Tag Archives: after puc what next

ಕರಿಯರ್‌ ಗೈಡ್:‌ ಲಾಯರ್ ಆಗುವುದು ಹೇಗೆ?

By | 25/03/2020

ಕೋರ್ಟ್‍ನಲ್ಲಿ ಕಪ್ಪು ಕೋಟ್ ಧರಿಸಿ ವಾದ- ಪ್ರತಿವಾದ ಮಾಡುವ, ಅಪರಾಧಿಗಳಿಗೆ ಶಿಕ್ಷೆ ನೀಡಿಸುವ, ನಿರಾಪರಾಧಿಗಳನ್ನು ಪಾರುಮಾಡುವ ವಕೀಲರನ್ನು ಕಂಡರೆ ನಿಮಗೆ ಗೌರವ ಇರಬಹುದು. ನಿಮ್ಮ ಊರಿನಲ್ಲಿ, ಬಂಧುಬಳಗದಲ್ಲಿ ಅಥವಾ ಟೀವಿಗಳಲ್ಲಿ ಕಾಣುವ ಅಥವಾ ಕೋರ್ಟ್‍ಗಳಲ್ಲಿ ಕಾಣಿಸುವ ವಕೀಲರನ್ನು ಕಂಡಾಗ ನಾನೂ ಭವಿಷ್ಯದಲ್ಲಿ ಲಾಯರ್ ಆಗಬೇಕು ಎಂದು ನೀವು ಕನಸು ಕಂಡಿರಬಹುದು. ದೇಶದ ಪ್ರಮುಖ ಅಂಗಗಳಲ್ಲಿ ಒಂದಾದ ನ್ಯಾಯಾಂಗದಲ್ಲಿ ಕಾರ್ಯನಿರ್ವಹಿಸಲು ಕಾನೂನು ಕ್ಷೇತ್ರವು ಒಂದು ಪ್ರಮುಖ ಆಯ್ಕೆಯಾಗಿದೆ. ವಕೀಲರಾಗಿ, ಜಡ್ಜ್ ಆಗಿ ಮುಂದೊಂದು ದಿನ ನೀವು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯೂ ಆಗಿ ಕರ್ನಾಟಕಕ್ಕೆ… Read More »

ಸೈಬರ್ ಸೆಕ್ಯೂರಿಟಿ: ಸೈಬರ್ ಕ್ಷೇತ್ರಕ್ಕೆ ಕಾವಲುಗಾರರಾಗಿ

By | 25/03/2020

ಪ್ರತಿನಿತ್ಯ ಮಾಧ್ಯಮಗಳಲ್ಲಿ ಸೈಬರ್ ಮೋಸಕ್ಕೆ ಈಡಾದವರ ಸುದ್ದಿಗಳು ಹೆಚ್ಚಾಗುತ್ತಿವೆ. ಸೈಬರ್ ವಂಚಕರಿಂದ ಕೆಲವು ಲಕ್ಷಗಳಿಂದ ಹಲವು ಕೋಟಿ ರೂ. ಕಳೆದುಕೊಂಡವರಿದ್ದಾರೆ. ಹೊಸ ತಂತ್ರಜ್ಞಾನಗಳು ಮತ್ತು ಸಂಪರ್ಕ ಸಾಧನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಸೈಬರ್ ಅಟ್ಯಾಕ್, ಹ್ಯಾಕಿಂಗ್ ಇತ್ಯಾದಿಗಳು ಹೆಚ್ಚಾಗುತ್ತಿರುವುದರಿಂದ ಈಗ ಸೈಬರ್ ಭದ್ರತಾ ತಜ್ಞರಿಗೆ ಬೇಡಿಕೆ ಹೆಚ್ಚಿದೆ. ದೇಶದಲ್ಲೀಗ ಮೊಬೈಲ್‍ನಲ್ಲಿ ಇಂಟರ್‍ನೆಟ್ ಬಳಕೆ ಹೆಚ್ಚುತ್ತಿದೆ. ಸೋಷಿಯಲ್, ಮೊಬೈಲ್, ಅನಾಲಿಟಿಕ್ಸ್ ಮತ್ತು ಕ್ಲೌಡ್ ಕಂಪ್ಯೂಟರ್, ಇಂಟರ್‍ನೆಟ್ ಆಫ್ ಥಿಂಗ್ಸ್‍ಗಳ ಬಳಕೆ ಹೆಚ್ಚಿರುವುದರಿಂದ ನೆಟ್‍ವರ್ಕ್ ಸೆಕ್ಯೂರಿಟಿ ಎಂಜಿನಿಯರ್‍ಗಳಿಗೆ ಹೊಸ ಸವಾಲು ಎದುರಾಗಿದೆ. “ಕೆಟ್ಟ ಹುಡುಗನಿಂದ… Read More »

