Category Archives: How To

ವೈಮಾನಿಕ ಎಂಜಿನಿಯರಿಂಗ್: ಶಿಕ್ಷಣ ಮತ್ತು ಕರಿಯರ್ ಹೇಗೆ?

By | 18/10/2019

ಬಹುತೇಕರಿಗೆ ವಿಮಾನವೆಂದರೆ ಏನೋ ಆಕರ್ಷಣೆ. ಕೆಲವರಿಗೆ ವಿಮಾನದ ಪೈಲೆಟ್ ಆಗುವ ಕನಸು. ಇನ್ನು ಕೆಲವರಿಗೆ ವಿಮಾನದೊಳಗೆ ಆತಿಥ್ಯ ನೀಡುವ ಗಗನಸಖಿ ಇತ್ಯಾದಿ ಕ್ಯಾಬಿನ್ ಕ್ರ್ಯೂ ಕೆಲಸ ಅಚ್ಚುಮೆಚ್ಚು. ಇನ್ನು ಕೆಲವರಿಗೆ ವಿಮಾನ ಕಟ್ಟುವ, ಬಿಚ್ಚುವ ಅಥವಾ ಹೊಸತನ್ನು ಅನ್ವೇಷಿಸುವ ಟೆಕ್ನಿಕಲ್ ವಿಭಾಗ ಇಷ್ಟ. ಇಂತವರು ಹೆಚ್ಚಾಗಿ ಏರೋಸ್ಪೇಸ್ ಎಂಜಿನಿಯರಿಂಗ್ (aerospace engineering) ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಎಂಜಿನಿಯರಿಂಗ್‍ನಲ್ಲೇ ಹೆಚ್ಚು ಸವಾಲಿನಿಂದ ಕೂಡಿದ ಎಂಜಿನಿಯರಿಂಗ್ ವಿಭಾಗ ಎಂದೇ ಹೆಸರುವಾಸಿಯಾಗಿದೆ. [rml_read_more] ವಿಮಾನಯಾನ, ಬಾಹ್ಯಾಕಾಶ ಮತ್ತು ರಕ್ಷಣಾ ವ್ಯವಸ್ಥೆಗಳಿಗೆ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು… Read More »

ವಿಜ್ಞಾನಿ ಆಗುವುದು ಹೇಗೆ: ಕಲಿಕೆ ಮತ್ತು ತಯಾರಿ ಹೇಗಿರಬೇಕು?

By | 18/10/2019

ಸಿ.ವಿ. ರಾಮನ್, ಎಪಿಜೆ ಅಬ್ದುಲ್ ಕಲಾಂ, ಶ್ರೀನಿವಾಸ ರಾಮನುಜನ್, ಹೋಮಿ ಜೆ. ಭಾಭಾ, ಸತೇಂದ್ರನಾಥ್ ಬೋಸ್, ವಿಕ್ರಂ ಸಾರಭಾಯಿ ಹೀಗೆ ಭಾರತ ಅನೇಕ ಪ್ರಶಿದ್ಧ ವಿಜ್ಞಾನಿಗಳನ್ನು ಜಗತ್ತಿಗೆ ನೀಡಿದೆ. ನಿಮಗೂ ಭವಿಷ್ಯದಲ್ಲಿ ವಿಜ್ಞಾನಿಯಾಗಿ ಸಾಧಿಸುವ ಬಯಕೆ ಇರಬಹುದು. ಹೊಸತನ್ನು ಅನ್ವೇಷಣೆ ಮಾಡುವ ವಿಜ್ಞಾನಿಗೆ ಎಲ್ಲಿಲ್ಲದ ಗೌರವ.  ಈ ಹಿಂದಿನ ಅನ್ವೇಷಣೆಗಳನ್ನು ಆಧಾರವಾಗಿಟ್ಟುಕೊಂಡು ಅಥವಾ ಸಂಪೂರ್ಣ ಹೊಸದಾಗಿ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಾರೆ. ನಿಮ್ಮ ಭವಿಷ್ಯದ ಕರಿಯರ್ ಅನ್ನು ವಿಜ್ಞಾನಿಯಾಗಿ ಬದಲಾಯಿಸಲು ಬಯಸಿದರೆ ವಿದ್ಯಾರ್ಥಿ ಜೀವನದಿಂದಲೇ ತಯಾರಿ ಆರಂಭಿಸಿ. ಬಾಲ್ಯದಿಂದಲೇ ವಿಜ್ಞಾನಿಯಾಗುವ ಕನಸಲ್ಲಿ ಇದ್ದರೆ… Read More »

ಇಸ್ರೊದಲ್ಲಿ ಉದ್ಯೋಗ ಪಡೆಯುವುದು ಹೇಗೆ?

