ಹೂಪ್ ಕಿವಿಯೋಲೆ: ಹೆಣ್ಣಿನ ಅಂದ ಹೆಚ್ಚಿಸುವ ಓಲೆ

ಇವತ್ತಿರುವ ಫ್ಯಾಷನ್ ನಾಳೆ ಹಳೆಯದಾಗುತ್ತದೆ. ದಿನಕ್ಕೊಂದು ಬಗೆಯ ವಿನ್ಯಾಸದ ಉಡುಪು, ಆ ಉಡುಪಿಗೆ ತಕ್ಕ ಸರ, ಬ್ಯಾಗ್, ಚಪ್ಪಲಿ ಎಲ್ಲವೂ ವಿಭಿನ್ನವಾಗಿರಬೇಕು ಎಂದು ಬಯಸುವ ಕಾಲವಿದು. ಅದರಲ್ಲೂ ಕಿವಿಯೋಲೆ ಎಲ್ಲಿಲ್ಲದ ಪ್ರಾಶಸ್ತ್ಯ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಹೆಣ್ಣಿನ ಅಲಂಕಾರ ಪೂರ್ಣಗೊಳ್ಳುವುದು ಅವಳು ಕಿವಿಯೋಲೆ ಧರಿಸಿದಾಗ. ಅಷ್ಟೇ ಅಲಂಕಾರ ಮಾಡಿಕೊಂಡಿದ್ದರೂ ಕಿವಿಯೋಲೆ ಧರಿಸದಿದ್ದರೆ ಅವಳ ಸೌಂದರ್ಯ ಎದ್ದು ಕಾಣುವುದೇ ಇಲ್ಲ. ಧರಿಸುವ ಬಟ್ಟೆಗೆ ತಕ್ಕಂತೆ ಕಿವಿಯೋಲೆ ಧರಿಸಿದರೆ ಅವಳ ಮುಖದ ಅಂದ ಇನ್ನಷ್ಟು ಹೆಚ್ಚುವುದರಲ್ಲಿ ಸಂಶಯವಿಲ್ಲ.

ಹೆಣ್ಣ ಮಕ್ಕಳಿಗೆ ಕಿವಿಯೋಲೆ ಎಂದರೆ ಅಚ್ಚುಮೆಚ್ಚು. ರಸ್ತೆಯ ಬದಿಯ ಅಂಗಡಿಯಿಂದ ಹಿಡಿದು ಶಾಪಿಂಗ್ ಮಾಲ್ ಗೆ ಹೋದರು ಅವರ ಕಣ್ಣು ಇರುವುದು ಇಯರ್ ರಿಂಗ್ಸ್ ಮೇಲೆ. ಮೊದಲೆಲ್ಲಾ ಯಾವುದೇ ಉಡುಪು ಧರಿಸಿದರೂ ಕಿವಿಗೆ ಮಾತ್ರ ಚಿಕ್ಕದಾದ ಜುಮುಕಿನೋ, ಇಲ್ಲವೇ ಚಿಕ್ಕದಾದ ಚಿನ್ನದ ಗುಂಡು ಧರಿಸುತ್ತಿದ್ದರು. ಆದರೆ ಈಗ ಧಿರಿಸಿಗೆ ತಕ್ಕ ಹಾಗೇ ಕಿವಿಯೋಲೆ ಧರಿಸಬೇಕು ಎಂದು ಬಯಸುತ್ತಾರೆ. ವೆರೈಟಿ ವೆರೈಟಿ ಕಿವಿಯೋಲೆಗಳು ಇಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ದಿನ ನಿತ್ಯ ಉಪಯೋಗಿಸುವುದೇ ಒಂದು ಬಗೆಯಾದಾದರೆ ಪಾರ್ಟಿಗೆ ಒಂದು, ಮದುವೆ ಕಾರ್ಯಕ್ರಮಗಳಿಗೆ ಇನ್ನೊಂದು ಹೀಗೆ ಹತ್ತಾರು ಬಗೆಯ ಕಿವಿಯೋಲೆಗಳ ಕಲೆಕ್ಷನ್ ಹೆಣ್ಣುಮಕ್ಕಳ ಬಳಿ ಇರುತ್ತದೆ ಈಗ. ಕಲಾತ್ಮಕ ಮೀನಾಕಾರಿ, ಬೆಲ್, ಹೂಪ್, ಕುಂದನ್, ಆಂಟಿಕ್ ವಿನ್ಯಾಸ, ಡ್ಯಾಂಜ್ಲರ್, ಪೊಲ್ಕಿ, ಪಂಜಾಬಿ ಶೈಲಿಯ ಜುಮಕಿಗಳು ಫಂಕ್ಷನ್  ಗೆ ಹೇಳಿ ಮಾಡಿಸಿದ್ದವು. ಇನ್ನು ಡಾಂಗಲ್ಸ್, ಸ್ಟಡ್ಸ್, ಚಾಂದೆನಿಯರ್, ಹೂಪ್ಸ್, ಇವು ಕಾಲೇಜು ಬೆಡಗಿಯರ ನೆಚ್ಚಿನ ಆಯ್ಕೆಗಳಾಗಿವೆ. ಇವುಗಳನ್ನು ಸಾಂಪ್ರದಾಯಿಕ ಕಾರ್ಯಕ್ರಮಗಳಿಗೂ ಬಳಸುವ ಟ್ರೆಂಡ್ ಈಗ ಇದೆ. ಇವೆಲ್ಲದರ ಮಧ್ಯೆ ಈ ಇಟಾಲಿಯನ್ ಹೂಪ್ ಎಂಬ ಕಿವಿಯೋಲೆ ಕೂಡ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ಆಯ್ಕೆಗಳಲ್ಲಿ ಒಂದಾಗಿ ಜಾಗ ಪಡೆದಿದೆ.

