ಕರ್ನಾಟಕದಲ್ಲಿ ಸಾಕಷ್ಟು ಪತ್ರಿಕೋದ್ಯಮಿಗಳು ಈಗ ಸ್ವಂತ ಡಿಜಿಟಲ್ ಪೋರ್ಟಲ್‌ಗಳ ಮಾಲೀಕರು. ಕರ್ನಾಟಕ ಬೆಸ್ಟ್ ಮೂಲಕವೇ ನೂರಕ್ಕೂ ಹೆಚ್ಚು ಜನರು ಡಿಜಿಟಲ್ ಪೋರ್ಟಲ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ನಮ್ಮ ಡಿಜಿಟಲ್ ಪೋರ್ಟಲ್‌ಗಳ ಗ್ರಾಹಕರು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿಯೂ ಇದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ. ಪುತ್ತೂರಿನಲ್ಲಿ ನಿಖರ ನ್ಯೂಸ್, ನ್ಯೂಸ್ ಪುತ್ತೂರು, ಬೆಳ್ತಂಗಡಿಯಲ್ಲಿ ಸುದ್ದಿ ಉದಯ, ಸತ್ಯಸುದ್ದಿ.ಕಾಮ್, ಸುಳ್ಯದಲ್ಲಿ ಅಮರ ಸುದ್ದಿ, ನ್ಯೂಸ್ ನಾಟೌಟ್, ಮಾರ್ಧನಿ, ಸಮಗ್ರಸಮಾಚಾರ, ಮಂಗಳೂರಲ್ಲಿ ಕರಾವಳಿ ಹೆಡ್‌ಲೈನ್ಸ್ ಡಾಟ್ ಕಾಮ್, ಕಾರ್ಕಳದಲ್ಲಿ ಜನಪ್ರಿಯ ನ್ಯೂಸ್‌ಕಾರ್ಕಳ.ಕಾಮ್, ನ್ಯೂಸ್‌ಉಡುಪಿ, ಬೆಂಗಳೂರಲ್ಲಿ ಖ್ಯಾತ ಬೆಂಗಳೂರುವೈರ್.ಕಾಮ್, ಕೆಎಂಎಸ್‌ಕನ್ನಡ.ಕಾಮ್, ಶಿವಮೊಗ್ಗದಲ್ಲಿ ಮಲೆನಾಡುಮಿತ್ರ.ಕಾಮ್, ಶೃಂಗೇರಿ ಆಸುಪಾಸಿನಲ್ಲಿ ಖ್ಯಾತಿ ಪಡೆದ ನ್ಯೂಸ್‌ಮಲ್ನಾಡ್, ವಿಜಯಪುರದಲ್ಲಿ ಬಸವನಾಡು.ಕಾಮ್, ಧರ್ಮಸ್ಥಳದ ನಿರಂತರಪ್ರಗತಿ.ಕಾಮ್, ವಿವಿಧ ಊರುಗಳಲ್ಲಿ ಕರುನಾಡಕಂದ.ಕಾಮ್, ನ್ಯೂಕರ್ನಾಟಕ.ಕಾಮ್, ದೂರದ ಮುಂಬೈಯಲ್ಲಿ ಮುಂಬೈನ್ಯೂಸ್‌ಕನ್ನಡ.ಇನ್, ಚಿತ್ರದುರ್ಗದಲ್ಲಿ ಜನಪ್ರಿಯ ಚಿತ್ರದುರ್ಗನ್ಯೂಸ್.ಕಾಮ್, ನ್ಯೂಸ್‌ಕೆನರಾ.ಕಾಮ್, ವಿಜಯಸಿರಿನ್ಯೂಸ್.ಕಾಮ್ ಹೀಗೆ ಲೆಕ್ಕಹಾಕುತ್ತ ಹೋದರೆ ಸಾಕಷ್ಟು ನ್ಯೂಸ್‌ವೆಬ್‌ಸೈಟ್‌ಗಳು ಕರ್ನಾಟಕ ಬೆಸ್ಟ್ ಮೂಲಕ ನಿರ್ಮಿಸಿಕೊಂಡು ಪ್ರತಿಭಾನ್ವಿತರ ತಂಡದ ನೆರವಿನಿಂದ ಹಲವು ವರ್ಷಗಳಿಂದ ಡಿಜಿಟಲ್ ಸುದ್ದಿ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿಕೊಂಡಿವೆ.
