Tag Archives: ಕತೆ

ಕತೆ; ‘ಕೃಷ್ಣಾರ್ಪಣ ಮಸ್ತು’

ಪವಿತ್ರಾ ಶೆಟ್ಟಿ ಅಮ್ಮ ಫೋನ್ ಮಾಡಿದ್ದಳು. ಚಿಕ್ಕಮ್ಮತ್ತೆ ಏನೇನೋ ಮಾತಾಡುತ್ತಿದ್ದಾರೆ. ಯಾಕೋ ಇತ್ತೀಚೆಗೆ ಅವರು ಈ ಲೋಕದಲ್ಲಿ ಇದ್ದವರ ಹಾಗೇ ಇಲ್ಲಪ್ಪ. ನೀ ಒಮ್ಮೆ ಬಂದು ಹೋಗು. ಎದೆಯೊಳಗೆ ಪುಕು ಪುಕು ಶುರುವಾಗಿ ಅದು ಹೊಟ್ಟೆಯೊಳಗೂ ಕಾಣಿಸಿಕೊಂಡು ಯಾಕೋ ಪಾಯಿಖಾನೆಗೆ ಓಡಿಯೇ ಬಿಡೋಣ ಅನ್ನಿಸಿ ಅಮ್ಮಾ.. ನಿನಗೆ ಆಮೇಲೆ ಫೋನ್ ಮಾಡುತ್ತೇನೆ ಎಂದು ಪೋನಿಟ್ಟೆ. ಹೆದರಿಕೆಯಾದಾಗಲೆಲ್ಲ ಹೊಟ್ಟೆಯೊಳಗೆ ಏನೇನೋ ತಳಮಳವಾಗಿ ನನಗೆ ಪಾಯಿಖಾನೆಗೆ ಹೋಗಬೇಕು ಅನ್ನಿಸುವುದು ಮೊದಲಿನಿಂದಲೂ ಇದ್ದ ಖಯಾಲಿ. ಅದು ಚಿಕ್ಕಮ್ಮತ್ತೆಯಿಂದಲೇ ಬಂದ ಉಡುಗೊರೆ. ಇನ್ನು ತಡ ಮಾಡುವುದು ಬೇಡ… Read More »

ಕಥಾಲೋಕ: ಒಡಲೊಳಗಿನ ಕೆಂಡಸಂಪಿಗೆ…

ಪವಿತ್ರಾ ಶೆಟ್ಟಿ ಎಲ್ಲಾದರೂ ಬಿಟ್ಟು ಬಾ ಈ ಮಗೂನಾ ಶಂಕರಣ್ಣಾ ನೀ ಒಂಬ್ನೆ ಹೆಂಗೇ ಸಾಕ್ತಿಯಾ…? ಹುಟ್ಟಿದ್ದು ಬೇರೆ ಹೆಣ್ಣು ಕೂಸು, ಅವಳ ಪಾಪದ ಪಿಂಡಕ್ಕೆ ನೀ ಯಾಕೆ ಹೊಣೆಗಾರ ಆಗ್ತಿಯಾ…? ಅದರ ಮೂಸುಡಿಯಲ್ಲಿರೋ ಆ ಮಚ್ಚೆ ನೋಡಿದರೆ ಗೊತ್ತಾಗುದಿಲ್ವಾ ಅದು ನಿನ್ನ ರಕ್ತಕ್ಕೆ ಹುಟ್ಟಿದ್ದು ಅಲ್ಲಾ ಅಂತ! ಎಂದು ಬುಡ್ಡಮ್ಮಜ್ಜಿ ಮುದುರಿ ಹೋದ ವೀಳ್ಯದೆಲೆಯ ಮೇಲೆ ಸುಣ್ಣ ಸವರಿಕೊಳ್ತಾ ಅದರ ಮಧ್ಯೆ ಎರಡು ಅಡಿಕೆ ಹೋಳು, ತಲೆಕೂದಲಿನಂತಿರುವ ಹೊಗೆಸೊಪ್ಪನ್ನ ಸೇರಿಸಿ ಬಾಯಲ್ಲಿಟುಕೊಂಡು ಚೆನ್ನಾಗಿ ಜಗಿದು ಪಿಚಕ್ ಎಂದು ಉಗಿದುಬಿಟ್ಟಳು! ತುಸು… Read More »

