Category Archives: Website Guide

ವರ್ಡ್ ಪ್ರೆಸ್ ವೆಬ್ ಸೈಟಿನಲ್ಲಿ ಇನ್ಮುಂದೆ ಗುಟೆನ್ ಬರ್ಗ್ ಎಡಿಟರ್ ಹವಾ

ಈಗಾಗಲೇ ಜಗತ್ತಿನ ಬಹುತೇಕ ವೆಬ್ ಸೈಟ್ ಗಳು ವರ್ಡ್ ಪ್ರೆಸ್ ಮೂಲಕ ರಚನೆಯಾಗುತ್ತಿವೆ. ಕೋಡಿಂಗ್ ಗೊತ್ತಿಲ್ಲದವರೂ ವೆಬ್ ಸೈಟ್ ಹೊಂದಲು ವರ್ಡ್ ಪ್ರೆಸ್ ನಿಂದ ಸಾಧ್ಯವಾಗುತ್ತದೆ. ಕಳೆದ ಹಲವು ವರ್ಷಗಳಿಂದ ವೆಬ್ ಸೈಟ್ ಬಳಸುತ್ತಿರುವ ನನಗೂ ವರ್ಡ್ ಪ್ರೆಸ್ ಅಚ್ಚುಮೆಚ್ಚು. ಮುಂದಿನ ದಿನಗಳಲ್ಲಿ ವರ್ಡ್ ಪ್ರೆಸ್ ನಲ್ಲಿ ಮಾಹಿತಿಗಳನ್ನು ವಿನೂತನವಾಗಿ ವಿನ್ಯಾಸ ಮಾಡಿ ಹಾಕಬಹುದು. ಯಾಕೆಂದರೆ, ಇನ್ನೊಂದಿಷ್ಟು ಸಮಯ ಕಳೆದ ಬಳಿಕ ವರ್ಡ್ ಪ್ರೆಸ್ ಗುಟೆನ್ ಬರ್ಗ್‍ ಎಡಿಟರ್ ಎಂಬ ಹೊಸ ಸೌಲಭ್ಯವನ್ನು ಅಳವಡಿಸಿಕೊಳ್ಳುತ್ತಿದೆ. ನಿಮಗೆ ಗೊತ್ತೆ, ಕರ್ನಾಟಕಬೆಸ್ಟ್.ಕಾಂ ಈಗಾಗಲೇ ಗುಟೆನ್… Read More »

ಕನ್ನಡ ವೆಬ್ ಸೈಟ್ ಗಳಿಗೆ ಜಾಹೀರಾತು ಮೂಲಗಳು ಯಾವುದಿವೆ?

ಭಾರತದ ಕೆಲವು ಭಾಷೆಗಳಿಗೆ ಗೂಗಲ್ ಆ್ಯಡ್ ಸೆನ್ಸ್ ಇನ್ನೂ ಬೆಂಬಲ ನೀಡುತ್ತಿಲ್ಲ. ಗೂಗಲ್  ಆ್ಯಡ್ ಸೆನ್ಸ್ ನಲ್ಲಿ ಬೆಂಬಲಿತ ಭಾಷೆಗಳಲ್ಲಿ ಕನ್ನಡ ಭಾಷೆಯಿನ್ನೂ ಸೇರ್ಪಡೆಯಾಗಿಲ್ಲ (ಗೂಗಲ್ ನ್ಯೂಸ್ ನಲ್ಲಿಯೂ ಕನ್ನಡವಿನ್ನು ಬಂದಿಲ್ಲ). ಈ ವರ್ಷದ ಆರಂಭದಲ್ಲಿ ತಮಿಳು ಭಾಷೆಗೆ ಗೂಗಲ್ ಆ್ಯಡ್ ಸೆನ್ಸ್ ಬೆಂಬಲ ದೊರಕಿದೆ. ತಮಿಳು ವೆಬ್ ಸೈಟ್ ಗಳು, ಬ್ಲಾಗ್ ಗಳು ಆ್ಯಡ್ ಸೆನ್ಸ್ ಅಳವಡಿಸಿಕೊಂಡು ಹಣ ಸಂಪಾದಿಸಬಹುದು. ವಿಶೇಷವೆಂದರೆ ಕರ್ನಾಟಕದ ಇನ್ನೊಂದು ನೆರೆ ರಾಜ್ಯವಾದ ತೆಲುಗು ಭಾಷೆಗೂ ಈಗ ಆ್ಯಡ್ ಸೆನ್ಸ್ ಬೆಂಬಲ ದೊರಕುತ್ತದೆ. ಹಿಂದಿ ಭಾಷೆಗಂತೂ… Read More »

400 ರೂ.ಗೆ ಸ್ವಂತ ವೆಬ್ಸೈಟ್ ನಿರ್ಮಿಸುವುದು ಹೇಗೆ?

