ. ಪ್ರೊಫೈಲ್ ಫಿಕ್ಚರ್ ಹೊರತುಪಡಿಸಿ ಬೇರೆ ಎಲ್ಲಾ ಮಾಹಿತಿಗಳು ಲಾಕ್ ಆಗಿದ್ದವು. ಆತ ರಿಕ್ವೆಸ್ಟ್ ಆಸೆಪ್ಟ್ ಮಾಡಿದ. ಅವಳ ಪ್ರೊಫೈಲ್ನಲ್ಲಿ  ಒಂದಿಷ್ಟು ಚಂದದ ಫೋಟೊಗಳನ್ನು  ನೋಡಿಖುಷಿಗೊಂಡ.

ಆದರೆ, ಅವಳು ತಕ್ಷಣ, ಹಾಯ್ ಬೇಬಿ’ ಇತ್ಯಾದಿ ಮೆಸೆಜ್‍ಗಳನ್ನು ಕಳುಹಿಸಿದಾಗ ಖುಷಿಗೊಂಡ. ಕೆಲವು ನಿಮಿಷ ಚಾಟ್‌ ಮಾಡಿದರು.

ಆಮೇಲೆ ಅವಳು ವಾಟ್ಸಪ್ ನಂಬರ್ ಕೇಳಿದಳು. ಕೊಟ್ಟ.

ತಕ್ಷಣ ಅವಳ ಮೆಸೆಜ್‌ ವಾಟ್ಸಪ್‌ನಲ್ಲಿ ಬಂತು.

ಹಾಯ್‌ ಬೇಬಿ, ನಿನ್ನ ಮುಖ ನೋಡಬೇಕು, ಪ್ರೊಫೈಲ್‌ ಫಿಕ್ಚರ್‌ ಚೇಂಜ್‌ ಮಾಡು ಎಂದಿತು.

ಇವನು ಬದಲಾಯಿಸಿದ. ನಿನ್ನ ಫೋಟೊ ಕಳುಹಿಸು ಎಂದ.

ಹತ್ತಿಪ್ಪತ್ತು ಫೋಟೊ ಒಂದೇ ಸಾರಿಗೆ ಕಳುಹಿಸಿದಳು. ತುಂಬಾ ಚಂದದ ಹುಡುಗಿ.

ಅವತ್ತು ರಾತ್ರಿ ಒಂಬತ್ತು ಗಂಟೆ ಆಸುಪಾಸಿನಲ್ಲಿ ಅವಳ ಮೆಸೆಜ್‌ ಬಂತು.

“ಹಾಯ್‌ ಬೇಬಿ, ವಿಡಿಯೋ ಕಾಲ್‌ ಮಿ, ಬಾತ್‌ ರೂಂ, ಲೆಟ್ಸ್‌ ಸೀ ***, ಐ ವಿಲ್‌ ಶೋ ಯು.. ***” ಎಂದಿತ್ತು.

ಇನ್ನೂ ಮದುವೆಯಾಗದ ಹುಡುಗ. ಅವಳ ಫೋಟೊ ನೋಡಿದರೆ ಸಿನಿಮಾ ಹೀರೋಯಿನ್‌ಗಿಂತ ಕಡಿಮೆ ಇಲ್ಲ. ಬಾತ್‌ರೂಂನಲ್ಲಿ ಬೆತ್ತಲೆ ದರ್ಶನ ಬೇರೆ ಕೊಡುತ್ತೇನೆ ಎನ್ನುತ್ತಿದ್ದಾಳೆ. ಸ್ಟುಡೆಂಟ್‌ ಬೇರೆ. ಇವನ ಮನಸ್ಸು ಹುಚ್ಚೆದ್ದು ಕುಣಿಯದೆ ಇದ್ದೀತೇ?!

ಬಾತ್‌ರೂಂಗೆ ಹೋದ, ಬಾತ್‌ರೂಂ ಬೆಳಕಿನಲ್ಲಿ ಏನೋ ವಿಡಿಯೋ ಕಾಣಿಸಿತು. ಟಾಪ್‌ ಕೆಳಗಿನ ದೃಶ್ಯ. ಅವಳು ಹೇಳಿದಂತೆಲ್ಲ ಕೇಳಿದ.