ಸಣ್ಣ ಕತೆ:’ಸಿಂಗಾರಜ್ಜಿಯ ಮುತ್ತಿನ ಬುಗುಡಿ’

ಪವಿತ್ರ ಶೆಟ್ಟಿ ಹಾವು ಹರಿದಂತಿರುವ ರಸ್ತೆಯಲ್ಲಿ ಬಸಿರಿಯಂತೆ ತೇಕುತ್ತಾ ಬರುತ್ತಿದ್ದ ಬಸ್ ನೋಡಿ ಸಿಂಗಾರಜ್ಜಿ ತನ್ನ ರವಿಕೆಯೊಳಗೆ ಕೈ ಹಾಕಿ ಕರ್ಚಿಫಿನ ಗಂಟೊಂದನ್ನು ತೆಗೆದಿಟ್ಟುಕೊಂಡಳು. ಮುದುರಿ ಹೋಗಿದ್ದ ನೋಟುಗಳನ್ನು ಕರ್ಚಿಫಿನಿಂದ ಹೊರತೆಗೆದು ತನ್ನ ಚೂಪು ಕಣ್ಣಿನಲ್ಲಿಯೇ ಅದನ್ನು ಮೇಲೆ ಕೆಳಗೆ ನೋಡತೊಡಗಿದಳು. ಈಗಿನ ಕ್ಷಣಕ್ಕೊಂದು ಬಣ್ಣ ಬದಲಾಯಿಸುವ ಮನುಷ್ಯರ ಹಾಗೇ ಈ ನೋಟುಗಳು ಕೂಡ ತಮ್ಮ ರೂಪ ಬದಲಿಸಿಕೊಂಡು ಬಣ್ಣ ಬಣ್ಣದ್ದಾಗಿವೆ. ಐವತ್ತು, ಇನ್ನೂರು ರೂಪಾಯಿಗಳ ನೋಟೇ ಗೊತ್ತಾಗುತ್ತಿಲ್ಲ ಎಂದು ಕಣ್ಣಿಗೆ ಇನ್ನೂ ಹತ್ತಿರ ಹಿಡಿದುಕೊಂಡು ನೋಡತೊಡಗಿದಳು. ಯಾರಾ ಹತ್ತಿರವಾದರೂ ಕೇಳುವ… Read More »

Inspiration: ಸ್ಫೂರ್ತಿದಾಯಕ ಬದುಕಿಗೆ ಹತ್ತು ನೀತಿಕತೆಗಳು

By | 04/01/2019

ನಮ್ಮ ಬದುಕು ಯಾವುದೋ ದಿಕ್ಕಿನಲ್ಲಿ ಸಾಗುತ್ತಿರುತ್ತದೆ. ಅದನ್ನು ಸರಿಯಾದ ದಿಕ್ಕಿನತ್ತ ತಿರುಗಿಸಲು ನಾವು ಆಲೋಚನೆ ಮಾಡಬೇಕು. ಕೆಲವೊಮ್ಮೆ ಯಾರಾದರೂ ನಮಗೆ ದಿಕ್ಕು ತೋರಿಸಬಹುದು. ಯಾರೋ ಹೇಳಿದ ಮಾತುಗಳು ನಮಗೆ ಸ್ಫೂರ್ತಿ ತರಬಹುದು. ಇನ್ನು ಕೆಲವೊಮ್ಮೆ ಯಾರಾದರೂ ಹೇಳಿದ ಕತೆ ನಮಗೆ ಹೊಸ ದಿಕ್ಕು ತೋರಿಸಬಹುದು. ಸ್ಫೂರ್ತಿದಾಯಕ ಕತೆಗಳು ತುಂಬಾ ಪವರ್ ಫುಲ್. ಒಂದು ಪುಟ್ಟ ಕತೆಯ ಹಿಂದೆ ದೊಡ್ಡ ಪಾಠ ಇರುತ್ತದೆ. ಇಂಟರ್ನೆಟ್ ನಲ್ಲಿ ಇಂತಹ ಸಾಕಷ್ಟು ಸ್ಫೂರ್ತಿದಾಯಕ ಕತೆಗಳಿವೆ. ಅವುಗಳಲ್ಲಿ ನನಗೆ ಆಲ್ ಟೈಂ ಫೇವರಿಟ್ ಆದ ಹತ್ತು ಕತೆಗಳನ್ನು… Read More »

