Monthly Archives: March 2011

ಸ್ನೇಹಿತ ಮೊದಲ ಬಾರಿ ಅತ್ತುಬಿಟ್ಟ

By | 31/03/2011

ಬಸ್ ವೇಗವಾಗಿ ಸಾಗುತ್ತಿತ್ತು. ಊರಿಗೆ ಬಂದ ಸಂಭ್ರಮವನ್ನು ಕಿತ್ತುಕೊಂಡ ಆ ಕ್ಷಣದ ಕುರಿತು ಯೋಚಿಸುತ್ತಿದ್ದೆ. ಬಸ್ಸಿನ ಕಿಟಕಿ ಹಾಕಿದ್ದರೂ ಚಳಿ ಕಾಡುತ್ತಿತ್ತು. ಹೃದಯವೂ ತಣ್ಣಗಿತ್ತು. ಅಪದಮನಿ ಅಭಿದಮನಿಗಳೆರಡೂ ನೋವಿನಲ್ಲಿತ್ತು. ಆಪ್ತ ಸ್ನೇಹಿತನೊಬ್ಬನ ಮುಂದೆ ಸ್ವಾಭಿಮಾನದ ಪ್ರಶ್ನೆಯೆದ್ದು ಅಹಲ್ಯೆಯಂತೆ ಕಲ್ಲಾದ ಪರಿಣಾಮವದು. ನನ್ನ ಎದುರು ಮಾತು ಆತನಿಗೆ ಅನಿರೀಕ್ಷಿತವಾಗಿತ್ತು. ನನಗೆ ಅನಿವಾರ್ಯವಾಗಿತ್ತು. *** ಬ್ಯಾಗಿನಲ್ಲಿದ್ದ ಪತ್ರಿಕೆಯೊಂದನ್ನು ಕೈಗೆತ್ತಿಕೊಂಡೆ. ಅಲ್ಲಿ ನಾಗತಿಹಳ್ಳಿ ಸಂಬಂಧದ ಕುರಿತು ಬರೆದಿದ್ದರು. ಸಂಬಂಧವೆಂದರೆ ಬೆಂಕಿ ಮತ್ತು ಚಳಿ ಕಾಯುವವನ ನಡುವಿನ ಅಂತರದಂತೆ. ಚಳಿಯಾಗುತ್ತೆ ಎಂದು ಬೆಂಕಿಯನ್ನು ಮುಟ್ಟುವ ಹಾಗಿಲ್ಲ. ಬೆಂಕಿಗೂ… Read More »

ನನ್ನ ಹೃದಯವನ್ನು ನಿನ್ನ ಹೃದಯದಲ್ಲಿಟ್ಟುಕೋ

By | 10/03/2011

********* ನೂರಾರು ನೆನಪುಗಳನ್ನು ನೆನಪಿಸಲಾಗದು ನನಗೆ ಅದಕ್ಕೆ ಅವಳ ಹೆಸರನ್ನೊಮ್ಮೆ ಜ್ಞಾಪಿಸಿಕೊಳ್ಳುತ್ತೇನೆ ಸಾವಿರ ನೆನಪುಗಳು ಮೆರವಣಿಗೆ ಹೊರಡುತ್ತವೆ… ******* ನನ್ನ ಹೃದಯವನ್ನು ನಿನ್ನ ಹೃದಯದಲ್ಲಿಟ್ಟುಕೋ ಗೆಳತಿ.. ನನ್ನ ಯಾತನೆ ನಿನಗರಿವಾದೀತು ***** ಮುಂಜಾನೆ ಅರಳಿದ ಹೂವುಗಳು ಸಂಜೆ ನರಳುತ್ತವೆ… ಸಂಜೆ ಅರಳಿದ ಹೂವುಗಳು ಕತ್ತಲಲ್ಲಿ ನರಳುತ್ತವೆ ****** ದಿನಕೊಂದಿಷ್ಟು ಮುಗುಳುನಗು ದಿನಕರನ ನೋಡಿ ಬಿರಿದ್ಹಾಂಗೆ ಮಲ್ಲಿಗೆ ಮೊಗ್ಗು ಅವಳ ನಗು ***** ಈ ಚಿಟ್ಟೆಯ ಸ್ನೇಹ ಸಾಕೆನಿಸಿದರೆ ಹೇಳು ಹೂವೆ.. ನಾನು ಹೋಗುವೆ ಸೂರ್ಯನೆಡೆಗೆ ರೆಕ್ಕೆ ಸುಟ್ಟ ಮೇಲೆ ನಿನ್ನ ಬುಡ… Read More »