ಆದರೆ, ಮರುದಿನ ಬೆಳಗ್ಗೆ ನೋಡಿದಾಗ ಅವಳ ಮೆಸೆಜ್‌ ರೀತಿ ಬೇರೆ ರೀತಿ ಇತ್ತು.

ಅವಳ ಬ್ಲಾಕ್‌ಮೆಸೆಜ್‌ಗಳು ಬಂದಿದ್ದವು. ಒಟ್ಟು ಮೂರು ಸಂಖ್ಯೆಗಳಿಂದ ಈತನ ವಿಡಿಯೋ ಇಟ್ಟುಕೊಂಡು 50 ಸಾವಿರ ರೂ.ಗೆ ಡಿಮಾಂಡ್ ಇಟ್ಟಿದ್ದರು. ಕೊನೆಗೆ ಮರ್ಯಾದೆಗೆ ಅಂಜಿ 28 ಸಾವಿರ ರೂ. ಕೊಟ್ಟು ಕಿಸೆ ಖಾಲಿ ಮಾಡಿಕೊಂಡ.

ಇಂತಹ ಕತೆಗಳು ತುಂಬಾ ಇವೆ

ಇದೇ ರೀತಿ ಮುಂಬಯಿಯ ಯುವಕನೊಬ್ಬನಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಪ್‌ ಕರೆ ಬಂದಿತ್ತು. ಆತನೊಂದಿಗೆ ಸ್ನೇಹ ಮಾಡಿ ಕೊನೆಗೆ ಅಶ್ಲೀಲ ವಿಡಿಯೋ ಲೈವ್ ರೆಕಾರ್ಡ್ ಮಾಡಿಕೊಂಡಳು. ನಂತರ ಹಣದ ಬೇಡಿಕೆಯಿಟ್ಟಳು. ಆತನೂ ಕೆಲವು ದಿನಗಳಲ್ಲಿ 37 ಸಾವಿರ ರೂ. ಕಳೆದುಕೊಂಡ.

ಕೆಲವು ಸಂದರ್ಭದಲ್ಲಿ ಆ ಕಡೆ ಇರುವುದು ಹೆಣ್ಣು ಎಂದು ಹೇಳಲಾಗುವುದಿಲ್ಲ. ಯಾರೋ ವಂಚಕ ಪುರುಷರೇ ಯಾವುದೋ ವಿಡಿಯೋ ದೃಶ್ಯವನ್ನು ಲೈವ್‌ನಲ್ಲಿ ತೋರಿಸಿ ಸ್ಕ್ರೀನ್‌ಶಾಟ್‌ ಅಥವಾ ಸ್ಕ್ರೀನ್‌ ರೆಕಾರ್ಡಿಂಗ್‌ ಮಾಡಿಕೊಳ್ಳುತ್ತಾರೆ. ಆ ವಿಡಿಯೋದಲ್ಲಿ ಈ ಕಡೆಯಲ್ಲಿ ಚಾಟ್‌ ಮಾಡುವ ವ್ಯಕ್ತಿಯ ಮುಖವೂ ಇರುವುದರಿಂದ ಬ್ಲಾಕ್‌ ಮೇಲ್‌ ಮಾಡುತ್ತಾರೆ.

ಬಹುತೇಕರು ಇಂತಹ ಘಟನೆಗಳು ನಡೆದಾಗ ಮರ್ಯಾದೆಗೆ ಅಂಜಿದೂರು ನೀಡುವುದಿಲ್ಲ. ಇದರಿಂದ ಸೆಕ್ಸಾಟಾರ್ಸನಿಸ್ಟ್‍ಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ  ಭಯಪಡದೆ ದೂರು ನಿಡಬೇಕು ಎಂದು ಸೈಬರ್ ತಜ್ಞರು ಹೇಳುತ್ತಾರೆ.

