Monthly Archives: June 2018

ಕನ್ನಡ ವೆಬ್ ಸೈಟ್ ಗಳಿಗೆ ಜಾಹೀರಾತು ಮೂಲಗಳು ಯಾವುದಿವೆ?

By | 30/06/2018

ಭಾರತದ ಕೆಲವು ಭಾಷೆಗಳಿಗೆ ಗೂಗಲ್ ಆ್ಯಡ್ ಸೆನ್ಸ್ ಇನ್ನೂ ಬೆಂಬಲ ನೀಡುತ್ತಿಲ್ಲ. ಗೂಗಲ್  ಆ್ಯಡ್ ಸೆನ್ಸ್ ನಲ್ಲಿ ಬೆಂಬಲಿತ ಭಾಷೆಗಳಲ್ಲಿ ಕನ್ನಡ ಭಾಷೆಯಿನ್ನೂ ಸೇರ್ಪಡೆಯಾಗಿಲ್ಲ (ಗೂಗಲ್ ನ್ಯೂಸ್ ನಲ್ಲಿಯೂ ಕನ್ನಡವಿನ್ನು ಬಂದಿಲ್ಲ). ಈ ವರ್ಷದ ಆರಂಭದಲ್ಲಿ ತಮಿಳು ಭಾಷೆಗೆ ಗೂಗಲ್ ಆ್ಯಡ್ ಸೆನ್ಸ್ ಬೆಂಬಲ ದೊರಕಿದೆ. ತಮಿಳು ವೆಬ್ ಸೈಟ್ ಗಳು, ಬ್ಲಾಗ್ ಗಳು ಆ್ಯಡ್ ಸೆನ್ಸ್ ಅಳವಡಿಸಿಕೊಂಡು ಹಣ ಸಂಪಾದಿಸಬಹುದು. ವಿಶೇಷವೆಂದರೆ ಕರ್ನಾಟಕದ ಇನ್ನೊಂದು ನೆರೆ ರಾಜ್ಯವಾದ ತೆಲುಗು ಭಾಷೆಗೂ ಈಗ ಆ್ಯಡ್ ಸೆನ್ಸ್ ಬೆಂಬಲ ದೊರಕುತ್ತದೆ. ಹಿಂದಿ ಭಾಷೆಗಂತೂ… Read More »

ಕಾರಿನ ಎಂಜಿನ್ ಕಾರ್ಯನಿರ್ವಹಣೆ ಕುರಿತು ತಿಳಿಯಿರಿ

By | 25/06/2018

image credit: wikipedia ಕಾರು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹೊಸ ಅಥವಾ ಹಳೆಯ ಕಾರು ಖರೀದಿಸಿ ಓಡಿಸುವ ಮಜವೇ ಬೇರೆ. ಕಾರಿನ ಚಕ್ರಗಳು, ಸ್ಟಿಯರಿಂಗ್, ಬಿಡಿಭಾಗ ಇತ್ಯಾದಿಗಳ ಸಾಮಾನ್ಯ ಜ್ಞಾನವನ್ನು ಬಹುತೇಕರು ಹೊಂದಿರಬಹುದು. ಆದರೆ, ಕಾರಿನ ಹೃದಯಭಾಗವಾದ ಎಂಜಿನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿ ಬಹುತೇಕರಿಗೆ ಇರಲಿಕ್ಕಿಲ್ಲ. ಆಟೋಮೊಬೈಲ್ ಎಂಜಿನಿಯರಿಂಗ್ ಅಥವಾ ಅದಕ್ಕೆ ಸಂಬಂಧಪಟ್ಟ ಅಧ್ಯಯನಗಳನ್ನು ಮಾಡಿದವರಿಗೆ ಈ ಕುರಿತು ಮಾಹಿತಿ ಇರಬಹುದು. ಇಂಟರ್ನೆಟ್ ನಲ್ಲಿ ಹುಡುಕಿದರೆ ಇದಕ್ಕೆ ಪೂರಕವಾದ ಸಾಕಷ್ಟು ಮಾಹಿತಿಗಳು ಚಿತ್ರಸಮೇತ, ವಿಡಿಯೋ ಸಮೇತ ದೊರಕುತ್ತವೆ. ಆದರೆ, ಎಂಜಿನ್… Read More »

ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಅತ್ಯುತ್ತಮ 6 ಮಾರ್ಗಗಳು

By | 24/06/2018

ಮರೆವು ವರವೂ ಹೌದು. ಶಾಪವೂ ಹೌದು. ತುಂಬಾ ದುಃಖದ ಸನ್ನಿವೇಶಗಳು, ಬದುಕಿನಲ್ಲಿ ನಡೆದ ಘಟನೆಗಳು ಬೇಕು ಎಂದರೂ ಮರೆಯುವುದಿಲ್ಲ. ಸದಾ ಬೆಂಬಿಡದೆ ಕಾಡುತ್ತಿರುತ್ತದೆ. ಆದರೆ, ಪರೀಕ್ಷೆ ಇತ್ಯಾದಿ ಸಂದರ್ಭದಲ್ಲಿ ಕೆಲವೊಂದು ವಿಷಯಗಳು ಎಷ್ಟು ಜ್ಞಾಪಿಸಿಕೊಂಡರೂ ನೆನಪಿಗೆ ಬರುವುದಿಲ್ಲ. ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಕರ್ನಾಟಕ ಬೆಸ್ಟ್ ಒಂದಿಷ್ಟು ಸಲಹೆಗಳನ್ನು ನೀಡುತ್ತಿದೆ. ಇದನ್ನು ಅನುಸರಿಸುವ ಮೂಲಕ ಅತ್ಯುತ್ತಮ ಮೆಮೊರಿ ಪವರ್ ಪಡೆಯಬಹುದು. ಈಗಿನ ಜೀವನಶೈಲಿಯೂ ನೆನಪಿನ ಶಕ್ತಿ ಕುಂಠಿತವಾಗಲು ಕಾರಣ ಎನ್ನುತ್ತಾರೆ ತಜ್ಞ ವ್ಯದ್ಯರುಗಳು. ಪರೀಕ್ಷೆಗೆ ಸಿದ್ಧತೆ ನಡೆಸುವವರು ನೋಟ್ಸ್ ಬರೆದಿಟ್ಟುಕೊಳ್ಳುವ ಮೂಲಕ,… Read More »

ವ್ಯಕ್ತಿತ್ವ ವಿಕಸನ: ಲೀಡರ್ ಆಗುವುದು ಹೇಗೆ?

By | 23/06/2018

ನಾಯಕತ್ವದ ಕುರಿತು “Are Leaders Born or Made?’ ಎಂಬ ಪ್ರಶ್ನೆ ತುಂಬಾ ಫೇಮಸ್. ಕೆಲವರ ಪ್ರಕಾರ ನಾಯಕತ್ವವೆನ್ನುವುದು ಹುಟ್ಟುಗುಣ, ನಾಯಕರನ್ನು ನಿಸರ್ಗವೇ ಸೃಷ್ಟಿಸುತ್ತದೆ. ಇನ್ನು ಕೆಲವರ ಪ್ರಕಾರ, ನಾಯಕರು ಹುಟ್ಟುವುದಲ್ಲ, ಅವರು ನಾಯಕರಾಗಿ ಬೆಳೆದವರು’. ರಾಜರುಗಳ ಕಾಲಕ್ಕೆ “Leaders Born ‘ ಎನ್ನುವುದು ಸರಿಯಾದ ಮಾತು ಆಗಿದ್ದೀರಬಹುದು. ಆದರೆ, ಈ ಕಾರ್ಪೋರೆಟ್ ಜಗತ್ತಿನಲ್ಲಿ “Leaders Made’ ಎನ್ನುವುದೇ ಪರಮಸತ್ಯ. `ಹುಟ್ಟುತ್ತಲೇ ಯಾರು ನಾಯಕರಲ್ಲ. ಅವರು ಹುಟ್ಟಿದ ನಂತರ ನಾಯಕರಾದವರು. ಅವರು ಸರಳವಾಗಿ ನಾಯಕರಾದವರಲ್ಲ. ತಮ್ಮ ಕಠಿಣ ಪರಿಶ್ರಮದಿಂದ ಆ ಸ್ಥಾನಕ್ಕೆ… Read More »

ಕಮಲಿ: ಧಾರವಾಹಿಯ ಹಳ್ಳಿಹುಡುಗಿ, ನಿಜ ಜೀವನದಲ್ಲಿ ಹೇಗಿದ್ದಾರೆ?

