ಉದ್ಯೋಗ ಸಂದರ್ಶನ: ಈ ಹುದ್ದೆಯ ಬಗ್ಗೆ ನಿಮಗೆ ಹೇಗೆ ಮಾಹಿತಿ ದೊರೆಯಿತು?

Photo by rawpixel on Unsplash

ಉದ್ಯೋಗ ಸಂದರ್ಶನದಲ್ಲಿ ಟೆಲ್ ಮಿ ಅಬೌಟ್ ಯುವರ್ ಸೆಲ್ಫ್ ಅಥವಾ ನಿಮ್ಮ ಬಗ್ಗೆ ಹೇಳಿ? ಎಂಬ ಸಾಮಾನ್ಯ ಪ್ರಶ್ನೆಗೆ ಹೇಗೆ ಉತ್ತರಿಸುವುದೆಂದು ಈ ಹಿಂದಿನ ಲೇಖನದಲ್ಲಿ ತಿಳಿದುಕೊಂಡೆವು. ಸಂದರ್ಶನದಲ್ಲಿ ಸಾಮಾನ್ಯವಾಗಿ ಕೇಳುವ ಇನ್ನೆರಡು ಪ್ರಮುಖ ಪ್ರಶ್ನೆಗಳ  ಕುರಿತು ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.

ಪ್ರಶ್ನೆ: ಈ ಹುದ್ದೆಯ ಕುರಿತು ನಿಮಗೆ ಹೇಗೆ ಮಾಹಿತಿ ದೊರೆಯಿತು?

ಉದ್ಯೋಗ ಸಂದರ್ಶನದಲ್ಲಿ ಸಾಮಾನ್ಯವಾಗಿ `ಹೌ ಡಿಡ್ ಯು ಹಿಯರ್ ಅಬೌಟ್ ದಿ ಪೊಷಿಸನ್?’ ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಇಂತಹ ಪ್ರಶ್ನೆಯನ್ನು ಸಾಮಾನ್ಯ ಪ್ರಶ್ನೆಯೆಂದು ಬಹುತೇಕರು ಕಡೆಗಣಿಸುವುದುಂಟು. ಕಂಪನಿಯ ಕುರಿತು ನಿಮ್ಮ ಪ್ಯಾಷನ್ ಅನ್ನು ತೋರಿಸಲು ಮತ್ತು ಅವಕಾಶವನ್ನು ಬಾಚಿಕೊಳ್ಳಲು ಇದು ಅತ್ಯುತ್ತಮ ಅವಕಾಶ ನೀಡುವ ಪ್ರಶ್ನೆಯಾಗಿದೆ. ಉದಾಹರಣೆಗೆ

[rml_read_more]

  • ನಿಮಗೆ ಈ ಉದ್ಯೋಗವನ್ನು ನಿಮ್ಮ ಸ್ನೇಹಿತರು ಅಥವಾ ಇನ್ಯಾರೋ ಹೇಳಿದರು ಎನ್ನಿ. ಅವರ ಹೆಸರು ಹೇಳಿ.
  • ನಂತರ ನನಗೆ ಇಂತಹ ಅವಕಾಶ ಇಲ್ಲಿದೆ ಎಂದು ಗೊತ್ತಾದಗ ನಿಮಗಾದ ಎಕ್ಸೈಟ್‍ಮೆಂಟ್ ಅನ್ನು ಪ್ರದರ್ಶಿಸಿ.
  • ಎಲ್ಲಾದರೂ ಕಂಪನಿಯಲ್ಲಿ ಇರುವ ಉದ್ಯೋಗದ ಕುರಿತು ಯಾವುದೋ ಕಾರ್ಯಕ್ರಮದಲ್ಲಿ ಅಥವಾ ಲೇಖನದ ಮೂಲಕ ಮಾಹಿತಿ ಪಡೆದಿದ್ದಾರೆ ಅದನ್ನು ತಿಳಿಸಿ.
  • ಎಲ್ಲಾದರೂ ಉದ್ಯೋಗ ತಾಣಗಳಲ್ಲಿ ಈ ಹುದ್ದೆಯ ಮಾಹಿತಿ ದೊರಕಿದ್ದರೆ ಅಲ್ಲಿರುವ ಅಷ್ಟು ಹುದ್ದೆಗಳಲ್ಲಿ ಈ ಹುದ್ದೆ ಯಾಕೆ ನಿಮ್ಮ ಗಮನ ಸೆಳೆಯಿತು ಎಂದು ತಿಳಿಸಿ.
  • ಈ ಪ್ರಶ್ನೆಗೆ ಉತ್ತರಿಸುವಾಗ ಈ ಮುಂದಿನ ಕೆಲವು ಅಂಶಗಳನ್ನು ಗಮನಿಸಿ.

