Category Archives: Career

Identify fake job offers: ಫೇಕ್‌ ಉದ್ಯೋಗದ ಆಫರ್‌ ಪತ್ತೆಗೆ 8 ದಾರಿ

By | 07/03/2021

ಆನ್‌ಲೈನ್‌ನಲ್ಲಿ ವಂಚಕರು ಒಡ್ಡುವ ಉದ್ಯೋಗದ ಆಮೀಷಗಳಿಗೆ ಬಲಿಯಾಗಬೇಡಿ ಇಂದು ಉದ್ಯೋಗಾನ್ವೇಷಣೆಯಲ್ಲಿರುವವರಿಗೆ ಒಂದು ಬಟನ್‌ ಕ್ಲಿಕ್‌ ಮಾಡುವ ಮೂಲಕ ಉದ್ಯೋಗ ಪಡೆಯಲು ಇಂಟರ್‌ನೆಟ್‌ ನೆರವಾಗಿದೆ. ವಿವಿಧ ಉದ್ಯೋಗ ತಾಣಗಳ ಮೂಲಕ ಪ್ರೊಫೈಲ್‌ ರಚಿಸಿ ಕೆಲವೇ ನಿಮಿಷದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ಅದ್ಭುತ ಇಂಟರ್‌ನೆಟ್‌ ಜಗತ್ತಿನಲ್ಲಿ ವಂಚಕರು ಸಹ ಬಕಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಇದೇ ಕಾರಣಕ್ಕೆ ಇಂದು ಆನ್‌ಲೈನ್‌ ಮೂಲಕ ಯಾವುದಾದರೂ ಉದ್ಯೋಗದ ಆಫರ್‌ ಬಂದಾಗ ಅದು ನಿಜವೋ, ಸುಳ್ಳೋ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಫೇಕ್‌ ಉದ್ಯೋಗದ ಆಫರ್‌ ಅನ್ನು ಪತ್ತೆಹಚ್ಚಲು ಇಲ್ಲೊಂದಿಷ್ಟು ದಾರಿಗಳಿವೆ.

Steps for Career Planning: ಕರಿಯರ್‌ ಪ್ಲ್ಯಾನಿಂಗ್‌ ಹೇಗೆ? ಅತ್ಯುತ್ತಮ ಕರಿಯರ್‌ ಯೋಜನೆಗೆ ಅಮೂಲ್ಯ ಸಲಹೆಗಳು

By | 06/03/2021

ನಮ್ಮ ಭವಿಷ್ಯದ ನಿರ್ಣಯದಲ್ಲಿ ಕರಿಯರ್‌ ಪ್ಲ್ಯಾನಿಂಗ್‌ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಕರಿಯರ್‌ ಯೋಜನೆ ಯಾವ ರೀತಿ ಮಾಡಬೇಕು? ಇಲ್ಲಿದೆ ಹೆಚ್ಚಿನ ವಿವರ. ಕರಿಯರ್‌ ಯೋಜನೆ ಮಾಡುವುದು ಕೊಂಚ ಕಷ್ಟದ ಕೆಲಸ. ಹೀಗಾಗಿ, ಬಹುತೇಕರು ಇದನ್ನು ಮಾಡಲು ಹೋಗುವುದಿಲ್ಲ. ಇದರಿಂದಾಗಿ ಹೆಚ್ಚಿನವರ ಕರಿಯರ್‌ ಬದುಕು ಗಾಳಿಬಂದ ಕಡೆ ಸಾಗುವ ಗಾಳಿಪಟದಂತಾಗುತ್ತದೆ. ಕರಿಯರ್‌ ಪ್ಲ್ಯಾನಿಂಗ್‌ ಎಂದರೇನು? ವ್ಯಕ್ತಿಯೊಬ್ಬರ ವೃತ್ತಿಪರ ಗುರಿಗಳನ್ನು ನಿಗದಿಪಡಿಸುವ ಮತ್ತು ಅವುಗಳನ್ನು ಸಾಧಿಸಲು ದಾರಿ ಹುಡುಕುವ ನಿರಂತರ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಸ್ವಯಂ ಮೌಲ್ಯಮಾಪನ, ಮಾರುಕಟ್ಟೆ ಅಧ್ಯಯನ ಮತ್ತು ನಿರಂತರ ಕಲಿಕೆ… Read More »