Moral Story: ವಜ್ರ ಮತ್ತು ರೈತ

By | 01/12/2018

ಈ ಸ್ಫೂರ್ತಿದಾಯಕ ಕತೆಯ ತುಣುಕು ಇಂಟರ್ನೆಟ್ ನಲ್ಲಿ ದೊರಕಿತು. ಅದನ್ನು ಒಂದಿಷ್ಟು ವಿಸ್ತರಿಸಿ, ಹೊಸತನದಿಂದ ಇಲ್ಲಿ ಮರುರಚನೆ ಮಾಡಲಾಗಿದೆ. ಈ ಕತೆಯ ಹೆಸರು ವಜ್ರ ಮತ್ತು ರೈತ ಎಂದಿರಲಿ ಒಂದೂರಲ್ಲಿ ಒಬ್ಬ ರೈತನಿದ್ದ. ಆತ ಸಂತೃಪ್ತ. ಆತ ಸದಾ ನಗುನಗುತ್ತ ಕೆಲಸ ಮಾಡುತ್ತಿದ್ದ. ಹೊಲದಲ್ಲಿ ಕಷ್ಟಪಟ್ಟು ದುಡಿದರೂ ಆತ ದುಃಖಿತನಾಗಿರಲಿಲ್ಲ. ಒಂದು ದಿನ ವಿವೇಕಿಯೊಬ್ಬ ರೈತನಲ್ಲಿಗೆ ಬಂದ. ಆತ ಬಂದು ಜೋಳದ ರೊಟ್ಟಿ ತಿಂದು ಸಂತೃಪ್ತನಾದ. ಆತನು ಈ ರೈತನ ಗುಡಿಸಲು, ಅಲ್ಲಿನ ಬಡತನ ಗಮನಿಸಿದ. ಏನೋ ಮಾತನಾಡುತ್ತ ವಜ್ರದ ಕುರಿತು… Read More »

ಬರೆದದ್ದೇ ಕವಿತೆ

By | 01/02/2011

ಪ್ರತಿದಿನ ಅದೇ ಪ್ಲಾಟ್ ಫಾರ್ಮ್ ನಲ್ಲಿ ನಿನ್ನ ನನ್ನ ಕಣ್ಣುಗಳು ಮಿಲನವಾಗುತ್ತವೆ ನೀನು ಮಾತನಾಡುವುದಿಲ್ಲ, ತಲೆ ತಗ್ಗಿಸಿಬಿಡುವೆ, ನಾನು ಏನೋ ಕಳೆದುಕೊಂಡಂತೆ ಬಸ್ ಹತ್ತುತ್ತೇನೆ ಮತ್ತೆ ಮರುದಿನ ಅದೇ ಪ್ಲಾಟ್ ಫಾರ್ಮ್ ಮಾತಿಲ್ಲ, ಕತೆಯಿಲ್ಲ, ಕನಸುಗಳು ಮಾತ್ರ ಗೊತ್ತಾಗದಂತೆ ಮುಗುಳ್ನಗೆಯ ವಿನಿಮಯವಾಗುತ್ತದೆ, ಕಣ್ಣುಗಳು ಮಿಲನವಾಗುತ್ತವೆ. ಮತ್ತೆ ಮರುದಿನ ಅದೇ ಪ್ಲಾಟ್ ಫಾರ್ಮ್ ನಲ್ಲಿ ನಾನು ನೀನು ಮತ್ತೆ ಸೇರುತ್ತೇವೆ ಕಣ್ಣುಗಳು ಅರಳುತ್ತವೆ, ಮನಸು ಮಾತನಾಡುತ್ತದೆ ನಾನು ಬಸ್ ಮಿಸ್ ಮಾಡಿಕೊಳ್ಳುತ್ತೇನೆ ಒಂದೆರಡು ದಿನ ನೋಡದೆ ಇದ್ದರೆ ಏನೋ ಕಳೆದುಕೊಂಡಂತೆ ಹುಡುಕುತ್ತೇನೆ ಮತ್ತೆ… Read More »