ಪಿಡಿಎಫ್ ಪೇಪರ್‌ಗಳ ಬದಲು ಇಪೇಪರ್
ಈ ಬ್ಲಾಗ್ ಪೋಸ್ಟ್‌ನಲ್ಲಿ ಕರ್ನಾಟಕ ಬೆಸ್ಟ್ ಡಿಜಿಟಲ್ ಸರ್ವೀಸ್‌ನ ಹೊಸ ಸೇವೆ “ಕರ್ನಾಟಕ ಬೆಸ್ಟ್ ಇ-ಪೇಪರ್ ಎಂಜಿನ್” ಕುರಿತು ಚರ್ಚಿಸೋಣ. ಸಾಕಷ್ಟು ಡಿಜಿಟಲ್ ಪತ್ರಿಕೋದ್ಯಮಿಗಳು ಸುದ್ದಿಪತ್ರಿಕೆಗಳನ್ನು ಪಿಡಿಎಫ್ ರೂಪದಲ್ಲಿ ತರುತ್ತಿದ್ದಾರೆ. ಪ್ರಜಾವಾಣಿ, ವಿಜಯಕರ್ನಾಟಕ, ವಿಜಯವಾಣಿಯಂತಹ ಪತ್ರಿಕೆಗಳು ಇಪೇಪರ್‌ಗಳನ್ನು ಹೊಂದಿವೆ. ಆದರೆ, ಎಲ್ಲರಿಗೂ ಈ ರೀತಿಯ ದುಬಾರಿ ಇಪೇಪರ್‌ಗಳನ್ನು ಹೊಂದುವುದು ಕಷ್ಟ. ಬಹುತೇಕ ತಾಲೂಕು ಮಟ್ಟದ, ಜಿಲ್ಲಮಟ್ಟಾದ ದಿನಪತ್ರಿಕೆಗಳು, ವಾರಪತ್ರಿಕೆಗಳು ವಾಟ್ಸಪ್‌ನಲ್ಲಿ ತಮ್ಮ ಇಪೇಪರ್‌ಗಳನ್ನು ಪಿಡಿಎಫ್ ರೂಪದಲ್ಲಿ ವಾಟ್ಸಪ್‌ನಲ್ಲಿ ಹಂಚುತ್ತವೆ.
ಇ-ಪೇಪರ್ ಮೂಲಕ ಅತ್ಯುತ್ತಮ ಓದುವ ಅನುಭವ
ಪತ್ರಿಕೋದ್ಯಮವು ಕೇವಲ ಮಾಹಿತಿ ನೀಡುವುದಲ್ಲ, ಅದು ಒಂದು ಬದ್ಧತೆ ಮತ್ತು ಬ್ರ್ಯಾಂಡ್. ಆದರೆ ಬದಲಾಗುತ್ತಿರುವ ತಂತ್ರಜ್ಞಾನದ ಓಟಕ್ಕೆ ನಾವು ಹೊಂದಿಕೊಳ್ಳದಿದ್ದರೆ, ಎಷ್ಟೇ ಉತ್ತಮ ಸುದ್ದಿಗಳಿದ್ದರೂ ಓದುಗರು ನಮ್ಮಿಂದ ದೂರ ಸರಿಯುತ್ತಾರೆ. ಇಂದು ಪ್ರತಿಯೊಬ್ಬ ಓದುಗನೂ ‘ಸ್ಮಾರ್ಟ್’ ಆಗಿದ್ದಾನೆ. ಆತನ ಕೈಯಲ್ಲಿರುವ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ಪತ್ರಿಕೆ ಹೇಗೆ ಕಾಣಿಸುತ್ತದೆ ಎಂಬುದು ನಿಮ್ಮ ಪತ್ರಿಕೆಯ ಭವಿಷ್ಯವನ್ನು ನಿರ್ಧರಿಸುತ್ತದೆ.
