Tag Archives: after sslc what next

ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಮುಂದೇನು? ಇಲ್ಲಿವೆ 80+ ಕರಿಯರ್ ಆಯ್ಕೆಗಳು

By | 16/07/2020

ಏನು ಓದಿದರೆ, ಯಾವ ಉದ್ಯೋಗ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದು? ಈಗಿನ ಬೇಡಿಕೆಯ ಉದ್ಯೋಗಗಳು ಯಾವುವು? ಇತ್ಯಾದಿ ಶಿಕ್ಷಣ-ಕರಿಯರ್ ಮಾಹಿತಿಯನ್ನು ಯುವಜನತೆಗೆ ಒದಗಿಸುವ ಸಲುವಾಗಿ ಈ ಡಿಜಿಟಲ್‌ ಕೈಪಿಡಿಯನ್ನು ರಚಿಸಲಾಗಿದೆ. ವಿವಿಧ ಹುದ್ದೆಗಳು, ಶೈಕ್ಷಣಿಕ ಆಯ್ಕೆಗಳ ಕುರಿತು ಅಧ್ಯಯನ ನಡೆಸಿ ಮಾಹಿತಿ ನೀಡಲಾಗಿದೆ. ನಿಮ್ಮ ಕರಿಯರ್ ರೂಪಿಸಿಕೊಳ್ಳಲು ವೃತಿಪರ ಸಹಾಯದ ಅಗತ್ಯಬಿದ್ದರೆ ಇಂತಹ ಸೇವೆಯನ್ನು ಒದಗಿಸುವ ಯೋಗ್ಯ, ತಜ್ಞ ವ್ಯಕ್ತಿಗಳಿಂದ ಪಡೆಯಬೇಕು. ಭವಿಷ್ಯ ಬದಲಾಯಿಸಬಹುದು! ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮುಗಿಸಿದ ಪರಿಚಯದ ವಿದ್ಯಾರ್ಥಿಗಳು ಪ್ರತಿವರ್ಷ ಕರೆ ಮಾಡಿ “ಯಾವ ಕೋರ್ಸ್ ಮಾಡಬೇಕು”, “ಯಾವುದನ್ನು… Read More »

ವಿಮಾನ ಪೈಲೆಟ್ ಆಗುವುದು ಹೇಗೆ?

By | 18/10/2019

ಪುಟ್ಟ ಲೋಹದ ಹಕ್ಕಿ ಆಕಾಶದಲ್ಲಿ ಹಾರಾಟ ನಡೆಸಿದಾಗ ಕಣ್ಣೆತ್ತಿ ನೋಡುವ ಅಭ್ಯಾಸ ನಿಮಗೂ ಇರಬಹುದು. ಒಮ್ಮೆಯೂ ವಿಮಾನಯಾನ ಮಾಡದವರಿಗೆ  ಆಕಾಶಯಾನ ಮಾಡಬೇಕೆಂಬ ಕನಸು ಮೂಡುತ್ತದೆ. ಇನ್ನಷ್ಟು ಮಹಾತ್ವಕಾಂಕ್ಷೆಯುಳ್ಳವರಿಗೆ ವಿಮಾನದ ಪೈಲೆಟ್ ಆಗಬೇಕೆಂಬ ಆಸೆಯೂ ಮೂಡಬಹುದು. ಬಸ್ ಚಾಲಕನ ಪಕ್ಕ ಕುಳಿತ ಮಕ್ಕಳು ಚಾಲಕನಾಗಬೇಕೆಂಬ ಕನಸು ಕಂಡರೆ ಅದು ಈಡೇರಬಹುದು. ಆದರೆ, ವಿಮಾನ ಪೈಲೆಟ್ ಆಗುವುದು ಸುಲಭವಲ್ಲ. ಹಾಗಂತ, ಅದು ಈಡೇರದ ಕನಸೇನೂ ಅಲ್ಲ! ಈಗಲೂ ವಿಮಾನ ಪೈಲೆಟ್ ಅತ್ಯಾಕರ್ಷಕ ಉದ್ಯೋಗ. ಈ ಹುದ್ದೆ ನಿಮಗೆ ಸಮಾಜದಲ್ಲಿ ಅತ್ಯುನ್ನತ ಪ್ರತಿಷ್ಠೆ ಒದಗಿಸುತ್ತದೆ. ದೇಶದಲ್ಲಿ… Read More »

ವಿಜ್ಞಾನಿ ಆಗುವುದು ಹೇಗೆ: ಕಲಿಕೆ ಮತ್ತು ತಯಾರಿ ಹೇಗಿರಬೇಕು?

By | 18/10/2019

ಸಿ.ವಿ. ರಾಮನ್, ಎಪಿಜೆ ಅಬ್ದುಲ್ ಕಲಾಂ, ಶ್ರೀನಿವಾಸ ರಾಮನುಜನ್, ಹೋಮಿ ಜೆ. ಭಾಭಾ, ಸತೇಂದ್ರನಾಥ್ ಬೋಸ್, ವಿಕ್ರಂ ಸಾರಭಾಯಿ ಹೀಗೆ ಭಾರತ ಅನೇಕ ಪ್ರಶಿದ್ಧ ವಿಜ್ಞಾನಿಗಳನ್ನು ಜಗತ್ತಿಗೆ ನೀಡಿದೆ. ನಿಮಗೂ ಭವಿಷ್ಯದಲ್ಲಿ ವಿಜ್ಞಾನಿಯಾಗಿ ಸಾಧಿಸುವ ಬಯಕೆ ಇರಬಹುದು. ಹೊಸತನ್ನು ಅನ್ವೇಷಣೆ ಮಾಡುವ ವಿಜ್ಞಾನಿಗೆ ಎಲ್ಲಿಲ್ಲದ ಗೌರವ.  ಈ ಹಿಂದಿನ ಅನ್ವೇಷಣೆಗಳನ್ನು ಆಧಾರವಾಗಿಟ್ಟುಕೊಂಡು ಅಥವಾ ಸಂಪೂರ್ಣ ಹೊಸದಾಗಿ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಾರೆ. ನಿಮ್ಮ ಭವಿಷ್ಯದ ಕರಿಯರ್ ಅನ್ನು ವಿಜ್ಞಾನಿಯಾಗಿ ಬದಲಾಯಿಸಲು ಬಯಸಿದರೆ ವಿದ್ಯಾರ್ಥಿ ಜೀವನದಿಂದಲೇ ತಯಾರಿ ಆರಂಭಿಸಿ. ಬಾಲ್ಯದಿಂದಲೇ ವಿಜ್ಞಾನಿಯಾಗುವ ಕನಸಲ್ಲಿ ಇದ್ದರೆ… Read More »