ಹೋಮ್‌ ಲೋನ್‌ ಮೇಲೆ ವಿಮೆ ಯಾಕೆ ಅಗತ್ಯ?

By | 01/08/2021

ಕೋವಿಡ್-19 ಸಮಯದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಸವಾಲು, ಸಂಕಷ್ಟ. ಉದ್ಯೋಗವಿಲ್ಲದೆ, ವ್ಯವಹಾರವಿಲ್ಲದೆ ಇಎಂಐ ಕಟ್ಟಲಾಗದ ಪರಿಸ್ಥಿತಿ ಒಂದೆಡೆಯಾದರೆ, ಸಾಲ ಮಾಡಿದ ವ್ಯಕ್ತಿ ಗತಿಸಿಹೋದರೆ ಆಗುವ ಪರಿಣಾಮ ಇನ್ನೊಂದು ರೀತಿಯದು. ಗೃಹಸಾಲ ಪಡೆದವರು ಗತಿಸಿದರೆ ಸಂಗಾತಿಗೆ ಪ್ರೀತಿಪಾತ್ರರ ಅಗಲಿಕೆಯ ನೋವಿನ ಜೊತೆಗೆ ಅಗಲಿದವರ ಋಣಭಾರಕ್ಕೂ ಹೆಗಲು ನೀಡಬೇಕಾಗುತ್ತದೆ. ಗ ಬೆಂಗಳೂರಿನ ಎಕ್ಸ್ (ಉದ್ದೇಶಪೂರ್ವಕವಾಗಿ ಹೆಸರು ಉಲ್ಲೇಖಿಸಿಲ್ಲ) ಎಂಬ ವ್ಯಕ್ತಿಯು ಗೃಹಸಾಲ ತೆಗೆದುಕೊಂಡಿದ್ದರು. ಗೃಹಸಾಲ ಮಾಡಿ ಸುಮಾರು ಆರು ವರ್ಷಗಳಾಗಿದ್ದವು. ದೊಡ್ಡ ಮೊತ್ತದ ಡೌನ್‍ಪೇಮೆಂಟ್ ಮಾಡಿದ್ದರು. ಸಾಲ ಬೇಗ ಮುಗಿಸುವ ಉದ್ದೇಶದಿಂದ ದೊಡ್ಡ ಮೊತ್ತದ… Read More »

ಬ್ಯಾಂಕ್ ಉದ್ಯೋಗ ಇಷ್ಟಪಡಲು ಇಷ್ಟು ಕಾರಣ ಸಾಕಲ್ಲವೇ?

By | 01/08/2021

ಉದ್ಯೋಗ ಅಭದ್ರತೆಯ ಈ ಕಾಲದಲ್ಲಿಬಹುತೇಕರು ಸರಕಾರಿ ಉದ್ಯೋಗವನ್ನು ಇಷ್ಟಪಡುತ್ತಾರೆ. ಕಾಲೇಜು ಮುಗಿಸಿದ ವಿದ್ಯಾರ್ಥಿಗಳಲ್ಲಿಯಾವ ಉದ್ಯೋಗ ಇಷ್ಟವೆಂದು ಕೇಳಿದರೆ, ಸರಕಾರಿ ಜಾಬ್‌, ಎಂಜಿನಿಯರ್‌, ಡಾಕ್ಟರ್‌, ಬ್ಯಾಂಕ್‌ ಜಾಬ್‌ ಎಂದೆಲ್ಲಉತ್ತರ ನೀಡುತ್ತಾರೆ. ಸರಕಾರದ ಉದ್ಯೋಗಗಳ ನಂತರ ಬ್ಯಾಂಕ್‌ ಉದ್ಯೋಗಗಳು ಹೆಚ್ಚು ಬೇಡಿಕೆ ಪಡೆದಿವೆ. ರಾಷ್ಟ್ರೀಕೃತ ಅಥವಾ ಖಾಸಗಿ ಬಹುತೇಕ ಬ್ಯಾಂಕ್‌ ಉದ್ಯೋಗಾರ್ಥಿಗಳಲ್ಲಿ‘ಉದ್ಯೋಗಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕೇ? ಅಥವಾ ಖಾಸಗಿ ಬ್ಯಾಂಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕೆ?’ ಎಂಬ ಗೊಂದಲ ಇರುತ್ತದೆ. ಸಾರ್ವಜನಿಕ ವಲಯದ ಬ್ಯಾಂಕ್‌ ಜಾಬ್‌ ಹೆಚ್ಚು ಸೆಕ್ಯೂರ್ಡ್‌ ಎಂದು ಬಹುತೇಕರು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು… Read More »