ಕ್ರಿಮಿನಾಲಜಿ ಕಲಿಯಿರಿ, ಕ್ರಿಮಿನಲ್ ಗಳನ್ನು ಹಿಡಿಯಿರಿ

By | 01/03/2020

ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಪರಾಧಗಳು ದಿನೇದಿನೇ ಹೆಚ್ಚಾಗುತ್ತಿವೆ. ಇದರಿಂದ ಕ್ರಿಮಿನಾಲಜಿ ಓದಿರುವವರಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಕ್ರಿಮಿನಾಲಜಿ ಕ್ಷೇತ್ರವು ಸವಾಲಿನಿಂದ ಕೂಡಿದ್ದು, ಆಸಕ್ತಿದಾಯಕ ಉದ್ಯೋಗವೂ ಹೌದು. ಕ್ರಿಮಿನಾಲಜಿ ಎನ್ನುವುದು ವಿಜ್ಞಾನದ ಒಂದು ಶಾಖೆಯಾಗಿದ್ದು ಅಪರಾಧಗಳ ಪತ್ತೆ ಮತ್ತು ಅಪರಾಧಗಳ ತಡೆಗಟ್ಟುವಿಕೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನಿಮಗೆ ಫೋರೆನ್ಸಿಕ್ ಸೈನ್ಸ್ ಬಗ್ಗೆ ಗೊತ್ತಿರಬಹುದು. ಇದು ಕ್ರಿಮಿನಾಲಜಿಯ ಒಂದು ಭಾಗವಷ್ಟೇ. ಎಸ್‌ ಎಸ್‌ ಎಲ್‌ ಸಿ/ ಪಿಯುಸಿ ಬಳಿಕ ಮುಂದೇನು ಎಂದು ಕೋರ್ಸ್‌ಗಳ ಹುಡುಕಾಟದಲ್ಲಿರುವವರಿಗೆ ಕ್ರಿಮಿನಾಲಜಿ ಅತ್ಯುತ್ತಮ ಆಯ್ಕೆಯಾಗಬಲ್ಲದು ಕ್ರಿಮಿನಾಲಜಿ ಎನ್ನುವುದು ಸಾಕ್ಷ್ಯಾಧಾರಗಳ ವಿಜ್ಞಾನ,… Read More »

ವಿಮಾನ ಪೈಲೆಟ್ ಆಗುವುದು ಹೇಗೆ?

By | 18/10/2019

ಪುಟ್ಟ ಲೋಹದ ಹಕ್ಕಿ ಆಕಾಶದಲ್ಲಿ ಹಾರಾಟ ನಡೆಸಿದಾಗ ಕಣ್ಣೆತ್ತಿ ನೋಡುವ ಅಭ್ಯಾಸ ನಿಮಗೂ ಇರಬಹುದು. ಒಮ್ಮೆಯೂ ವಿಮಾನಯಾನ ಮಾಡದವರಿಗೆ  ಆಕಾಶಯಾನ ಮಾಡಬೇಕೆಂಬ ಕನಸು ಮೂಡುತ್ತದೆ. ಇನ್ನಷ್ಟು ಮಹಾತ್ವಕಾಂಕ್ಷೆಯುಳ್ಳವರಿಗೆ ವಿಮಾನದ ಪೈಲೆಟ್ ಆಗಬೇಕೆಂಬ ಆಸೆಯೂ ಮೂಡಬಹುದು. ಬಸ್ ಚಾಲಕನ ಪಕ್ಕ ಕುಳಿತ ಮಕ್ಕಳು ಚಾಲಕನಾಗಬೇಕೆಂಬ ಕನಸು ಕಂಡರೆ ಅದು ಈಡೇರಬಹುದು. ಆದರೆ, ವಿಮಾನ ಪೈಲೆಟ್ ಆಗುವುದು ಸುಲಭವಲ್ಲ. ಹಾಗಂತ, ಅದು ಈಡೇರದ ಕನಸೇನೂ ಅಲ್ಲ! ಈಗಲೂ ವಿಮಾನ ಪೈಲೆಟ್ ಅತ್ಯಾಕರ್ಷಕ ಉದ್ಯೋಗ. ಈ ಹುದ್ದೆ ನಿಮಗೆ ಸಮಾಜದಲ್ಲಿ ಅತ್ಯುನ್ನತ ಪ್ರತಿಷ್ಠೆ ಒದಗಿಸುತ್ತದೆ. ದೇಶದಲ್ಲಿ… Read More »

ವಿಜ್ಞಾನಿ ಆಗುವುದು ಹೇಗೆ: ಕಲಿಕೆ ಮತ್ತು ತಯಾರಿ ಹೇಗಿರಬೇಕು?