By | 21/06/2018

ಝೀವಾಹಿನಿಯಲ್ಲಿ ಇತ್ತೀಚೆಗೆ ಆರಂಭಗೊಂಡ ಕಮಲಿ ಸೀರಿಯಲ್ ಆರಂಭದಿಂದಲೂ ಇಂಟ್ರೆಸ್ಟಿಂಗ್. ಅದೇ ತಲೆಚಿಟ್ಟುಹಿಡಿಸುವ ಫ್ಯಾಮಿಲಿ ಸೀರಿಯಲ್ ನೋಡಿ ತಲೆಕೆಟ್ಟು ಹೋಗಿರುವವರಿಗೆ ಕಾಲೇಜು ಸ್ಟೋರಿ ಇರುವ ಕಮಲಿ ಇಷ್ಟವಾಗಿರುವುದು ಸುಳ್ಳಲ್ಲ. ಕೊರಿಯನ್ ಡ್ರಾಮಾ ನೆನಪಿಸುವಂತೆ ಇಲ್ಲೂ ಕಾಲೇಜಿನಲ್ಲಿ ನಡೆಯುವ ಘಟನೆಗಳು ಇಂಟ್ರೆಸ್ಟಿಂಗ್. ನಗರದಲ್ಲಿರುವ ಕಾಲೇಜಿಗೆ ಮುಗ್ಧಮುಖದ, ಮುದ್ದಾಗಿ ಮಾತನಾಡುವ ಕಮಲಿಯೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆಕೆಯ ಹಳ್ಳಿ ಶೈಲಿಯ ಮಾತುಗಾರಿಕೆ, ಸಾಧಿಸಬೇಕೆಂಬ ಹಂಬಲ, ಒಳ‍್ಳೆಯತನ, ಮುಗ್ಧತೆ, ಸೌಂದರ್ಯದಲ್ಲಿ ಸ್ನಿಗ್ಧತೆ ಇವೆಲ್ಲದರಿಂದ ಕಮಲಿಯೀಗ ನಿಧಾನವಾಗಿ ಕನ್ನಡಿಗರ ಹೃದಯ ಹೊಕ್ಕಿದ್ದಾರೆ. ಕಮಲಿ ಎಂದರೆ ಹಳ್ಳಿಹುಡುಗಿ. ಎಷ್ಟು ಮುದ್ದುಮುದ್ದಾಗಿ ಹಳ‍್ಳಿ… Read More »

ವ್ಯಕ್ತಿತ್ವ ವಿಕಸನ: ಕೆಲಸದ ಕೊನೆಯ ಹತ್ತು ನಿಮಿಷ ಏನು ಮಾಡುವಿರಿ?

By | 21/06/2018

ಕರಿಯರ್‍ ನಲ್ಲಿ ಯಶಸ್ವಿಯಾದವರ ಪ್ರತಿ ನಡೆನುಡಿಯಲ್ಲಿಯೂ ಕಲಿಯಲು ಸಾಕಷ್ಟಿರುತ್ತದೆ. ಇಂತಹ ಉದ್ಯೋಗಿಗಳು ಕೆಲಸ ಹೇಗೆ ಆರಂಭಿಸುತ್ತಾರೆ? ಹೇಗೆ ಮುಗಿಸುತ್ತಾರೆ? ಟೀ ಬ್ರೇಕ್/ಊಟದ ಸಮಯದಲ್ಲಿ ಹೇಗಿರುತ್ತಾರೆ? ಹೀಗೆ ಅವರಿಂದ ನಾವು ಸಾಕಷ್ಟು ಸಂಗತಿಗಳನ್ನು ಕಲಿಯಬಹುದು. ಕಚೇರಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಲು ಹತ್ತು ನಿಮಿಷ ಇದೆ ಎಂದುಕೊಳ್ಳೋಣ. ಆ ಸಮಯವನ್ನು ಇವರು ಹೇಗೆ ಸದುಪಯೋಗ ಮಾಡಿಕೊಳ್ಳುತ್ತಾರೆ ಗೊತ್ತೆ? ಇವುಗಳಲ್ಲಿ ಕೆಲವು ಅಂಶಗಳನ್ನಾದರೂ ನಾವು ಪಾಲಿಸಬಹುದು. ಈ ದಿನ ಮಾಡಿರುವ ಕಾರ್ಯಗಳನ್ನೆಲ್ಲ ಪರಿಶೀಲಿಸುತ್ತಾರೆ. ನಾಳೆ ಬಂದು ಏನು ಮಾಡಬೇಕು ಎಂದು ಕೆಲವು ಸೆಕೆಂಡ್ ಯೋಚಿಸುತ್ತಾರೆ.… Read More »