By | 17/10/2019

ಇಸ್ರೊದಲ್ಲಿ ಉದ್ಯೋಗ ಪಡೆಯುವ ಕನಸಿದೆಯೇ? ಶ್ರೀಮಂತರು ಮಾತ್ರವಲ್ಲದೆ ಬಡವರೂ ಇಸ್ರೊ ಸೇರುವ ಕನಸು ರೂಪಿಸಿಕೊಳ್ಳಬಹುದು. ಇಸ್ರೊ ಸೇರುವ ಕನಸಿರುವವರು ಎಸ್‍ಎಸ್‍ಎಲ್‍ಸಿಯಲ್ಲಿ ಅತ್ಯುತ್ತಮ ಅಂಕ ಪಡೆಯಿರಿ. ನಂತರ ನಮ್ಮ ಶಕ್ತಿ ಅನುಸಾರ ಸರಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಪಿಯುಸಿಗೆ ಸೇರಿರಿ. ನೆನಪಿಡಿ: ಪಿಯುಸಿಯಲ್ಲಿ ವಿಜ್ಞಾನವನ್ನು (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ಆಯ್ಕೆ ಮಾಡಿಕೊಳ್ಳಬೇಕು. ಸಿಬಿಎಸ್‍ಇ ಪಠ್ಯಕ್ರಮ ಓದಿದರೆ ಇನ್ನೂ ಉತ್ತಮ. ಪಿಯುಸಿ ಸಮಯದಲ್ಲಿ ಜೆಇಇ ಮೇನ್ಸ್ ಮತ್ತು ಅಡ್ವಾನ್ಸಡ್ ಪರೀಕ್ಷೆ ಬರೆಯಬೇಕು. ಅಡ್ವಾನ್ಸಡ್‍ನಲ್ಲಿ ಸಾಧ್ಯವಿರುವಷ್ಟು ಅತ್ಯುತ್ತಮ ರ್ಯಾಂಕ್ ಪಡೆಯಬೇಕು. ಪಿಯುಸಿಯಲ್ಲಿ ಶೇಕಡ 75ಕ್ಕಿಂತ… Read More »

ಕನ್ನಡ ಗೈಡ್: ಫೋನ್ ಸಿಮ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು?

By | 20/01/2019

ಫೋನ್ ಕಳೆದುಹೋದಾಗ ಅದರ ಜೊತೆ ಸಿಮ್ ಫೋನ್ ಸಹ ಕಳೆದುಹೋಗುತ್ತದೆ. ಇಂತಹ ಸಮಯದಲ್ಲಿ ಆ ಫೋನ್ ನಲ್ಲಿರುವ ಸಿಮ್ ಕಾರ್ಡ್ ಡಿಆಕ್ಟಿವೇಟ್ ಮಾಡಬೇಕು. (ಓದಿ: ಫೋನ್ ಕಳೆದುಹೋದರೆ ಏನು ಮಾಡಬೇಕು?) ಕನ್ನಡ ಗೈಡ್ Gadget tips. ಮೊದಲಿಗೆ ನಿಮ್ಮ ಸಿಮ್ ಗೆ ಸಂಬಂಧಪಟ್ಟ ಕಸ್ಟಮರ್ ಕೇರ್ ಗೆ ಕರೆ ಮಾಡಿ. ಗೂಗಲ್ ನಲ್ಲಿ ಹೋಗಿ ಹುಡುಕಿದರೆ ಕಸ್ಟಮರ್ ಕೇರ್ ನಂಬರ್ ಸಿಗುತ್ತದೆ. ಅಂದರೆ ಗೂಗಲ್ ಗೆ ಹೋಗಿ ಬಿಎಸ್ ಎನ್ ಎಲ್ ಕಸ್ಟಮರ್ ಕೇರ್ ನಂಬರ್, ಏರ್ಟೆಲ್ ಕಸ್ಟಮರ್ ಕೇರ್, ಐಡಿಯಾ… Read More »

ಕನ್ನಡ ಗೈಡ್: ಮೊಬೈಲ್ ಕಳೆದು ಹೋದರೆ ಏನು ಮಾಡಬೇಕು?

