ಜಿಲ್ಲಾ ಆರೋಗ್ಯ ಮತ್ತು ಕು.ಕ.ಸಂಘ ಬೆಂಗಳೂರು ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ

By | 17/08/2021

ಜಿಲ್ಲಾ ಆರೋಗ್ಯ ಮತ್ತು ಕು.ಕ.ಸಂಘ ಬೆಂಗಳೂರು ನಗರ ಜಿಲ್ಲೆಯಲ್ಲಿ 2021-22 ನೇ ಸಾಲಿಗೆ ಎನ್ ಹೆಚ್ ಎಂ ಯೋಜನೆಯ ವಿವಿಧ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಎನ್ ಹೆಚ್ ಎಂ ಮಾರ್ಗಸೂಚಿಗಳಂತೆ ಗುತ್ತಿಗೆ ಆಧಾರದ ಮೇಲೆ ನಿಯಮಾನುಸಾರ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಈ ಪ್ರಕಟಣೆಯು ರೋಲಿಂಗ್ ಪ್ರಕಟಣೆ ಆಗಿರುವುದರಿಂದ ಇದರ ಕಾಲಾವಧಿಯು ದಿ.31-03-2022 ರವರೆಗೆ ಇರುತ್ತದೆ.

ಹುದ್ದೆಗಳ ಮಾಹಿತಿ :ಸ್ಪೆಷಲಿಸ್ಟ್, ಬ್ಲಾಕ್ ಪ್ರೋಗ್ರಾಂ ಮ್ಯಾನೇಜರ್, ಟೆಕ್ನಿಕಲ್ ಸುಪರ್ ವೈಸರ್, ಕೌನ್ಸಿಲರ್, ಡಯೆಟ್ ಕೌನ್ಸಿಲರ್

ಆಸಕ್ತಿಯುಳ್ಳ ಅಭ್ಯರ್ಥಿಗಳು ದಿನಾಂಕ 23-08-2021 ರ ಬೆಳಿಗ್ಗೆ 11:00 ಗಂಟೆಗೆ ನೇರ ಸಂದರ್ಶನಕ್ಕೆ ತಮ್ಮ ಮೂಲ ದಾಖಲೆಗಳೊಂದಿಗೆ 1 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಜಿಲ್ಲಾ ಆರ್. ಸಿ.ಹೆಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣ, ಹಳೇ ಟಿ.ಬಿ.ರಸ್ತೆ, ಹಳೇ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ ಬೆಂಗಳೂರು – 38 ಇಲ್ಲಿಗೆ ಹಾಜರಾಗುವುದು.

Leave a Reply

Your email address will not be published. Required fields are marked *