ಷೇರುಪೇಟೆಯಲ್ಲಿ ಉದ್ಯೋಗ ಪಡೆಯುವುದು ಹೇಗೆ?

By | 02/04/2020

ಷೇರುಪೇಟೆಯೆಂದರೆ ಒಂದಿಷ್ಟು ಜನರಿಗೆ ಏನೋ ಆಕರ್ಷಣೆ. ಇಲ್ಲಿ ಹಣ ಹೂಡಿಕೆ ಮಾಡಿದರೆ ಮುಂದೊಂದು ದಿನ ಬಂಪರ್ ಹೊಡೆಯಬಹುದು. ಪ್ರತಿದಿನದ ವಹಿವಾಟಿನ ಏರಿಳಿತದಲ್ಲಿ ಸಾಕಷ್ಟು ಹಣ ಸಂಪಾದಿಸಬಹುದು. ದುಡಿದ ಒಂದಿಷ್ಟು ಹಣವನ್ನು ಷೇರುಪೇಟೆಯಲ್ಲಿ ತೊಡಗಿಸುತ್ತಾರೆ. ಷೇರುಪೇಟೆ ಸಂಬಧಿಂತ ಉದ್ಯೋಗ ಹೆಚ್ಚಿನವರಿಗೆ ಅಚ್ಚುಮೆಚ್ಚು. ಸೆನ್ಸೆಕ್ಸ್ ಗೂಳಿ ಕರಡಿ ಕುಣಿತಕ್ಕೆ ತಕ್ಕಂತೆ ಗ್ರಾಹಕರನ್ನು ನಿರ್ವಹಿಸುವ ಪಾತ್ರವದು. ಷೇರು ವಹಿವಾಟಿಗೆ ಸಾಥ್ ನೀಡುವ ಬ್ರೋಕಿಂಗ್ ಹೌಸ್‍ಗಳು, ಸೆಕ್ಯುರಿಟೀಸ್ ಕಂಪನಿಗಳು ಷೇರುಪೇಟೆಯ ಜ್ಞಾನವಿರುವ ಚತುರರನ್ನು ನೇಮಿಸಿಕೊಳ್ಳುತ್ತವೆ. ಅಲ್ಲಿ ಈಕ್ವಿಟಿ ಡೀಲರ್, ಟ್ರೇಡ್ ಎಕ್ಸಿಕ್ಯೂಟಿವ್ಸ್, ವೆಬ್ ಅಸಿಸ್ಟ್ ಡೀಲರ್ಸ್, ಷೇರ್ ಕನ್ಸಲ್ಟೆಂಟ್ ಸೇರಿದಂತೆ ಹಲವು ಬಗೆಯ ಉದ್ಯೋಗಾವಕಾಶಗಳಿವೆ. ಇಲ್ಲಿ ಮಾತ್ರವಲ್ಲದೆ ಷೇರು ವಿನಿಮಯ ಕೇಂದ್ರಗಳಲ್ಲಿಯೂ ಅವಕಾಶ ಪಡೆಯಬಹುದು.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಎನ್‍ಎಸ್‍ಇ ಮತ್ತು ಮುಂಬೈ ಷೇರುಪೇಟೆ ಬಿಎಸ್‍ಇ ಇತರ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಲ್ಪಾವಧಿಯ ಕೋರ್ಸ್‍ಗಳನ್ನು ನಡೆಸಿ ಸರ್ಟಿಫಿಕೇಟ್‍ಗಳನ್ನು ಕೊಡುತ್ತವೆ. ಆನ್‍ಲೈನ್‍ನಲ್ಲೂ ಇಂತಹ ಕೋರ್ಸ್‍ಗಳನ್ನು ಕಲಿಯುವ ಅವಕಾಶವಿದೆ.