ಸಿಬಿಎಸ್ ಇ 12 ನೇ ತರಗತಿ ಫಲಿತಾಂಶ: ಈ ಬಾರಿಯೂ ಬಾಲಕಿಯರೇ ಮೇಲುಗೈ

By | 31/07/2021

ಸಿಬಿಎಸ್ ಇ( ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ) 12 ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಕೊರೊನಾ ಕಾರಣದಿಂದ ಪರೀಕ್ಷೆ ನಡೆದಿರಲಿಲ್ಲ. 30:30:40 ಅನುಪಾತದ ಅನುಸಾರದಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. 10 ನೇ ಮತ್ತು 11 ನೇ ತರಗತಿ ಅಂತಿಮ ಪರೀಕ್ಷೆ ಹಾಗೂ 12 ನೇ ತರಗತಿಯಲ್ಲಿ ನಡೆಸಿದ ಪೂರ್ವ ಸಿದ್ಧತಾ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಪರೀಕ್ಷೆಗೆ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳ ಪೈಕಿ ಶೇ.99.37 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರು… Read More »

ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿ

By | 29/07/2021

ಸಾರ್ವಜನಿಕ ಶಿಕ್ಷಣ ಇಲಾಖೆ 2021-22 ನೇ ಸಾಲಿನ ‘ ರಾಜ್ಯ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಮೂರು ಸಮಿತಿಗಳನ್ನು ರಚಿಸಿ, ಪ್ರಶಸ್ತಿಗೆ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ನಡೆಸಲಾಗುವುದು. ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕನಿಷ್ಠ 10 ವರ್ಷ ಶಿಕ್ಷಕರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕರು ಅರ್ಜಿ ಸಲ್ಲಿಸುವಂತಿಲ್ಲ ಎಂದು ಇಲಾಖೆ ಸ್ಪಷ್ಟ… Read More »

ಸಂತೋಷದ ಬದುಕಿಗೆ ಲಿವಿಂಗ್ ಕೊಠಡಿಯ ವಾಸ್ತು ಹೇಗಿರಬೇಕು?

By | 27/07/2021

ನಿಮ್ಮ ಮನೆಯಲ್ಲಿಸುಖ ಶಾಂತಿ ನೆಲೆಸಬೇಕಿದ್ದರೆ ಮನೆಯ ಸಂಪೂರ್ಣ ವಾಸ್ತು ಅತ್ಯುತ್ತಮವಾಗಿರಬೇಕು. ಅದರಲ್ಲಿಯೂ ಮನೆಯ ಲೀವಿಂಗ್‌ ರೂಂ ವಾಸ್ತು ಸರಿಯಾಗಿರಬೇಕು. ಲೀವಿಂಗ್‌ ರೂಂ ಹೇಗಿರಬೇಕು? ಯಾವ ದಿಕ್ಕಿನಲ್ಲಿರಬೇಕು? ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ವಾಸ್ತುಶಾಸ್ತ್ರದಲ್ಲಿಒಂದಿಷ್ಟು ನೀತಿನಿಯಮಗಳು ಇವೆ. ಈ ರೀತಿಯಿದ್ದರೆ ಮನೆಯಲ್ಲಿಸುಖ, ಶಾಂತಿ, ನೆಮ್ಮದಿ, ಸಂಪತ್ತು, ಆರೋಗ್ಯ ಇತ್ಯಾದಿಗಳು ಉತ್ತಮವಾಗಿರುತ್ತವೆಯೆಂದು ವಾಸ್ತು ತಜ್ಞರುಗಳು ಹೇಳುತ್ತಾರೆ.

ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಆಯ್ಕೆಯಾದ ಮಕ್ಕಳನ್ನು ಆ.3 ರೊಳಗೆ ದಾಖಲಿಸಲು ಶಿಕ್ಷಣ ಇಲಾಖೆ ಸೂಚನೆ

By | 27/07/2021

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಆಯ್ಕೆಯಾದ ಮಕ್ಕಳನ್ನು ಆ‌.3 ರೊಳಗೆ ಸಂಬಂಧಪಟ್ಟ ಶಾಲೆಗಳಿಗೆ ದಾಖಲು ಪಡಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕೋರಿದೆ. ಖಾಸಗಿ ಅನುದಾನಿತ ಹಾಗೂ ಅನುದಾ‌ನರಹಿತ ಶಾಲೆಗಳಲ್ಲಿ ಉಚಿತ ಪ್ರವೇಶಕ್ಕಾಗಿ 6776 ಅರ್ಜಿ ಪರಿಗಣಿಸಿ ಜು.22 ರಂದು ಎರಡನೇ ಸುತ್ತಿನ ಲಾಟರಿಯನ್ನು‌ ಆನ್ಲೈನ್ ಮೂಲಕ ನಡೆಸಲಾಗಿದೆ. ಈ ಪ್ರಕ್ರಿಯೆಯಲ್ಲಿ 764 ಮಂದಿ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಸೀಟು ಹಂಚಿಕೆಯ ಮಾಹಿತಿಯನ್ನು ಆಯ್ಕೆಯಾದ ಮಕ್ಕಳ ಪೋಷಕರ ನೋಂದಾಯಿತ ಮೊಬೈಲ್ ಸಂಖ್ಯೆ ಗೆ ಕಳುಹಿಸಲಾಗಿದೆ.