ನಿಮ್ಮ ವೆಬ್‌ಸೈಟ್‌ Slowನಾ? ಕರ್ನಾಟಕ ಬೆಸ್ಟ್‌ ಮೂಲಕ ವೆಬ್‌ಸೈಟ್‌ ಸ್ಪೀಡ್ ಆಪ್ಟಿಮೈಜೆಷನ್‌ ಮಾಡಿಕೊಳ್ಳಿ

ಕರ್ನಾಟಕ ಬೆಸ್ಟ್‌ ಮೂಲಕ ವೆಬ್‌ಸೈಟ್‌ ಸ್ಪೀಡ್ ಆಪ್ಟಿಮೈಜೆಷನ್‌
ಕರ್ನಾಟಕ ಬೆಸ್ಟ್‌ ಮೂಲಕ ವೆಬ್‌ಸೈಟ್‌ ಸ್ಪೀಡ್ ಆಪ್ಟಿಮೈಜೆಷನ್‌

ಕರ್ನಾಟಕದಲ್ಲಿ ಈಗ ಎಷ್ಟು ನ್ಯೂಸ್‌ ವೆಬ್‌ಸೈಟ್‌ಗಳು ಇರಬಹುದು? ಎಷ್ಟು ಕಂಟೆಂಟ್‌ ವೆಬ್‌ಸೈಟ್‌ಗಳು ಇರಬಹುದು? ಪ್ರತಿಯೊಂದು ಊರು ಊರಿನಲ್ಲಿಯೂ ವೆಬ್‌ಸೈಟ್‌ಗಳು ಇವೆ. ವರ್ಡ್‌ಪ್ರೆಸ್‌ ಮೂಲಕ “ಕಡಿಮೆ ದರಕ್ಕೆ” ನಿರ್ಮಸಿಕೊಂಡಿರುವ ಬಹುತೇಕ ವೆಬ್‌ಸೈಟ್‌ಗಳು “ಮುಂಭಾಗದಿಂದ ಮಾತ್ರ ಚಂದ”. ಅದರ ಬ್ಯಾಕ್‌ ಎಂಡ್‌, ಟೆಕ್ನಿಕಲ್‌ ವಿಷಯಗಳು ಅತ್ಯಂತ ಕೆಟ್ಟದ್ದಾಗಿರಬಹುದು. ವೆಬ್‌ಸೈಟ್‌ಗಳಿಗೆ ಸ್ಪೀಡ್‌ ಅತ್ಯಂತ ನಿರ್ಣಾಯಕ. ಗೂಗಲ್‌ ಕೋರ್‌ ವೆಬ್‌ ವಿಟ್ಟಲ್‌ ಉತ್ತೀರ್ಣರಾಗಲು ಪ್ರಯತ್ನಿಸಬೇಕು. ಇಂದು ಡಿಜಿಟಲ್ ಜಗತ್ತಿನಲ್ಲಿ ಪ್ರತಿಯೊಂದು ಸೆಕೆಂಡು ಅಮೂಲ್ಯ. ಒಂದು ವೆಬ್‌ಸೈಟ್‌ ಲೋಡ್ ಆಗುವುದಕ್ಕೆ ಎಷ್ಟು ಕಾಲ ಬೇಕಾಗುತ್ತದೆ ಎಂಬುದು, ಕೇವಲ ಬಳಕೆದಾರ ಅನುಭವವಲ್ಲ; ಅದು ಬಿಸಿನೆಸ್ ಯಶಸ್ಸಿಗೆ ನಿರ್ಧಾರಕ ಅಂಶವಾಗಿದೆ. ವೇಗವಿಲ್ಲದ ವೆಬ್‌ಸೈಟ್‌ SEO ರ್ಯಾಂಕಿಂಗ್‌, ಗ್ರಾಹಕರ ನಂಬಿಕೆ, ಆದಾಯ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಕರ್ನಾಟಕ ಬೆಸ್ಟ್‌ ಡಿಜಿಟಲ್‌ ಸರ್ವೀಸ್‌ ಮೂಲಕ ಸಾಕಷ್ಟು ನ್ಯೂಸ್‌ ವೆಬ್‌ಸೈಟ್‌, ಬಿಸ್ನೆಸ್‌ ವೆಬ್‌ಸೈಟ್‌ಗಳು ತಮ್ಮ ವೇಗ ಹೆಚ್ಚಿಸಿಕೊಂಡಿವೆ.

ಯಾಕೆ ವೆಬ್‌ಸೈಟ್‌ಗೆ ಸ್ಪೀಡ್‌ ಅತ್ಯಂತ ಅಗತ್ಯ?