“ಷೇರುಪೇಟೆ ಕುರಿತು ಪ್ರತಿದಿನ ಕಲಿಯಿರಿ. ಆದರೆ, ಇತರರ ಅನುಭವದಿಂದ ಕಲಿಯಿರಿ. ಯಾಕೆಂದರೆ, ಅದು ಅಗ್ಗವಾಗಿದೆ. ನಿಮ್ಮ ಅನುಭವದಿಂದ ಕಲಿತರೆ ದುಬಾರಿಯಾಗುತ್ತದೆ”

– ಜಾನ್ ಬೊಗ್ಲೆ, ತೆರಿಗೆ ತಜ್ಞ

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವು(ಎನ್‍ಎಸ್‍ಐ) ಈ ನಿಟ್ಟಿನಲ್ಲಿ ಸರ್ಟಿಫೈಡ್ ಕ್ಯಾಪಿಟಲ್ ಮಾರ್ಕೆಟ್ ಪೆÇ್ರಫೆಷನಲ್(ಎನ್‍ಸಿಸಿಎಂಪಿ) ಎಂಬ ಕ್ಲಾಸ್ ರೂಂ ಕೋರ್ಸ್ ನಡೆಸುತ್ತದೆ. ಇದು 100 ಗಂಟೆ ಕೋರ್ಸ್. ಅಂದರೆ, 3-4 ತಿಂಗಳ ಅವಧಿಯದ್ದಾಗಿದೆ. ಈ ಅವಧಿಯಲ್ಲಿ ಬಂಡವಾಳ ಮಾರುಕಟ್ಟೆಗೆ ಸಂಬಂಧಿಸಿದ ಥಿಯರಿ ಮತ್ತು ಪ್ರಾಕ್ಟಿಕಲ್ ಕ್ಲಾಸ್‍ಗಳಿರುತ್ತವೆ. ಈ ಕೋರ್ಸ್‍ನಲ್ಲಿ ಪಾಸಾದವರಿಗೆ ಎನ್‍ಎಸ್‍ಇ ಮತ್ತು ಕೋರ್ಸ್ ನೀಡಿರುವ ಶಿಕ್ಷಣ ಸಂಸ್ಥೆ ಜೊತೆಯಾಗಿ ಸರ್ಟಿಫಿಕೇಟ್ ನೀಡುತ್ತವೆ. ಈಕ್ವಿಟಿ ಮಾರುಕಟ್ಟೆ, ಡೆಪ್ಟ್ ಮಾರ್ಕೆಟ್, ಡಿರೈವಿಟಿವ್ಸ್, ಮ್ಯಾಕ್ರೊ ಎಕಾನಮಿಕ್ಸ್, ಟೆಕ್ನಿಕಲ್ ಅನಾಲಿಸಿಸ್, ಫಂಡಮೆಂಟಲ್ ಅನಾಲಿಸಿಸ್ ಸಬ್ಜೆಕ್ಟ್‍ಗಳ ಬಗ್ಗೆ ಈ ಕೋರ್ಸ್‍ನಲ್ಲಿ ತಿಳಿದುಕೊಳ್ಳಬಹುದು.

ಮುಂಬೈ ಷೇರು ವಿನಿಮಯ ಕೇಂದ್ರ ಬಿಎಸ್‍ಇ ತನ್ನದೇ ವಿದ್ಯಾಸಂಸ್ಥೆಯನ್ನು ಹೊಂದಿದೆ. ಬಿಎಸ್‍ಇ ಇನ್‍ಸ್ಟಿಟ್ಯೂಟ್ ಲಿಮಿಟೆಡ್‍ನಲ್ಲಿ ಷೇರುಪೇಟೆಗೆ ಸಂಬಂಧಿಸಿದ ಕಡಿಮೆ ಅವಧಿಯ ಮತ್ತು ದೀರ್ಘಾವಧಿಯ ಕೋರ್ಸ್‍ಗಳಿವೆ. ಸರ್ಟಿಫಿಕೇಟ್ ಆನ್ ಕ್ಯಾಪಿಟಲ್ ಮಾರ್ಕೆಟ್ ಕೋರ್ಸ್‍ನಲ್ಲಿ ಷೇರುಪೇಟೆಯ ಬಗ್ಗೆ ವಿಸ್ತೃತವಾಗಿ ಕಲಿಯಬಹುದು. ಈ ಕೋರ್ಸ್‍ಗೆ ಫೈನಾನ್ಶಿಯಲ್ ಮತ್ತು ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಯುಜಿಸಿ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿಯಲ್ಲಿ ಶೇಕಡ 50ಕ್ಕಿಂತ ಹೆಚ್ಚು ಅಂಕ ಪಡೆದವರು ಈ ಕೋರ್ಸ್ ಮಾಡಬಹುದು.