By | 20/01/2019

ಕನ್ನಡ ಗೈಡ್- ಬೆಳೆಬಾಳುವ ಫೋನ್ ಕಳೆದುಹೋದರೆ ಚಿಂತೆ ಆಗುವುದು ಸಹಜ. ನೀವು ದುಬಾರಿ ಫೋನ್ ಖರೀದಿಸಿದ್ದರೆ ಅಯ್ಯೋ ಹತ್ತಿಪ್ಪತ್ತು ಸಾವಿರ ರೂ. ವ್ಯರ್ಥವಾಯ್ತಲ್ಲ ಎಂದು ದುಃಖ ಪಡಬೇಕಾಗಬಹುದು. ಇದೇ ರೀತಿ, ಆಪ್ತರ ಸಂಪರ್ಕ ಸಂಖ್ಯೆಗಳನ್ನು ಕಳೆದುಕೊಳ್ಳಬೇಕಾಗಬಹುದು. ನೀವು ಆಂಡ್ರಾಯ್ಡ್ ಫೋನ್ ನಲ್ಲಿ ಸಂಪರ್ಕ ಸಂಖ್ಯೆಗಳನ್ನು ಸಿಂಕ್ ಮಾಡಿದ್ದರೆ ಮತ್ತೊಂದು ಫೋನ್ ಗೆ ಹೊಸ ಸಿಮ್ ಅಳವಡಿಸಿದಾಗ ಸಂಪರ್ಕ ಸಂಖ್ಯೆಗಳು ದೊರಕುತ್ತವೆ. ಅಥವಾ ಗೂಗಲ್ ಕಾಂಟ್ಯಾಕ್ಟ್ ವಿಭಾಗಕ್ಕೆ ಹೋಗಿ ಸಂಖ್ಯೆಗಳನ್ನು ಪಡೆಯಬಹುದು. ಮೊಬೈಲ್ ಕಳೆದುಹೋದರೆ ಏನು ಮಾಡಬೇಕು? ಮೊದಲಿಗೆ ಆ ಮೊಬೈಲ್ ನಲ್ಲಿರುವ… Read More »

ವೆಬ್ ಸೈಟ್ ಗೈಡ್: ಡೊಮೈನ್ ಖರೀದಿ ಹೇಗೆ?

By | 08/01/2019

ಗೂಗಲ್.ಕಾಂ, ಫೇಸ್ಬುಕ್.ಕಾಂ, ಯಾಹೂ… ಹೀಗೆ ಎಷ್ಟೊಂದು ಸುಂದರ ಹೆಸರುಗಳ ವೆಬ್ ಸೈಟ್ ಗಳಿವೆ. ನೀವೂ ಒಂದು ವೆಬ್ ಸೈಟ್ ಡೊಮೈನ್ ಹೆಸರು ಖರೀದಿಸಲು ಬಯಸಿದರೆ ಈ ಗೈಡ್ ನಿಮಗೆ ಸಹಕಾರಿಯಾಗಬಹುದು.     ನೀವು ಗಮನಿಸಿರಬಹುದು. ಇವೆರಡು ಡೊಮೈನ್ ಹೆಸರುಗಳು ಸರಳವಾಗಿವೆ. ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವಂತೆ ಇವೆ. ಹೀಗಾಗಿ ಈ ಗೈಡ್ ನ ಮೊದಲ ಪಾಠ #1. ಸರಳವಾಗಿರುವ, ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವಂತಹ ಡೊಮೈನ್ ಹೆಸರು ಖರೀದಿಸಿ. ಈಗ ಡೊಮೈನ್ ಮಾರಾಟದಲ್ಲಿ ಸಾಕಷ್ಟು ಪೈಪೋಟಿ ನಡೆಯುತ್ತಿದೆ. 99 ರೂಪಾಯಿ, 130 ರೂಪಾಯಿಗೆ ಡೊಮೈನ್ ಖರೀದಿಸಿ… Read More »