Tag Archives: career tips

ಕರಿಯರ್ ಆಗಿ ಪರಿವರ್ತಿಸಬಹುದಾದ 7 ಹವ್ಯಾಸಗಳು

By | 08/09/2018

ಬಿಡುವಿನ ವೇಳೆಯಲ್ಲಿ ಅಥವಾ ಸಮಯ ಕಳೆಯಲೆಂದು ಆರಂಭಿಸಿದ ನಮ್ಮ ಹವ್ಯಾಸವೇ ಕರಿಯರ್ ಆಗಿ ಬದಲಾದರೆ ಜೀವನಪೂರ್ತಿ ಹವ್ಯಾಸದೊಂದಿಗೆ ವೃತ್ತಿ ಜೀವನ ನಡೆಸಬಹುದು. ಎಲ್ಲಾ ಹವ್ಯಾಸಗಳು ಈಗಿನ ದುಬಾರಿ ಜಗತ್ತಿನಲ್ಲಿ ಹೊಟ್ಟೆ ತುಂಬಿಸಲು ಸಾಕಾಗದು. ಆದರೆ, ಕೆಲವು ಹವ್ಯಾಸಗಳನ್ನು ಸಮರ್ಥ ಕರಿಯರ್ ಆಗಿ ಪರಿವರ್ತಿಸಿಕೊಂಡರೆ ಕೈತುಂಬಾ ಹಣ ಸಂಪಾದಿಸಬಹುದು. ಕ್ರೀಡೆ ದಿನ ಶಾಲೆ, ಕಾಲೇಜು ಮುಗಿಸಿ ಬಂದು ಕ್ರಿಕೆಟ್ ಆಡಲು ಓಡುವವರು ಅಥವಾ ಶಾಲಾ ಕಾಲೇಜುಗಳಲ್ಲಿಯೇ ಕ್ರಿಕೆಟ್ ಆಡುವವರು ನೀವಾಗಿರಬಹುದು. ಇದೇ ರೀತಿ ಹಾಕಿ, ಫುಟ್ಬಾಲ್ ಆಟಗಾರರೂ ಆಗಿರಬಹುದು. ಕ್ರೀಡೆಯನ್ನು ಕರಿಯರ್ ಆಗಿ… Read More »

ಮಹಾಭಾರತದಿಂದ ಉದ್ಯೋಗಿಗಳು ಏನು ಕಲಿಯಬಹುದು?

By | 10/08/2018

ಇತ್ತೀಚೆಗೆ ಇಂಟರ್ನೆಟ್ ನಲ್ಲಿ ಹುಡುಕಾಟ ನಡೆಸುತ್ತಿರುವಾಗ ಮಹಾಭಾರತ ಮತ್ತು ಮ್ಯಾನೇಜ್ಮೆಂಟ್ ಪಾಠಗಳ ಕುರಿತು ಒಂದು ಪುಟ್ಟ ಲೇಖನ ದೊರಕಿತು. ಅದನ್ನು ಆಧಾರವಾಗಿಟ್ಟುಕೊಂಡು ಈ ಲೇಖನವನ್ನು ವಿಸ್ತರಿಸಿ ಬರೆಯಲಾಗಿದೆ ಮತ್ತು ಒಂದಿಷ್ಟು ಹೊಸ ವಿಷಯಗಳನ್ನು ಸೇರಿಸಲಾಗಿದೆ. ಭಾರತದ ಧಾರ್ಮಿಕ, ತಾತ್ವಿಕ, ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದಾಗಿರುವ ಮಹಾಭಾರತದಲ್ಲಿ ಹಲವು ಪಾಠಗಳು ಅಡಗಿವೆ. ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಬಯಸುವವರು ಮಹಾಭಾರತ ಬೋಧಿಸುವ ತತ್ವಗಳನ್ನು `ಕರಿಯರ್ ಪಾಠ’ವಾಗಿ ಸ್ವೀಕರಿಸಬಹುದು.  ಗಮನ ಕೇಂದ್ರಿಕರಿಸಿದರೆ ಯಶಸ್ಸು ಗುರು  ದ್ರೋಣಾಚಾರ್ಯರಿಂದ ಪಾಂಡವರು ಮತ್ತು ಕೌರವವರು ಅಸ್ತ್ರ ವಿದ್ಯೆ ಅಥವಾ ಬಿಲ್ವಿದ್ಯೆ ಕಲಿಯುತ್ತಿರುತ್ತಾರೆ.… Read More »

ವ್ಯಕ್ತಿತ್ವ ವಿಕಸನ: ಕೆಲಸದ ಕೊನೆಯ ಹತ್ತು ನಿಮಿಷ ಏನು ಮಾಡುವಿರಿ?

By | 21/06/2018

ಕರಿಯರ್‍ ನಲ್ಲಿ ಯಶಸ್ವಿಯಾದವರ ಪ್ರತಿ ನಡೆನುಡಿಯಲ್ಲಿಯೂ ಕಲಿಯಲು ಸಾಕಷ್ಟಿರುತ್ತದೆ. ಇಂತಹ ಉದ್ಯೋಗಿಗಳು ಕೆಲಸ ಹೇಗೆ ಆರಂಭಿಸುತ್ತಾರೆ? ಹೇಗೆ ಮುಗಿಸುತ್ತಾರೆ? ಟೀ ಬ್ರೇಕ್/ಊಟದ ಸಮಯದಲ್ಲಿ ಹೇಗಿರುತ್ತಾರೆ? ಹೀಗೆ ಅವರಿಂದ ನಾವು ಸಾಕಷ್ಟು ಸಂಗತಿಗಳನ್ನು ಕಲಿಯಬಹುದು. ಕಚೇರಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಲು ಹತ್ತು ನಿಮಿಷ ಇದೆ ಎಂದುಕೊಳ್ಳೋಣ. ಆ ಸಮಯವನ್ನು ಇವರು ಹೇಗೆ ಸದುಪಯೋಗ ಮಾಡಿಕೊಳ್ಳುತ್ತಾರೆ ಗೊತ್ತೆ? ಇವುಗಳಲ್ಲಿ ಕೆಲವು ಅಂಶಗಳನ್ನಾದರೂ ನಾವು ಪಾಲಿಸಬಹುದು. ಈ ದಿನ ಮಾಡಿರುವ ಕಾರ್ಯಗಳನ್ನೆಲ್ಲ ಪರಿಶೀಲಿಸುತ್ತಾರೆ. ನಾಳೆ ಬಂದು ಏನು ಮಾಡಬೇಕು ಎಂದು ಕೆಲವು ಸೆಕೆಂಡ್ ಯೋಚಿಸುತ್ತಾರೆ.… Read More »