ಆನ್‍ಲೈನ್‍ನಲ್ಲಿಯೂ ಷೇರುಪೇಟೆಗೆ ಸಂಬಂಧಪಟ್ಟ ವಿವಿಧ ಕೋರ್ಸ್‍ಗಳು ಇವೆ. ನೀವು ಯಾವ ಹುದ್ದೆ ಪಡೆಯಬೇಕೋ ಅದಕ್ಕೆ ಸಂಬಂಧಪಟ್ಟ ಕೋರ್ಸ್‍ಗಳನ್ನು ಮಾಡಬಹುದು.

ಎನ್‍ಎಸ್‍ಇ ಅಂಗೀಕೃತ ಇಲರ್ನ್‍ಮಾರ್ಕೆಟ್ ವೆಬ್‍ಸೈಟ್‍ನಲ್ಲಿ ಷೇರುಪೇಟೆಗೆ ಸಂಬಂಧಪಟ್ಟ ಕೋರ್ಸ್‍ಗಳಿವೆ. ಇಲ್ಲಿ 83ಕ್ಕೂ ಹೆಚ್ಚು ಬೋಧನಾ ವಿಷಯಗಳು, 100ಕ್ಕೂ ಹೆಚ್ಚು ಬೋಧನಾ ವಿಡಿಯೋಗಳಿವೆ. ಷೇರುಪೇಟೆಯ ಬೇಸಿಕ್ಸ್ ವಿಷಯಗಳಿಂದ ಸಮಗ್ರ ಅ`À್ಯಯನದವರೆಗೆ ಕಲಿಯುವ ಅವಕಾಶವಿದೆ. ಆನ್‍ಲೈನ್ ಕೋರ್ಸ್‍ನಲ್ಲಿ ಎನ್‍ಎಸ್‍ಇ ಸರ್ಟಿಫಿಕೇಟ್ ಮಾತ್ರವಲ್ಲದೆ ಇತರ ಜಾಬ್ ಓರಿಯೆಂಟೆಡ್ ಸರ್ಟಿಫಿಕೇಟ್ ದೊರಕುತ್ತದೆ. ಪ್ರತಿಯೊಂದು ಚಾಪ್ಟರ್ ಮುಗಿದ ನಂತರ ಆನ್‍ಲೈನ್ ಪರೀಕ್ಷೆ ಸಹ ನಡೆಯುತ್ತದೆ. ಪಾಸಾದರೆ ಸರ್ಟಿಫಿಕೇಟ್ ನಿಮ್ಮದಾಗುತ್ತದೆ.

ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರು ಐಐಟ್ರೇಡ್ ವೆಬ್‍ಸೈಟ್‍ನಲ್ಲಿ ಷೇರು ಮಾರುಕಟ್ಟೆಗೆ ಸಂಬಂಧಪಟ್ಟ ಕೋರ್ಸ್ ಮಾಡಬಹುದು. ಇಲ್ಲಿ ಮೂರು ಹಂತದ ಕೋರ್ಸ್‍ಗಳಿವೆ. ಲೆವೆಲ್ 1ರಲ್ಲಿ ಫೈನಾನ್ಸಿಯಲ್ ಮಾರ್ಕೆಟ್ಸ್, ಮ್ಯೂಚುಯಲ್ ಫಂಡ್ಸ್ ಬಗ್ಗೆ ತಿಳಿದುಕೊಳ್ಳಬಹುದು. ಲೆವೆಲ್ 2ನಲ್ಲಿ ಬಂಡವಾಳ ಮಾರುಕಟ್ಟೆ, ಕರೆನ್ಸಿ ಮಾರುಕಟ್ಟೆ, ಕಮಾಡಿಟಿ ಮಾರುಕಟ್ಟೆ, ಡಿರೈಟಿವ್ ಮಾರ್ಕೆಟ್, ಫೈನಾನ್ಸಿಯಲ್ ಅಡ್ವೈಸರಿ ಸರ್ವೀಸಸ್ ಬಗ್ಗೆ ಕೋರ್ಸ್ ಮಾಡಬಹುದು. ಮೂರನೇ ಲೆವೆಲ್‍ನಲ್ಲಿ ಅನಾಲಿಸ್ಟ್ ಸಂಬಂಸಿದ ಕೋರ್ಸ್‍ಗಳಿವೆ. ಇದರಲ್ಲಿ ಸರ್ಟಿಫೈಡ್ ಈಕ್ವಿಟಿ ಅನಾಲಿಸ್ಟ್, ಸರ್ಟಿಫೈಡ್ ಟೆಕ್ನಿಕಲ್ ಅನಾಲಿಸ್ಟ್ ಕೋರ್ಸ್‍ಗಳಿವೆ. ಕೊನೆಗೆ ಐಐಟ್ರೇಡ್ ಮತ್ತು ಎನ್‍ಎಸ್‍ಇ ಜೊತೆಯಾಗಿ ಸರ್ಟಿಫಿಕೇಟ್ ನೀಡುತ್ತವೆ.