ಒಂದು ವೆಬ್‌ಸೈಟ್‌ ಲೋಡ್ ಆಗಲು ಕೇವಲ 1 ಸೆಕೆಂಡು ತಡವಾದರೆ, ಅದರಿಂದ ಉಂಟಾಗುವ ನಷ್ಟವು ದೊಡ್ಡಮಟ್ಟದಲ್ಲಿರುತ್ತದೆ. ಅದು ನಿಮ್ಮ ಬ್ರಾಂಡ್‌ನ ವಿಶ್ವಾಸಾರ್ಹತೆಗೆ, ಗ್ರಾಹಕರ ಅನುಭವಕ್ಕೆ ಹಾಗೂ ನೇರವಾಗಿ ಆದಾಯಕ್ಕೇ ಹೊಡೆತ ನೀಡುತ್ತದೆ.

Conversion rate ಎಂದರೆ, ನಿಮ್ಮ ವೆಬ್‌ಸೈಟ್‌ಗೆ ಬರುವ ಬಳಕೆದಾರರಲ್ಲಿ ಎಷ್ಟು ಜನರು “ಬಳಕೆದಾರರಿಂದ ಗ್ರಾಹಕರಾಗಿ” ಪರಿವರ್ತನೆ ಹೊಂದುತ್ತಾರೆ – ಉದಾಹರಣೆಗೆ: Newsletter subscription, Checkout completion, Lead form submission. ನ್ಯೂಸ್‌ ವೆಬ್‌ಸೈಟ್‌ಗಳ ಗೂಗಲ್‌ ಸರ್ಚ್‌, ಗೂಗಲ್‌ ಡಿಸ್ಕವರಿ ಮುಂತಾದ ಕಡೆ ಪರ್ಫಾಮೆನ್ಸ್‌ ತೋರಲು ಕೂಡ ವೆಬ್‌ಸೈಟ್‌ ಸ್ಪೀಡ್‌ ಅತ್ಯಂತ ಅಗತ್ಯವಾಗಿರುತ್ತದೆ. Think With Google ವರದಿ ಪ್ರಕಾರ, “As page load time goes from 1s to 3s, the probability of bounce increases by 32%.” ಅಂದರೆ, ಪ್ರತಿಯೊಂದು ಸೆಕೆಂಡಿನ ವಿಳಂಬವು ಬಳಕೆದಾರನ ಮನಸ್ಸಿನಲ್ಲಿ ‘ಸಂದೇಹ’ ಉಂಟುಮಾಡುತ್ತದೆ. ಅವರು ನಿಮ್ಮ ಪೇಜ್‌ ಮೇಲೆ ನಂಬಿಕೆ ಕಳೆದು, ಮುಂದಿನ ಆಯ್ಕೆ (ಅಥವಾ ಸ್ಪರ್ಧಿಯ ತಾಣ) ಕಡೆಗೇ ಸಾಗುತ್ತಾರೆ. ಇ ಕಾಮರ್ಸ್‌ ತಾಣಗಳಿಗೆ ವೆಬ್‌ಸೈಡ್‌ ಸ್ಪೀಡ್‌ ಕಡಿಮೆಯಾದರೆ ಪ್ರತಿವರ್ಷ ಲಕ್ಷಾಂತರ, ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಬೆಸ್ಟ್‌ ಡಿಜಿಟಲ್‌ ಸೇವೆಗಳು- ವೆಬ್‌ಸೈಟ್‌ ವಿನ್ಯಾಸ, ಎಸ್‌ಇಒ

ಬೌನ್ಸ್‌ ರೇಟ್‌ ಗಮನಿಸಿ

Bounce rate ಅಂದರೆ, ಬಳಕೆದಾರರು ಒಂದು ಪುಟ ನೋಡಿ, ಯಾವುದೇ ಕ್ರಿಯೆ (scroll/click) ಮಾಡದೆ ತಕ್ಷಣವೇ ಆ ವೆಬ್‌ಸೈಟ್‌ನಿಂದ ಹೊರಹೋಗುವುದು. ನಿಮ್ಮ ವೆಬ್‌ಸೈಟ್‌ಗೆ ಬಂದವರು ಹೆಚ್ಚು ಸಮಯ ಇರುವಂತೆ ಮಾಡಬೇಕು. ಇಮೇಜ್‌ಗಳ ತಡವಾಗಿ ಲೋಡ್‌ ಆಗುವುದು, ಟೈಮ್ ಟು ಫಸ್ಟ್ ಬೈಟ್ (TTFB) ವಿಳಂಬ, ನಿಧಾನಗತಿಯ UX ಇತ್ಯಾದಿಗಳು ಬೌನ್ಸ್‌ ರೇಟ್‌ ಮೇಲೆ ಪರಿಣಾಮ ಬೀರುತ್ತದೆ. “Sites with LCP (Largest Contentful Paint) under 2.5s are more likely to rank higher and retain users.” ಎನ್ನುವುದು ಗೂಗಲ್‌ ಮಾತು. ನಿಮ್ಮ ವೆಬ್‌ಸೈಟ್‌ ಎಲ್‌ಸಿಪಿಯನ್ನು ಈ ಮಟ್ಟಕ್ಕೆ ತರಿಸಲು ಕರ್ನಾಟಕ ಬೆಸ್ಟ್‌ ಅನ್ನು ಸಂಪರ್ಕಿಸಬಹುದು.