ಸ್ನೇಹಿತರು ಹೇಳಿದ್ದರೆ ತಿಳಿಸಿ

ಈ ಕಂಪನಿಯಲ್ಲಿರುವ ವ್ಯಕ್ತಿಯೊಬ್ಬರು ಪರಿಚಯ ಇದ್ದಾರೆ ಎಂಬ ಮಾಹಿತಿಯನ್ನು ತಿಳಿಸಲು ನೀವು ಹಿಂದೆಮುಂದೆ ನೋಡಬೇಡಿ. ಈ ರೀತಿ ಹೇಳಿದರೆ ಸಂದರ್ಶಕರು ಏನೂ ತಿಳಿದುಕೊಳ್ಳುವುದಿಲ್ಲ. ಆ ಕಂಪನಿಯಲ್ಲಿರುವ ನಿಮ್ಮ ಸ್ನೇಹಿತರಿಗೂ ಇದರಿಂದ ಲಾಭವಿದೆ. ಕಂಪನಿಯೊಂದಕ್ಕೆ ಉದ್ಯೋಗಿಯನ್ನು ರೆಫರ್ ಮಾಡಿರುವುದಕ್ಕೆ ರೆಫರ್ ಮಾಡಿದವರಿಗೂ `ರೆಫರಲ್ ಹಣ ಅಥವಾ ಬಹುಮಾನ’ವನ್ನು ಬಹುತೇಕ ಕಂಪನಿ ನೀಡುತ್ತದೆ.

ಸರಳವಾಗಿ ಹೇಳಿಬಿಡಬಹುದು

ಎಲ್ಲಿ ಈ ಉದ್ಯೋಗದ ಮಾಹಿತಿ ದೊರಕಿತು ಎಂಬ ಪ್ರಶ್ನೆಗೆ ಹೆಚ್ಚು ಎಕ್ಸೈಟ್‍ಮೆಂಟ್‍ನಿಂದ ಹೇಳುವುದು ತಪ್ಪಲ್ಲ. ಕೆಲವೊಮ್ಮೆ ಇದರಿಂದ ಮತ್ತಷ್ಟು ಪ್ರಶ್ನೆಗಳು ಎದುರಾಗಬಹುದು. ಇದರ ಬದಲು ಇದಕ್ಕೆ ಉತ್ತರವನ್ನು ಶಾರ್ಟ್ ಆಗಿ ಹೇಳಬಹುದು. `ನಾನು ಈ ಹುದ್ದೆಯ ಕುರಿತು ಮಾಹಿತಿಯನ್ನು …. ಇಲ್ಲಿ ನೋಡಿದೆ. ನಾನು ಬಹಳಷ್ಟು ವರ್ಷಗಳಿಂದ ಈ ಕಂಪನಿಯಲ್ಲಿ ಕೆಲಸ ಮಾಡಬೇಕೆಂದು ಕನಸು ಕಂಡಿದ್ದೆ. ಇಲ್ಲಿ ಉದ್ಯೋಗವಿದೆ ಎಂದು ತಿಳಿದಾಗ ನಾನು ಹರ್ಷಗೊಂಡೆ’ ಎನ್ನಿ. ಇದನ್ನು ಇಂಗ್ಲಿಷ್‍ನಲ್ಲಿ ಹೇಗೆ ಹೇಳಬೇಕೆಂದು ಕೇಳುವಿರಾ? `“I found it on [wherever you found the job], and since I’ve been hoping to work for the company for a long time, I was excited to see the opening had become available.” ಎಂದು ಹೇಳಿಬಿಡಿ.

ಬೋನಸ್ ಟಿಪ್ಸ್

ಹುದ್ದೆಯ ಮಾಹಿತಿ ಎಲ್ಲಿ ದೊರೆಯಿತು ಎನ್ನುವುದರ ಜೊತೆಗೆ ಈ ಹುದ್ದೆಯ ಕುರಿತು ನಿಮಗಿರುವ ಆಸಕ್ತಿಯ ಮಾಹಿತಿಯನ್ನೂ ತಿಳಿಸಿ. ಪೇಪರ್‍ನಲ್ಲಿ ಆ್ಯಡ್ ನೋಡಿದೆ ಎಂದಷ್ಟೇ ಹೇಳಿ ಸುಮ್ಮನಾಗಬೇಡಿ. ಅವರು ಕೇಳದೆ ಇದ್ದರೂ ಒಂದೆರಡು ಮಾತು ಆಡಿರಿ. ಇದರಿಂದ ನಷ್ಟವೇನೂ ಆಗದು.

ಉದ್ಯೋಗ ಸಂದರ್ಶನ: ನಿಮ್ಮ ಬಗ್ಗೆ ಹೇಳಲು ಗೊತ್ತೆ?