ದಲಾಲ್‍ಸ್ಟ್ರೀಟ್ ಅಕಾಡೆಮಿಯೂ ಆನ್‍ಲೈನ್‍ನಲ್ಲಿ ಷೇರುಪೇಟೆ ಸರ್ಟಿಫಿಕೇಟ್ ಕೋರ್ಸ್ ನಡೆಸುತ್ತಿದೆ. ಕೋರ್ಸ್ ಹೆಸರು ಸರ್ಟಿಫಿಕೇಟ್ ಇನ್ ಸ್ಟಾರ್ಕ್ ಮಾರ್ಕೆಟ್ ಆ್ಯಂಡ್ ಈಕ್ವಿಟಿ ರಿಸರ್ಚ್. ಈ ಕೋರ್ಸ್‍ಗೆ ಈಗಾಗಲೇ ವೃತ್ತಿಯಲ್ಲಿರುವವರು, ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸೇರಿದಂತೆ ಆಸಕ್ತರು ಸೇರಬಹುದು. ಇಲ್ಲಿ ಒಟ್ಟು ನಾಲ್ಕು ಮಾಡ್ಯುಲ್‍ಗಳಲ್ಲಿ ಕಲಿಸಲಾಗುತ್ತದೆ. ಮಾಡ್ಯುಲ್ 1ರಲ್ಲಿ ಹೂಡಿಕೆಯ ಬೇಸಿಕ್ಸ್, ಈಕ್ವಿಟಿ ಷೇರುಗಳ ಬಗ್ಗೆ, ಐಪಿಒ, ಸೆಕೆಂಡರಿ ಮಾರ್ಕೆಟ್, ಟ್ರೇಡಿಂಗ್, ಕ್ಲೀಯರಿಂಗ್ ಮತ್ತು ಸಟ್ಲ್‍ಮೆಂಟ್ ಬಗ್ಗೆ ಕಲಿಯಬಹುದು. ಮಾಡ್ಯುಲ್ 2ರಲ್ಲಿ ಎಕಾನಮಿಕ್ಸ್, ಇಂಡಸ್ಟ್ರಿ, ಕಂಪನಿ, ಟೆಕ್ನಿಕಲ್ ಅನಾಲಿಸಿಸ್ ಬಗ್ಗೆ ಕಲಿಯಬಹುದು. ಮಾಡ್ಯುಲ್‍ನಲ್ಲಿ ಷೇರು ಹೂಡಿಕೆ, ಹೂಡಿಕೆದಾರರ ವರ್ತನೆಗಳು, ಆನ್‍ಲೈನ್ ವಹಿವಾಟು, ಶಾರ್ಟ್ ಟರ್ಮ್ ಟ್ರೇಡಿಂಗ್, ಪೆÇೀಟ್‍ಪೆÇೀಲಿಯೊ ಮ್ಯಾನೇಜ್‍ಮೆಂಟ್ ಬಗ್ಗೆ ತಿಳಿದುಕೊಳ್ಳಬಹುದು. ಮಾಡ್ಯುಲ್ 4ರಲ್ಲಿ ಮ್ಯೂಚುಯಲ್ ಫಂಡ್ಸ್, ಈಕ್ವಿಟಿ ಡಿರೈಟಿವ್ಸ್, ಕಮಾಡಿಟಿಸ್ ಮತ್ತು ಕಮಾಡಿಟಿಸ್ ಟ್ರೇಡಿಂಗ್ ಬಗ್ಗೆ ಕಲಿಯಬಹುದು. ಇವೆಲ್ಲದರ ನಂತರ ಲೈವ್ ಪ್ರಾಜೆಕ್ಟ್ ಮತ್ತು ಫೈನಲ್ ಎಗ್ಸಾಂ ಇರುತ್ತದೆ.

Leave a Reply

Your email address will not be published. Required fields are marked *