ಸಿಮ್ಯಾಕ್ ಬೆಂಗಳೂರು ಸಮನ್ವಯಾಧಿಕಾರಿ ಹುದ್ದೆ

ಸಿಟಿ ಮ್ಯಾನೇಜರ್ ಅಸೋಸಿಯೇಷನ್ ಕರ್ನಾಟಕ ( ಸಿಮ್ಯಾಕ್) ಪ್ರಧಾನ ಕಾರ್ಯದರ್ಶಿ ( ಜನರಲ್ ಸೆಕ್ರೆಟರಿ), ಸಿಮ್ಯಾಕ್, ಬೆಂಗಳೂರು ಸಂಸ್ಥೆಯಿಂದ ‌ಕೆಳಕಂಡ ಹುದ್ದೆಗಾಗಿ ಆಸಕ್ತ ‌ಅರ್ಹ ಅಭ್ಯರ್ಥಿಗಳಿಂದ ವಾರ್ಷಿಕ ಕರಾರು ಒಪ್ಪಂದದ ಆಧಾರದಲ್ಲಿ ಅರ್ಜಿಗಳನ್ನು ‌ಆಹ್ವಾನಿಸಲಾಗಿದೆ.

ಹುದ್ದೆಯ ಸಂಸ್ಥೆ : ಸಮನ್ವಯಾಧಿಕಾರಿ

ಹುದ್ದೆ ಸಂಖ್ಯೆ : 01

ವಿದ್ಯಾರ್ಹತೆ : ಎಂಬಿಎ ಯೊಂದಿಗೆ ಸ್ನಾತಕೋತ್ತರ ಪದವಿ, ಸುಸ್ಥಿರ ಅಭಿವೃದ್ಧಿ ಇಲಾಖೆ, ಪರಿಸರ ನಗರಾಭಿವೃದ್ಧಿ, ನೀರು ‌ಮತ್ತು ನೈರ್ಮಲ್ಯೀಕರಣ ಹಾಗೂ ‌ಇತರೆ ಸಂಬಂಧಿತ ಕ್ಷೇತ್ರಗಳಲ್ಲಿ ಕನಿಷ್ಠ 8 ರಿಂದ 10 ವರ್ಷಗಳ ಅನುಭವವುಳ್ಳವರಿಗೆ ಆದ್ಯತೆ ನೀಡಲಾಗುವುದು.

ಮಾಸಿಕ ವೇತನ : ರೂ.60,000/- ವೇತನ ಪ್ರತಿ ತಿಂಗಳು.

ಇತರ ಷರತ್ತು : ಅಭ್ಯರ್ಥಿಗಳು ಭಾರತದೊಳಗೆ ಪ್ರಯಾಣಿಸಲು ಆಸಕ್ತಿ ಹೊಂದಿರಬೇಕು. ಕಂಪ್ಯೂಟರ್ ‌ನ ಎಂ.ಎಸ್.ಆಫೀಸ್ ಜ್ಞಾನ ಹೊಂದಿರಬೇಕು. ಆಂಗ್ಲ ಮತ್ತು ಕನ್ನಡ ‌ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರಗಳನ್ನು‌ ಅರ್ಜಿ ಸಲ್ಲಿಸಿರುವ ಹುದ್ದೆಯ ಹೆಸರಿನೊಂದಿಗೆ ಸಂಪರ್ಕದ ಮತ್ತು ವೈಯುಕ್ತಿಕ ಪೂರ್ಣ ಮಾಹಿತಿ, ಸಮೇತ ಶೈಕ್ಷಣಿಕ ಅರ್ಹತೆಯ ಅಂತಿಮ ವರ್ಷದ ‌ಪದವಿಯಲ್ಲಿ/ ಸ್ನಾತಕೋತ್ತರ ಪದವಿಯಲ್ಲಿ ಪಡೆದ ಅಂಕಗಳು, ಅಂಕಪಟ್ಟಿಗಳ ಪ್ರತಿಗಳು, ವಯಸ್ಸಿನ ಪುರಾವೆಗಾಗಿ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಪ್ರತಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಪಡೆದಿರುವ ಅನುಭವದ ಪ್ರಮಾಣ ಪತ್ರದ ಪ್ರತಿಗಳೊಂದಿಗೆ ಪ್ರಧಾನ ಕಾರ್ಯದರ್ಶಿಗಳು, ಸಿಟಿ ಮ್ಯಾನೇಜರ್ ಅಸೋಸಿಯೇಷನ್ ಕರ್ನಾಟಕ, ನಂ.42, ಸಂಜೀವಿನಿ, 4 ನೇ ಅಡ್ಡರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು ‌- 56 0003 ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ದಿನಾಂಕ 15-09-2021 ರ ಸಂಜೆ 5.00 ಗಂಟೆಯ ಒಳಗಾಗಿ ಕಳುಹಿಸಿಕೊಡತಕ್ಕದ್ದು. ಹೆಚ್ಚಿನ ವಿವರಗಳು https://www.cmak.municipaladmn.gov.in ನಲ್ಲಿ ಲಭ್ಯವಿರುತ್ತದೆ.

ವಯೋಮಿತಿಯು ಆಗಸ್ಟ್ ‌2021 ರ ಮಾಹೆಯಂತೆ 50 ವರ್ಷದೊಳಗಿರಬೇಕು.

error: Content is protected !!