Monthly Archives: September 2018

ರುಚಿಯಾದ ತೊಡೆದೇವು ಸವಿದಿದ್ದೀರಾ…?

By | 06/09/2018

ತೊಡೆದೇವು ಇದೊಂದು ಮಲೆನಾಡಿನ ವಿಶಿಷ್ಟ ಸಿಹಿತಿಂಡಿ. ಮಲೆನಾಡಿಗರ ಮನೆಮನೆಗಳಲ್ಲಿ ಈ ಸಾಂಪ್ರದಾಯಿಕ ತಿಂಡಿಗೆ ಪ್ರಮುಖ ಸ್ಥಾನವಿದೆ.  ತುಂಬ ಕಡಿಮೆ ವಸ್ತುಗಳನ್ನು ಬಳಸಿ ತಾಳ್ಮೆ ಹಾಗು ಜಾಣ್ಮೆಯಿಂದ ಮಾಡಬೇಕಾದ ತಿಂಡಿಯಿದು. ತೊಡೆದೇವು ತುಂಬ ಆರೋಗ್ಯಕರವಾದ ಸಿಹಿತಿಂಡಿ. ಕೇವಲ ಅಕ್ಕಿ ಮತ್ತು ಬೆಲ್ಲದಿಂದ ಮಾಡುವಂತಹ ಈ ಸಿಹಿತಿಂಡಿಯು ಪುಟ್ಟ ಮಕ್ಕಳು ಮತ್ತು ವಯೋವೃದ್ಧರಿಗೂ ಸುಲಭವಾಗಿ ಜೀರ್ಣವಾಗುತ್ತದೆ. ಗಾಳಿಯಾಡಂತೆ ಇಟ್ಟರೆ ತಿಂಗಳವರೆಗೂ ತಾಜಾತನ ಉಳಿಸಿಕೊಳ್ಳುತ್ತದೆ . ತೊಡೆದೇವುವಿಗೆ ತುಂಬ ಬೇಡಿಕೆಯಿದೆ . ಆದರೆ ಇದನ್ನು ಹದವಾಗಿ ತಯಾರಿಸಲು ಸ್ವಲ್ಪ ನೈಪುಣ್ಯತೆ ಬೇಕಾಗುವುದರಿಂದ ಎಲ್ಲರಿಗೂ ಮಾಡಲು ಕಷ್ಟ… Read More »

ಆರೋಗ್ಯಕ್ಕೆ ಉತ್ತಮವಾದ ಮೆಂತ್ಯಸೊಪ್ಪಿನ ಕಡುಬು

By | 06/09/2018

ಮೆಂತ್ಯಸೊಪ್ಪು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಮೆಂತ್ಯಸೊಪ್ಪಿನಲ್ಲಿ ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ, ಪೊಟ್ಯಾಶಿಯಂಗಳಿವೆ. ಇದು ಚರ್ಮ, ಕೂದಲು ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಷ್ಟೊಂದು ಉಪಯೋಗಕಾರಿಯಾದ ಮೆಂತ್ಯ ಸೊಪ್ಪು ಕಹಿ ಎಂದು ಅದನ್ನು ತಿನ್ನಲು ಕೆಲವರು ಇಷ್ಟಪಡುವುದಿಲ್ಲ. ಆದಕಾರಣ ಮೆಂತ್ಯ ಸೊಪ್ಪು ಎಂದಾಕ್ಷಣ ದೂರ ಓಡಿ ಹೋಗುವವರಿಗೆ ಅದರಿಂದ ರುಚಿ ರುಚಿಯಾದ ಕಡುಬು ಮಾಡಿಕೊಡಿ. ಒಂದು ಸಾರಿ ತಿಂದರೆ ಮತ್ತೆ ಬಿಡೋದೆ ಇಲ್ಲ. ಮೆಂತ್ಯಸೊಪ್ಪಿನ ಕಡುಬು ಮಾಡಲು ಬೇಕಾಗುವ ಸಾಮಾಗ್ರಿಗಳು  ಮೊದಲಿಗೆ 2 ದೊಡ್ಡ ಕಪ್ ಜೋಳದ… Read More »

ಸರಳವಾಗಿ ಮಾಂಜಿ (ಪಾಂಪ್ರಟ್) ಫಿಶ್ ಫ್ರೈ ಮಾಡುವುದು ಹೇಗೆ?