ಹಲವು ಪತ್ರಿಕೆಗಳು ಇಂದಿಗೂ ವಾಟ್ಸಪ್‌ನಲ್ಲಿ ‘ಪಿಡಿಎಫ್’ (PDF) ಹಂಚುವುದನ್ನೇ ಡಿಜಿಟಲೀಕರಣ ಎಂದು ಭಾವಿಸಿವೆ. ಆದರೆ ವಾಸ್ತವವಾಗಿ, ಪಿಡಿಎಫ್ ಹಂಚುವುದು ಓದುಗರಿಗೆ ನೀಡುವ ಅತ್ಯಂತ ಕಳಪೆ ಅನುಭವವಾಗಿದೆ. ಇದಕ್ಕೊಂದು ಶಾಶ್ವತ ಮತ್ತು ವೃತ್ತಿಪರ ಪರಿಹಾರವೇ “ಕರ್ನಾಟಕ ಬೆಸ್ಟ್‌ನ ಅಲ್ಟ್ರಾ ಮಾಡರ್ನ್ ಇ-ಪೇಪರ್ ಸಿಸ್ಟಮ್”.
ಪಿಡಿಎಫ್ ಹಂಚುವುದು ಏಕೆ ಅಪಾಯಕಾರಿ?
ಡೌನ್‌ಲೋಡ್ ಕಿರಿಕಿರಿ: 10-15 MB ಇರುವ ಪಿಡಿಎಫ್ ಫೈಲ್‌ಗಳನ್ನು ಪ್ರತಿ ದಿನ ಡೌನ್‌ಲೋಡ್ ಮಾಡಲು ಓದುಗರು ಇಷ್ಟಪಡುವುದಿಲ್ಲ. ಇದು ಅವರ ಫೋನ್ ಮೆಮೊರಿಯನ್ನು ತಿನ್ನುತ್ತದೆ.
ಝೂಮ್ ಮಾಡುವ ಕಷ್ಟ: ಮೊಬೈಲ್‌ನಲ್ಲಿ ಪಿಡಿಎಫ್ ತೆರೆದಾಗ ಅಕ್ಷರಗಳು ಸ್ಪಷ್ಟವಾಗಿ ಕಾಣುವುದಿಲ್ಲ. ಒಂದು ಸುದ್ದಿ ಓದಲು ಇಡೀ ಪರದೆಯನ್ನು ಎಡ-ಬಲಕ್ಕೆ ಎಳೆಯುತ್ತಾ ಓದುಗರು ಸುಸ್ತಾಗುತ್ತಾರೆ.
ಬ್ರ್ಯಾಂಡ್ ಮೌಲ್ಯದ ಕೊರತೆ: ಪಿಡಿಎಫ್ ಕೇವಲ ಒಂದು ಫೈಲ್ ಅಷ್ಟೆ. ಅದರಲ್ಲಿ ನಿಮ್ಮ ಪತ್ರಿಕೆಯ ವೃತ್ತಿಪರತೆ ಅಥವಾ ಗಾಂಭೀರ್ಯ ಎದ್ದು ಕಾಣುವುದಿಲ್ಲ.
ಸುದ್ದಿ ಹಂಚುವಿಕೆಗೆ ಅಡ್ಡಿ: ಓದುಗರಿಗೆ ಪತ್ರಿಕೆಯ ಒಂದು ನಿರ್ದಿಷ್ಟ ಸುದ್ದಿ ಇಷ್ಟವಾದರೆ, ಅವರು ಇಡೀ ಪತ್ರಿಕೆಯನ್ನೇ ಹಂಚಬೇಕಾಗುತ್ತದೆ. ಕೇವಲ ಒಂದು ಸುದ್ದಿಯನ್ನು ಮಾತ್ರ ಕತ್ತರಿಸಿ ಹಂಚುವ ಸೌಲಭ್ಯ ಪಿಡಿಎಫ್‌ನಲ್ಲಿಲ್ಲ.
ಎಲ್ಲಕ್ಕಿಂತ ಪ್ರಮುಖವಾಗಿ ಪಿಡಿಎಫ್ ಅನ್ನು ವಾಟ್ಸಪ್ ಅನುಮಾನದಲ್ಲಿ ನೋಡುತ್ತವೆ. ಹೆಚ್ಚು ಹೆಚ್ಚು ಪಿಡಿಎಫ್‌ಗಳನ್ನು ಹಂಚಿಕೊಳ್ಳುತ್ತ ಹೋದಂತೆ ವಾಟ್ಸಪ್ ಗ್ರೂಪ್‌ಗಳು ಬ್ಲಾಕ್ ಆಗುತ್ತವೆ. ಸಾಕಷ್ಟು ಜನರು ಈ ತೊಂದರೆ ಅನುಭವಿಸುತ್ತಿದ್ದಾರೆ. ಆನ್‌ಲೈನ್ ಸ್ಕ್ಯಾಮ್ ಹೆಚ್ಚುವ ಸಮಯದಲ್ಲಿ ವಾಟ್ಸಪ್ ಪಿಡಿಎಫ್‌ಫೈಲ್‌ಗಳನ್ನು ಹಂಚುವ ಫೋನ್ ನಂಬರ್‌ಗಳನ್ನು ವಾಟ್ಸಪ್ ಖಾತೆಗಳನ್ನು ವಾಟ್ಸಪ್ ಬ್ಯಾನ್, ಬ್ಲಾಕ್ ಮಾಡುತ್ತದೆ.
