Monthly Archives: July 2010

ಒಂದು ಕನವರಿಕೆಯ ಕ್ಷಣ

By | 27/07/2010

ಒಂದು ಕನವರಿಕೆಯ ಕ್ಷಣ ಪ್ರತಿದಿನ ನಾನು ನಗರವನ್ನು ಅಚ್ಚರಿಗಣ್ಣಿಂದಲೇ ನೋಡುತ್ತಿದ್ದೇನೆ. ಇನ್ನೂ ಅರ್ಥವಾಗಿಲ್ಲ. ಒಂದೊಮ್ಮೆ ಮದುವೆ ಮನೆಯ ಸಡಗರ, ಮತ್ತೊಮ್ಮೆ ಸೂತಕದ ಮನೆಯ ಬೇಸರ, ಎರಡರ ನಡುವೆಯೂ ಯಾತ್ರಿಕವಾಗಿ ಸಾಗುವ ನೇಸರನ ಬದುಕು ಇಲ್ಲಿಯದು. ಊರಿನಲ್ಲಿ ಜಡಿಹಿಡಿದು ಸುರಿವ ಮಳೆ ಇನ್ನೂ ಬಿಟ್ಟಿಲ್ಲವಂತೆ. ಇಲ್ಲಿ ಎಲ್ಲಿಯ ಮಳೆ? ಮಳೆಗೂ ಹಸಿರಿನ ಪ್ರೀತಿ. ಮರಕಂಡಲ್ಲಿ ಒಂದಿಷ್ಟು ಸುರಿಯುತ್ತದೆ. ನಗರಗಳ ಮೇಲೆ ಯಾವಾಗಲೊಮ್ಮೆ ಕಣ್‌ಹನಿ ಸುರಿಸುತ್ತದೆ ಅಷ್ಟೇ. ಹಳ್ಳಿಯಲ್ಲಿ ಮಳೆ ಸುರಿವಾಗ ಕೊಡೆ ಹಿಡಿದು ನಡೆಯುವುದೆಂದರೆ ನನಗೆ ಇಷ್ಟವಾಗುತ್ತಿತ್ತು. ಇಲ್ಲಿನ ಮನೆ ಮುಳುಗಿಸೋ ಮಳೆ… Read More »

ಆರ್ತನಾದ

By | 14/07/2010

ಆರ್ತನಾದ ಕಾಲದ ಚಕ್ರದಲ್ಲಿ ಅತ್ತಇತ್ತ ಉರುಳುರುತ ಕರುಳ ಉರಿಸುವ ನೋವಿನ ಕಾವಿನಿಂದ ನರಳುತ್ತ ಸಾವಿನತ್ತ ಸಾಗಲು ಸಿದ್ಧವಾಗಿ ನಿಂತಿಹ ಮುದುಕಿ ನಾನು…. ಅರ್ಥವಿಲ್ಲದ `ಅರ್ಥದ’ ಬೆನ್ನ ಹಿಂದೆ ಹಾರಿದ ಹೊಟ್ಟೆ, ಬಟ್ಟೆ ಕಟ್ಟಿ ಕೆತ್ತಿಹ ಹೊನ್ನ ಶಿಲ್ಪ ತನುಜರೇ ಕೇಳಿಸದೇ ಯಮಪಾಶದಲ್ಲಿ ಶೇಷವಾಗುತಿಹ ಮಾತೆಯ ಆರ್ತನಾದ (ನಾನು ಪದವಿಯಲ್ಲಿರುವಾಗ ಬರೆದ ಕವಿತೆ)

ನಗುವ ಹೂವಿಗೆ..

By | 13/07/2010

ನಗುವ ಹೂವಿಗೆ ದಿನಕ್ಕೊಂದಿಷ್ಟು ಮುಗುಳು ನಗು ದಿನಕರನ ನೋಡಿ.. ಬಿರಿದಾಂಗೆ ಬಳ್ಳಿತುಂಬಾ ಮಲ್ಲಿಗೆ ಮೊಗ್ಗು ಏನೆನ್ನಲಿ ಹುಡುಗಿ ನಿನ್ನ ನಗುವ ಬೆಡಗು ಕಪ್ಪು ಸಮಾಜದ ನಡುವೆ ಕಣ್ಣಾ ಮುಚ್ಚಾಲೆ ಆಟವೇ… ಯಾರಿಗೂ ಕಾಣದಾಂಗೆ ಸ್ಫುರಿಸುವೆ ಮುಗುಳ್ನಗೆಯ ಒಲವ ನೋಟ… ನಿನ್ನೀ ನಗುವಲ್ಲಿ ನೂರು ಮಾತು ನೂರೊಂದು ಮಧುರ ಕಾವ್ಯ.. ಭಾವ ನವಿರೇಳುತಿದೆ ನಲಿದಾಡುತಿದೆ ನವಿಲಾಗಿ ಮನಸ್ಸು… ಒಲವ ರಂಗವಲ್ಲಿ ಚೆಲುವ ರಾಗದಲ್ಲಿ ಅನುರಾಗದ ಕಂಪು ಕಣಜ ನಿನ್ನೀ ಮನ ಮೈಮಾಟದಲ್ಲಿ ಮಳೆ ಬಿಲ್ಲ ಚೆಲುವು… ನಿತ್ಯ ನಗುವ ಮಲ್ಲಿಗೆಯಾಗು ಕನಸ ಮುದ್ದು… Read More »

ಹನಿ ಹನಿ

By | 13/07/2010

ನೆನಪು ನಿನ್ನ ನೆನಪು ಸೂಜಿಮೊನೆ ಎದೆಯಲ್ಲಿ ಚುಚ್ಚಿದ ಹಾಗೆ ಯಾತನೆ ಹೆಜ್ಜೆ ಅವಳ ಹೆಜ್ಜೆ ಸದ್ದಾಗುವುದಿಲ್ಲ ಆದರೆ ಅವಳ ಕಾಲ್ಗೆಜ್ಜೆ ಸುಮ್ಮನಿರುವುದಿಲ್ಲ ತಾಳ ಅಂದಿನ ಹುಡುಗಿಯರ ಹೆಜ್ಜೆಗೆ ಗೆಜ್ಜೆಯ ಸದ್ದಾಗಿತ್ತು ತಾಳ ಇಂದಿನ ಹುಡುಗಿಯರ ಹೆಜ್ಜೆಗೆ ಹೈಹೀಲ್ಡ್‌ನ ಸದ್ದೇ ಬ್ಯಾಂಡುಮೇಳ

ಅಮ್ಮನ ಕಣ್ಣೀರು

By | 13/07/2010

ಬಾನ ಚಂದಿರನ ತಂದು ಕೊಡೆಂದು ಕೇಳಿದ ಮಗುವಿಗೆ ಕಳೆದು ಹೋದ ಇನಿಯನ ಚಂದಿರನಲ್ಲಿ ನೋಡುತಿರುವ ಅಮ್ಮನ ಕಣ್ಣೀರು ಕಾಣಿಸಲಿಲ್ಲ