Monthly Archives: October 2018

ಯಶಸ್ವಿ ಮಹಿಳೆ ಇಂದ್ರಾ ನೂಯಿ ಅವರಿಂದ ಏನು ಕಲಿಯಬಹುದು?

ಸುಮಾರು 12 ವರ್ಷಗಳ ಕಾಲ ಪೆಪ್ಸಿಕೊ ಕಂಪನಿಯಲ್ಲಿ ಅತ್ಯುತ್ತಮ ನಾಯಕತ್ವ ಕೌಶಲ ತೋರಿ ಇಡೀ ಜಗತ್ತನ್ನೇ ಬೆರಗುಗೊಳಿಸಿದ ಮಹಿಳೆ- ಪೆಪ್ಸಿಕೊ ಸಿಇಒ ಇಂದ್ರಾ ನೂಯಿ. ಫೋರ್ಬ್ಸ್ ಪ್ರಕಟಿಸಿದ ವಿಶ್ವದ ಅಗ್ರ 100 ಪವರ್ ಫುಲ್ ಮಹಿಳೆಯರಲ್ಲಿ ಇವರು ಒಬ್ಬರು. ಉದ್ಯೋಗ ಅಥವಾ ಜೀವನದಲ್ಲಿ ಏನಾದರೂ ಸಾಧಿಸಲು ಬಯಸುವವರಿಗೆ ಇಂದ್ರಾ ನೂಯಿ ಅವರು ಪಾಲಿಸಿದ ಮತ್ತು ತಿಳಿಸಿದ ಕರಿಯರ್ ಪಾಠಗಳು ಅತ್ಯುತ್ತಮ ಮಾರ್ಗದರ್ಶಿಯಾಗಬಲ್ಲದು. ಪ್ರತಿಯೊಬ್ಬರಲ್ಲಿಯೂ ಒಂದು ದೃಷ್ಟಿಕೋನವಿರಬೇಕು `ಒಂದು ಉದ್ದೇಶವಿರುವ ಕಾರ್ಯಕ್ಷಮತೆಯನ್ನು ತೋರಬೇಕು’ ಎಂದು ನೂಯಿ ತನ್ನ ಭಾಷಣಗಳಲ್ಲಿ ಹೇಳುತ್ತಾರೆ. ಇಂತಹ ವಿಷನ್‍ನಿಂದಲೇ ಕಂಪನಿಯಲ್ಲಿ ಮತ್ತು… Read More »

ನೀತಿಕತೆ: ದೊಡ್ಡ ಆನೆಯನ್ನು ಕಟ್ಟಿರುವ ಸಣ್ಣ ಹಗ್ಗ

ಈ ಕತೆಯನ್ನು ನೀವು ಕೇಳಿರಬಹುದು. ಒಬ್ಬ ವ್ಯಕ್ತಿ ನಡೆದಾಡಿಕೊಂಡು ಹೋಗುವಾಗ ಅಲ್ಲೊಂದು ಆನೆಯನ್ನು ಕಟ್ಟಿ ಹಾಕಲಾಗಿತ್ತು. ಆ ಆನೆಯನ್ನು ಕಟ್ಟಿದ್ದು ಸಣ್ಣ ದಾರದ ಮೂಲಕವಾಗಿತ್ತು. ಆನೆ ಕಾಲನ್ನು ಕೊಡವಿದರೂ ಆ ದಾರ ತುಂಡಾಗಬಹುದಿತ್ತು. ಯಾವುದೇ ಸಮಯದಲ್ಲಿ ಬೇಕಾದರೂ ಆನೆ ಆ ಹಗ್ಗ ತುಂಡರಿಸಿ ಇತರರಿಗೆ ಅಪಾಯ ಉಂಟುಮಾಡಬಹುದಿತ್ತು.  ಈ ಕುರಿತು ಅಲ್ಲೇ ಇದ್ದ ಆನೆಯ ತರಬೇತುದಾರನಲ್ಲಿ ವಿಚಾರಿಸಿದ. ಈ ಆನೆಯು ಹಗ್ಗ ತುಂಡರಿಸಲು ಪ್ರಯತ್ನಿಸುವುದಿಲ್ಲವೇ ಎಂದು ಪ್ರಶ್ನಿಸಿದ. ಅದಕ್ಕೆ ಆ ಆನೆ ಕಾವಾಡಿಗ `ಇಲ್ಲ’ ಎಂದ. `ಈ ಆನೆ ಪುಟ್ಟ ಮರಿಯಾಗಿದ್ದಾಗ… Read More »