By | 05/09/2018

ಮುಖ್ಯವಾಗಿ ಬ್ಯಾಚುಲರ್ ಗಳಿಗೆ ಎಲ್ಲಾ ಐಟಂ ಹಾಕಿ ಅಡುಗೆ ಮಾಡುವುದು ಕಷ್ಟವಾಗುತ್ತದೆ. ಎಷ್ಟು ಸರಳ ರೆಸಿಪಿ ಇರುತ್ತದೆಯೋ ಅಂತಹ ರೆಸಿಪಿಯನ್ನು ಹುಡುಕುತ್ತಾರೆ. ಬ್ಯಾಚುಲರ್ಸ್ ಮಾತ್ರವಲ್ಲದೆ ಗೃಹಸ್ಥರಿಗೂ ಸರಳವಾಗಿ ಅಡುಗೆ ಮಾಡುವುದು ಇಷ್ಟವಾಗಬಹುದು. ಇಷ್ಟವಾಗದೆಯೂ ಇರಬಹುದು. ಪಾಂಪ್ರೆಟ್ ಅಥವಾ ಮಾಂಜಿ ಮೀನನ್ನು ಸರಳವಾಗಿ ಹೇಗೆ ಫ್ರೈ ಮಾಡಬಹುದು ಎಂದು ತಿಳಿದುಕೊಳ್ಳೋಣ. ಇಲ್ಲಿ ನಾನು ದೊಡ್ಡ ಗಾತ್ರದ ಅರ್ಧ ಕೆ.ಜಿ. ತೂಗುವ ಮಾಂಜಿ ಫಿಷ್ ಖರೀದಿಸಿದೆ. ಇದನ್ನು ಸ್ಲೈಸ್ ಆಗಿ ಕತ್ತರಿಸಿ, ತೊಳೆದು ಇಡಲಾಗಿದೆ. ಇದಕ್ಕೆ ಮಿಶ್ರ ಮಾಡಬೇಕಾದ ಸಿಂಪಲ್ ಮಸಾಲೆ ಇಂತಿದೆ. ಬೇಕಾಗುವ… Read More »

ಸಣ್ಣಕತೆ: ಕನ್ನಡಿ ಹೇಳಿದ ಸತ್ಯ

By | 04/09/2018

ಸಣ್ಣಕತೆ: ಕನ್ನಡಿ ಹೇಳಿದ ಸತ್ಯ ಐ ಲವ್ ಯು ಎಂದು ಪ್ರಪೋಸ್ ಮಾಡಿದ ಅವನಿಗೆ ಅವಳು ಕೋಪದಿಂದ “ನಿನ್ನ ಮುಸುಡಿ ಕನ್ನಡಿಯಲ್ಲಿ ನೋಡ್ಕೋ, ಥೂ” ಎಂದು ಬಯ್ದಳು. ಅವನು ಕನ್ನಡಿ ನೋಡಿದ. ಅವಳು ಕುರೂಪಿಯಾಗಿ ಕಂಡಳು. *** ಹನಿಕಥೆ: ಕೂಗು “ಗಂಡಸ್ರನ್ನ ಯಾವತ್ತೂ ನಂಬಬಾರದು” ಮತ್ತೊಮ್ಮೆ ಗೊಣಗಿಕೊಂಡಳು.ಪ್ರೀತಿಸಿ ಕೊನೆ ಕ್ಷಣದಲ್ಲಿ ಕೈಕೊಟ್ಟನಲ್ಲ, ಎಷ್ಟೊಂದು ನಂಬಿಬಿಟ್ಟೆ ಅವನನ್ನು….ಹಾಗಂತ ಅವಳು ಯೋಚಿಸುತ್ತಿರುವಾಗಲೇ “ಮಹೂರ್ತಕ್ಕೆ ಹೆಚ್ಚು ಸಮಯವಿಲ್ಲ. ಹುಡುಗಿನ ಕರೆತನ್ನಿ” ಎಂಬ ಪುರೋಹಿತರ ಧ್ವನಿ ಆಕೆಯನ್ನು ಎಚ್ಚರಿಸಿತು. ಹಿರಿಯರನ್ನು ಅನುಸರಿಸಿಕೊಂಡು ಹೋಗಿ ಹಸೆ ಮೇಲೆ ಕುಳಿತು… Read More »