By | 18/10/2019

ಸಿ.ವಿ. ರಾಮನ್, ಎಪಿಜೆ ಅಬ್ದುಲ್ ಕಲಾಂ, ಶ್ರೀನಿವಾಸ ರಾಮನುಜನ್, ಹೋಮಿ ಜೆ. ಭಾಭಾ, ಸತೇಂದ್ರನಾಥ್ ಬೋಸ್, ವಿಕ್ರಂ ಸಾರಭಾಯಿ ಹೀಗೆ ಭಾರತ ಅನೇಕ ಪ್ರಶಿದ್ಧ ವಿಜ್ಞಾನಿಗಳನ್ನು ಜಗತ್ತಿಗೆ ನೀಡಿದೆ. ನಿಮಗೂ ಭವಿಷ್ಯದಲ್ಲಿ ವಿಜ್ಞಾನಿಯಾಗಿ ಸಾಧಿಸುವ ಬಯಕೆ ಇರಬಹುದು. ಹೊಸತನ್ನು ಅನ್ವೇಷಣೆ ಮಾಡುವ ವಿಜ್ಞಾನಿಗೆ ಎಲ್ಲಿಲ್ಲದ ಗೌರವ.  ಈ ಹಿಂದಿನ ಅನ್ವೇಷಣೆಗಳನ್ನು ಆಧಾರವಾಗಿಟ್ಟುಕೊಂಡು ಅಥವಾ ಸಂಪೂರ್ಣ ಹೊಸದಾಗಿ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಾರೆ. ನಿಮ್ಮ ಭವಿಷ್ಯದ ಕರಿಯರ್ ಅನ್ನು ವಿಜ್ಞಾನಿಯಾಗಿ ಬದಲಾಯಿಸಲು ಬಯಸಿದರೆ ವಿದ್ಯಾರ್ಥಿ ಜೀವನದಿಂದಲೇ ತಯಾರಿ ಆರಂಭಿಸಿ. ಬಾಲ್ಯದಿಂದಲೇ ವಿಜ್ಞಾನಿಯಾಗುವ ಕನಸಲ್ಲಿ ಇದ್ದರೆ… Read More »

ಇಸ್ರೊದಲ್ಲಿ ಉದ್ಯೋಗ ಪಡೆಯುವುದು ಹೇಗೆ?

By | 17/10/2019

ಇಸ್ರೊದಲ್ಲಿ ಉದ್ಯೋಗ ಪಡೆಯುವ ಕನಸಿದೆಯೇ? ಶ್ರೀಮಂತರು ಮಾತ್ರವಲ್ಲದೆ ಬಡವರೂ ಇಸ್ರೊ ಸೇರುವ ಕನಸು ರೂಪಿಸಿಕೊಳ್ಳಬಹುದು. ಇಸ್ರೊ ಸೇರುವ ಕನಸಿರುವವರು ಎಸ್‍ಎಸ್‍ಎಲ್‍ಸಿಯಲ್ಲಿ ಅತ್ಯುತ್ತಮ ಅಂಕ ಪಡೆಯಿರಿ. ನಂತರ ನಮ್ಮ ಶಕ್ತಿ ಅನುಸಾರ ಸರಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಪಿಯುಸಿಗೆ ಸೇರಿರಿ. ನೆನಪಿಡಿ: ಪಿಯುಸಿಯಲ್ಲಿ ವಿಜ್ಞಾನವನ್ನು (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ಆಯ್ಕೆ ಮಾಡಿಕೊಳ್ಳಬೇಕು. ಸಿಬಿಎಸ್‍ಇ ಪಠ್ಯಕ್ರಮ ಓದಿದರೆ ಇನ್ನೂ ಉತ್ತಮ. ಪಿಯುಸಿ ಸಮಯದಲ್ಲಿ ಜೆಇಇ ಮೇನ್ಸ್ ಮತ್ತು ಅಡ್ವಾನ್ಸಡ್ ಪರೀಕ್ಷೆ ಬರೆಯಬೇಕು. ಅಡ್ವಾನ್ಸಡ್‍ನಲ್ಲಿ ಸಾಧ್ಯವಿರುವಷ್ಟು ಅತ್ಯುತ್ತಮ ರ್ಯಾಂಕ್ ಪಡೆಯಬೇಕು. ಪಿಯುಸಿಯಲ್ಲಿ ಶೇಕಡ 75ಕ್ಕಿಂತ… Read More »