ನೈರುತ್ಯ ರೈಲ್ವೆ ಇಲಾಖೆಯಲ್ಲಿ ಹುದ್ದೆ, ನೇರ ಸಂದರ್ಶನಕ್ಕೆ ಆಹ್ವಾನ

By | 10/08/2021

ನೈರುತ್ಯ ರೈಲ್ವೆ ಇಲಾಖೆಯಲ್ಲಿ ಅರೆ ವೈದ್ಯಕೀಯ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ 31-03-2022 ರವರೆಗಿನ ನೇಮಕಾತಿ ಅವಧಿಗೆ‌ ಅಥವಾ ಮೈಸೂರು ವಿಭಾಗ, ಎಸ್ ಡಬ್ಲ್ಯೂ ಆರ್, ಆರ್ ಆರ್ ಆರ್ ಬಿ‌ ಅಭ್ಯರ್ಥಿಗಳ ಆಗಮನದವರೆಗೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಯ ಹೆಸರು : ಆರೋಗ್ಯ ಮತ್ತು ಮಲೇರಿಯಾ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆ ಸಂಖ್ಯೆ : 02 ಹುದ್ದೆ
ವಯೋಮಿತಿ : 18 ರಿಂದ 33 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ( 04-08-2021 ರಂತೆ) ರೂ.35,000/- ಲೆವೆಲ್- 6 ಜೊತೆಗೆ ಡಿಎ ಮತ್ತು ಇತರ ಭತ್ಯೆಗಳು ಸ್ವೀಕಾರಾರ್ಹ.

ಫಾರ್ಮಸಿಸ್ಟ್ – 20 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆ ಸಂಖ್ಯೆ : 3 ಹುದ್ದೆ
ವೇತನ : ರೂ.29,200/- ಲೆವೆಲ್ – 5 ಜೊತೆಗೆ ಡಿಎ ಮತ್ತು ಇತರ ಭತ್ಯೆಗಳು ಸ್ವೀಕಾರಾರ್ಹ.

ರೇಡಿಯೋಗ್ರಾಫರ್: 19 ರಿಂದ 33 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆ ಸಂಖ್ಯೆ : 2 ಹುದ್ದೆ .
ವೇತನ : ರೂ.29,200/- ಲೆವೆಲ್ – 5 ಜೊತೆಗೆ ಡಿಎ ಮತ್ತು ಇತರ ಭತ್ಯೆಗಳು ಸ್ವೀಕಾರಾರ್ಹ.

ಸೇವೆ ಅಗತ್ಯವಿರುವ ಸ್ಥಳ : ಮೈಸೂರು ವಿಭಾಗ, ಎಸ್ ಡಬ್ಲ್ಯೂ ಆರ್

ವಾಕ್ ಇನ್ ಇಂಟರ್ ವ್ಯೂ ನಡೆಯುವ ಸ್ಥಳ : ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿಗಳ ಕಚೇರಿ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರ ಕಚೇರಿ, ನೈರುತ್ಯ ರೈಲ್ವೆ, ಇರ್ವಿನ್ ರಸ್ತೆ, ಮೈಸೂರು.
ವಾಕ್ ಇನ್ ಇಂಟರ್ವ್ಯೂ ನಡೆಯುವ ದಿನಾಂಕ ಮತ್ತು ಸಮಯ : 25-08-2021 ರಿಂದ ( ಬುಧವಾರ) 11.00 ರಿಂದ 17.00 ಗಂಟೆಯವರೆಗೆ.

ಹೆಚ್ಚಿನ ಮಾಹಿತಿಗಾಗಿ http://www.swr.indianrailways.gov.in ಗೆ ಭೇಟಿ ನೀಡಬಹುದು.

Leave a Reply

Your email address will not be published. Required fields are marked *