ಹೂಪ್ ನ ಇತಿಹಾಸ

ಇತಿಹಾಸ ಮರುಕಳಿಸುತ್ತದೆ ಎಂಬುದಕ್ಕೆ ಉದಾಹರಣೆ ಎಂಬಂತೆ  ಹೂಪ್ ಕಿವಿಯೋಲೆಗೆ ಸಾಕಷ್ಟು ಹಿಂದಿನ ಇತಿಹಾಸವಿದೆ.  ವಿಯೆಟ್ನಾಂ ನ ಮಹಿಳೆಯರಿಂದ ಹಿಡಿದು ಗಡಬಾದ ಬುಡಕಟ್ಟು ಜನಾಂಗದವರೆಗೆ ವಿಶ್ವಾದಾದ್ಯಣತದ ವಿವಿಧ ವಿನ್ಯಾಸದ ಹೂಪ್ಗಳು ಇವೆ. 1960ರಲ್ಲಿ  ಬ್ಲ್ಯಾಕ್ ಪವರ್ ಆಂದೋಲನದ ಸಂದರ್ಭದಲ್ಲಿ ಅಫ್ರಿಕನ್ ಅಮೆರಿಕನ್ ಮಹಿಳೆಯರಿಂದ ಈ ಹೂಪ್ ಕಿವಿಯೋಲೆಗಳು ಹೆಚ್ಚು ಜನಪ್ರಿಯವಾಯಿತು.  ಮೊದಲು ತೆಳ್ಳನೆಯ ಚಿನ್ನದ ಹೂಪ್ ಹಾಗೂ ಡೋರ್ ನಾಕರ್ ಮತ್ತು ಬ್ಯಾಂಬೋ ಹೂಪ್ ಕಿವಿಯೋಲೆಗಳು ಹೆಚ್ಚು ಬಳಸಲಾಗುತ್ತಿತ್ತು. ನಂತರ 1990 ರಲ್ಲಿ  ಮೆಕ್ಸಿಕನ್ ಮಹಿಳೆಯರು ಚೋಳ ಶೈಲಿಯ ದೊಡ್ಡ ಗಾತ್ರದ ಹೂಪ್ ಕಿವಿಯೋಲೆಗಳನ್ನು ಬಳಸಲು ಶುರುಮಾಡಿದರು.

ಹೂಪ್ ಗಳಲ್ಲಿ ಹಲವು ವಿನ್ಯಾಸಗಳಿವೆ, ಉಂಗುರವನ್ನು ಹೋಲುವ ಕಿವಿಯೋಲೆಯಿಂದ ಅರಂಭಿಸಿ ಬಳೆಯಷ್ಟು ದೊಡ್ಡ ಪ್ಲೈನ್ ರಿಂಗ್ ಗಳು ಮಾರುಕಟ್ಟೆಯಲ್ಲಿವೆ. ಅಧುನಿಕ ವಸ್ತ್ರ ವಿನ್ಯಾಸದಿಂದ ಅರಂಭಿಸಿ ಸಾಂಪ್ರದಾಯಿಕ ಉಡುಗೆ ತೊಡುಗೆಗೂ ಹೊಂದಿಕೆಯಾಗುವ ವಿನ್ಯಾಸಗಳು ಸಿಗುತ್ತವೆ. ಮಳಿಗೆಗಳಲ್ಲಿ ಹೂಪ್ ಗಳ ಪ್ರತ್ಯೇಕ ವಿಭಾಗಗಳಿವೆ. ಆನ್ ಲೈನ್, ವೆಬ್ ಸೈಟ್ ಗಳಲ್ಲೂ ಹೂಪ್ ನ ಆತ್ಯುತ್ತಮ ಸಂಗ್ರಹವಿದೆ. ದುಬಾರಿ ಮೌಲ್ಯದ ಹೂಪ್ ಗಳೂ ಇದ್ದು ಬಂಗಾರದ, ಬೆಳ್ಳಿಯ ಬಣ್ಣಗಳಲ್ಲೂ ಇದು ಲಭ್ಯವಿದೆ. ಮ್ಯಾಚಿಂಗ್ ಯೋಚನೆಯಿಲ್ಲದೆ ಎಲ್ಲಾ ವಿಧದ ಉಡುಪುಗಳಿಗೂ ಹೊಂದಿಕೆಯಾಗುವುದು ಇಟಾಲಿಯನ್ ಹೂಪ್ ನ ವೈಶಿಷ್ಟ್ಯ.