ಕರ್ನಾಟಕ ಬೆಸ್ಟ್ ಡಿಜಿಟಲ್ ಸರ್ವೀಸ್ ಆಯ್ಕೆ ಮಾಡಿಕೊಳ್ಳಿ
ನಮ್ಮ ಸಂಸ್ಥೆಯು ಪತ್ರಿಕೋದ್ಯಮದಲ್ಲಿ 17 ವರ್ಷಗಳ ಸುದೀರ್ಘ ಅನುಭವವನ್ನು ಹೊಂದಿರುವ ತಜ್ಞರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಒಬ್ಬ ಪತ್ರಕರ್ತನಿಗೆ ತನ್ನ ಸುದ್ದಿ ಓದುಗರಿಗೆ ಎಷ್ಟು ಸ್ಪಷ್ಟವಾಗಿ ಮುಟ್ಟಬೇಕು ಎಂಬ ಕಾಳಜಿ ನಮಗಿದೆ. ಅದಕ್ಕಾಗಿಯೇ ನಾವು ಸಿದ್ಧಪಡಿಸಿರುವ ಇ-ಪೇಪರ್ ಇಂಜಿನ್ ಮಾರುಕಟ್ಟೆಯಲ್ಲಿ ವಿಶಿಷ್ಟವಾಗಿದೆ.
ನಮ್ಮ ಇ-ಪೇಪರ್ ಸಿಸ್ಟಮ್‌ನ ವಿಶಿಷ್ಟ ಫೀಚರ್‌ಗಳು (Features)
ನಮ್ಮ ಸಾಫ್ಟ್‌ವೇರ್ ಅನ್ನು ಕೇವಲ ಓದುವುದಕ್ಕಾಗಿ ಮಾತ್ರವಲ್ಲ, ನಿಮ್ಮ ಬಿಸಿನೆಸ್ ಬೆಳೆಸಲು ವಿನ್ಯಾಸಗೊಳಿಸಲಾಗಿದೆ:
೧. ಹೈ-ರೆಸಲ್ಯೂಶನ್ ಅಕ್ಷರಗಳ ಸ್ಪಷ್ಟತೆ (Ultra-HD Rendering): ನಾವು ಸುಧಾರಿತ ImageMagick ಮತ್ತು Ghostscript ತಂತ್ರಜ್ಞಾನ ಬಳಸುತ್ತೇವೆ. ಇದರಿಂದ ನಿಮ್ಮ ಪತ್ರಿಕೆಯ ಪುಟಗಳು ಎಷ್ಟೇ ಜೂಮ್ ಮಾಡಿದರೂ ಅಕ್ಷರಗಳು ಒಡೆಯುವುದಿಲ್ಲ. ಇದು ಓದುಗರ ಕಣ್ಣಿಗೆ ಹಿತ ನೀಡುತ್ತದೆ.
೨. ನ್ಯಾಚುರಲ್ ಪಿಂಚ್-ಝೂಮ್ (Pinch-to-Zoom): ಓದುಗರು ತಮ್ಮ ಫೋನ್‌ನಲ್ಲಿ ಸಹಜವಾಗಿ ಎರಡು ಬೆರಳುಗಳಿಂದ ಜೂಮ್ ಮಾಡಲು ಪ್ರಯತ್ನಿಸಿದ ತಕ್ಷಣ, ಹೈ-ಕ್ವಾಲಿಟಿ ವ್ಯೂವರ್ ಓಪನ್ ಆಗುತ್ತದೆ.