ನೀತಿಕತೆ: ಬಾವಿಗೆ ಬಿದ್ದ ಕತ್ತೆ, ಎದ್ದುಬಂದ ಕತೆ

ಒಬ್ಬ ವ್ಯಕ್ತಿಯು ಕತ್ತೆಯೊಂದನ್ನು ಸಾಕಿದ್ದ. ಅದು ಅವನ ಪ್ರೀತಿಯ ಕತ್ತೆಯಾಗಿತ್ತು. ಒಂದು ದಿನ ದಾರಿಯಲ್ಲಿ ಬರುತ್ತಿರುವಾಗ ಆ ಕತ್ತೆ ಪುಟ್ಟ ಬಾವಿಯೊಂದಕ್ಕೆ ಬಿದ್ದುಬಿಟ್ಟಿತು. ಎಷ್ಟೇ ಕಷ್ಟಪಟ್ಟರೂ ಆ ಕತ್ತೆಯನ್ನು ಅಲ್ಲಿಂದ ಹೊರತೆಗೆಯುವ ದಾರಿ ಅವನಿಗೆ ಹೊಳೆಯಲಿಲ್ಲ. ಸುತ್ತಲೂ ಜನರು ಗುಂಪುಗೂಡಿದ್ದರು. ಇದನ್ನು ಇಲ್ಲೇ ಬಿಟ್ಟು ಹೋದರೆ ಪಾಪ ತುಂಬಾ ಕಷ್ಟಪಡುತ್ತದೆ. ಅದಕ್ಕಾಗಿ ಈ ಪುಟ್ಟ ಬಾವಿಗೆ ಮಣ್ಣು ತುಂಬಿ ಅದನ್ನು ಕೊಂದು ಬಿಡಿ ಎಂಬ ಅಭಿಪ್ರಾಯ ಬಂತು. ತನ್ನ ಪ್ರೀತಿಯ ಕತ್ತೆಯನ್ನು ಸಾಯಿಸಲು ಅವನಿಗೆ ಮನಸ್ಸು ಬರಲಿಲ್ಲ. ಆದರೆ, ಬಾವಿಯೊಳಗೆ ನರಳಿ… Read More »

ನೀತಿಕತೆ: ಎಲ್ಲರ ಬದುಕಿನಲ್ಲಿಯೂ ಒಂದು ಕತೆ ಇರುತ್ತದೆ

ಇಪ್ಪತ್ನಾಲ್ಕು ವರ್ಷ ವಯಸ್ಸಿನ ತರುಣ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಕಿಟಕಿಯಾಚೆ ನೋಡಿ ಆ ಯುವಕ `ಅಪ್ಪ, ನೋಡಲ್ಲಿ, ಮರಗಳು ಹಿಂದೆ ಓಡುತ್ತಿವೆ’ ಎಂದ. ತಂದೆ ನಕ್ಕರು. ಆ ತರುಣನ ಎದುರು ಕುಳಿತ ನವದಂಪತಿಗಳಿಗೆ ಇದು ಅಸಹನೀಯ ಅನಿಸಿತು. ಇಷ್ಟು ದೊಡ್ಡ ಯುವಕ ಪುಟ್ಟ ಮಕ್ಕಳಂತೆ ಇದ್ದಾನಲ್ಲ ಎಂದೆನಿಸಿತು.  ಸ್ವಲ್ಪ ಹೊತ್ತಿನಲ್ಲಿ ಆ ತರುಣ `ಅಪ್ಪ, ಮೋಡಗಳೂ ನಮ್ಮೊಂದಿಗೆ ಸಾಗುತ್ತಿವೆ’ ಎಂದ. ಈಗ ನವದಂಪತಿಗಳಿಗೆ ತಡೆಯಲಾಗಲಿಲ್ಲ. ಆ ಯುವಕನ ತಂದೆಗೆ `ಇವನನ್ನು ಒಳ್ಳೆಯ ವೈದ್ಯರಿಗೆ ಯಾಕೆ ತೋರಿಸಬಾರದು?’ ಎಂದರು.  ಅದಕ್ಕೆ ಹಿರಿಯ ವ್ಯಕ್ತಿ ನಕ್ಕು… Read More »

ಸ್ಫೂರ್ತಿದಾಯಕ ಕತೆ: ಇಂದ್ರಾ ನೂಯಿ ಯಶಸ್ಸಿನ ಕತೆ

ಪೆಪ್ಸಿಕೊ ಕಂಪನಿಯ ಸಿಇಒ ಮತ್ತು ಮುಖ್ಯಸ್ಥೆ ಇಂದ್ರಾ ನೂಯಿ ಅವರ ಯಶಸ್ಸಿನ ಹಿಂದಿರುವ ಕತೆಗಳನ್ನು ಕೇಳಿದಾಗ `ನಮ್ಮತನ’ಕ್ಕೆ ಇರುವ ಶಕ್ತಿಯ ಅರಿವಾದೀತು. ಜಗತ್ತಿನ ಬೃಹತ್ ಆಹಾರ ಮತ್ತು ಪಾನೀಯ ಕಂಪನಿಯ ಉನ್ನತ್ತ ಸ್ಥಾನದಲ್ಲಿದ್ದ ಇವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟಂಪ್ ಅವರಿಗೆ ಆರ್ಥಿಕ ಸಲಹೆಗಾರ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.  ನೀವು ಮಾಡಬೇಕಾದ ಒಂದು ಪ್ರಮುಖ ಧೈರ್ಯದ ಕಾರ್ಯವೆಂದರೆ ನಿಮ್ಮತನವನ್ನು ಗುರುತಿಸಿಕೊಳ್ಳುವುದು. ನೀವು ಯಾರೆಂದು, ನೀವು ಏನನ್ನು ನಂಬಿದ್ದೀರಿ ಮತ್ತು ನೀವು ಏನಾಗಬಯಸುವಿರಿ ಎನ್ನುವುದನ್ನು ಕಂಡುಕೊಳ್ಳುವುದಾಗಿದೆ’ ಎನ್ನುವುದು ಜನಪ್ರಿಯ ಸೂಕ್ತಿ. ನೂಯಿ ಪುಟಾಣಿ ಬಾಲಕಿಯಾಗಿದ್ದಾಗ ಅವರ… Read More »