Tag Archives: Praveen Chandra Puttur

ವೆಬ್ ಸೈಟ್ ಗೈಡ್: ಯಾಕೆ ವರ್ಡ್ ಪ್ರೆಸ್ ಬೆಸ್ಟ್?

ಕರ್ನಾಟಕ ಬೆಸ್ಟ್ ವೆಬ್ ಸೈಟ್ ಮಾರ್ಗದರ್ಶಿಯ ಎರಡನೇ ಅಧ್ಯಾಯವಾಗಿ “ಯಾಕೆ ವರ್ಡ್ ಪ್ರೆಸ್ ಬೆಸ್ಟ್?’ ಎಂಬ ವಿಷಯದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಈಗಾಗಲೇ ಪೀಠಿಕೆಯಲ್ಲಿ ಈ ಕುರಿತು ಒಂದಿಷ್ಟು ಅಂಶಗಳು ನಿಮಗೆ ತಿಳಿದುಬಂದಿರಬಹುದು. ಜಗತ್ತಿನಲ್ಲಿರುವ ಒಟ್ಟಾರೆ ವೆಬ್ ಸೈಟ್ ಗಳಲ್ಲಿ ಸುಮಾರು ಶೇಕಡ 30ರಷ್ಟು ಈಗ ವರ್ಡ್ ಪ್ರೆಸ್ಟ್ ಮೂಲಕ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಾಣಲಿದೆ. ಮುಂದೊಂದು ದಿನ ಸರ್ವಂ ವರ್ಡ್ ಪ್ರೆಸ್ ಮಯ ಆದರೂ ಆಗಬಹುದು. ನಿಮ್ಮ ಆಸಕ್ತಿಯನ್ನು ಕೊನೆಯವರೆಗೆ ಉಳಿಸಿಕೊಳ್ಳುವ ಉದ್ದೇಶದಿಂದ… Read More »

Inspiration: ಸ್ಫೂರ್ತಿದಾಯಕ ಬದುಕಿಗೆ ಹತ್ತು ನೀತಿಕತೆಗಳು

ನಮ್ಮ ಬದುಕು ಯಾವುದೋ ದಿಕ್ಕಿನಲ್ಲಿ ಸಾಗುತ್ತಿರುತ್ತದೆ. ಅದನ್ನು ಸರಿಯಾದ ದಿಕ್ಕಿನತ್ತ ತಿರುಗಿಸಲು ನಾವು ಆಲೋಚನೆ ಮಾಡಬೇಕು. ಕೆಲವೊಮ್ಮೆ ಯಾರಾದರೂ ನಮಗೆ ದಿಕ್ಕು ತೋರಿಸಬಹುದು. ಯಾರೋ ಹೇಳಿದ ಮಾತುಗಳು ನಮಗೆ ಸ್ಫೂರ್ತಿ ತರಬಹುದು. ಇನ್ನು ಕೆಲವೊಮ್ಮೆ ಯಾರಾದರೂ ಹೇಳಿದ ಕತೆ ನಮಗೆ ಹೊಸ ದಿಕ್ಕು ತೋರಿಸಬಹುದು. ಸ್ಫೂರ್ತಿದಾಯಕ ಕತೆಗಳು ತುಂಬಾ ಪವರ್ ಫುಲ್. ಒಂದು ಪುಟ್ಟ ಕತೆಯ ಹಿಂದೆ ದೊಡ್ಡ ಪಾಠ ಇರುತ್ತದೆ. ಇಂಟರ್ನೆಟ್ ನಲ್ಲಿ ಇಂತಹ ಸಾಕಷ್ಟು ಸ್ಫೂರ್ತಿದಾಯಕ ಕತೆಗಳಿವೆ. ಅವುಗಳಲ್ಲಿ ನನಗೆ ಆಲ್ ಟೈಂ ಫೇವರಿಟ್ ಆದ ಹತ್ತು ಕತೆಗಳನ್ನು… Read More »