Social Skills for Success: ಕರಿಯರ್‌ ಪ್ರಗತಿಗೆ ನೆರವಾಗುವ ಸೋಷಿಯಲ್‌ ಸ್ಕಿಲ್ಸ್‌

By | 03/03/2021

ಕರಿಯರ್‌ನಲ್ಲಿ ಪ್ರಗತಿ ಕಾಣಲು ಕೇವಲ ಬಾಹ್ಯ ಅಂದ ಸಾಕಾಗದು. ಯಶಸ್ಸಿಗೆ ಸೋಷಿಯಲ್‌ ಸ್ಕಿಲ್ಸ್‌ ಅವಶ್ಯವಾಗಿದೆ. ಬಾಹ್ಯ ಅಂದವೆಂದರೆ ಶೋಕೇಸ್‌ನಲ್ಲಿರುವ ಗೊಂಬೆ, ಸೋಷಿಯಲ್‌ ಕೌಶಲವೆನ್ನುವುದು ಮನೆಯಲ್ಲಿ ಲವಲವಿಕೆಯಿಂದ ಓಡಾಡುವ ಪುಟ್ಟ ಮಗು. ನಿಮ್ಮ ಬಗ್ಗೆ ನಿಮಗಿರುವ ಸ್ವಯಂ ಭರವಸೆ, ಸಕಾರಾತ್ಮಕ ವರ್ತನೆ, ಉತ್ತಮ ಬಾಡಿ ಲ್ಯಾಂಗ್ವ ಏಜ್‌, ಐ ಕಾಂಟ್ಯಾಕ್ಟ್, ಅತ್ಯುತ್ತಮ ಸಂವಹನ ಕೌಶಲ ಇತ್ಯಾದಿಗಳು ಕರಿಯರ್‌ ಪ್ರಗತಿಗೆ ಸಾಥ್‌ ನೀಡುತ್ತವೆ.

2021ರ ಬಹುಬೇಡಿಕೆಯ ಡಿಜಿಸ್ಕಿಲ್: ಯಶಸ್ಸು ನೀಡುವ ಕೋರ್ಸ್ ಕಲಿಯಿರಿ

By | 27/12/2020

ಈ ವರ್ಷ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಸವಾಲಿನ ವರ್ಷ. ಸ್ಟಡಿ ಫ್ರಮ್‍ ಹೋಮ್‍, ಶಾಲೆ, ಕಾಲೇಜಿಗೆ ಹೋಗುವ ಕಷ್ಟವಿಲ್ಲ… ಇತ್ಯಾದಿಗಳು ಒಂದು ರೀತಿಯ ಖುಷಿ ನೀಡಿದ್ದರೂ, ಇದರ ಪರಿಣಾಮ ನಿರೀಕ್ಷೆಗಿಂತ ಭೀಕರವಾಗಿಯೇ ಇದೆ. ಮೊದಲನೆಯದಾಗಿ ಕೋರ್ಸ್‍ಗಳನ್ನು ಮುಗಿಸಿಕೊಂಡು ಹೊರಬಂದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕುವುದೇ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಈಗಾಗಲೇ ಪರಿಣಿತಿ ಪಡೆದ ಉದ್ಯೋಗಿಗಳ ಜಾಬ್‍ ಕಟ್‍ ಮಾಡಿ ತಣ್ಣಗೆ ಕುಳಿತ ಕಂಪನಿಗಳು ಹೊಸ ಹುಡುಗರನ್ನು ನೇಮಕ ಮಾಡಿಕೊಳ್ಳುವುದೇ ಎಂಬ ಪ್ರಶ್ನೆಗೆ ಉತ್ತರ ದೊರಕಬೇಕಿದೆ. ಉದ್ಯೋಗ ತಜ್ಞರ ಪ್ರಕಾರ, ಈಗ ಜಗತ್ತು… Read More »

ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಮುಂದೇನು? ಇಲ್ಲಿವೆ 80+ ಕರಿಯರ್ ಆಯ್ಕೆಗಳು

