ಕಥಾಲೋಕ: ಒಡಲೊಳಗಿನ ಕೆಂಡಸಂಪಿಗೆ…

ಪವಿತ್ರಾ ಶೆಟ್ಟಿ ಎಲ್ಲಾದರೂ ಬಿಟ್ಟು ಬಾ ಈ ಮಗೂನಾ ಶಂಕರಣ್ಣಾ ನೀ ಒಂಬ್ನೆ ಹೆಂಗೇ ಸಾಕ್ತಿಯಾ…? ಹುಟ್ಟಿದ್ದು ಬೇರೆ ಹೆಣ್ಣು ಕೂಸು, ಅವಳ ಪಾಪದ ಪಿಂಡಕ್ಕೆ ನೀ ಯಾಕೆ ಹೊಣೆಗಾರ ಆಗ್ತಿಯಾ…? ಅದರ ಮೂಸುಡಿಯಲ್ಲಿರೋ ಆ ಮಚ್ಚೆ ನೋಡಿದರೆ ಗೊತ್ತಾಗುದಿಲ್ವಾ ಅದು ನಿನ್ನ ರಕ್ತಕ್ಕೆ ಹುಟ್ಟಿದ್ದು ಅಲ್ಲಾ ಅಂತ! ಎಂದು ಬುಡ್ಡಮ್ಮಜ್ಜಿ ಮುದುರಿ ಹೋದ ವೀಳ್ಯದೆಲೆಯ ಮೇಲೆ ಸುಣ್ಣ ಸವರಿಕೊಳ್ತಾ ಅದರ ಮಧ್ಯೆ ಎರಡು ಅಡಿಕೆ ಹೋಳು, ತಲೆಕೂದಲಿನಂತಿರುವ ಹೊಗೆಸೊಪ್ಪನ್ನ ಸೇರಿಸಿ ಬಾಯಲ್ಲಿಟುಕೊಂಡು ಚೆನ್ನಾಗಿ ಜಗಿದು ಪಿಚಕ್ ಎಂದು ಉಗಿದುಬಿಟ್ಟಳು! ತುಸು… Read More »

ಕವಿತೆ: ಬಂದು ಬಿಡು ನೀನೊಮ್ಮೆ!

ಬಂದು ಬಿಡು ನೀನೊಮ್ಮೆ ನಾ ಕರೆಯುವ ಮೊದಲೇ ಒಲವ ಸೆಲೆ ಬತ್ತುವುದರೊಳಗೆ *** ಬಂದು ಬಿಡು ನೀನೊಮ್ಮೆ ನೆನಪುಗಳು ಕರಗುವ ಮೊದಲೇ ಕನಸುಗಳು ಕಮರುವುದರೊಳಗೆ *** ಬಂದು ಬಿಡು ನೀನೊಮ್ಮೆ ಮಾತು ಸಾಯುವ ಮೊದಲೇ ಮೌನ ಅಪ್ಪಿಕೊಳ್ಳುವುದರೊಳಗೆ *** ಬಂದು ಬಿಡು ನೀನೊಮ್ಮೆ ನಗು ಮಾಸುವ ಮೊದಲೇ ಅಳು ಕಾಡುವುದರೊಳಗೆ *** ಬಂದು ಬಿಡು ನೀನೊಮ್ಮೆ ಉಸಿರು ನಿಲ್ಲುವ ಮೊದಲೇ ದೇಹ ಮಣ್ಣಾಗುವುದರೊಳಗೆ

ಕವಿತೆ: ನಾನು ನಾನಾಗಿದ್ದು ಯಾವಾಗ…?

ನೀನು ನೀನಾಗಿದ್ದು ಯಾವಾಗ? ಕೇಳಿತು ಮನಸ್ಸು ಕುಟುಕುತ್ತಲೇ ಗೊತ್ತೇ ಇಲ್ಲ ನನಗೆ  ನಾನು ಯಾವಾಗ ನಾನಾಗಿದ್ದೆ…? ಮರೆತೇ ಹೋಗಿದ್ದೇ  ನನ್ನ ನಾ.. ಮಿತಿಯಿಲ್ಲದ ಸಂಬಂಧಗಳ ಸುಳಿಯೊಳಗೆ ಮುಚ್ಚಿದ  ಕೋಣೆಯ ಬಾಗಿಲೊಳಗೆ! *** ತಂದ ಬಂಗಾರ ಕಡಿಮೆ ಎಂದು ಮೂದಲಿಸಿದವರನ್ನು ಚೆಂದವಿಲ್ಲವೆಂದು ಆಡಿಕೊಂಡವರನ್ನು ಮಾತು ಮಾತಿಗೂ ಮುನಿಯುವ ಗಂಡನನ್ನು ನನ್ನೊಳಗಿನ ಕನಸನ್ನು ಕೊಂದವರನ್ನು ಮರೆವಿನ ಪಟ್ಟಿಗೆ ಸೇರಿಸಿ ನಗುವಿನ ಮುಖವಾಡ ಕಟ್ಟಿಕೊಂಡಿದ್ಯಾವಾಗ? *** ಒಗ್ಗರಣೆ ಸೌಟಿನೊಳಗಿನ ಸಾಸಿವೆ ಪಟ್ಟೆಂದು ಸಿಡಿದಾಗ, ಬಚ್ಚಲ ಒಲೆಗೆ ತುಂಬಿದ ತರಗಲೆ ಗಳ್ಳೆಂದು ಉರಿದಾಗ ಏನನ್ನೋ ಕಳೆದುಕೊಂಡಿದ್ದೇನೆ ಎಂದು… Read More »