೩. ಸ್ಮಾರ್ಟ್ ನ್ಯೂಸ್ ಕ್ಲಿಪ್ಪಿಂಗ್ (Smart Clipping Tool): ಇದು ನಮ್ಮ ಸಾಫ್ಟ್‌ವೇರ್‌ನ ಬ್ರಹ್ಮಾಸ್ತ್ರ! ಓದುಗರು ತಮಗೆ ಬೇಕಾದ ಸುದ್ದಿಯನ್ನು ಮಾತ್ರ ಕ್ರಾಪ್ (Crop) ಮಾಡಿ ವಾಟ್ಸಪ್‌ನಲ್ಲಿ ಹಂಚಬಹುದು. ಹೀಗೆ ಶೇರ್ ಮಾಡಿದಾಗ ಆ ಸುದ್ದಿಯ ಚಿತ್ರದ ಕೆಳಗೆ ಪತ್ರಿಕೆಯ ಲೋಗೋ ಮತ್ತು ನಿಮ್ಮ ವೆಬ್‌ಸೈಟ್ ವಿಳಾಸವಿರುವ ಕೆಂಪು ಬಣ್ಣದ ಬ್ರ್ಯಾಂಡೆಡ್ ಫೂಟರ್ ಆಟೋಮ್ಯಾಟಿಕ್ ಆಗಿ ಮೂಡಿಬರುತ್ತದೆ.
೪. ಇಂಟರಾಕ್ಟಿವ್ ಕ್ಯಾಲೆಂಡರ್ ಹಾಗೂ ಆರ್ಕೈವ್: ನಿಮ್ಮ ಪತ್ರಿಕೆ ಅಪ್‌ಲೋಡ್ ಆಗಿರುವ ದಿನಾಂಕಗಳು ಕ್ಯಾಲೆಂಡರ್‌ನಲ್ಲಿ ಹಸಿರು ಬಣ್ಣದಲ್ಲಿ ಹೈಲೈಟ್ ಆಗುತ್ತವೆ. ಓದುಗರು ಹಿಂದಿನ ತಿಂಗಳ ಅಥವಾ ವರ್ಷದ ಯಾವುದೇ ಪತ್ರಿಕೆಯನ್ನು ಒಂದು ಸೆಕೆಂಡ್‌ನಲ್ಲಿ ಹುಡುಕಬಹುದು.
೫. ನಂಬರ್ ಪೇಜಿನೇಶನ್ (1 2 3 4…): ಪುಟಗಳ ನಡುವೆ ಓಡಾಡಲು ಸುಲಭವಾದ ನಂಬರ್ ಬಟನ್‌ಗಳನ್ನು ನೀಡಲಾಗಿದೆ. ಇದು ಓದುಗರ ಸಮಯವನ್ನು ಉಳಿಸುತ್ತದೆ.
೬. ಆಟೋಮ್ಯಾಟಿಕ್ ಲೇಟೆಸ್ಟ್ ಎಡಿಷನ್: ನೀವು ಇಂದಿನ ಪತ್ರಿಕೆಯನ್ನು ಅಪ್‌ಲೋಡ್ ಮಾಡುವವರೆಗೆ ಓದುಗರಿಗೆ ಆಟೋಮ್ಯಾಟಿಕ್ ಆಗಿ ನಿನ್ನೆಯ ಸಂಚಿಕೆಯೇ ಮುಖಪುಟದಲ್ಲಿ ಕಾಣಿಸುತ್ತದೆ. ಪೇಜ್ ಖಾಲಿ ಕಾಣುವ ಪ್ರಮೇಯವೇ ಬರುವುದಿಲ್ಲ.
ಪತ್ರಿಕಾ ಮಾಲೀಕರಿಗೆ ‘ಮಾಸ್ಟರ್ ಡ್ಯಾಶ್‌ಬೋರ್ಡ್’ (Analytics for Business Growth)
ನಿಮ್ಮ ಪತ್ರಿಕೆಯನ್ನು ಕೇವಲ ನಡೆಸುವುದಲ್ಲ, ಬೆಳೆಸುವುದು ಹೇಗೆ ಎಂದು ತಿಳಿಯಲು ನಾವು ಅತ್ಯಾಧುನಿಕ ‘ಅಡ್ಮಿನ್ ಪ್ಯಾನಲ್’ ನೀಡುತ್ತೇವೆ:
ಲೈವ್ ವ್ಯೂವರ್ಸ್: ಈಗ ಈ ಕ್ಷಣದಲ್ಲಿ ಎಷ್ಟು ಓದುಗರು ಪತ್ರಿಕೆ ಓದುತ್ತಿದ್ದಾರೆ?