Google Core Web Vitals – ಗೂಗಲ್ ಬಯಸುವ ತಾಂತ್ರಿಕ ಅಂಶಗಳು

Google Web Vitals ಎನ್ನುವುದು Page Experience ಅಳೆಯುವ ಅತಿ ಮುಖ್ಯವಾದ ಅಂಶ. ಗೂಗಲ್ 2021ರಿಂದ ಇದನ್ನು ತನ್ನ Search Ranking Algorithmನಲ್ಲಿ ಸೇರಿಸಿದೆ.

ಇದನ್ನೂ ಓದಿ: ಎಐ ಜತೆ ಸಂಬಂಧ ಬೆಳೆಸುವಾಗ ಇರಲಿ ಎಚ್ಚರ; ಚಾಟ್‌ಜಿಪಿಟಿ, ಜೆಮಿನಿ, ಗ್ರೋಕ್‌ ಜತೆಗಿನ ಆತ್ಮೀಯತೆ ಪ್ರೀತಿಯಾಗದಿರಲಿ

ಕರ್ನಾಟಕ ಬೆಸ್ಟ್‌ ಮೂಲಕ ನೀವು ಪಡೆಯಬಹುದಾದ “ಸ್ಪೀಡ್‌” ಸೇವೆಗಳು

ವರ್ಡ್‌ಪ್ರೆಸ್‌ ವೆಬ್‌ಸೈಟ್‌ ವಿನ್ಯಾಸ ಎಂದರೆ ಕೇವಲ ರೆಡಿಮೆಡ್‌ ಥೀಮ್‌ ಇನ್‌ಸ್ಟಾಲ್‌ ಮಾಡಿ ಪ್ಲಗಿನ್‌ಗಳನ್ನು ಹಾಕುವುದಲ್ಲ. ವರ್ಡ್‌ಪ್ರೆಸ್‌ ಮೂಲಕ ವೆಬ್‌ಸೈಟ್‌ ರಚಿಸುವಾಗ ಹಲವು ಅಂಶಗಳನ್ನು ಗಮನಿಸಬೇಕು. ನಿರಂತರವಾಗಿ ವೆಬ್‌ಸೈಟ್‌ ನಿರ್ವಹಣೆಯ ಕಡೆಗೆ ಗಮನ ನೀಡಬೇಕು. ಕರ್ನಾಟಕ ಬೆಸ್ಟ್‌ ಮೂಲಕ ನೀವು ವೆಬ್‌ಸೈಟ್‌ ಮೇಂಟೆನ್ಸ್‌ ಪಡೆದುಕೊಂಡರೆ,

  • ಸರ್ವರ್‌ ಲೆವೆಲ್‌ ವೆಬ್‌ಸೈಟ್‌ ಆಪ್ಟಿಮೈಜೇಷನ್‌: Code-Level Refactoring ಅಂದರೆ, Render-blocking JS & CSS ತೆಗೆಯುವುದು, JavaScript defer / async ಇತ್ಯಾದಿಗಳು ಒಳಗೊಂಡಿವೆ.
  • ಸಿಡಿಎನ್‌: ಉಚಿತ ಸಿಡಿಎನ್‌ ಅಥವಾ ಪಾವತಿ ಸಿಡಿಎನ್‌ಗಳ ಬಳಕೆ ಮೂಲಕ ನಿಮ್ಮ ವೆಬ್‌ಸೈಟ್‌ನ ಎಡ್ಜ್‌ ಕ್ಯಾಚಿಂಗ್‌ ಮತ್ತು ಗ್ಲೋಬಲ್‌ ಸ್ಪೀಡ್‌ ಹೆಚ್ಚಿಸಲಾಗುವುದು.
  • ಮೀಡಿಯಾ ಆಪ್ಟಿಮೈಜೇಷನ್‌: ವೆಬ್‌ಸೈಟ್‌ನ ಸ್ಪೀಡ್‌ ಹೆಚ್ಚಿಸಲು ಮೀಡಿಯಾ ಆಪ್ಟಿಮೈಜೇಷನ್‌ ಕೂಡ ಅಗತ್ಯವಾಗಿದೆ.
  • ವೆಬ್‌ ವಿಟ್ಟಲ್ಸ್‌ ಆಡಿಟ್‌ ರಿಪೋರ್ಟ್‌ ಪ್ರತಿತಿಂಗಳು ನೀಡಲಾಗುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ವೆಬ್‌ಸೈಟ್‌: karnatakabest.com

ವಾಟ್ಸಾಪ್‌: 98440 00643

ಇಮೇಲ್‌: support@karnatakabest.com

ಇದನ್ನು ಓದಿದ್ದೀರಾ?: ಡಿಜಿಟಲ್ ಪತ್ರಿಕೋದ್ಯಮ: ಗೂಗಲ್‌ಗಾಗಿ ಅಲ್ಲ, ಜನರಿಗಾಗಿ ಬರೆಯಿರಿ

error: Content is protected !!