ಆನ್ ಲೈನ್ ಕಲಿಕೆ: ಡಿಜಿಟಲ್ ಮಾರ್ಕೆಟಿಂಗ್ ಕಂಪ್ಲಿಟ್ ಗೈಡ್

By | 03/09/2018

ಇದು ಡಿಜಿಟಲ್ ಯುಗ. ಯಾವುದೇ ಉತ್ಪನ್ನವನ್ನು ಮಾರಾಟ ಮಾಡಬೇಕಾದರೂ ಡಿಜಿಟಲ್ ಕೌಶಲ ಅತ್ಯಂತ ಅಗತ್ಯ. ಡಿಜಿಟಲ್ ಮಾರ್ಕೆಟಿಂಗ್ ಕೌಶಲ ಕಲಿತವರಿಗೆ ಉತ್ತಮ ಬೇಡಿಕೆಯಿದೆ. ಡಿಜಿಟಲ್ ವ್ಯವಹಾರ ನಡೆಸುವವರೂ ತಮ್ಮ ಬಿಡುವಿನ ವೇಳೆಯನ್ನು ಡಿಜಿಟಲ್ ಮಾರ್ಕೆಟಿಂಗ್ ಕಲಿಕೆಗೆ ಮೀಸಲಿಡಬಹುದು. ನೆನಪಿಡಿ, ಇದು ಸ್ಪರ್ಧಾತ್ಮಕ ಯುಗ. ನೀವು ಕೌಶಲ ಕಲಿತಿದ್ದರೆ ಮಾತ್ರ ಆನ್ ಲೈನ್ ನಲ್ಲಿ ನಿಮ್ಮ ಕಂಪನಿ, ಬ್ರಾಂಡ್ ಅನ್ನು ಜನಪ್ರಿಯಗೊಳಿಸಬಹುದು. ಜೊತೆಗೆ, ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಎದುರಿಸಬಹುದು. ಏನಿದು ಡಿಜಿಟಲ್ ಮಾರ್ಕೆಟಿಂಗ್? ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಇಂಟರ್ ನೆಟ್ ಬಳಸಿ ಮಾರುಕಟ್ಟೆ ವಿಸ್ತರಿಸಿಕೊಳ್ಳುವುದನ್ನು… Read More »

ಪುಟಾಣಿಗಳಿಗೆ ಇಷ್ಟವಾಗುವ ಬಟಾಣಿ ಪಲಾವ್ ರೆಸಿಪಿ

By | 01/09/2018

ಬೆಳಗ್ಗೆ ತಿಂಡಿ ಏನು ಮಾಡುವುದು ಎಂದು ಯೋಚನೆ ಮಾಡುತ್ತಿದ್ದೀರಾ…? ಸುಲಭದ ಅಡುಗೆಯೆಂದರೆ ಬಟಾಣಿ ಬಲಾವ್.  ಅರೆ ಪಲಾವ್ ಮಾಡುವುದಕ್ಕೆ ಬೇಕಾದ ತರಕಾರಿ ಇಲ್ಲ ಎಂದು ಕೊಳ್ಳುತ್ತೀರಾ. ಆದರೆ ಈ ಬಟಾಣಿ ಪಲಾವ್ ಗೆ ತರಕಾರಿನೂ ಬೇಕಾಗಿಲ್ಲ. ಬಟಾಣಿ ಇದ್ದರೆ ಆಯ್ತು. ಹಸಿ ಬಟಾಣಿ ಇದ್ದರೂ ಆಯ್ತು. ಇಲ್ಲದಿದ್ದರೆ ನೆನಸಿಟ್ಟ ಬಟಾಣಿಯಾದರೂ ಆಯ್ತು. ಇವಿಷ್ಟಿದ್ದರೆ ರುಚಿ ರುಚಿಯಾದ ಪಲಾವ್ ಅನ್ನು ಸವಿಯಬಹುದು. ಬಟಾಣಿ ಪಲಾವ್ ಮಾಡಲು ಬೇಕಾಗುವ ಸಾಮಾಗ್ರಿಗಳು 1ಕಪ್ ಬಾಸುಮತಿ ಅಕ್ಕಿ ತೆಗೆದುಕೊಳ್ಳಿ. ಅರ್ಧ ಕಪ್ ನೆನಸಿಟ್ಟುಕೊಂಡ ಬಟಾಣಿಯಾದರೂ ಪರ್ವಾಗಿಲ್ಲ. ಹಸಿ… Read More »