ಉದ್ಯೋಗ ಸಂದರ್ಶನ: ಈ ಹುದ್ದೆಯ ಬಗ್ಗೆ ನಿಮಗೆ ಹೇಗೆ ಮಾಹಿತಿ ದೊರೆಯಿತು?

ಉದ್ಯೋಗ ಸಂದರ್ಶನದಲ್ಲಿ ಟೆಲ್ ಮಿ ಅಬೌಟ್ ಯುವರ್ ಸೆಲ್ಫ್ ಅಥವಾ ನಿಮ್ಮ ಬಗ್ಗೆ ಹೇಳಿ? ಎಂಬ ಸಾಮಾನ್ಯ ಪ್ರಶ್ನೆಗೆ ಹೇಗೆ ಉತ್ತರಿಸುವುದೆಂದು ಈ ಹಿಂದಿನ ಲೇಖನದಲ್ಲಿ ತಿಳಿದುಕೊಂಡೆವು. ಸಂದರ್ಶನದಲ್ಲಿ ಸಾಮಾನ್ಯವಾಗಿ ಕೇಳುವ ಇನ್ನೆರಡು ಪ್ರಮುಖ ಪ್ರಶ್ನೆಗಳ  ಕುರಿತು ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಪ್ರಶ್ನೆ: ಈ ಹುದ್ದೆಯ ಕುರಿತು ನಿಮಗೆ ಹೇಗೆ ಮಾಹಿತಿ ದೊರೆಯಿತು? ಉದ್ಯೋಗ ಸಂದರ್ಶನದಲ್ಲಿ ಸಾಮಾನ್ಯವಾಗಿ `ಹೌ ಡಿಡ್ ಯು ಹಿಯರ್ ಅಬೌಟ್ ದಿ ಪೊಷಿಸನ್?’ ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಇಂತಹ ಪ್ರಶ್ನೆಯನ್ನು ಸಾಮಾನ್ಯ ಪ್ರಶ್ನೆಯೆಂದು ಬಹುತೇಕರು ಕಡೆಗಣಿಸುವುದುಂಟು. ಕಂಪನಿಯ… Read More »

ಉದ್ಯೋಗ ಸಂದರ್ಶನ: ನಿಮ್ಮ ಬಗ್ಗೆ ಹೇಳಲು ಗೊತ್ತೆ?

ಉದ್ಯೋಗ ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳಿಗೆ `ನಮ್ಮಲ್ಲಿ ಏನು ಪ್ರಶ್ನೆ ಕೇಳ್ತಾರಪ್ಪ?’ ಎಂಬ ಟೆನ್ಷನ್ ಇರುವುದು ಸಾಮಾನ್ಯ. ಯಾವ ಪ್ರಶ್ನೆ ಕೇಳುತ್ತಾರೆ ಎಂದು ಗೊತ್ತಿದ್ದರೆ ಒಂದಿಷ್ಟು ಹೊತ್ತು ಕನ್ನಡಿ ಮುಂದೆ ನಿಂತುಕೊಂಡು ಉತ್ತರ ಹೇಳಲು ಪ್ರ್ಯಾಕ್ಟೀಸ್ ಮಾಡಬಹುದಿತ್ತು ಎಂದುಕೊಳ್ಳುವವರು ಬಹಳಷ್ಟು ಜನರು ಇರುತ್ತಾರೆ. ಸಂದರ್ಶನದಲ್ಲಿ  ಇದೇ ರೀತಿಯ ಪ್ರಶ್ನೆ ಕೇಳುತ್ತಾರೆ ಎಂದು ಇದಮಿತ್ತಂ ಹೇಳುವುದು ಕಷ್ಟ. ಯಾಕೆಂದರೆ, ಪ್ರಶ್ನೆ ಕೇಳುವುದು ಆಯಾ ಸಂದರ್ಶಕರ ಮರ್ಜಿಗೆ ಬಿಟ್ಟ ವಿಷಯ. ಆದರೆ, ಅವರಲ್ಲಿಯೂ ಪ್ರಶ್ನೆ ಕೇಳಲು ಸಾಕಷ್ಟು ವಿಷಯಗಳು ಇರುವುದಿಲ್ಲ. ಬಹುತೇಕ ಪ್ರಶ್ನೆಗಳು ಈ ಹಿಂದೆ… Read More »

ಕನ್ನಡ ಗೈಡ್: ಫೋನ್ ಸಿಮ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು?