Think Smart: ಸ್ಮಾರ್ಟ್ ಮನೆ, ಸ್ಮಾರ್ಟ್ ಮನಸ್ಸು

ಉದ್ಯಾನನಗರಿ ಬೆಂಗಳೂರಿನಲ್ಲೀಗ ಚಳಿಯ ಸಮಯ. ಮುಂಜಾನೆಯಂತೂ ಬೆಚ್ಚಗಿನ ರಗ್ಗು ಹೊದ್ದು ಹಾಯಾಗಿ ಮಲಗಿದರಂತೂ ಸ್ವರ್ಗಸುಖ. ಹೊರಗೆ ಚಳಿ, ಮನಸ್ಸೊಳಗೆ ಹಿತವಾದ ಕನಸು. ಇನ್ನಷ್ಟು ಹೊತ್ತು ಮಲಗಬೇಕು ಎಂದೆನಿಸುವಷ್ಟರಲ್ಲಿ ಸದ್ದು ಮಾಡಿದ್ದು alarm. ನಿದ್ದೆ ಮಾಡಲು ಬಿಡುತ್ತಿಲ್ಲ ಎಂದುಕೊಂಡೆ. ಕೊಂಚ ದೂರದಲ್ಲಿಟ್ಟಿರುವುದರಿಂದ ಎದ್ದೇಳುವುದು ಅನಿವಾರ್ಯ. ಬೆಳಗ್ಗೆದ್ದು ವಾಕಿಂಗ್ ಹೋಗುವುದು ಇತ್ತೀಚಿನ ಅಭ್ಯಾಸ. ಭವಿಷ್ಯದಲ್ಲಿ ಹೊಟ್ಟೆ ಮುಂದೆ ಬಾರದೆ ಇರಲಿ ಎಂದು ವಾಕಿಂಗ್ ಹೋಗುವುದು ಮುಖ್ಯ ಕಾರಣ. ಜೊತೆಗೆ, ದಿನವೀಡಿ ಏಸಿ ರೂಂನಲ್ಲಿ ಕೆಲಸ ಮಾಡುವುದರಿಂದ ದೇಹಕ್ಕೆ ದೈಹಿಕ ವ್ಯಾಯಾಮವೇ ಇಲ್ಲ. ಹೀಗಾಗಿ ಪ್ರತಿನಿತ್ಯ… Read More »

ಒಂದೇ ರಾತ್ರಿಯಲ್ಲಿ ಬರೋಲ್ವಂತೆ Success! (ಮತ್ತೆಷ್ಟು ಸಮಯ ಬೇಕು?)

ನೀವು ಈ ಮುಂದಿನ ನುಡಿಮುತ್ತುಗಳನ್ನು ಕೇಳಿರಬಹುದು. SUCCESS IS NOT OVERNIGHT IT TAKES YEARS SUCCESS IS YOURS ಅಥವಾ Overnight Success Does Not Happen Overnight ಅಥವಾ ಇದೇ ಅರ್ಥ ಬರುವ ಕೋಟ್ ಗಳನ್ನು ಕೇಳಿರಬಹುದು. ಇಷ್ಟು ದಿನ ಹೆಸರೇ ಕೇಳಿರದ ವ್ಯಕ್ತಿಯೊಬ್ಬರು ಒಲಿಂಪಿಕ್ಸ್ ನಲ್ಲಿ ಮೆಡಲ್ ಗೆಲ್ಲುತ್ತಾರೆ. ಮರುದಿನ ಎಲ್ಲಾ ಪತ್ರಿಕೆಗಳಲ್ಲಿ ಅವರದ್ದೇ ಸುದ್ದಿ. ಆದರೆ, ಆ ಒಂದು ಓವರ್ ನೈಟ್ ನಲ್ಲಿ ಬಂದಿರುವ ಯಶಸ್ಸು ನಿಜಕ್ಕೂ ಒಂದೇ ದಿನದಲ್ಲಿ ಅಥವಾ ಆ ಗಳಿಗೆಯಲ್ಲಿ ಬಂದಿರುವುದಲ್ಲ.… Read More »

Self Improvement: ನಿಮಗಾಗಿ ಏನು ಮಾಡುವಿರಿ?

ಈ ಒಂದು ವರ್ಷ ನಾನು ಮಾಡಿದ ಪ್ರಮುಖ ಖರ್ಚುಗಳು ಯಾವುವು? 15 ಸಾವಿರ ರೂಪಾಯಿ ಕೊಟ್ಟು ರೆಡ್ ಮಿ ಎ1 ಸ್ಮಾರ್ಟ್ ಫೋನ್ ತೆಗೆದುಕೊಂಡೆ. 18 ಸಾವಿರ ರೂ.ನ ಫರ್ನಿಚರ್ಸ್ ಖರೀದಿಸಿದೆ. 2 ಸಾವಿರ ರೂ.ನ ವಯರ್ಲೆಸ್ ಹೆಡ್ ಫೋನ್ ತೆಗೆದುಕೊಂಡೆ. 8 ಸಾವಿರ ರೂಪಾಯಿನ ಕ್ಯಾಶಿಯೊ ಜಿ-ಶಾಕ್ ವಾಚ್ ನನ್ನದಾಗಿದೆ. ಕುಟುಂಬದ ಕಾರ್ಯಕ್ರಮಕ್ಕಾಗಿ ಹತ್ತು ಹಲವು ಸಾವಿರ ರೂಪಾಯಿ ಖರ್ಚಾಗಿದೆ. ಹೀಗೆ… ಮಾಡಿದ ಖರ್ಚುಗಳ ಲೆಕ್ಕ ಲೆಕ್ಕವಿಡುವುದು ಕಷ್ಟ. ಆದರೆ, ಇವೆಲ್ಲ ನನ್ನ ಸ್ವಯಂ ಅಭಿವೃದ್ಧಿಗೆ ಮಾಡಿದ ಹೂಡಿಕೆಗಳಲ್ಲ. ಇದೇ… Read More »