By | 16/07/2020

ಏನು ಓದಿದರೆ, ಯಾವ ಉದ್ಯೋಗ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದು? ಈಗಿನ ಬೇಡಿಕೆಯ ಉದ್ಯೋಗಗಳು ಯಾವುವು? ಇತ್ಯಾದಿ ಶಿಕ್ಷಣ-ಕರಿಯರ್ ಮಾಹಿತಿಯನ್ನು ಯುವಜನತೆಗೆ ಒದಗಿಸುವ ಸಲುವಾಗಿ ಈ ಡಿಜಿಟಲ್‌ ಕೈಪಿಡಿಯನ್ನು ರಚಿಸಲಾಗಿದೆ. ವಿವಿಧ ಹುದ್ದೆಗಳು, ಶೈಕ್ಷಣಿಕ ಆಯ್ಕೆಗಳ ಕುರಿತು ಅಧ್ಯಯನ ನಡೆಸಿ ಮಾಹಿತಿ ನೀಡಲಾಗಿದೆ. ನಿಮ್ಮ ಕರಿಯರ್ ರೂಪಿಸಿಕೊಳ್ಳಲು ವೃತಿಪರ ಸಹಾಯದ ಅಗತ್ಯಬಿದ್ದರೆ ಇಂತಹ ಸೇವೆಯನ್ನು ಒದಗಿಸುವ ಯೋಗ್ಯ, ತಜ್ಞ ವ್ಯಕ್ತಿಗಳಿಂದ ಪಡೆಯಬೇಕು. ಭವಿಷ್ಯ ಬದಲಾಯಿಸಬಹುದು! ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮುಗಿಸಿದ ಪರಿಚಯದ ವಿದ್ಯಾರ್ಥಿಗಳು ಪ್ರತಿವರ್ಷ ಕರೆ ಮಾಡಿ “ಯಾವ ಕೋರ್ಸ್ ಮಾಡಬೇಕು”, “ಯಾವುದನ್ನು… Read More »

ಕೊರೊನಾ ಕಾಲದಲ್ಲಿ ಹಣ ಗಳಿಕೆಗೆ ಕೆಲವು ಅದ್ಭುತ ಉಪಾಯಗಳು!

By | 14/07/2020

ಕೋವಿಡ್‌-೧೯ ಸಂಕಷ್ಟದ ಸಮಯವಿದು. ದೊಡ್ಡ ಉದ್ಯಮಿಯೇ ಇರಲಿ, ಸಣ್ಣ ಉದ್ಯೋಗಿಯೇ ಇರಲಿ. ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಹಣಕಾಸು ಸಂಕಷ್ಟ ಉಂಟಾಗಿಯೇ ಇರುತ್ತದೆ. ಜಗತ್ತಿನ ಅರ್ಥವ್ಯವಸ್ಥೆಯೇ ಸ್ಥಗಿತಗೊಂಡ ಅನುಭವ ಎಲ್ಲರಿಗೂ ಆಗಬಹುದು. ಹೀಗಾಗಿ, ಈ ಕೊರೊನಾ ಸಂಕಷ್ಟದ ಕಾಲದಲ್ಲಿ ನೀವು ಸಕಾರಾತ್ಮಕವಾಗಿ ಯೋಚಿಸುವುದಾದರೆ, ಜೀವನದಲ್ಲಿ ಏನಾದರೂ ಸಾಧಿಸಲು ಬಯಸುವಿರಾದರೆ ಒಂದಿಷ್ಟು ಹಣ ಗಳಿಕೆಯ ಹಾದಿಗಳನ್ನು ಹೇಳುತ್ತಿದ್ದೇನೆ. ಇವುಗಳಲ್ಲಿ ನಿಮಗೆ ಯಾವುದಾದರೂ ನಿಮಗೆ ಸೂಕ್ತವೆನಿಸಿದರೆ ಹೆಚ್ಚು ಯೋಚಿಸದೆ ಮುಂದುವರೆಯಿರಿ. ಸ್ವಂತ ಕಂಪನಿ ಆರಂಭಿಸಿ ಹಣವೇ ಇಲ್ಲ. ಹೊಸ ಕಂಪನಿ ಆರಂಭಿಸಬೇಕೆ? ಎಂದು ನೀವು… Read More »