ಹೂಪ್ ಕಿವಿಯೋಲೆ: ಹೆಣ್ಣಿನ ಅಂದ ಹೆಚ್ಚಿಸುವ ಓಲೆ

ಇವತ್ತಿರುವ ಫ್ಯಾಷನ್ ನಾಳೆ ಹಳೆಯದಾಗುತ್ತದೆ. ದಿನಕ್ಕೊಂದು ಬಗೆಯ ವಿನ್ಯಾಸದ ಉಡುಪು, ಆ ಉಡುಪಿಗೆ ತಕ್ಕ ಸರ, ಬ್ಯಾಗ್, ಚಪ್ಪಲಿ ಎಲ್ಲವೂ ವಿಭಿನ್ನವಾಗಿರಬೇಕು ಎಂದು ಬಯಸುವ ಕಾಲವಿದು. ಅದರಲ್ಲೂ ಕಿವಿಯೋಲೆ ಎಲ್ಲಿಲ್ಲದ ಪ್ರಾಶಸ್ತ್ಯ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಹೆಣ್ಣಿನ ಅಲಂಕಾರ ಪೂರ್ಣಗೊಳ್ಳುವುದು ಅವಳು ಕಿವಿಯೋಲೆ ಧರಿಸಿದಾಗ. ಅಷ್ಟೇ ಅಲಂಕಾರ ಮಾಡಿಕೊಂಡಿದ್ದರೂ ಕಿವಿಯೋಲೆ ಧರಿಸದಿದ್ದರೆ ಅವಳ ಸೌಂದರ್ಯ ಎದ್ದು ಕಾಣುವುದೇ ಇಲ್ಲ. ಧರಿಸುವ ಬಟ್ಟೆಗೆ ತಕ್ಕಂತೆ ಕಿವಿಯೋಲೆ ಧರಿಸಿದರೆ ಅವಳ ಮುಖದ ಅಂದ ಇನ್ನಷ್ಟು ಹೆಚ್ಚುವುದರಲ್ಲಿ ಸಂಶಯವಿಲ್ಲ. ಹೆಣ್ಣ ಮಕ್ಕಳಿಗೆ ಕಿವಿಯೋಲೆ ಎಂದರೆ… Read More »

‘ಅವಳ’ ಭಾವಜಗತ್ತಿಗೂ ಇರಲಿ ಗೌರವ…

ಇತ್ತೀಚೆಗೆ ಬಿಡುಗಡೆಯಾದ ಸಿನಿಮಾವೊಂದು ನಿಮಗೆ ನೆನಪಿರಬಹುದು. ಅದರಲ್ಲಿ ನಟಿಯೊಬ್ಬಳು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ದೃಶ್ಯವೊಂದು ಸಾಕಷ್ಟು ಸಂಚಲನ ಉಂಟುಮಾಡಿತ್ತು. ಈ ದೃಶ್ಯದಲ್ಲಿ ನಟಿಸಿದ ನಟಿ ಸ್ವರಾಭಾಸ್ಕರ್ ಸಾಕಷ್ಟು ಟ್ರೋಲ್ ಆಗಿದ್ದರು. ‘ಯಾರವಳು ಏನು ಮಾಡುತ್ತಿದ್ದಾಳೆ ನಾನು ಗೊಂದಲಕ್ಕೀಡಾಗಿದ್ದೇನೆ ಎಂದು ಅಭಿಮಾನಿಯೊಬ್ಬ ವ್ಯಂಗದ ಮಾತನ್ನು ಈ ನಟಿಯ ತಂದೆಗೆ ನಾಟಿದ್ದ. ಆದರೆ ಗಟ್ಟಿಗಿತ್ತಿಯಾದ ಈ ನಟಿ ನಾನೊಬ್ಬಳು ಕಲಾವಿದೆ. ಹಸ್ತಮೈಥುನ ಸಾಧನ ಬಳಸಿಕೊಳ್ಳುತ್ತಿರುವ ರೀತಿ ನಟನೆ ಮಾಡಿದ್ದೇನೆ. ಮುಂದಿನ ಬಾರಿ ಏನೇ ಕೇಳುವುದಿದ್ದರೂ ನೇರವಾಗಿ ನನ್ನ ಕೇಳಿ ತಂದೆಯನ್ನು ಕೇಳಬೇಕೆಂದಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಳು… Read More »

ಗೌರಿ ದುಃಖ: ಗಂಡಸರಿಗೆ ಹೇಗೆ ಅರ್ಥವಾದಿತು?

Being a mom is like being on house arrest…you cant go anywhere including the bathroom alone, and there always someone asking what you are doing! ಈ ಮಾತು ತುಂಬಾ ನಿಜ ಅನಿಸುತ್ತೆ. ಅದು ಮನೆಯವರ ಸಹಾಯವಿಲ್ಲದೇ, ದೂರದ ಊರಿನಲ್ಲಿ ಗಂಡ ಮತ್ತು ಮಗುವಿನ ಜತೆ ಇರುವ ತಾಯಂದಿರಿಗೆ ಇದರ ಬಿಸಿ ತಟ್ಟಿರುತ್ತದೆ. ಇತ್ತೀಚೆಗೆ ನನ್ನ ಸಂಬಂಧಿಕರೊಬ್ಬರು ಫೋನ್ ಮಾಡಿದ್ದರು, ಮಾತಾಡೋಕೆ ಸಮಯವಿಲ್ಲ ಎನ್ನುತ್ತಿದ್ದಂತೆ, ‘ಅಂತದ್ದೇನು ದೊಡ್ಡ ಕೆಲಸ ನಿನಗೆ ಮನೆಯಲ್ಲಿಯೇ ಇರ್ತಿಯಾ… Read More »