ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆ ಧಾರವಾಡ ಸಹ ಶಿಕ್ಷಕರು ಹುದ್ದೆಗೆ ಅರ್ಜಿ ಆಹ್ವಾನ

By | 07/08/2021

ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆ ಲೋಣಿ (ಬಿಕೆ).ತಾ||ಚಡಚಣ, ಧಾರವಾಡ ಖಾಲಿ ಇರುವ ಅನುದಾನಿತ ಬೋಧಕ ಹುದ್ದೆಯನ್ನು ತುಂಬಲು/ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ ಹೆಸರು : ಸಹ ಶಿಕ್ಷಕರು – ಸಮಾಜ ವಿಜ್ಞಾನ – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎ, ಬಿಇಡಿ ಮಾಡಿರಬೇಕು.

ಸರಕಾರದ ನಿಯಮದಂತೆ ಅರ್ಹ ಅಭ್ಯರ್ಥಿಗಳು ತಮ್ಮ ಸ್ವಂತ ಕೈ ಬರಹದ ಅರ್ಜಿಯೊಂದಿಗೆ ತಮ್ಮ ವಿದ್ಯಾರ್ಹಯ, ಜನ್ಮ‌ದಿನಾಂಕ ದಾಖಲೆಗಳ ಪತ್ರಗಳ ದೃಢೀಕರಣ ಪ್ರಮಾಣ ಪತ್ರಗಳನ್ನು ಹಾಗೂ ಸಾಮಾನ್ಯ ಅಭ್ಯರ್ಥಿಗಳು ರೂ.1200/- ಬ್ಯಾಂಕ್ ಹುಂಡಿಯೊಂದಿಗೆ ಮಾನ್ಯ ಅಧ್ಯಕ್ಷರು, ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆ ಲೋಣಿ (ಬಿಕೆ) ಇವರ ಹೆಸರಿಗೆ ಪಡೆದು ಅರ್ಜಿಯ ಜೊತೆಗೆ ಲಗತ್ತಿಸಿ, ಈ ಪ್ರಕಟಣೆಗೊಂಡ 21 ದಿವಸದೊಳಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಸಂದರ್ಶನದ ದಿನಾಂಕವನ್ನು ನಂತರ ತಿಳಿಸಲಾಗುವುದು.

Leave a Reply

Your email address will not be published. Required fields are marked *