ಫೋನ್ ಕಳೆದುಹೋದಾಗ ಅದರ ಜೊತೆ ಸಿಮ್ ಫೋನ್ ಸಹ ಕಳೆದುಹೋಗುತ್ತದೆ. ಇಂತಹ ಸಮಯದಲ್ಲಿ ಆ ಫೋನ್ ನಲ್ಲಿರುವ ಸಿಮ್ ಕಾರ್ಡ್ ಡಿಆಕ್ಟಿವೇಟ್ ಮಾಡಬೇಕು. (ಓದಿ: ಫೋನ್ ಕಳೆದುಹೋದರೆ ಏನು ಮಾಡಬೇಕು?) ಕನ್ನಡ ಗೈಡ್ Gadget tips. ಮೊದಲಿಗೆ ನಿಮ್ಮ ಸಿಮ್ ಗೆ ಸಂಬಂಧಪಟ್ಟ ಕಸ್ಟಮರ್ ಕೇರ್ ಗೆ ಕರೆ ಮಾಡಿ. ಗೂಗಲ್ ನಲ್ಲಿ ಹೋಗಿ ಹುಡುಕಿದರೆ ಕಸ್ಟಮರ್ ಕೇರ್ ನಂಬರ್ ಸಿಗುತ್ತದೆ. ಅಂದರೆ ಗೂಗಲ್ ಗೆ ಹೋಗಿ ಬಿಎಸ್ ಎನ್ ಎಲ್ ಕಸ್ಟಮರ್ ಕೇರ್ ನಂಬರ್, ಏರ್ಟೆಲ್ ಕಸ್ಟಮರ್ ಕೇರ್, ಐಡಿಯಾ… Read More »

ಕನ್ನಡ ಗೈಡ್: ಮೊಬೈಲ್ ಕಳೆದು ಹೋದರೆ ಏನು ಮಾಡಬೇಕು?

ಕನ್ನಡ ಗೈಡ್- ಬೆಳೆಬಾಳುವ ಫೋನ್ ಕಳೆದುಹೋದರೆ ಚಿಂತೆ ಆಗುವುದು ಸಹಜ. ನೀವು ದುಬಾರಿ ಫೋನ್ ಖರೀದಿಸಿದ್ದರೆ ಅಯ್ಯೋ ಹತ್ತಿಪ್ಪತ್ತು ಸಾವಿರ ರೂ. ವ್ಯರ್ಥವಾಯ್ತಲ್ಲ ಎಂದು ದುಃಖ ಪಡಬೇಕಾಗಬಹುದು. ಇದೇ ರೀತಿ, ಆಪ್ತರ ಸಂಪರ್ಕ ಸಂಖ್ಯೆಗಳನ್ನು ಕಳೆದುಕೊಳ್ಳಬೇಕಾಗಬಹುದು. ನೀವು ಆಂಡ್ರಾಯ್ಡ್ ಫೋನ್ ನಲ್ಲಿ ಸಂಪರ್ಕ ಸಂಖ್ಯೆಗಳನ್ನು ಸಿಂಕ್ ಮಾಡಿದ್ದರೆ ಮತ್ತೊಂದು ಫೋನ್ ಗೆ ಹೊಸ ಸಿಮ್ ಅಳವಡಿಸಿದಾಗ ಸಂಪರ್ಕ ಸಂಖ್ಯೆಗಳು ದೊರಕುತ್ತವೆ. ಅಥವಾ ಗೂಗಲ್ ಕಾಂಟ್ಯಾಕ್ಟ್ ವಿಭಾಗಕ್ಕೆ ಹೋಗಿ ಸಂಖ್ಯೆಗಳನ್ನು ಪಡೆಯಬಹುದು. ಮೊಬೈಲ್ ಕಳೆದುಹೋದರೆ ಏನು ಮಾಡಬೇಕು? ಮೊದಲಿಗೆ ಆ ಮೊಬೈಲ್ ನಲ್ಲಿರುವ… Read More »

ವೆಬ್ ಸೈಟ್ ಗೈಡ್: ವರ್ಡ್ ಪ್ರೆಸ್ನಲ್ಲಿ ಇರಬೇಕಾದ ಪ್ಲಗಿನ್ಗಳು

ವರ್ಡ್ ಪ್ರೆಸ್ ವೆಬ್ ಸೈಟ್ ರಚಿಸಿದ ಬಳಿಕ ಸಾಕಷ್ಟು ಉಚಿತ ಅಥವಾ ಪ್ರೀಮಿಯಂ ಥೀಮ್ ಮತ್ತು ಪ್ಲಗಿನ್ ಗಳನ್ನು ಅಳವಡಿಸುವ ಅವಕಾಶ ನಮಗೆ ದೊರಕುತ್ತದೆ. ಎಲ್ಲವನ್ನೂ ಪರೀಕ್ಷಿಸಿಬಿಡೋಣ ಎಂದು ಸಿಕ್ಕ ಸಿಕ್ಕ ಪ್ಲಗಿನ್ ಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವಲ್ಲ. ಇರುವ ಸಾವಿರಾರು ಪ್ಲಗಿನ್ ಗಳಲ್ಲಿ ಕೆಲವು ಪ್ಲಗಿನ್ ಗಳು ಸಮರ್ಪಕವಾಗಿ ಕೋಡಿಂಗ್ ಆಗಿರುವುದಿಲ್ಲ. ಇವು ನಿಮ್ಮ ವೆಬ್ ಸೈಟ್ ಅನ್ನು ಘಾಸಿಗೊಳಿಸಬಹುದು. ಕೆಲವು ಪ್ಲಗಿನ್ ಅಳವಡಿಸಿದ ಬಳಿಕ ವೆಬ್ ಸೈಟ್ ಕ್ರ್ಯಾಷ್ ಸಹ ಆಗಬಹುದು. ಕೆಲವೊಂದು ಪ್ಲಗಿನ್ ಗಳು ವರ್ಡ್ ಪ್ರೆಸ್ ವೆಬ್… Read More »