ಇದು ಬೆತ್ತಲೆ ವಿಡಿಯೋ ಕಾಲ್ ಮಾಡುವವರ ಸಮಸ್ಯೆ ಮಾತ್ರವಲ್ಲ. ಮಿಡ್‍ಡೇ ವರದಿಯ ಪ್ರಕಾರ ಇತ್ತೀಚಿಗೆ ಅಂಧೇರಿಯ ಯುವಕನೊಬ್ಬನಿಗೆ ಫೇಸ್‍ಬುಕ್‍ನಲ್ಲಿ ಸಾಕಷ್ಟು ಮೆಸೆಜ್‍ಗಳು ಬರಲು ಆರಂಭವಾದವು. ಮೆಸೆಜ್ ಕಳುಹಿಸುವವರ ಫೋಟೊ ಹುಡುಗಿಯದ್ದಾಗಿತ್ತು. ಈತನೂ ಆಕೆಯ ಜೊತೆ ಸಾಕಷ್ಟು ಚಾಟಿಂಗ್ ಮಾಡಿದ್ದಾನೆ. ಮತ್ತೆ ಅವಳು ವಿಡಿಯೋ ಕಾಲ್ ಮಾಡಿದ್ದಾಳೆ. ಆದರೆ, ಅಲ್ಲಿ ಆಕೆಯ ಮುಖದ ಬದಲು ಯಾವುದೋ ಮೊದಲೇ ರೆಕಾರ್ಡ್ ಆದ ಟಾಪ್‍ಲೆಸ್ ಹುಡುಗಿಯ ವಿಡಿಯೋ ಪ್ಲೇ ಆಗುತ್ತಿತ್ತು. ಸ್ವಲ್ಪ ಹೊತ್ತಿನ ಬಳಿಕ ವಿಡಿಯೋ ಕಾಲ್ ಡಿಸ್‍ಕನೆಕ್ಟ್ ಆಯಿತು. ನಂತರ ಆಕೆಯ ಅಕೌಂಟ್‍ನಿಂದ ಆ ವಿಡಿಯೋ ಕಾಲ್‍ನ ಸ್ಕ್ರೀನ್ ಶಾಟ್ ಬಂತು. ಅದರಲ್ಲಿ ಆ ಟಾಪ್‍ಲೆಸ್ ಹುಡುಗಿಯ ಜೊತೆ ಈತನ ಪ್ರೊಫೈಲ್‌ ಫೋಟೊ ಕಾಣಿಸುತ್ತಿತ್ತು. ಇದನ್ನು ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಮಾಡುವೆ, ಮಾಡಬಾರದು ಎಂದಾದರೆ 10 ಸಾವಿರ ರೂ. ನೀಡು ಎಂದು ಮೆಸೆಜ್ ಬರಲು ಆರಂಭವಾಯಿತು. ವಿಶೇಷವೆಂದರೆ ಆಮೇಲೆ ಈತನಿಗೆ ಕರೆ ಮಾಡಿ ಹಣ ಕೇಳಿದ ವ್ಯಕ್ತಿ ಗಂಡು ಆಗಿದ್ದ.

ಅಂದರೆ, ಇದೊಂದು ವ್ಯವಸ್ಥಿತ ಜಾಲವೆಂದು ಅರಿತ ಆತ ಪರಿಚಿತ ಸೈಬರ್ ತಜ್ಞರ ನೆರವು ಪಡೆದ. ಅವರ ನಂಬರ್ ಬ್ಲಾಕ್ ಮಾಡಿದ್ದಷ್ಟು ಹೊಸ ಸಂಖ್ಯೆಗಳಿಂದ ಮೆಸೆಜ್, ಕರೆ ಬರುತ್ತಿತ್ತು. ಹಣ ನೀಡದೆ ಇದ್ದರೆ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್ಲೋಡ್‌ ಮಾಡಲಾಗುವುದು ಎಂದು ಬೆದರಿಸುತ್ತಿದ್ದರು.