ಸಿಟಿ-ವೈಸ್ ಡೇಟಾ: ಯಾವ ಜಿಲ್ಲೆ ಅಥವಾ ತಾಲೂಕಿನ ಓದುಗರು ನಿಮ್ಮ ಪತ್ರಿಕೆಯನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ?
ಡಿವೈಸ್ ಅನಾಲಿಸಿಸ್: ಜನರು ಮೊಬೈಲ್ ಮೂಲಕ ಬರುತ್ತಿದ್ದಾರೋ ಅಥವಾ ಡೆಸ್ಕ್‌ಟಾಪ್ ಮೂಲಕವೋ?
ಟ್ರೆಂಡ್ ವರದಿ: ಕಳೆದ ೭ ದಿನಗಳಲ್ಲಿ ನಿಮ್ಮ ಪತ್ರಿಕೆಯ ಓದುಗರ ಸಂಖ್ಯೆ ಏರಿದೆಯೇ ಅಥವಾ ಇಳಿದಿದೆಯೇ?
ಈ ಎಲ್ಲಾ ಅಂಕಿಅಂಶಗಳು ನಿಮಗೆ ಜಾಹೀರಾತುದಾರರಿಗೆ (Advertisers) ಡೇಟಾ ನೀಡಲು ಮತ್ತು ಜಾಹೀರಾತು ದರ ನಿಗದಿಪಡಿಸಲು ದೊಡ್ಡ ಮಟ್ಟದ ಶಕ್ತಿಯನ್ನು ನೀಡುತ್ತವೆ.

ಬಳಸಿರುವ ಸುಧಾರಿತ ತಂತ್ರಜ್ಞಾನಗಳು (Technology Stack)
ನಾವು ಯಾವುದೇ ಸಿದ್ಧ ಪ್ಲಗಿನ್‌ಗಳನ್ನು ಬಳಸದೆ, ಸ್ಕ್ರಾಚ್‌ನಿಂದ ಸುಭದ್ರವಾದ ಕೋಡಿಂಗ್ ಮಾಡಿದ್ದೇವೆ:
Backend: PHP 8.2 & MySQL (ವೇಗ ಮತ್ತು ಭದ್ರತೆಗಾಗಿ).
Library: Swiper.js (ಪುಟಗಳನ್ನು ಸುಗಮವಾಗಿ ಸರಿಸಲು) ಮತ್ತು Viewer.js (ಝೂಮ್ ಇಂಜಿನ್‌ಗಾಗಿ).
Automation: ಒಂದೇ ಕ್ಲಿಕ್‌ನಲ್ಲಿ ಪಿಡಿಎಫ್ ಫೈಲ್ ಅನ್ನು ಹೈ-ಕ್ವಾಲಿಟಿ ಇಮೇಜ್‌ಗಳಾಗಿ ಪರಿವರ್ತಿಸುವ ಆಟೋಮೇಷನ್.
SEO: ಪ್ರತಿಯೊಂದು ದಿನದ ಪತ್ರಿಕೆಗೂ ಗೂಗಲ್‌ನಲ್ಲಿ ಪ್ರತ್ಯೇಕ ಸ್ಥಾನ ಸಿಗುವಂತೆ ಡೈನಾಮಿಕ್ ಮೆಟಾ ಟ್ಯಾಗ್ ಅಳವಡಿಕೆ. ಕರ್ನಾಟಕ ಬೆಸ್ಟ್ ಈಗಾಗಲೇ ಎಸ್‌ಇಒ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಹೊಂದಿದೆ. ಗೂಗಲ್ ಕೋರ್ ವೆಬ್ ವಿಟ್ಟಲ್ ನಾಡಿಮಿಡಿತಕ್ಕೆ ತಕ್ಕಂತೆ ನಮ್ಮ ಎಸ್‌ಇಒ ಇರುತ್ತದೆ.
ಕರ್ನಾಟಕ ಬೆಸ್ಟ್ ಡಿಜಿಟಲ್ ಸರ್ವೀಸ್ ಅನ್ನು ಏಕೆ ಆರಿಸಬೇಕು?