ವೆಬ್ ಸೈಟ್ ನಿರ್ಮಾಣಕ್ಕೆ ಹಲವು ಸಾವಿರ ರೂಪಾಯಿ ವಿನಿಯೋಗಿಸಬೇಕು. ಆರಂಭದಲ್ಲಿ 3 ಸಾವಿರ ರೂ.ಗೆ ವೆಬ್ಸೈಟ್ ರೂಪಿಸಿಕೊಡುತ್ತೇವೆ ಎನ್ನುವ ವೆಬ್ ಡಿಸೈನರ್ ಗಳು ನಮ್ಮ ಕನಿಷ್ಠ ಬೇಡಿಕೆ ಈಡೇರಿಸಲೂ ಕೆಲವು ಸಾವಿರ ರೂ. ಹೆಚ್ಚಿಸುತ್ತ ಹೋಗುತ್ತಾರೆ. ಒಂದು ಸಾಧಾರಣ ವೆಬ್ ಸೈಟ್ ರೂಪುಗೊಳ್ಳಲು ಕನಿಷ್ಠ 10 ಸಾವಿರ ರೂ. ಪಡೆದೇ ಪಡೆಯುತ್ತಾರೆ. ವರ್ಷಗಳು ಕಳೆದಂತೆ ಆ ಹಣ ಹೆಚ್ಚಾಗುತ್ತ ಹೋಗುತ್ತದೆ. ಯಾವುದೋ ಕನಸಿಟ್ಟುಕೊಂಡು ವೆಬ್ಸೈಟ್ ಆರಂಭಿಸಿದವರಿಗೆ ದಿನಕಳೆದಂತೆ ಇದು ಹೊರೆಯಾಗಿ ಪರಿಣಮಿಸುತ್ತದೆ. ಇಂತಹ ಸಮಯದಲ್ಲಿ 400 ರೂಪಾಯಿಗೆ ವೆಬ್ಸೈಟ್ ನಿರ್ಮಿಸಬಹುದು ಎಂದು… Read More »

ಬ್ಲಾಗರ್ ಗೆ ವೆಬ್ ಸೈಟ್ ರೂಪ ನೀಡುವುದು ಹೇಗೆ?

ಆಕರ್ಷಕ ವಿನ್ಯಾಸವಿದ್ದರೆ ನಿಮ್ಮ ಬ್ಲಾಗ್ ಹೆಚ್ಚು ಜನರನ್ನು ಸೆಳೆಯುತ್ತದೆ. ಜೊತೆಗೆ ಬರೆದ ಲೇಖನಗಳು, ಚಿತ್ರಗಳನ್ನು ನೀಟಾಗಿ ಜೋಡಿಸಿದ್ದರೆ ಹೆಚ್ಚು ಕ್ಲಿಕ್ ಪಡೆಯಬಹುದು. ನಿಮ್ಮ ಬ್ಲಾಗ್ ನ್ಯೂಸ್ ವೆಬ್ ಸೈಟಿನಂತೆ ಇದ್ದರೆ ಒಂದೇ ಪುಟದಲ್ಲಿ ಸಾಕಷ್ಟು ಲೇಖನಗಳನ್ನು, ಚಿತ್ರಗಳನ್ನು ಜೋಡಿಸಿಡಲು ಸಾಧ್ಯ. ಹಿಂದಿನ ಸಂಚಿಕೆಯಲ್ಲಿ ಬ್ಲಾಗ್ ಸ್ಪಾಟ್ ನಲ್ಲಿ ಬ್ಲಾಗ್ ರಚಿಸುವುದು ಹೇಗೆ ಎಂಬ ವಿಷಯದ ಕುರಿತು ಸರಳವಾಗಿ ಮಾಹಿತಿ ನೀಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಬ್ಲಾಗರ್ ಬ್ಲಾಗ್ ಗೆ ಕಸ್ಟಮ್ ಟೆಂಪ್ಲೆಟ್ ಗಳನ್ನು ಅಳವಡಿಸುವ ಕುರಿತು ಚರ್ಚಿಸೋಣ. ಹಿಂದಿನ ಸಂಚಿಕೆಯಲ್ಲಿ ನೀವು… Read More »

ವೆಬ್ ಸೈಟ್ ಗೈಡ್: ಡೊಮೈನ್ ಖರೀದಿ ಹೇಗೆ?

ಗೂಗಲ್.ಕಾಂ, ಫೇಸ್ಬುಕ್.ಕಾಂ, ಯಾಹೂ… ಹೀಗೆ ಎಷ್ಟೊಂದು ಸುಂದರ ಹೆಸರುಗಳ ವೆಬ್ ಸೈಟ್ ಗಳಿವೆ. ನೀವೂ ಒಂದು ವೆಬ್ ಸೈಟ್ ಡೊಮೈನ್ ಹೆಸರು ಖರೀದಿಸಲು ಬಯಸಿದರೆ ಈ ಗೈಡ್ ನಿಮಗೆ ಸಹಕಾರಿಯಾಗಬಹುದು. ನೀವು ನಿಮ್ಮ ಹೆಸರಿನ ಡೊಮೈನ್ ಖರೀದಿಸಲು ಬಯಸುವಿರಾ? ನಿಮ್ಮ ವೈಯಕ್ತಿಕ ಸಾಧನೆ, ಬ್ಲಾಗ್ ಮೂಲಕ ವೆಬ್ ಲೋಕಕ್ಕೆ ಕಾಲಿಡಲು ಸ್ವಂತ ಹೆಸರಿನ ಡೊಮೈನ್ ಸೂಕ್ತ. ನನಗೂ ನನ್ನ ಪೂರ್ತಿ ಹೆಸರಿನ ಡೊಮೈನ್ ಹೆಸರು ಬೇಕಿತ್ತು. ಪ್ರವೀಣ್ ಚಂದ್ರ. ಕಾಂ ಎಂಬ ಹೆಸರನ್ನು ಯಾರೋ ಇದೇ ಹೆಸರಿನ ಜನಪ್ರಿಯ ವೈದ್ಯರು ಖರೀದಿಸಿಯಾಗಿತ್ತು.… Read More »