ನೋಡುವುದುಕ್ಕೆ ರಿಂಗ್ ತರ ಇರುವ ಕಿವಿಯೋಲೆ ನಾನಾ ವಿನ್ಯಾಸಗಳಲ್ಲಿ ಲಭ್ಯವಿದೆ. ಜತೆಗೆ ಫ್ಯಾಷನ್ ಔಟ್ ಫಿಟ್ ನಿಂದ ಹಿಡಿದು ಟರೆಡಿಷನ್ ಧಿರಿಸಿಗೂ ಇದು ಸೈ ಎನಿಸಿಕೊಂಡಿದೆ. ಮೊದಲೆಲ್ಲಾ ಹೆಣ್ಣುಮಕ್ಕಳು ಚಿಕ್ಕದಾದ ಚಿನ್ನದ ರಿಂಗ್ ಧರಿಸುತ್ತಿದ್ದರು. ಅದರ ಕೆಳ ಭಾಗದಲ್ಲಿ ಮುತ್ತು, ಹವಳ ಇಲ್ಲವೇ ಚಿನ್ನದ ಚಿಕ್ಕ ಗುಂಡು ಮಣಿಯೊಂದು ನೇತಾಡುತ್ತಿತ್ತು. ನಂತರ ಅದರ ಸ್ವರೂಪ ಬದಲಾಗುತ್ತಾ ಹೋಯಿತು. ಈಗ ಅದು ಮತ್ತಷ್ಟೂ ಹೊಸ ರೂಪ ಪಡೆದುಕೊಂಡು ಹೆಂಗಳೆಯರ ಕಿವಿಯಲ್ಲಿ ಮತ್ತೆ ಸ್ಥಾನ ಗಿಟ್ಟಿಸಿಕೊಂಡಿದೆ.

ಹಳೆಕಾಲದಿಂದಲೂ ಫೇಮಸ್ಸ್ ಆಗಿರೋ ಈ ಇಯರ್​ರಿಂಗ್ಸ್ ಈಗ ಲೇಟೆಸ್ಟ್​ ಟ್ರೆಂಡ್​. ಸಿನಿಮಾ ತಾರೆಯರಿಂದ ಹಿಡಿದು ಪ್ರತಿಯೊಬ್ಬರೂ ಹೆಚ್ಚಾಗಿ ಬಳಸೋ ಲೇಟೆಸ್ಟ್ ಫ್ಯಾಷನ್ ಇಯರ್​ರಿಂಗ್. ಎಲ್ರಿಗೂ ಟ್ರೆಡಿಷನಲ್​ ಲುಕ್ ಕೊಡೋ ಈ ಇಟಾಲಿಯನ್ ಹೂಪ್ ಹುಡುಗಿಯರ ಅಚ್ಚುಮೆಚ್ಚು. ನೋಡೋದಕ್ಕೆ ಸರಳವಾಗಿದ್ದರೂ ಇದ್ರೂ ಅತ್ಯಂತ ಆಕರ್ಷಕ ಮತ್ತು ಸೌಂದರ್ಯ ಹೆಚ್ಚಿಸೋ ಕಿವಿಯೋಲೆ. ಅದು ಅಲ್ಲದೇ, ಡಬ್ಬಲ್ ಡ್ಯಾಗರ್ ಹೂಪ್, ಹಾಫ್ ಹೂಪ್ ಹೀಗೆ ವಿವಿಧ ವಿನ್ಯಾಸ, ಕಲರ್ಪುಲ್ ಅಲ್ದೆ , ವೈರಟಿಯಲ್ಲಿ ಮೆಟಲ್ ಇಯರ್​ರಿಂಗ್ಸ್ ಮಾರಕಟ್ಟೆಯಲ್ಲಿ ಲಭ್ಯವಿದೆ.

Leave a Reply

Your email address will not be published. Required fields are marked *