ನಾವು ಕೇವಲ ಸಾಫ್ಟ್‌ವೇರ್ ತಯಾರಿಸುವುದಿಲ್ಲ, ನಾವು ನಿಮ್ಮ ಡಿಜಿಟಲ್ ಪಾರ್ಟ್ನರ್ ಆಗಿ ಕೆಲಸ ಮಾಡುತ್ತೇವೆ.
ಅತ್ಯಂತ ಕೈಗೆಟುಕುವ ದರದಲ್ಲಿ (ಲಕ್ಷಾಂತರ ರೂಪಾಯಿಗಳ ಬಜೆಟ್ ಇಲ್ಲದೆ) ವಿಶ್ವದರ್ಜೆಯ ಇ-ಪೇಪರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ನಿಮ್ಮ ಬಜೆಟ್‌ಗೆ ತಕ್ಕಂತೆ ಇಪೇಪರ್ ನಿರ್ಮಿಸಿಕೊಡಲಾಗುತ್ತದೆ
ಯಾವುದೇ ತಾಂತ್ರಿಕ ತೊಂದರೆ ಬಂದರೆ ನಾವು ಕೇವಲ ಒಂದು ಫೋನ್ ಕರೆಯ ಅಂತರದಲ್ಲಿದ್ದೇವೆ.
ಪಿಡಿಎಫ್‌ಗಳ ಕಾಲ ಮುಗಿದಿದೆ. ಈಗ ನಿಮ್ಮ ಪತ್ರಿಕೆಗೆ ವೃತ್ತಿಪರ ಡಿಜಿಟಲ್ ಗಾಂಭೀರ್ಯ ನೀಡುವ ಸಮಯ. ಸಾವಿರಾರು ಓದುಗರನ್ನು ನಿಮ್ಮತ್ತ ಸೆಳೆಯಲು ಮತ್ತು ಪತ್ರಿಕೆಯನ್ನು ಹಳ್ಳಿ-ಹಳ್ಳಿಗಳಿಗೂ ತಲುಪಿಸಲು ಇಂದೇ ನಮ್ಮ ಇ-ಪೇಪರ್ ಸೊಲ್ಯೂಷನ್ ಅಳವಡಿಸಿಕೊಳ್ಳಿ. ನಿಮ್ಮ ಪತ್ರಿಕೆಯ ಲೋಗೋ ಮತ್ತು ಮಾಹಿತಿಯೊಂದಿಗೆ ನಿಮ್ಮದೇ ಸಬ್‌ಡೊಮೈನ್‌ನಲ್ಲಿ ಪತ್ರಿಕೆಯನ್ನು ಲೈವ್ ಮಾಡಿಕೊಡುತ್ತೇವೆ. ನೀವು ಡಿಜಿಟಲ್ ಪತ್ರಿಕೆಗೆ ಬಳಸಿದ ಹೋಸ್ಟಿಂಗ್ ಇದ್ದರೆ ಸಾಕು. ಇಲ್ಲವಾದರೆ ನಮ್ಮದೇ serverhug.com ಹೋಸ್ಟಿಂಗ್ ಸೇವೆ ಬಳಸಿಕೊಳ್ಳಬಹುದು.
ಇಪೇಪರ್‌ಗಾಗಿ ಸಂಪರ್ಕಿಸಿ
ಕರ್ನಾಟಕ ಬೆಸ್ಟ್ ಡಿಜಿಟಲ್ ಸರ್ವಿಸ್ (Karnatakabest Digital Service)
ವೆಬ್‌ಸೈಟ್: karnatakabest.com
ಹೆಚ್ಚಿನ ವಿವರಕ್ಕೆ ವಾಟ್ಸಪ್ ಮಾಡಬೇಕಾದ ಮೊಬೈಲ್ ಸಂಖ್ಯೆ: 8073950293
ಕರ್ನಾಟಕ ಬೆಸ್ಟ್ ವೆಬ್ ಡಿಸೈನ್ ಮತ್ತು ಡೆವಲಪ್‌ಮೆಂಟ್ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ
ಹೀಗಿರುತ್ತದೆ ಇಪೇಪರ್ ವೆಬ್‌ಸೈಟ್: https://epaper.malenadumitra.com

ಮೊಬೈಲ್‌ನಲ್ಲಿ ಇಪೇಪರ್ ಹೀಗೆ ಕಾಣಿಸುತ್ತದೆ















Got a Questions?
Find us on Socials or Contact Us and we’ll get back to you as soon as possible.