Tag Archives: fat

ಲೇಖನ; ಏಳು ಮಲ್ಲಿಗೆ ತೂಕದ ಹುಡುಗಿಯಾಗಬೇಕೆ…?

ಅರೇ… ನೀ ಯಾಕೆ ಇಷ್ಟು ದಪ್ಪಗಾಗಿದ್ದು. ಕಳೆದು ಸಲ ನೋಡುವಾಗ ಇಷ್ಟು ದಪ್ಪಗಿರಲಿಲ್ಲ ಅಲ್ವಾ…? ಎಂದಾಗ ನಾನು ಮನಸ್ಸಿನೊಳಗೆ ನಕ್ಕು ಹೌದೌದು ಎಂದು ಸುಮ್ಮನಾದೆ. ಮತ್ತೂ ಸುಮ್ಮನಾಗದೇ, ಇಷ್ಟು ಚಿಕ್ಕ ಪ್ರಾಯಕ್ಕೆ ಹೀಗೆಲ್ಲಾ ದಪ್ಪಗಾಗಬಾರದು. ಏನಾದರೂ ವ್ಯಾಯಾಮ ಮಾಡು, ಡಯೆಟ್ ಮಾಡು ಎಂದರು. ನನಗೆ ಈ ಮಾತನ್ನು ಹೇಳಿದವರು ಯಾವ ರೀತಿಯಲ್ಲೂ ಬಳುಕವ ಬಳ್ಳಿಯಂತೆ ಕಾಣುತ್ತಿರಲಿಲ್ಲ. ಇರಲಿ ಬಿಡಿ ನನ್ನ ದೇಹ ನನ್ನಿಷ್ಟ. ಹೊತ್ತುಕೊಂಡ ನನಗೆ ಭಾರವಿಲ್ಲವಂತೆ. ನಿಮಗ್ಯಾಕೆ ತಲೆಬಿಸಿ ಮಾರಾಯ್ರೆ ಎಂದು ಸುಮ್ಮನಾದೆ. ಮುಖ ಸಿಂಡರಿಸಿ ಆಕೆ ಹೊರಟೇ ಬಿಟ್ಟಳು.… Read More »

ಹಾಸ್ಯ ಲೇಖನ: ಇದು ಉದರ ಪುರಾಣ

ಇದು ಹೊಟ್ಟೆಗೆ ಸಂಬಂಧಪಟ್ಟ ವಿಷಯ! ಆದರೆ ನಾನಿಲ್ಲ್ಲಿ ಯಾವುದೋ ರುಚಿಯಾದ ಅಡುಗೆ ಅಥವಾ ತಿನ್ನುವುದರ ಕುಳಿತು ಹೇಳುತ್ತಿದ್ದೇನೆ ಎಂದುಕೊಳ್ಳಬೇಡಿ. ನಾವು ತಿಂದ ಮೃಷ್ಟಾನ್ನ ಭೋಜನ ಹೋಗಿ ಸೇರುವ ಮಹಾನ್ ವೇದಿಕೆ ಹೊಟ್ಟೆಯ ಕುರಿತು ಹೇಳುತ್ತಿದ್ದೇನೆ. ಇತ್ತೀಚೆಗೆ ನನ್ನ ಗೆಳತಿಯೊಬ್ಬಳು ಸಿಕ್ಕಿದಾಗ ಮಾತನಾಡಿಸುವ ಎಂದು ಖುಷಿಯಿಂದ ನಾನು ಅವಳ ಹತ್ತಿರ ಹೋದೆ. ಅವಳು ಮಾತ್ರ ನನ್ನನ್ನು ನೋಡಿ ‘ಅರೆ… ನೀನಾ…? ನನಗೆ ನಿನ್ನ ಪರಿಚಯನೇ ಸಿಕ್ತಿಲ್ಲಾ ಮಾರಾಯ್ತಿ! ಎಂತ ನೀನು ಇಷ್ಟು ದಪ್ಪಗಾಗಿದ್ದಿಯಾ? ಯೋಗ ಏನಾದರೂ ಮಾಡು, ನನ್ನ ನೋಡು ಹೇಗೆ ಮೈ… Read More »