ಇದೇ ರೀತಿ 22 ವರ್ಷದ ವಿದ್ಯಾರ್ಥಿಯೊಬ್ಬನನ್ನು ಇನ್‍ಸ್ಟಾಗ್ರಾಂನಲ್ಲಿ ಹುಡುಗಿಯೊಬ್ಬಳು ಪರಿಚಯ ಮಾಡಿಕೊಂಡಳು. ವಾಟ್ಸಪ್ ನಂಬರ್ ಹಂಚಿಕೊಂಡರು. ಆಕೆಯ ಜೊತೆ ಮಾಡಿರುವ ಚಾಟಿಂಗ್ ಅನ್ನು ಅಶ್ಲೀಲ ಅಕ್ಷರಗಳಾಗಿ ಬದಲಾಯಿಸಲಾಗಿತ್ತು. 10 ಸಾವಿರ ಬೇಡಿಕೆಯಿಟ್ಟರು. ಪೊಲೀಸರಿಗೆ ದೂರು ನೀಡುವೆ ಎಂದ ತಕ್ಷಣ ಆ ಕಡೆಯಿಂದ ಬಂದ ಮೆಸೆಜ್‍ಗಳು ಡಿಲೀಟ್ ಆಗಲು ಆರಂಭವಾದವಂತೆ.  

Sextortionist ಎಂದು ಗೂಗಲ್‌ ನ್ಯೂಸ್‌ನಲ್ಲಿ ಹುಡುಕಿದರೆ ಇಂತಹ ನೂರಾರು ಕತೆಗಳು ಸಿಗುತ್ತವೆ, ಕರ್ನಾಟಕ ಬೆಸ್ಟ್‌ಗೆ ಪರಿಚಯವಿರುವ ವ್ಯಕ್ತಿಯೊಬ್ಬರಿಗೂ ಇಂತಹ ಅನುಭವವಾಗಿದೆ. ಹೀಗಾಗಿ

  • ಆನ್‌ಲೈನ್‌ನಲ್ಲಿ ಬರುವ ಅಪರಿಚಿತರ ಜೊತೆ ಚಾಟಿಂಗ್‌ ಮಾಡುವಾಗ ಎಚ್ಚರವಿರಲಿ.
  • ಹುಡುಗ ಅಥವಾ ಹುಡುಗಿ ಯಾವತ್ತೂ ಆನ್‌ಲೈನ್‌ನಲ್ಲಿ ಬೆತ್ತಲೆ ದರ್ಶನ ನೀಡುವುದು ಬೇಡ. ನೀವು ದಂಪತಿಗಳಾಗಿದ್ದರೂ ಬೇಡ.
  • ಜೀವನದಲ್ಲಿ ಕೆಲವೊಂದು ವಿಷಯಗಳಲ್ಲಿ ಸಂಯಮ ಅಗತ್ಯ. ಇಲ್ಲವಾದರೆ ಆಮೇಲೆ ಪರಿತಪಿಸಬೇಕಾಗಬಹುದು.
  • ಈ ಆನ್‌ಲೈನ್‌ ಜಗತ್ತಿನಲ್ಲಿ ಬಗೆಬಗೆಯ ವಂಚಕರು ಹುಟ್ಟಿಕೊಂಡಿದ್ದಾರೆ. ಈ ಕೊರೊನಾ ಸಮಯದಲ್ಲಿ ಕೆಲಸವಿಲ್ಲದೆ ಎಂತಹ ವಂಚನೆಗೂ ಇಳಿಯುವ ಪರಿಸ್ಥಿತಿಯೂ ಕೆಲವರಿಗೆ ಬಂದಿದೆ. ಹೀಗಾಗಿ, ಮೈಮರೆಯದೆ ಎಚ್ಚರಿಕೆಯಿಂದ ಇರಿ.

ಇದು ಕರ್ನಾಟಕ ಬೆಸ್ಟ್‌ ಕಾಳಜಿ

Leave a Reply

Your email address will not be published. Required fields are marked *